Home / ವಾರ್ತೆಗಳು / ಇತರ ಧರ್ಮೀಯರನ್ನು ಸ್ವಾಗತಿಸಿದ 170 ವರ್ಷ ಹಳೆಯ ಮಸೀದಿ

ಇತರ ಧರ್ಮೀಯರನ್ನು ಸ್ವಾಗತಿಸಿದ 170 ವರ್ಷ ಹಳೆಯ ಮಸೀದಿ

ಬೆಂಗಳೂರು: ನಗರದ 170 ವರ್ಷ ಹಳೆಯ ಮಸೀದಿಯನ್ನು ಇತರ ಧರ್ಮೀಯರಿಗೆ ತೆರೆಯಲಾಗಿದೆ. ಬೆಂಗಳೂರಿನ ನಗರದ ಮೋದಿ ಮಸೀದಿಯಲ್ಲಿ ಇತ್ತೀಚಿಗೆ ಮುಸ್ಲಿಮೇತರರಿಗೂ ಪ್ರವೇಶ  ನೀಡಲಾಯಿತು.

‘ನನ್ನ ಮಸೀದಿ ಸಂದರ್ಶನ ದಿನ ಎಂಬ ಹೆಸರಿನಲ್ಲಿ ರಹ್ಮತ್ ಗ್ರೂಪ್ ಮುಸ್ಲಿಮೇತರರಿಗೆ ಮಸೀದಿ ಸಂದರ್ಶಿಸುವ ಅವಕಾಶವನ್ನು ಒದಗಿಸಿದೆ. ಸೌಹಾರ್ದ ಹಾಗೂ ಒಗ್ಗಟ್ಟನ್ನು ಕಾಪಾಡುವುದು ಎಂಬ ಸಂದೇಶವನ್ನು ಈ ಮೂಲಕ ಸಂಘಟಕರು ರವಾನಿಸುತ್ತಿದ್ದಾರೆ.

ಮಹಿಳೆಯರ ಸಹಿತ 400 ಮಂದಿ ಮುಸ್ಲಿಮೇತರರು ಮಸೀದಿಯನ್ನು ಸಂದರ್ಶಿಸಿದರು. ಪ್ರಾರ್ಥನೆಯ ನಂತರ ನಡೆದ ಔತಣದಲ್ಲಿ ಭಾಗಿಯಾದರು.  ಸಿಖ್ ವಿಭಾಗದವರು ಮಸೀದಿ ಸಂದರ್ಶಿಸಿದ್ದಾರೆ. ಇಸ್ಲಾಮೀ ಸಂಸ್ಕ್ರತಿಯ ಕುರಿತು ಇತರ ಧರ್ಮೀಯರಿಗೆ ತಿಳಿಸುವುದು ನಮ್ಮ ಉದ್ಧೇಶ ಎಂದು ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …