Home / ಪ್ರವಾದಿ ವಚನಗಳು (page 3)

ಪ್ರವಾದಿ ವಚನಗಳು

ಪ್ರಾಮಾಣಿಕತೆ ಮತ್ತು ವಚನಪಾಲನೆ

ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನಮಗೆ ಪ್ರವಚನ ಮಾಡಿದಾಗಲೆಲ್ಲಾ ಈ ರೀತಿ ಹೇಳದೆ ಇದ್ದುದು ವಿರಳ-ಯಾರಲ್ಲಿ ಪ್ರಾಮಾಣಿಕತೆಯಿಲ್ಲವೋ ಅವನಲ್ಲಿ ಈಮಾನ್ ಇಲ್ಲ ಮತ್ತು ಯಾರಲ್ಲಿ ವಚನಪಾಲನೆಯಿಲ್ಲವೋ ಅವನಲ್ಲಿ ಧರ್ಮವಿಲ್ಲ. (ಬೈಹಕಿ-ಶುಅಬುಲ್ ಈಮಾನ್ ನಲ್ಲಿ)

Read More »

ಕಪಟ ವಿಶ್ವಾಸಿ

ಅಬ್ದುಲ್ಲಾ ಬಿನ್ ಅಮ್ರ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಯಾರಲ್ಲಿ ನಾಲ್ಕು ವಿಷಯಗಳಿರುತ್ತವೋ ಆತ ಅಪ್ಪಟ ಮುನಾಫಿಕ್ (ಕಪಟ ವಿಶ್ವಾಸಿ) ಆಗಿರುತ್ತಾನೆ. ಯಾರಲ್ಲಿ ಯಾವುದಾದರೂ ಒಂದು ವಿಷಯವಿರವುದೋ ಅವನಲ್ಲಿ ಕಪಟ ವಿಶ್ವಾಸದ ಒಂದಂಶವಿರುವುದು – ಅವನು ಅದನ್ನು ತೊರೆಯುವ ತನಕ. 1. ವಸ್ತು ಜೋಪಾನವಾಗಿಡಲು ಕೊಟ್ಟರೆ ವಂಚನೆ ಮಾಡುವುದು. 2. ಮಾತನಾಡಿದರೆ ಸುಳ್ಳು ಹೇಳುವುದು. 3. ವಚನ ಕೊಟ್ಟರೆ ಭಂಗ ಮಾಡುವುದು. 4. ಜಗಳಾಡಿದರೆ ಬಯ್ಯುವುದು.  (ಮುತ್ತಫಕುನ್ ಅಲೈಹಿ)

Read More »

ಕೋಪ ನುಂಗುವುದು

ಕೋಪವನ್ನು ನುಂಗಿಕೊಳ್ಳುವುದು ಅತ್ಯಂತ ಕಹಿಯಾಗಿದೆ. ಅದು ಗಂಟಲೊಳಗೆ ಸುಲಭದಲ್ಲಿ ಇಳಿಯುವುದಿಲ್ಲ. ಆದರೆ ಅಲ್ಲಾಹನಿಗೆ ಈ ಗುಟುಕು ಬಹಳ ಪ್ರಿಯ. ಅಬ್ದುಲ್ಲಾ ಬಿನ್ ಉಮರ್(ರ) ವರದಿ ಮಾಡುತ್ತಾರೆ – ಪ್ರವಾದಿ(ಸ) ಹೇಳಿದರು: ಅಲ್ಲಾಹನ ಸಂಪ್ರೀತಿಗಾಗಿ ಮನುಷ್ಯ ಕುಡಿಯುವ ಕೋಪದ ಗುಟುಕಿಗಿಂತ ಶ್ರೇಷ್ಠವಾದ ಗುಟುಕು ಅಲ್ಲಾಹನ ದೃಷ್ಟಿಯಲ್ಲಿ ಬೇರೆ ಇಲ್ಲ. (ಅಹ್ಮದ್)

Read More »

ನೈಜ ತಾಣ

ಅಬ್ದುಲ್ಲಾ ಬಿನ್ ಉಮರ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ನಿಮ್ಮ ಪೈಕಿ ಒಬ್ಬ ವ್ಯಕ್ತಿ ಸತ್ತರೆ ಸಂಜೆ – ಮುಂಜಾನೆಗಳಲ್ಲಿ ಅವನಿಗೆ ಅವನ ತಾಣವನ್ನು ತೋರಿಸಲಾಗುತ್ತದೆ. ಸ್ವಗ೯ವಾಸಿಯಾಗಿದ್ದರೆ ಸ್ವಗ೯ವಾಸಿಯ ತಾಣ ಮತ್ತು ನರಕವಾಸಿಯಾಗಿದ್ದರೆ ನರಕವಾಸಿಯ ತಾಣ. ಇದು ನಿನ್ನ ತಾಣವಾಗಿದೆ. ಕಿಯಾಮತ್ ದಿನದಂದು ಅಲ್ಲಾಹನು ನಿನ್ನನ್ನು ಅದರ ಕಡೆಗೆ ಎಬ್ಬಿಸುವನು ಎಂದು ಅವನಿಗೆ ಹೇಳಲಾಗುತ್ತದೆ. (ಮುತ್ತಫಕುನ್ ಅಲೈಹಿ)  

Read More »

ನೆರೆಯವರೊಂದಿಗೆ ವರ್ತನೆ

“ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”, ಪ್ರವಾದಿ ಮುಹಮ್ಮದ್(ಸ)ರ ಇನ್ನೊಂದು ವಚನವು ಹೀಗಿದೆ; “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.” “ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ …

Read More »

ಕಪಟ ವಿಶ್ವಾಸದ ದುಷ್ಪರಿಣಾಮ

ಅಬೂಹುರೈರಾ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು….. (ನಿರ್ಣಾಯಕ ದಿನದಂದು) ಒಬ್ಬ ದಾಸನು ಅಲ್ಲಾಹನ ಮುಂದೆ ಬರುವನು. ಅವನೊಂದಿಗೆ ಅಲ್ಲಾಹನು ಹೀಗೆನ್ನುವನು- ಓ ಇಂಥವನೇ! ನಾನು ನಿನಗೆ ಗೌರವಾದರಗಳನ್ನು ದಯಪಾಲಿಸಿರಲಿಲ್ಲವೆ? ನಾನು ನಿನ್ನನ್ನು ನಾಯಕನಾಗಿ ಮಾಡಿರಲಿಲ್ಲವೆ? ನಾನು ನಿನಗೆ ಪತ್ನಿಯನ್ನು ನೀಡಿರಲಿಲ್ಲವೆ? ನಿನ್ನ ಸ್ವಾಧೀನಕ್ಕೆ ಕುದುರೆ-ಒಂಟೆಗಳನ್ನು ಕೊಟ್ಟಿರಲಿಲ್ಲವೆ? ನೀನು ಆಡಳಿತವನ್ನು ನಡೆಸಿ ಜನರಿಂದ ಕಂದಾಯ ವಸೂಲು ಮಾಡಲು ನಿನಗೆ ನಾನು ಅವಕಾಶ ನೀಡಿರಲಿಲ್ಲವೇ? ಅವನು ಆ ಎಲ್ಲಾ ಕೊಡುಗೆಗಳನ್ನು ಒಪ್ಪಿಕೊಳ್ಳುವನು. ತರುವಾಯ ಅವನೊಂದಿಗೆ …

Read More »

ಪರಲೋಕ ವಿಶ್ವಾಸ

ಪರಲೋಕದ ಮೇಲೆ ವಿಶ್ವಾಸವಿರಿಸುವುದೆಂದರೆ, ಮಾನವನು ಈ ಕೆಳಗಿನ ವಾಸ್ತವಿಕತೆ ಗಳನ್ನು ನಂಬುವುದಾಗಿದೆ- ಒಂದು ದಿನ ಬರಲಿದೆ, ಅಂದು ಎಲ್ಲ ಮಾನವರ ಜೀವನದ ಕಡತಗಳ ವಿಚಾರಣೆ ನಡೆಯುವುದು. ಯಾರ ಕರ್ಮಗಳು ತೃಪ್ತಿಕರವಾಗಿರುವುವೋ ಅವರು ಪುರಸ್ಕಾರ ಪಡೆಯುವರು. ಯಾರ ಕರ್ಮಗಳು ಹಾಳಾಗಿರುವುವೋ ಅವರು ಶಿಕ್ಷೆ ಪಡೆಯುವರು. ಶಿಕ್ಷೆಯೂ ಅನಂತ, ಪುರಸ್ಕಾರವೂ ಶಾಶ್ವತ ಹಾಗೂ ಸುಖ-ಸಂತೋಷವೂ ಶಾಶ್ವತ, ಕಷ್ಟಕಾರ್ಪಣ್ಯವೂ ಶಾಶ್ವತ. ಪರಲೋಕದ ಕುರಿತು ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡ ಲಾಗಿದೆ. ಅದರಿಂದ ಪರಲೋಕದ ಕುರಿತು …

Read More »

ಅಲ್ಲಾಹನ ಗ್ರಂಥಗಳ ಮೇಲೆ ವಿಶ್ವಾಸ

ಗ್ರಂಥಗಳ ಮೇಲೆ ವಿಶ್ವಾಸವೆಂದರೆ ಅಲ್ಲಾಹನು ತನ್ನ ಸಂದೇಶವಾಹಕರ ಮೂಲಕ ಆಗಾಗ ಕಳಿಸುತ್ತಿದ್ದ ಎಲ್ಲ ಮಾರ್ಗದರ್ಶಕ ಗ್ರಂಥಗಳನ್ನು ಸತ್ಯವೆಂದು ನಂಬುವುದು. ಹಿಂದಿನ ಜನ ಸಮುದಾಯಗಳು ತಮ್ಮ ಬಳಿಗೆ ಬಂದಿದ್ದ ಗ್ರಂಥಗಳನ್ನು ಬದಲಾಯಿಸಿಬಿಟ್ಟಿದ್ದರು. ಅಲ್ಲಾಹನು ಕೊನೆಯದಾಗಿ ತನ್ನ ಅಂತಿಮ ಸಂದೇಶವಾಹಕರ(ಸ) ಮೂಲಕ ಸುಸ್ಪಷ್ಟವಾದ ಅಂತಿಮ ಗ್ರಂಥವನ್ನು ಕಳಿಸಿದನು. ಅದು ಎಲ್ಲ ನ್ಯೂನತೆಗಳಿಂದ ಮುಕ್ತವಾದ, ಎಲ್ಲ ರೀತಿಯ ಕೆಡುಕಿನಿಂದ ಸುರಕ್ಷಿತವಾದ ಗ್ರಂಥವಾಗಿದೆ. ಕೇವಲ ಮುಸ್ಲಿಮರಲ್ಲ, ಮುಸ್ಲಿಮೇತರ ಸಂಶೋಧಕರು ಕೂಡಾ ಅದನ್ನು ಸತ್ಯಗ್ರಂಥವೆಂದು ಒಪ್ಪಿದ್ದಾರೆ! ಅಲ್ಲಾಹನ …

Read More »

ವಿಧಿಯ ಮೇಲೆ ವಿಶ್ವಾಸ

ವಿಧಿಯ ಮೇಲೆ ವಿಶ್ವಾಸವಿರಿಸುವುದೆಂದರೆ ಈ ಲೋಕದಲ್ಲಿ ನಡೆಯುವುದೆಲ್ಲವೂ ಅಲ್ಲಾಹನ ವತಿಯಿಂದಲೇ ನಡೆಯುತ್ತದೆ. ಇಲ್ಲಿ ಕೇವಲ ಅವನ ಆಜ್ಞೆ ನಡೆಯುತ್ತದೆ ಎಂದು ನಂಬುವುದು. ಅಲ್ಲಾಹನ ಇಚ್ಛೆಗೆ ವಿರುದ್ಧವಾಗಿ ಲೋಕದಲ್ಲಿ ಏನೂ ನಡೆಯುವುದಿಲ್ಲ. ಎಲ್ಲ ಒಳಿತು-ಕೆಡುಕು ಮತ್ತು ಸನ್ಮಾರ್ಗ-ದುರ್ಮಾರ್ಗಕ್ಕೆ ಒಂದು ನಿಯಮವಿದೆ. ಅದನ್ನು ಅವನು ಮುಂಚೆಯೇ ಮಾಡಿದ್ದಾನೆ. ಅಲ್ಲಾಹನ ಕೃತಜ್ಞ ದಾಸರ ಮೇಲೆ ಎರಗುವ ವಿಪತ್ತುಗಳು, ಅವರು ಎದುರಿಸುವ ಸಂಕಷ್ಟ ಮತ್ತು ಪರೀಕ್ಷೆಗಳೆಲ್ಲವೂ ಅವರ ಪ್ರಭುವಿನ ಆಜ್ಞೆ ಮತ್ತು ಮೊದಲೇ ನಿಶ್ಚಯಿಸಲ್ಪಟ್ಟ ನಿಯಮಗಳಿಗೆ …

Read More »

ಪ್ರವಾದಿಗಳ ಮೇಲೆ ವಿಶ್ವಾಸ

  ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯವೇನೆಂದರೆ- ಅಲ್ಲಾಹನ ವತಿಯಿಂದ ಬಂದಿರುವ ಪ್ರವಾದಿಗಳೆಲ್ಲರೂ ಸತ್ಯವಂತರು. ಅವರೆಲ್ಲರೂ ಅಲ್ಲಾಹನ ವಾಣಿಯನ್ನು ಯಾವುದೇ ಹೆಚ್ಚು ಕಡಿಮೆ ಮಾಡದೆ ಜನರಿಗೆ ತಲಪಿಸಿದರು. ಈ ಪರಂಪರೆಯ ಕೊನೆಯ ಕೊಂಡಿ ಪ್ರವಾದಿ ಮುಹಮ್ಮದ್(ಸ) ಆಗಿದ್ದಾರೆ. ಇನ್ನು ಮಾನವರ ಮೋಕ್ಷವು ಕೇವಲ ಅವರನ್ನು ಅನುಸರಿಸುವುದರಲ್ಲಿದೆ ಎಂದು ನಂಬುವುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡಲಾಗಿದೆ- ಅನಸ್(ರ) ಹೇಳುತ್ತಾರೆ: ಪ್ರವಾದಿ(ಸ) ನನ್ನೊಂದಿಗೆ ಹೀಗೆಂದರು- ನನ್ನ ಪ್ರಿಯ ಪುತ್ರಾ! ನಿನಗೆ …

Read More »