Home / ಲೇಖನಗಳು (page 18)

ಲೇಖನಗಳು

ಜೇನ್ನೊಣ ಹಾಗೂ ಸತ್ಯವಿಶ್ವಾಸಿ

@ ಅಬೂ ಝೀಶಾನ್ ಪ್ರವಾದಿ(ಸ) ಹೇಳುತ್ತಾರೆ, ಮುಹಮ್ಮದ್‌ನ(ಸ) ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ, ಸತ್ಯವಿಶ್ವಾಸಿ ಜೇನ್ನೊಣದ ಹಾಗೆ. ಜೇನ್ನೊಣ ಶುದ್ಧ ಹಾಗೂ ಆರೋಗ್ಯಕರವಾದುದನ್ನು ತಿನ್ನುತ್ತದೆ. ಮತ್ತು ಶುದ್ಧ ಹಾಗೂ ಆರೋಗ್ಯಕರವಾದುದರ ಮೇಲೆ ಕುಳಿತುಕೊಳ್ಳುತ್ತದೆ. ಹಾಗೆಯೇ ಜೇನ್ನೊಣ ಯಾವುದರ ಮೇಲೆ ಕುಳಿತುಕೊಳ್ಳುವುದೋ ಅದನ್ನು ಮುರಿಯುವುದಿಲ್ಲ ಅಥವಾ ಅದನ್ನು ಹಾಳು ಮಾಡುವುದಿಲ್ಲ. ಪವಿತ್ರ ಕುರ್‌ಆನಿನಲ್ಲಿ ಕೂಡಾ ಜೇನ್ನೊಣದ ಹೆಸರಿನ ಅನ್ನಹ್ಲ್ ಎಂಬ ಅಧ್ಯಾಯವಿದೆ. ಅದರಲ್ಲಿ ಅಲ್ಲಾಹನು ಜೇನ್ನೊಣದ ಕಾರ್ಯ ವಿಧಾನವನ್ನು ಅದಕ್ಕೆ ಹೇಗೆ …

Read More »

ಸಮಾಜ ಸುಧಾರಣೆ: ಪ್ರವಾದಿ(ಸ) ಕೊಡುಗೆ

ರಕ್ಷಾ, ಬೆಳ್ತಂಗಡಿ ‘ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು ಉಣ್ಣುವವನು ನಮ್ಮವನಲ್ಲ’ ಎಂಬ ಮಾನವೀಯತೆಯ ಮಾತಿನ ಮುಖೇನ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಗೌರವಿಸಲ್ಪಡುವ ಅದಮ್ಯ ಚೇತನವೇ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಆರನೆಯ ಶತಮಾನದಲ್ಲಿ ಅಧರ್ಮದ ಅಂಧಕಾರದಲ್ಲಿ ಮುಳುಗಿದ್ದ ಅರೇಬಿಯನ್ನರನ್ನು ಧರ್ಮವೆಂಬ ಬೆಳಕಿನೆಡೆಗೆ ಒಯ್ಯಲು ಮಕ್ಕಾದ ಪ್ರತಿಷ್ಠಿತ ಕುರೈಶಿ ವಂಶದ ಅಬ್ದುಲ್ಲಾ -ಆಮಿನಾ ದಂಪತಿಗಳ ಸುಪುತ್ರರಾಗಿ ಕ್ರಿ.ಶ. 571 ಎಪ್ರಿಲ್ 20ರಂದು ಸೋಮವಾರದ ಶುಭ ಪ್ರಾತಃಕಾಲದಲ್ಲಿ ಪ್ರವಾದಿಯವರ(ಸ) ಜನನವಾಗುತ್ತದೆ. …

Read More »

ಕುರ್‌ಆನ್ ಮುಸ್ಲಿಮರಿಗೆ ಮಾತ್ರವೇ?

ಖದೀಜಾ ನುಸ್ರತ್ ಮಾನವಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನು ಅವತೀರ್ಣಗೊಳಿಸಿದಂತಹ ಗ್ರಂಥವಾಗಿದೆ ಪವಿತ್ರ ಕುರ್‌ಆನ್. ಸೃಷ್ಟಿಕರ್ತನು ಮಾನವರಿಗೆ ಮಾರ್ಗದರ್ಶನ ನೀಡಬೇಕೆಂಬುದು ಅವನ ದೇವತ್ವದ, ಕರುಣೆಯ ಬೇಡಿಕೆಯಾಗಿದೆ. ತನ್ನ ಸೃಷ್ಟಿಯ ಭೂತ, ವರ್ತಮಾನ ಮತ್ತು ಭವಿಷ್ಯಗಳೆಲ್ಲವೂ ಪರಿಪೂರ್ಣವಾಗಿ ಸೃಷ್ಟಿಕರ್ತನಿಗೆ ಮಾತ್ರ ತಿಳಿದಿದೆ. ಈ ಕಾರಣದಿಂದಾಗಿಯೇ ಎಲ್ಲಾ ಕಾಲದಲ್ಲೂ ನಿರಂತರವಾಗಿ ಎಲ್ಲಾ ಜನಾಂಗಗಳಿಗೂ ಸಂದೇಶವಾಹಕರನ್ನು ಕಳುಹಿಸುತ್ತಿದ್ದನು. ಪ್ರಥಮ ಮನುಷ್ಯರಾದ ಆದಮ್(ಅ) ಪ್ರವಾದಿಯಾಗಿದ್ದರು. ಅಲ್ಲಾಹನ ಕಡೆಯಿಂದ ವಿವಿಧ ಕಾಲಗಳಲ್ಲಿ ನಾನಾ ಪ್ರದೇಶಗಳ ಮತ್ತು ಜನಾಂಗಗಳ ಮಾರ್ಗದರ್ಶನಕ್ಕಾಗಿ ಬೇರೆ …

Read More »

” ಹಲಾಲ್ ” ಎಬ್ಬಿಸಿದ ಕೋಲಾಹಲ..

✍🏽 ಮುಷ್ತಾಕ್ ಹೆನ್ನಾಬೈಲ್ “ಹಲಾಲ್” ಮೊಟ್ಟಮೊದಲು ಭೂಮಿಯ ಮೇಲೆ ಅನುಸರಿಸಲು ಆರಂಭಿಸಿದವರು ಯಹೂದಿಗಳು. ಮರುಭೂಮಿಯ ಮೇಲಿನ ಜನಾಂಗಗಳು ಮೂಲತಃ ಮಾಂಸಹಾರಿಗಳು. ಧರ್ಮಸಂಹಿತೆಗಳು ಸಾರ್ವತ್ರಿಕವಾಗದ ಅಜ್ಞಾನ ಕಾಲದಲ್ಲಿ ಮನುಷ್ಯ ಆಹಾರಕ್ಕಾಗಿ ಪ್ರಾಣಿಗಳನ್ನು ತೋಚಿದ ರೀತಿಯಲ್ಲಿ ಕೊಲ್ಲುತ್ತಿದ್ದ. ಸ್ವತಃ ಮಾಂಸಹಾರಿ ಪ್ರಾಣಿಗಳೂ ಕೂಡ ತಮ್ಮ ಬೇಟೆಯನ್ನು ನಿರ್ದಿಷ್ಟವಾದ ವಿಧಾನದ ಮೂಲಕ ಪಡೆಯುತ್ತವೆ. ಬಹುತೇಕ ಮಾಂಸಹಾರಿ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವುದು ಕತ್ತಿನ ಕೆಳಭಾಗದ ಜೀವನಾಡಿಗಳಾದ ಶ್ವಾಸನಾಳ, ಅನ್ನನಾಳ ಮತ್ತು ರಕ್ತನಾಳವನ್ನು …

Read More »

ಗ್ರಂಥಗಳ ಅಧ್ಯಯನದಲ್ಲಿ ಮುಸ್ಲಿಮರು ತಪ್ಪು ಮಾಡುತ್ತಿದ್ದಾರೆಯೆ?

ಮುಷ್ತಾಕ್ ಹೆನ್ನಾಬೈಲ್ ಮುಸ್ಲಿಮರಲ್ಲಿ ಪವಿತ್ರ ಕುರ್‌ಆನ್ ಕುರಿತಾಗಿ ಒಂದು ದೊಡ್ಡ ತಪ್ಪು ಕಲ್ಪನೆಯಿದೆ. ಕುರ್‌ಆನ್ ಪಾರಾಯಣವೇ ಅತೀ ಪುಣ್ಯದಾಯಕ ಎಂಬ ವ್ಯಾಪಕ ಭಾವನೆಯಿದೆ. ಹಾಗಾಗಿ ಹೆಚ್ಚು ಕಡಿಮೆ ಶೇ 99%ರಷ್ಟು ಮುಸ್ಲಿಮರು ಕುರ್‌ಆನ್ ಅರ್ಥ ಸಹಿತವಾಗಿ ಓದುವುದಿಲ್ಲ. ಅರ್ಥೈಸುವ ಗರಿಷ್ಠ ಪ್ರಯತ್ನ ಮಾಡುವುದಿಲ್ಲ. ಹೀಗಿರುವುದರಿಂದಲೇ ಬಹುತೇಕ ಮುಸ್ಲಿಮರಿಗೆ, ಕುರ್‌ಆನಿನ ಕೆಲ ಆಯ್ದ ಸೂಕ್ತಗಳನ್ನು ಆರಿಸಿಕೊಂಡು ಅಪಪ್ರಚಾರ ಮಾಡುವ ಬಾಹ್ಯ ಶಕ್ತಿಗಳಿಗೆ ಸೂಕ್ತವಾದ ವಿವರಣೆಗಳ ಮೂಲಕ ಮನವರಿಗೆ ಮಾಡಲು ಕಷ್ಟವಾಗುತ್ತಿರುವುದು. ಕುರ್‌ಆನ್ …

Read More »

ಕುರ್‌ಆನ್‌ನಲ್ಲಿ ಉಲ್ಲೇಖವಾಗಿರುವ ಈ ಸಮಾನಾಂಶಗಳು ನಿಮಗೆ ಗೊತ್ತೇ?

ಅಬೂ ಕುತುಬ್ ಡಾ. ತಾರಿಖ್ ಅಲ್ ಸ್ವಿಡಾನ್‌ರವರು ಪವಿತ್ರ ಕುರ್‌ಆನ್‌ನಲ್ಲಿರುವ ಕೆಲವು ಅದ್ಭುತವಾದ ವಿಷಯವನ್ನು ತಮ್ಮ ಅಧ್ಯಯನದ ಮೂಲಕ ಕಂಡು ಕೊಂಡಿದ್ದಾರೆ. ಆರನೇ ಶತಮಾನದ ಅರೇಬಿಯಾದ ಮರುಭೂಮಿಯಲ್ಲಿ ದೇವಗ್ರಂಥ ಎಂದು ಸಾರುವ ಈ ಗ್ರಂಥದಲ್ಲಿ ಬಂದ ಸಮಾನವಾದ ಸಂಖ್ಯೆಗಳನ್ನು ಅವರು ತೋರಿಸಿದ್ದಾರೆ. ಉದಾಹರಣೆಗೆ ಒಂದು ವಿಷಯವು 11 ಬಾರಿ ಉಲ್ಲೇಖ ಆಗಿದ್ದರೆ ಅದರ ವಿರುದ್ಧ ಪದವೂ ಅಷ್ಟೇ ಬಾರಿ ಉಲ್ಲೇಖವಾಗಿದೆ. ಕುರ್‌ಆನ್‌ನಲ್ಲಿ ಪುರುಷ ಎಂಬ ಪದವು 24 ಬಾರಿ ಇದ್ದರೆ, …

Read More »

ಪ್ರವಾದಿ ಮುಹಮ್ಮದ್(ಸ) ಓರ್ವ ಮನಃ ಶಾಸ್ತ್ರಜ್ಞರೆಂಬ ನೆಲೆಯಲ್ಲಿ

ಪ್ರವಾದಿ ಮುಹಮ್ಮದ್(ಸ) ಮಾನವ ಇತಿಹಾಸದಲ್ಲಿ ಅತ್ಯಧಿಕ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಜೀವನದ ಎಲ್ಲಾ ರಂಗಗಳಲ್ಲಿಯೂ ಜನರಿಗೆ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ಮಾತು ಮತ್ತು ಕೃತಿಗಳು ಜನರ ಮನಸ್ಸಿಗೆ ನೆಮ್ಮದಿ, ಸಮಾಧಾನ, ಸಾಂತ್ವನವಾಗಿರುತ್ತದೆ. ಅವರ ಎಲ್ಲಾ ವಚನಗಳು ಆಧುನಿಕ ಕಾಲದಲ್ಲಿ ನಾವು ಎದುರಿಸುವ ಆರ್ಥಿಕ, ಕೌಟುಂಬಿಕ, ರಾಜಕೀಯ, ಸಾಮಾಜಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ, ಅವರ ಬೋಧನೆಗಳು ಉತ್ತಮ ಮತ್ತು ಶಾಂತಿಯುತ ಸಮಾಜವನ್ನು ನಿರ್ಮಿಸಲು ಪ್ರಸ್ತುತವಾಗಿದೆ. ಜಗತ್ತಿನಲ್ಲಿ ಪ್ರವಾದಿ ಮುಹಮ್ಮದ್(ಸ) …

Read More »

ಪ್ರವಾದಿ ಮತ್ತು ಸಹಾಬಿಗಳು ಕುರ್‌ಆನ್‌ಗೆ ಕೊಡುತ್ತಿದ್ದ ಪ್ರಾಶಸ್ತ್ಯ ಹೇಗಿತ್ತು?

 ಮರ್ಯಮ್ ಶಹೀರಾ “ನಿಜವಾದ ಸತ್ಯವಿಶ್ವಾಸಿಗಳು- ಅವರ ಮುಂದೆ ಅಲ್ಲಾಹನ ‘ಸೂಕ್ತ’ಗಳನ್ನು ಓದಿದಾಗ ಅವರ ವಿಶ್ವಾಸ ವೃದ್ಧಿಸುತ್ತದೆ. (ಪವಿತ್ರ ಕುರ್‌ಆನ್-8:2). ತಿಲಾವತುಲ್ ಕುರ್‌ಆನ್ ಅಂದರೆ ಕುರ್‌ಆನ್ ಅಧ್ಯಯನ ಅಂದರೆ ಕೇವಲ ಪಠಣ ಮಾತ್ರವಲ್ಲ ಅದರ ಅಧ್ಯಯನ ಚಿಂತನ-ಮಂಥನ, ಹಾಗೂ ಮನಸ್ಸು ಮತ್ತು ಶರೀರದ ಮೇಲೆ ಪ್ರಭಾವ ಉಂಟಾಗಬೇಕು, ಹೃದಯ ಕಂಪಿಸಬೇಕು. ಅದು ಅವನಿಗೆ ಸನ್ಮಾರ್ಗ ಲಭಿಸಿದೆ ಎಂಬುದರ ಲಕ್ಷಣ. “ಅಲ್ಲಾಹನು ಅತ್ಯುತ್ತಮ ವಾಣಿಯನ್ನು ಅವತರಿಸಿರುವನು. ಎಲ್ಲ ಭಾಗಗಳೂ ಸಮಾನ ಸ್ವರೂಪವಾಗಿರುವಂತಹ ಗ್ರಂಥವಿದು. …

Read More »

ಕುರ್‌ಆನ್ ಎಂತಹ ಮುಸ್ಲಿಮರನ್ನು ಬಯಸುತ್ತದೆ?

ಎಂ. ಅಶ್ರಫ್ ಪವಿತ್ರ ಕುರ್‌ಆನ್ ಎಂತಹ ಮುಸ್ಲಿಮರನ್ನು ಬಯಸುತ್ತದೆ? ಈ ಪ್ರಶ್ನೆಗೆ ಉತ್ತರವನ್ನು ಅದರ ವಾಹಕರಾದ ಪ್ರವಾದಿ ಮುಹಮ್ಮದ್(ಸ) ರವರು ಸ್ವತಃ ಪ್ರಾಯೋಗಿಕವಾಗಿ ನೀಡಿ ಹೋಗಿದ್ದಾರೆ. ಒಮ್ಮೆ ಓರ್ವರು ಸತ್ಯವಿಶ್ವಾಸಿಗಳ ಮಾತೆ ಆಯಿಶಾ(ರ)ರೊಡನೆ ಪ್ರವಾದಿವರ್ಯರ(ಸ) ಜೀವನ ಹೇಗಿತ್ತು ಎಂದು ಕೇಳಿದಾಗ, ಆಯಿಶಾ(ರ), “ನೀವು ಕುರ್‌ಆನ್ ಓದಿಲ್ಲವೇ?” ಎಂದು ಮರು ಪ್ರಶ್ನಿಸುತ್ತಾರೆ. ಆಗಂತುಕ ಓದಿದ್ದೇನೆಂದಾಗ, “ಅದುವೇ ಅಲ್ಲಾಹನ ಸಂದೇಶವಾಹಕರ(ಸ) ಜೀವನವಾಗಿತ್ತು” ಎಂದು ಉತ್ತರಿಸುತ್ತಾರೆ. ಪವಿತ್ರ ಕುರ್‌ಆನ್‌ನ ಉದ್ದೇಶವು ಮಾನವನಿಗೆ ಮಾರ್ಗದರ್ಶನ ನೀಡುವುದಾಗಿದೆ. …

Read More »

ಪ್ರವಾದಿಯನ್ನು(ಸ) ಓದುವಾಗ ಗಮನಿಸದ ಅಂಶಗಳು

ಇರ್ಶಾದ್, ಬೆಂಗಳೂರು ಪ್ರವಾದಿ ಮುಹಮ್ಮದ್(ಸ)ರ ಜೀವನದ ಅಧ್ಯಯನ ನಡೆಸುವಾಗ ಅವರ ಕರೆಗೆ ಓಗೊಟ್ಟು ಇಸ್ಲಾಮ್ ಸ್ವೀಕರಿಸಿ ತಮ್ಮ ಜೀವನವನ್ನೇ ಈ ಸಂದೇಶಕ್ಕಾಗಿ ಮುಡಿಪಾಗಿಟ್ಟ ಸಹಾಬಿಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ನಾವು ಆಗಾಗ ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಅದರಿಂದ ಪ್ರೇರಣೆ ಪಡೆಯುವ ಪ್ರಯತ್ನ ಮಾಡುತ್ತೇವೆ. ಆದರೆ ಪ್ರವಾದಿ ಮುಹಮ್ಮದ್(ಸ)ರ ಸಂದೇಶ ಸ್ವೀಕರಿಸದಿದ್ದರೂ ಅವರ ಜೀವನದ ಅತ್ಯಂತ ಪ್ರಮುಖ ಘಟ್ಟಗಳಲ್ಲಿ ಅವರಿಗೆ ಬೆಂಬಲ ನೀಡಿದ ಹಲವಾರು ಮಹಾನ್ ವ್ಯಕ್ತಿಗಳ ಪೈಕಿ ಅಬೂತಾಲಿಬ್ …

Read More »