Home / ವಾರ್ತೆಗಳು / ಬೀದರ್: HRS‌ ವತಿಯಿಂದ ಉಚಿತ ಆಹಾರ ವಿತರಣೆಯ 100 ದಿನಗಳು

ಬೀದರ್: HRS‌ ವತಿಯಿಂದ ಉಚಿತ ಆಹಾರ ವಿತರಣೆಯ 100 ದಿನಗಳು

ಬೀದರ್,ಜು.1: ನಗರದ ಬ್ರಿಮ್ಸ್ ಆಸ್ಪತ್ರೆ ಎದುರು ನಾಲ್ಕು ಚಕ್ರ ವಾಹನದಲ್ಲಿ ಹುಮನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಕೊರೋನಾದಿಂದ ತತ್ತರಿಸಿದ ಬಡ ಜನರು ಹಾಗೂ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳೊಂದಿಗೆ ಬಂದಂತಹ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ.

ಸೋಮವಾರಕ್ಕೆ ಈ ಸೇವೆಯು 100 ದಿನಗಳನ್ನು ಕಳೆದಿದ್ದು ನಿರಂತರವಾಗಿ ಸಂಸ್ಥೆಯಿಂದ ಉಚಿತ ಆಹಾರ, ಹಣ್ಣು ಹಂಪಲು, ಸ್ಯಾನಿಟೈಸರ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡಲಾಗುತ್ತಿದೆ.

100 ದಿನಗಳು ಕಳೆದ ನಂತರ ಜೂನ್ 29 ರಂದು ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲಾಧಿಕಾರಿ ರಾಮಚಂದ್ರ ಆರ್. ಉಪಸ್ಥಿತರಿದ್ದರು. ಆಯುಷ್ ಇಲಾಖೆ ವೈದ್ಯರಾದ ಡಾ. ವಿಜಯಲಕ್ಷ್ಮಿ ಹಾಗೂ ಸಂಸ್ಥೆಯಿಂದ ಇಮ್ಯುನಿಟಿ ಬೂಸ್ಟರ್‌ ಔಷಧಿಯನ್ನು ವಿತರಿಸಲಾಯಿತು. ಎಚ್ಆರ್‌ಎಸ್ ಬೀದರ್‌ ತಂಡದ ನಾಯಕ ಮುಹಮ್ಮದ್ ಉಪಸ್ಥಿತರಿದ್ದರು‌.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …