Home / ಪ್ರವಾದಿ ವಚನಗಳು (page 4)

ಪ್ರವಾದಿ ವಚನಗಳು

ಅಲ್ಲಾಹನ ಮೇಲೆ ವಿಶ್ವಾಸ

‘ಈಮಾನ್ ಬಿಲ್ಲಾಹ್’ ಅರ್ಥಾತ್ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದೆಂದರೆ, ಅಲ್ಲಾಹನನ್ನು ಸದಾ ಇರುವವನೆಂದು ನಂಬುವುದು. ಅವನೇ ಈ ಪ್ರಪಂಚದ ಸೃಷ್ಟಿಕರ್ತನೆಂದೂ ಅದರ ವ್ಯವಸ್ಥೆಯನ್ನು ನೋಡಿಕೊಳ್ಳುವವನೆಂದೂ ಒಪ್ಪಿಕೊಳ್ಳುವುದು. ಅವನು ಎಲ್ಲ ರೀತಿಯ ನ್ಯೂನತೆ ಹಾಗೂ ದೌರ್ಬಲ್ಯಗಳಿಂದ ಮುಕ್ತನೆಂದೂ ಎಲ್ಲ ಒಳ್ಳೆಯ ಗುಣಗಳನ್ನು ಹೊಂದಿದವನೂ ಎಲ್ಲ ಒಳಿತುಗಳ ಮೂಲವೆಂದೂ ನಂಬುವುದು. ಅವನೇ ನೈಜ ಆರಾಧ್ಯ, ಜೀವನದ ನಿಯಮಗಳನ್ನು ನೀಡುವ ಆಜ್ಞಾಧಿಕಾರಿ ಮತ್ತು ಒಡೆಯನೆಂದು ಅಂಗೀಕರಿಸುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಹದೀಸ್‍ಗಳನ್ನು ನೀಡಲಾಗುತ್ತದೆ. ಅದರಿಂದ …

Read More »

ವಿಶ್ವಾಸ ಮತ್ತು ನಂಬಿಕೆ

ಅಬೂ ಹುರೈರಾ(ರ) ಹೇಳುತ್ತಾರೆ- ಪ್ರವಾದಿ(ಸ) ಜನರೊಂದಿಗೆ ಹೀಗೆಂದರು- ‘ನೀವು ನನ್ನಲ್ಲಿ ಧರ್ಮದ ವಿಷಯಗಳನ್ನು ಕೇಳಿ ತಿಳಿಯಿರಿ.’ ಆದರೆ ಜನರಿಗೆ ಪ್ರವಾದಿಯವರ(ಸ) ಮೇಲೆ ಇದ್ದ ಗೌರವಾದರಗಳಿಂದಾಗಿ, ಅವರು ಸಾಮಾನ್ಯವಾಗಿ ಏನೂ ಪ್ರಶ್ನಿಸುತ್ತಿರಲಿಲ್ಲ (ಹೊರಗಿನಿಂದ ಯಾರಾದರೂ ಬಂದು ಪ್ರಶ್ನೆ ಕೇಳಿದರೆ ತಮಗೂ ಅದರಿಂದ ಪ್ರಯೋಜನ ಪಡೆಯಬಹುದೆಂದು ಪ್ರತಿಯೊಬ್ಬನೂ ನಿರೀಕ್ಷಿಸುತ್ತಿದ್ದನು). ಹೀಗಿರುವಾಗ ಒಬ್ಬ ವ್ಯಕ್ತಿ ಬಂದು, ಪ್ರವಾದಿಯವರ(ಸ) ಸಮೀಪ ಕುಳಿತುಕೊಂಡು ಕೇಳಿದನು- ಅಲ್ಲಾಹನ ಸಂದೇಶ ವಾಹಕರೆ! ಇಸ್ಲಾಮ್ ಎಂದರೇನು? ಪ್ರವಾದಿ(ಸ) ಹೇಳಿದರು- ಯಾರನ್ನೂ ದೇವನ …

Read More »

ಸಂಕಲ್ಪಶುದ್ಧಿ

ಹ. ಉಮರ್ ಬಿನ್ ಖತ್ತಾಬ್(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು: ಕರ್ಮಗಳು ಸಂಕಲ್ಪವನ್ನು ಅವಲಂಬಿಸಿವೆ. ಮಾನವನಿಗೆ ಅವನು ಸಂಕಲ್ಪ ಮಾಡಿದುದು ಮಾತ್ರ ಸಿಗುವುದು. ಯಾರು ಅಲ್ಲಾಹ್ ಮತ್ತು ರಸೂಲರಿಗಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ನೈಜ ಹಿಜ್ರತ್ ಆಗಿರುವುದು. ಯಾರು ಲೌಕಿಕ ಸಂಪತ್ತು ಗಳಿಸಲಿಕ್ಕಾಗಿ ಅಥವಾ ಯಾವುದೇ ಸ್ತ್ರೀಯೊಂದಿಗೆ ವಿವಾಹ ಮಾಡಲಿಕ್ಕಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ಲೌಕಿಕ ಸಂಪತ್ತು ಅಥವಾ ಸ್ತ್ರೀಗಾಗಿರುವುದು. ಟಿಪ್ಪಣಿ: ಇದು ಸಂಸ್ಕರಣೆಯ ಬಾಬ್ತು ಇರುವ ಅತ್ಯಂತ …

Read More »

ಅಸೂಯೆ

ಅಸೂಯೆಯಿಂದ ದೂರವಿರಿ. ಏಕೆಂದರೆ ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಒಳಿತುಗಳನ್ನು ನುಂಗಿ ಬಿಡುತ್ತದೆ. -ಪ್ರವಾದಿ ಮುಹಮ್ಮದ್(ಸ) ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೇಳಿದರು – ಓ ನನ್ನ ಮಗನೇ! ನಿನಗೆ ಸಾಧ್ಯವಾದರೆ ನೀನು ನಿನ್ನ ಮನದಲ್ಲಿ ಯಾರ ಬಗ್ಗೆಯೂ ಅಸೂಯೆಯಿಲ್ಲದ ಸ್ಥಿತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಮಾಡು. ಅನಂತರ ಹೇಳಿದರು ಓ ನನ್ನ ಮಗನೇ! ಇದು ನನ್ನ ಮಾದರಿ ಆಗಿದೆ. ಯಾರು ನನ್ನ ಮಾದರಿಯನ್ನು ಪ್ರೀತಿಸುತ್ತಾನೋ ಅವನು ನನ್ನನ್ನು …

Read More »

ತಂದೆಯು ಮಕ್ಕಳಿಗೆ ನೀಡುವ ಅತ್ಯುತ್ತಮ ಉಡುಗೊರೆ

“ತಂದೆಯು ತನ್ನ ಮಕ್ಕಳಿಗೆ ಕೊಡುವ ವಸ್ತುಗಳ ಪೈಕಿ ಅತ್ಯುತ್ತಮ ವಸ್ತುವೆಂದರೆ ಅವರಿಗೆ ಉತ್ತಮವಾದ ಶಿಕ್ಷಣ ಮತ್ತು ತರಬೇತಿ.” -ಪ್ರವಾದಿ ಮುಹಮ್ಮದ್(ಸ)

Read More »

ಅಮಲು ಪದಾರ್ಥ

ಮದ್ಯಪಾನ ಮಾಡಬೇಡಿ, ಜೂಜಾಡಬೇಡಿ. ಅಮಲು ಉಂಟುಮಾಡುವ ಪ್ರತಿಯೊಂದು ವಸ್ತುವೂ ನಿಷಿದ್ಧವಾಗಿದೆ. – ಪ್ರವಾದಿ ಮುಹಮ್ಮದ್(ಸ) ಯಾವುದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದರೆ ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ಧವಾಗಿದೆ. – ಪ್ರವಾದಿ ಮುಹಮ್ಮದ್(ಸ)

Read More »

ವ್ಯಾಪಾರ

ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡಬೇಡಿರಿ. ಯಾಕೆಂದರೆ ಪಕ್ವವಾಗುವ ಮೊದಲೇ ಫಲಗಳು ನಾಶಹೊಂದಿದರೆ ಖರೀದಿಸಿದವ ಸಂಕಷ್ಟಕ್ಕೆ ಒಳಗಾಗುವನು. – ಪ್ರವಾದಿ ಮುಹಮ್ಮದ್(ಸ) ಯಾರು ಬೆಲೆಯೇರಿಕೆಯನ್ನು ಬಯಸಿ ಧಾನ್ಯವನ್ನು ತಡೆದಿರಿಸುತ್ತಾರೋ ಅವರು ಅಪರಾಧಿಯಾಗಿದ್ದಾರೆ. -ಪ್ರವಾದಿ ಮುಹಮ್ಮದ್(ಸ)

Read More »

ಭಿಕ್ಷಾಟನೆ

ಒಬ್ಬ ವ್ಯಕ್ತಿ ಜನರ ಮುಂದೆ ಕೈ ಎತ್ತಿ ಯಾಚಿಸಲಾರನೆಂದು ನನಗೆ ಭರವಸೆ ಕೊಟ್ಟರೆ ನಾನು ಅವರಿಗೆ ಸ್ವರ್ಗದ ಭರವಸೆ ನೀಡುತ್ತೇನೆ. ನಿಮ್ಮ ಪೈಕಿ ಯಾರಾದರೂ ಕಟ್ಟಿಗೆ ತಂದು ಮಾರಿ ಸಂಪಾದನೆ ಮಾಡುವುದು ಯಾರದಾದರೂ ಮುಂದೆ ಯಾಚಿಸುವುದಕ್ಕಿಂತ ಉತ್ತಮವಾಗಿದೆ. – (ಪ್ರವಾದಿ ಮುಹಮ್ಮದ್(ಸ)

Read More »

ಸುಳ್ಳು ಆಣೆ

ಸುಳ್ಳು ಆಣೆಗಳ ಮೂಲಕ ಒಬ್ಬನು ಇನ್ನೊಬ್ಬನ ಹಕ್ಕನ್ನು ಕಬಳಿಸಿದರೆ ಅಲ್ಲಾಹನು ಅವನಿಗೆ ನರಕಾಗ್ನಿಯನ್ನು ಕಡ್ಡಾಯಗೊಳಿಸಿರುವನು. ಅದು ಹಲ್ಲುಜ್ಜುವ ಒಂದು ಮರದ ತುಂಡಾದರೂ ಸರಿಯೇ. – ಪ್ರವಾದಿ ಮುಹಮ್ಮದ್(ಸ)

Read More »