Home / ಲೇಖನಗಳು (page 19)

ಲೇಖನಗಳು

ಸಲ್ಲಲ್ಲಾಹು ಅಲೈಹಿ ವ ಸಲ್ಲಮ್

✍️ ಏ.ಕೆ. ಕುಕ್ಕಿಲ ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು. ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ ಅದರ …

Read More »

ಜಗತ್ತು ಕಂಡ ಮಹಾನ್ ಮಾನವತಾವಾದಿ, ಸಮಾಜ ಸುಧಾರಕ, ಮಹಿಳಾ ವಿಮೋಚಕ ಪ್ರವಾದಿ ಮುಹಮ್ಮದ್(ಸ)

ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ. ಈ ಭೂಮುಖದ ಮೇಲೆ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ಕಾಲಗಳಲ್ಲಿ ಪ್ರವಾದಿಗಳ ಆಗಮನವಾಗಿದೆ ಎಂಬುದು ಮುಸಲ್ಮಾನರ ವಿಶ್ವಾಸದ ಭಾಗವಾಗಿದೆ. ಸುಮಾರು ಒಂದುಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದಿರುವರೆಂದು ವರದಿಯಿದೆ. ಪ್ರವಾದಿ ಮುಹಮ್ಮದ್(ಸ) ರು ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಜಾಗತಿಕ ಮುಸಲ್ಮಾನರು ರಬಿಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ) ರನ್ನು ಅತಿ ಹೆಚ್ಚು ಸ್ಮರಿಸುವುದನ್ನು, ಗುಣಗಾನ ಮಾಡುವುದನ್ನು ಕಾಣಬಹುದು. ರಬಿಉಲ್ ಅವ್ವಲ್ …

Read More »

ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್…

✍🏽ಮುಷ್ತಾಕ್ ಹೆನ್ನಾಬೈಲ್ ಮದೀನಾ ನಗರದ ಬೀದಿಯದು. ಆ ಅಜ್ಜಿ ಬೆಳಿಗ್ಗೆಯಿಂದಲೇ ಬೊಬ್ಬೆ ಹಾಕುತ್ತಿದ್ದಳು. ಬನ್ನಿ ಸ್ವಲ್ಪ ನನ್ನತ್ತ ನೋಡಿ, ನಾನು ಈ ನಗರ ತೊರೆಯಬೇಕಿದೆ, ಇಲ್ಲಿ ಬದುಕುವ ಪರಿಸ್ಥಿತಿ ಇಲ್ಲ. ಎಲ್ಲಿ ನೋಡಿದರೂ ವಂಚಕರು. ನಾನೆಂದೂ ಮತ್ತೆ ಈ ನಗರಕ್ಕೆ ಬರಲಾರೆ, ನನ್ನ ಈ ಭಾರವಾದ ಮೂಟೆಗಳನ್ನು ಹೊತ್ತು ನಗರದ ಹೊರಭಾಗಕ್ಕೆ ನನ್ನನ್ನು ತಲುಪಿಸಿ ಎಂಬುದೇ ಆ ಹಣ್ಣು ಹಣ್ಣು ಮದುಕಿಯ ಬೊಬ್ಬೆಯಾಗಿತ್ತು. ದೂರದ ಪಯಣ, ಭಾರವಾದ ಮೂಟೆಗಳು ಮತ್ತು …

Read More »

