Home / ವಾರ್ತೆಗಳು / ಬೈತುಲ್ ಮುಕದ್ದಿಸ್ ಎಂದೂ ಫೆಲಸ್ತೀನ್‍ನ ರಾಜಧಾನಿ: ಮುಹಮ್ಮದ್ ಅಬ್ಬಾಸ್

ಬೈತುಲ್ ಮುಕದ್ದಿಸ್ ಎಂದೂ ಫೆಲಸ್ತೀನ್‍ನ ರಾಜಧಾನಿ: ಮುಹಮ್ಮದ್ ಅಬ್ಬಾಸ್

ವೆಸ್ಟ್ ಬ್ಯಾಂಕ್, ನ.25: ಅಮೆರಿಕ ಇಸ್ರೇಲ್ ಅತಿಕ್ರಮಣ ನಡೆಸಿರುವ ಸ್ಥಳದಲ್ಲಿ ಕಾಲನಿ ಕಟ್ಟುವುದನ್ನು ಬೆಂಬಲಿಸಿದ್ದು ಫೆಲಸ್ತೀನ್ ಅಧ್ಯಕ್ಷ ಅದನ್ನು ವಿರೋಧಿಸಿದ್ದಾರೆ. ಫೆಲಸ್ತೀನ್ ರಾಜಧಾನಿ ಬೈತುಲ್ ಮುಕದ್ದಿಸ್ ಆಗಿತ್ತು. ಇನ್ನೂ ಅದುವೇ ರಾಜಧಾನಿಯಾಗಿರಲಿದೆ ಎಂದು ಅಮೆರಿಕಕ್ಕೆ ಖಾರವಾಗಿ ತಿಳಿಸಿದ್ದಾರೆ.
ಅಮೆರಿಕ ಏನನ್ನೇ ಹೇಳಲಿ ನಾವು ಅದನ್ನು ಒಪ್ಪಲಾರೆವು ಎಂದರು. ಕಳೆದ ಸೋಮವಾರ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪೊಂಪಿಯೊ ಇಸ್ರೇಲ್ ಕಾಲನಿ ನಿರ್ಮಿಸುವ ಕುರಿತ ಒಬಾಮ ಸರಕಾರದ ನೀತಿಯನ್ನು ನಾವು ಬದಲಿಸಿದ್ದೇವೆ ಎಂದಿದ್ದರು. ಆದರೆ 2016ರಲ್ಲಿ ವಿಶ್ವಸಂಸ್ಥೆ ಫೆಲಸ್ತೀನಿನ ಜಾಗದಲ್ಲಿ ಯಹೂದಿಗಳ ಕಾಲನಿ ಕಟ್ಟುವುದನ್ನು ತಡೆ ಹಿಡಿಯಲು ಆದೇಶ ಹೊರಡಿಸಿತ್ತು. ಆದರೆ ಅಮೆರಿಕದ ಬೆಂಬಲವಿರುವ ಇಸ್ರೇಲ್ ವಿಶ್ವಸಂಸ್ಥೆಯ ಆದೇಶವನ್ನು ಉಲ್ಲಂಘಿಸಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …