✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ ಧರ್ಮವು ವಿವಾಹವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಗಂಡ, ಹೆಂಡತಿ ಕುಟುಂಬ ವ್ಯವಸ್ಥೆಯ ಬುನಾದಿಗಳು. ಆದಿಮಾತಾಪಿತ ಆದಮ್, ಹವ್ವರಿಂದ ಪ್ರಾರಂಭವಾದ ಇಸ್ಲಾಮಿ ಕುಟುಂಬ ವ್ಯವಸ್ಥೆಯು ಇಂದಿಗೂ ಮುಂದುವರಿದಿದೆ. ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಕುಟುಂಬ ವ್ಯವಸ್ಥೆಯು ಕೆಲವೊಂದು ಬದ್ಧತೆಗಳನ್ನು ಪೂರೈಸಬೇಕೆಂದು ಇಸ್ಲಾಂ ಬಯಸುತ್ತದೆ. ಕುಟುಂಬವೆಂದರೆ ಕೇವಲ ಮಾನವ ಜಾತಿಯ ಸಂತಾನವೃದ್ಧಿಗೆ ಪೂರಕವಾದ ವ್ಯವಸ್ಥೆಯಲ್ಲ. ಆದರೂ …
Read More »ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್
✍️ ಪಿ.ಕೆ. ವಿಜಯ ರಾಘವನ್ ಮುಹಮ್ಮದ್ ಪ್ರವಾದಿ(ಸ) ಯಾರಾಗಿದ್ದರು? ಅವರು ಓರ್ವ ಕನ್ಯೆಗಿಂತಲೂ ಹೆಚ್ಚು ಲಜ್ಜಾವಂತರಾಗಿದ್ದರು ಎಂದು ಕೇಳಿದಾಗ ಆಶ್ಚರ್ಯವಾಯಿತು. ಅನಾಗರಿಕ ಸಮಾಜವನ್ನು ಸಂಸ್ಕರಿಸಲು ಒಂಟಿಯಾಗಿ ಹೋರಾಟಕ್ಕಿಳಿದ ವ್ಯಕ್ತಿ ಲಜ್ಜಾವಂತನೇ, ಬದ್ರ್ ಉಹುದ್ ಯುದ್ಧಗಳಿಗೆ ನೇತೃತ್ವ ನೀಡಿದ ವ್ಯಕ್ತಿ ಲಜ್ಜಾವಂತನೇ! ಮಕ್ಕಾ ಮತ್ತು ಮದೀನಾದ ಮೊದಲ ಮತ್ತು ಕೊನೆಯ ಮಾತು ಅವರದಾಗಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ರಾಜಕೀಯ ಮುತ್ಸದ್ದಿ ಲಜ್ಜಾವಂತನೆ? ಸಾವಿರಾರು ವರ್ಷಗಳಿಂದ ಯಾವುದೇ ಬದಲಾವಣೆಯಿಲ್ಲದೆ, ವಿಶ್ವದೆಲ್ಲೆಡೆ ಒಂದೇ ರೀತಿಯಲ್ಲಿ …
Read More »ನೈಜ ಸ್ತ್ರೀವಾದಿ ಮತ್ತು ಶಾಂತಿಯ ಪ್ರತಿಪಾದಕ ಪ್ರವಾದಿ ಮುಹಮ್ಮದ್
✍️ ಶಿಕ್ರಾನ್ ಶರ್ಫುದ್ದೀನ್ ಎಂ. “He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it much-needed Peace & Happiness” ಬರ್ನಾಡ್ ಶಾ. The …
Read More »ಪ್ರವಾದಿ(ಸ) ಮತ್ತು ಮಹಿಳೆ
✍️ ರಶೀದ್, ಉಪ್ಪಿನಂಗಡಿ ಸ್ತ್ರೀ ಸ್ವಾತಂತ್ರ‍್ಯದ ವಿಚಾರ ಬಂದಾಗ ಇಸ್ಲಾಮನ್ನು ತಪ್ಪಾಗಿ ಗ್ರಹಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಬರೀ ಬುರ್ಖಾವನ್ನು ನೋಡಿ ಇಸ್ಲಾಂ ಸ್ತ್ರೀಗೆ ಸ್ವಾತಂತ್ರ‍್ಯವನ್ನು ಕೊಟ್ಟಿಲ್ಲ ಎಂದೇ ವಿಲಕ್ಷಣವಾಗಿ ವಿಶ್ಲೇಷಿಸುತ್ತಾರೆ. ಇದರ ಹಿಂದೆ ಅಧ್ಯಯನವನ್ನು ಸರಿಯಾಗಿ ಮಾಡದ ಅತಿದೊಡ್ಡ ಅಜ್ಞಾನವಿದೆ. ಸ್ತ್ರೀ ಸ್ವಾತಂತ್ರ‍್ಯದ ವಿಚಾರದಲ್ಲಿ ಮುಸ್ಲಿಮರ ವಿರುದ್ಧ ಆರೋಪ ಮಾಡುವವರಿಗೆ ಕನಿಷ್ಠ ಧಾರ್ಮಿಕ ಜ್ಞಾನವೂ ಇರುವುದಿಲ್ಲ. ಈ ಸಮಸ್ಯೆ ಬರೀ ಮುಸ್ಲಿಮೇತರರಿಗೆ ಮಾತ್ರವಲ್ಲ ಸ್ವತಃ ಮುಸ್ಲಿಮರಿಗೂ ಇದೆ. ಟಿವಿ …
Read More »ಪ್ರವಾದಿ(ಸ) ಮತ್ತು ಕ್ಷಮೆ
✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗೊಂದು ಅತ್ಯುತ್ತಮ ಮಾದರಿ ಇತ್ತು (ಪವಿತ್ರ ಕುರ್‌ಆನ್- 33: 21)’ ಎಂದು ಸ್ವತಃ ಅಲ್ಲಾಹನು ಸರ್ಟಿಫಿಕೇಟ್ ನೀಡಿದ ವ್ಯಕ್ತಿತ್ವವದು. ಒಂದು ವೇಳೆ ಪ್ರವಾದಿಯವರ(ಸ) ಜೀವನದ ಪ್ರತಿಯೊಂದು ವಿಷಯವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಜೀವಿಸಲು ಪ್ರಯತ್ನಿಸಿದರೆ ನಮ್ಮನ್ನು ನಾವು ಸಜ್ಜನ ವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಕೊಳ್ಳಲು ಅದುವೇ ಧಾರಾಳ …
Read More »ಪ್ರವಾದಿ ಮುಹಮ್ಮದ್(ಸ)ರ ಸ್ವಭಾವ ಮತ್ತು ಚಾರಿತ್ರ್ಯ
ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್‌ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” (ಅಲ್ ಕಲಮ್: 4) ಪ್ರವಾದಿ ಮುಹಮ್ಮದ್(ಸ)ರು ಈ ರೀತಿ ಹೇಳಿರುವರು, “ಉತ್ತಮ ಚಾರಿತ್ರ್ಯವನ್ನು ಪರಿಪೂರ್ಣಗೊಳಿಸಲಿಕ್ಕಾಗಿ ನನ್ನನ್ನು ಅಲ್ಲಾಹನ ವತಿಯಿಂದ ನಿಯೋಗಿಸಲಾಗಿದೆ.” (ಮೂಅತ್ತಾ) 1.ಸತ್ಯಸಂಧ: ಪ್ರವಾದಿ ಮುಹಮ್ಮದ್(ಸ)ರು ಸತ್ಯಸಂಧ ವ್ಯಕ್ತಿಯಾಗಿದ್ದರು. ಅವರು ತಮ್ಮ ಜೀವಮಾನದಲ್ಲಿ ಎಂದೂ ಸುಳ್ಳು ಹೇಳಿದವರಲ್ಲ. ಪ್ರವಾದಿತ್ವಕ್ಕಿಂತ ಮೊದಲೇ ಜನರು ಅವರನ್ನು ‘ಅಸ್ಸಾದಿಕ್’ (ಸತ್ಯಸಂಧ) ಮತ್ತು ‘ಅಲ್ …
Read More »ಪ್ರವಾದಿ(ಸ) ಮತ್ತು ಜಾಗತಿಕ ಕಾನೂನುಗಳು
✍️ ಮುಷ್ತಾಕ್ ಹೆನ್ನಾಬೈಲ್ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು ನಿರ್ದಿಷ್ಟ ಅಥವ ನಿಖರ ಸಿದ್ಧಾಂತ-ಸಂವಿಧಾನಗಳ ಅಡಿಯಲ್ಲಿ ಆಡಳಿತಗಳನ್ನು ನಡೆಸುತ್ತಿರಲಿಲ್ಲ. ರಾಜ, ಮಂತ್ರಿ ಅಥವಾ ನಾಯಕನ ವಿವೇಚನೆಯಂತೆ ಆಡಳಿತ ಮತ್ತು ನ್ಯಾಯ ವ್ಯವಸ್ಥೆ ನಡೆಯುತ್ತಿತ್ತು. ಸ್ವಾಭಾವಿಕವಾದ ಕೆಲವು ನಾಗರಿಕ ಹಕ್ಕುಗಳನ್ನು ಹೊರತುಪಡಿಸಿದರೆ ಉಳಿದಂತೆ ಪ್ರಭುತ್ವದ ಅಡಿಯಲ್ಲಿ ಪ್ರಜೆಗಳು ಅಕ್ಷರಶ: ಗುಲಾಮರು. ಹೀಗಿನ ಹಕ್ಕುಗಳು ಕೂಡ ಆಡಳಿತಗಾರನ ಔದಾರ್ಯವೆಂದು ಪರಿಗಣಿತವಾಗಿತ್ತು. ಭೌತಿಕವಾದ …
Read More »ಪ್ರವಾದಿ(ಸ) ಬಡ್ಡಿಯನ್ನು ವಿರೋಧಿಸಿದ್ದೇಕೆ?
✍️ ಕೆ.ಎಂ. ಅಶ್ರಫ್ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಸಕಲ ಮಾನವಕುಲಕ್ಕೆ ಮಾರಕವಾದ ವಿಷಯಗಳಲ್ಲಿ ಅಮಲು ಪದಾರ್ಥಗಳು ಮತ್ತು ಬಡ್ಡಿ ವ್ಯವಹಾರಗಳು ಅತೀ ಪ್ರಮುಖವಾಗಿವೆ. ಇವೆರಡೂ ಜಾಗತಿಕವಾಗಿ ಕೋಟಿಗಟ್ಟಲೆ ವ್ಯವಹಾರ ಹೊಂದಿವೆ. ಇತಿಹಾಸದುದ್ದಕ್ಕೂ ಶ್ರೀಮಂತ ಮತ್ತು ಬಡವರ ನಡುವೆ ಅಂತರವನ್ನು ಹೆಚ್ಚಿಸುವಲ್ಲಿ ಬಡ್ಡಿ ವ್ಯವಹಾರ ಪ್ರಮುಖ ಪಾತ್ರ ವಹಿಸಿದೆ. ಬಡ ಮತ್ತು ಜನ ಸಾಮಾನ್ಯರನ್ನು ಶೋಷಿಸಿ, ಅವರನ್ನು ಗುಲಾಮರನ್ನಾಗಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಕಾಯ್ದುಕೊಳ್ಳುವಲ್ಲಿ ಬಂಡವಾಳ ಶಾಹಿಗಳ ಅತೀ ಉಪಯುಕ್ತವಾದ …
Read More »ನೈತಿಕ, ಅನೈತಿಕ ಮತ್ತು ವರ್ತಮಾನದ ತಲ್ಲಣಗಳು
ಜಮಾಅತೆ ಇಸ್ಲಾಮೀ ಹಿಂದ್‌ನ ‘ನೈತಿಕತೆಯೇ ಸ್ವಾತಂತ್ರ‍್ಯ’ ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ವಿಶೇಷ ಲೇಖನ ✍️ ಏ.ಕೆ. ಕುಕ್ಕಿಲ ನೈತಿಕ ಅನೈತಿಕ ವರ್ತಮಾನ ಕಾಲದ ಅತ್ಯಂತ ವಿವಾದಾಸ್ಪದ ಪದಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಈ ಎರಡೂ ಪದಗಳ ವ್ಯಾಖ್ಯಾನಗಳು ಇವತ್ತು ಬದಲಾಗುತ್ತಿವೆ. ಮದ್ಯಪಾನವನ್ನು ನೈತಿಕ ಪಟ್ಟಿಯಲ್ಲಿಟ್ಟು ಸಮರ್ಥಿಸುವವರು ಇರುವಂತೆಯೇ ಅನೈತಿಕವೆಂದು ಸಾರಿ ವಿರೋಧಿಸುವವರೂ ಇದ್ದಾರೆ. ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆಯೂ ಇಂಥದ್ದೇ ಭಿನ್ನ ನಿಲುವುಗಳಿವೆ. ಅತ್ಯಾಚಾರಕ್ಕೆ ತುಂಡುಡುಗೆಯದ್ದೂ ಕೊಡುಗೆ ಇದೆ ಎಂದು …
Read More »ಮೌಲಾನರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲು ಕಾರಣವೇನು?
✍️ಏ.ಕೆ.ಕುಕ್ಕಿಲ ಸ್ವಾತಂತ್ರ‍್ಯ ಅಂದರೆ ಬಿಡುಗಡೆ. ಒಂದರ್ಥದಲ್ಲಿ ವಿಮೋಚನೆ. 1947 ಆಗಸ್ಟ್ 15 ಈ ದೇಶದ ಪಾಲಿಗೆ ಯಾಕೆ ಮುಖ್ಯ ಅಂದರೆ, ಆವತ್ತು ಈ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತು. ಇತಿಹಾಸದ ಉದ್ದಕ್ಕೂ ಇಂಥ ವಿಮೋಚನೆಗಳು ನಡೆದಿವೆ ಮತ್ತು ಇಂಥ ಇಸವಿಗಳನ್ನು ದಪ್ಪಕ್ಷರಗಳಲ್ಲಿ ಬರೆದಿಡಲಾಗಿದೆ. ಮುಸ್ಲಿಮರ ಮಟ್ಟಿಗೆ ಈ ‘ಬಿಡುಗಡೆ’ ಎಂಬ ಪದ ಹೊಸತಲ್ಲ. ಮದ್ರಸ ಕಲಿಕೆಯ ಸಂದರ್ಭದಲ್ಲೇ ಅವರು ಈ ಪದವನ್ನು ಮತ್ತು ಅದರ ಭಾವ-ಬೇಡಿಕೆಗಳನ್ನು ಅರಿತಿರುತ್ತಾರೆ. ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ …
Read More »