ಪ್ರವಾದಿ ಮುಹಮ್ಮದ್(ಸ): ಶ್ರೇಷ್ಠ ಸಮಾಜ ಸುಧಾರಕ

ಮನುಷ್ಯರಿಗೆ ದೈವಿಕ ಸಂದೇಶವನ್ನು ತಲುಪಿಸುವ ಮಹಾ ಪುರುಷರನ್ನು ಪ್ರವಾದಿಗಳೆಂದು ಕರೆಯಲಾಗುತ್ತದೆ. ಈ ಭೂಮುಖದ ಮೇಲೆ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ಕಾಲಗಳಲ್ಲಿ ಪ್ರವಾದಿಗಳ ಆಗಮನವಾಗಿದೆ ಎಂಬುದು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. ಸುಮಾರು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದಿರುವರೆಂದು ವರದಿಯಿದೆ. ಪ್ರವಾದಿ ಮುಹಮ್ಮದ್(ಸ)ರು ಆ ಪ್ರವಾದಿಗಳಲ್ಲಿ ಕೊನೆಯವರಾಗಿದ್ದಾರೆ. ಜಾಗತಿಕ ಮುಸ್ಲಿಮರು ರಬೀಉಲ್ ಅವ್ವಲ್ ತಿಂಗಳಲ್ಲಿ ಪ್ರವಾದಿ ಮುಹಮ್ಮದ್(ಸ)ರನ್ನು ಅತಿ ಹೆಚ್ಚು ಸ್ಮರಿಸುವುದನ್ನು, ಗುಣಗಾನ ಮಾಡುವುದನ್ನು ಕಾಣಬಹುದು. ರಬೀಉಲ್ …

Read More »

ಕೆಡುಕು ಮುಕ್ತ ಸಮಾಜ: ಪ್ರವಾದಿ(ಸ) ಮಾದರಿ

ಬನೀ ಇಸ್ರಾಯೀಲರ ಮಧ್ಯೆ ಓರ್ವ ಒಳ್ಳೆಯ ವ್ಯಕ್ತಿ ಇದ್ದ. ಕೆಟ್ಟು ಹೋಗಿದ್ದ ಆ ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಬೆರಳಣಿಕೆಯಷ್ಟಿತ್ತು. ಆ ಊರಿನ ರಾಜ ಈ ವ್ಯಕ್ತಿಯನ್ನು ಕರೆಸಿ ಈ ವ್ಯಕ್ತಿಯಿಂದ ಕೆಡುಕು ಮಾಡಿಸುತ್ತೇನೆ ಎಂದು ಪಣತೊಟ್ಟ. ಅವನನ್ನು ಕರೆಸಿ ಮೂರು ಕೆಡುಕುಗಳ ಪೈಕಿ ಯಾವುದಾದರೂ ಒಂದನ್ನು ಮಾಡುವಂತೆ ಹೇಳಲಾಯಿತು. ಒಂದನೆಯದು ತಾಯಿಯನ್ನು ಕೊಲ್ಲಬೇಕು. ಎರಡನೆಯದು ತಂಗಿಯೊಂದಿಗೆ ವ್ಯಭಿಚಾರ ಮಾಡಬೇಕು. ಮೂರನೆಯದು ಮದ್ಯ ಕುಡಿಯಬೇಕು. ಆ ವ್ಯಕ್ತಿ ಅಸಹಾಯಕ ಅವಸ್ಥೆಯಲ್ಲಿ ಕೆಡುಕುಗಳಲ್ಲಿ …

Read More »

ದೇಶ ಮತ್ತು ಧರ್ಮ: ಪ್ರವಾದಿ(ಸ) ಪರಿಕಲ್ಪನೆ: “ದೇಶ ಮೊದಲೋ ಧರ್ಮ ಮೊದಲೋ?”

ದೇಶ ಧರ್ಮ ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ. ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸುವುದೂ ಇದೆ. ದೇಶ ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು ಬಳಸಿಕೊಳ್ಳುವುದೂ ಇದೆ. ಒಂದು ಅಂಕಿ-ಅಂಶ ಕೊಡುತ್ತೇನೆ. 2021ರಲ್ಲಿ ಒಂದು ಲಕ್ಷದ 63 ಸಾವಿರ …

Read More »

ನೋವುಗಳನ್ನು ನುಂಗಿ ಶಾಂತಿಯ ಬೀಜ ಬಿತ್ತಿದ ಪ್ರವಾದಿ ಮುಹಮ್ಮದ್ (ಸ)

