Home / ಪ್ರವಾದಿ ವಚನಗಳು (page 8)

ಪ್ರವಾದಿ ವಚನಗಳು

ಕೋಮುವಾದ

ನಾನು ಪ್ರವಾದಿ(ಸ)ರೊಡನೆ ಕೋಮುವಾದ ಅಂದರೇನು ? ಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದರು “ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ ಸಹಾಯ ಮಾಡಿದರೆ ಅದುವೇ ಕೋಮುವಾದ.” (ವಾಯಿಲ್ ಬಿನ್ ಅಸ್ಕ‌ಅ-ಅಬೂದಾವೂದ್)  

Read More »

ತಾಯಿಯ ಹಕ್ಕು

ಒಮ್ಮೆ ಓರ್ವ ವ್ಯಕ್ತಿ ಪ್ರವಾದಿವರ್ಯರೊಡನೆ(ಸ), “ಅಲ್ಲಾಹನ ಸಂದೇಶವಾಹಕರೇ! ನನ್ನ ಬಂಧುಗಳ ಪೈಕಿ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರಾಗಿರುವವರು ಯಾರು?”ಎಂದು ವಿಚಾರಿಸಿದನು. ಅದಕ್ಕುತ್ತರವಾಗಿ ಪ್ರವಾದಿ(ಸ) ಹೇಳಿದರು: “ನಿನ್ನ ತಾಯಿ.” “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಕೇಳಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಉತ್ತರಿಸಿದರು. “ಆ ಬಳಿಕ ಯಾರು?” ಎಂದು ಅವನು ವಿಚಾರಿಸಿದನು. “ನಿನ್ನ ತಾಯಿ” ಎಂದು ಪ್ರವಾದಿ(ಸ) ಹೇಳಿದರು. “ಆ ಬಳಿಕ ಯಾರು?” ಎಂದು ಆ ವ್ಯಕ್ತಿ ಮತ್ತೆ …

Read More »

ಹೆತ್ತವರ ಸೇವೆ

ಒಮ್ಮೆ ಪ್ರವಾದಿವರ್ಯರು(ಸ),”ಅವನು ಅಪಮಾನಿತನಾಗಲಿ” ಎಂದು ಮೂರು ಬಾರಿ ಹೇಳಿದರು. ಜನರು’ಯಾರು?’ ಎಂದು ವಿಚಾರಿಸಿದರು. ಆಗ ಪ್ರವಾದಿ(ಸ) ಹೇಳಿದರು; “ತನ್ನ ತಂದೆ-ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವೃದ್ಧಾಪ್ಯದ ಸ್ಥಿತಿಯಲ್ಲಿ ಕಂಡ ಬಳಿಕವೂ (ಅವರ ಸೇವೆ ಮಾಡುವ ಮೂಲಕ) ಸ್ವರ್ಗ ಪ್ರವೇಶಕ್ಕೆ ಅರ್ಹನಾಗದವನನ್ನು ನಾನು ಶಪಿಸುತ್ತಿದ್ದೇನೆ.”(ಮುಸ್ಲಿಮ್, ವರದಿ-ಅಬೂ ಹುರೈರಾ(ರ))

Read More »

ಉತ್ತಮ ಚಾರಿತ್ರ್ಯ

ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು: “ನಿಮ್ಮ ಪೈಕಿ ಯಾರ ಚಾರಿತ್ರ್ಯವು ಅತ್ಯುತ್ತಮವಾಗಿದೆಯೋ ಅವರೇ ನಿಮ್ಮ ಪೈಕಿ ಅತ್ಯುತ್ತಮರು.” (ಹಝ್ರತ್ ಅಬ್ದುಲ್ಲಾ ಬಿನ್ ಅಮ್ರ್ (ರ)-ಮುಸ್ಲಿಮ್) ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು: “ಸತ್ಯ ವಿಶ್ವಾಸಿಗಳಲ್ಲಿ ಯಾರ ಚಾರಿತ್ರ್ಯವು ಹೆಚ್ಚು ಉತ್ತಮವಾಗಿರುವುದೋ ಅವರು ಪೂರ್ಣ ವಿಶ್ವಾಸಿಗಳು” (ಹ.ಅಬೂಹುರೈರಃ(ರ)-ಅಬೂದಾವೂದ್)

Read More »