“ನೀವಿನ್ನು ಸ್ವತಂತ್ರರು. ನಾವು ನಿಮ್ಮನ್ನು ಕ್ಷಮಿಸಿದ್ದೇವೆ. ನೀವು ನಿಮ್ಮ ಧರ್ಮವನ್ನು ಆಚರಿಸಲು ಸರ್ವ ಸ್ವತ೦ತ್ರರು.” ಮಾನವತೆಯನ್ನು ಶಾಂತಿಯನ್ನು ಮತ್ತು ಏಕದೇವ ವಿಶ್ವಾಸವನ್ನು ಬೋಧಿಸಿದ ಕಾರಣಕ್ಕಾಗಿ ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಹದಿಮೂರು ವರ್ಷಗಳ ಕಾಲ ಅಮಾನವೀಯವಾಗಿ ಹಿಂಸಿಸಿದ, ಕ್ರೂರ ದಿಗ್ಬಂಧನಕ್ಕೊಳಪಡಿಸಿದ ಅಂತಿಮವಾಗಿ ತಾಯ್ನಾಡು ತೊರೆದು ಹೋಗುವಂತಹ ಸನ್ನಿವೇಶ ನಿರ್ಮಿಸಿದ ಒಂದು ಸಮೂಹಕ್ಕೆ ಪ್ರವಾದಿಯವರು(ಸ) ನೀಡಿದ ಅಭಯದ ವಾಗ್ದಾನಗಳೇ ಈ ಮೇಲಿನ ವಾಕ್ಯಗಳು. ಇಂತಹ ಅಭಯ ನೀಡಿದ್ದಾದರೂ ಯಾವಾಗ… ಮುಸ್ಲಿಮ್ ಸೇನೆಯು …

Read More »

ನೆರೆಹೊರೆಯವರೊಂದಿಗೆ ಸದ್ವರ್ತನೆಯಲ್ಲಿ ಧರ್ಮಬೇಧಕ್ಕೆ ಆಸ್ಪದವಿಲ್ಲ

ಪ್ರವಾದಿ ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ. ಮುಹಮ್ಮದ್ (ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಹಿಂದೆ ಬಂದ ಎಲ್ಲ ಪ್ರವಾದಿಗಳಂತೆ ಇಸ್ಲಾಮ್ ಧರ್ಮದ ಬೋಧಕರಾಗಿದ್ದಾರೆ. ನೆರೆಹೊರೆಯವರಿಗೆ ಸಂಬಂಧಿಸಿದ ಅವರ ಬೋಧನೆಗಳನ್ನು ನಾವು ಪಾಲಿಸಿದರೆ ಸ್ವರ್ಗ ಗಳಿಸಲು ಸಾಧ್ಯವಾಗಬಹುದು. ಓರ್ವ ಮಹಿಳೆ ಐಚ್ಚಿಕ ಆರಾಧನೆಗಳಲ್ಲಿ ಅಷ್ಟೇನೂ ಆಸಕ್ತಿಯಿಲ್ಲ. ಅದರೆ ತನ್ನ ನೆರೆಹೊರೆಯವರಿಗೆ ಗಿಣ್ಣುಗಳ ತುಂಡುಗಳನ್ನು ಹಂಚುತ್ತಾಳೆ ಎಂದು ಹೇಳಿದಾಗ ಆ ಮಹಿಳೆ ಸ್ವರ್ಗಕ್ಕೆ ಹೋಗುತ್ತಾಳೆ ಎಂದು ಪ್ರವಾದಿ (ಸ ) …

Read More »

ಆಯುಧ ಬಲದಿಂದ ಧರ್ಮ ಪ್ರಚಾರ

ಭಾರತದಲ್ಲಿ ಮುಸ್ಲಿಮರಾದ ನೀವು ಅಲ್ಪಸಂಖ್ಯಾತರಾಗಿರುವುದರಿಂದ ನಮ್ಮೊಂದಿಗೆ ಜಿಹಾದ್ ನಡೆಸಲಿಲ್ಲವಲ್ಲವೇ? ಇಸ್ಲಾಮ್ ಕಾಫಿರರ ವಿರುದ್ಧ ಜಿಹಾದ್ ನಡೆಸಬೇಕೆಂದು ಆದೇಶಿಸುತ್ತದಲ್ಲವೇ? ಭಾರತದಲ್ಲಿ ಮುಸ್ಲಿಮರು ಜಿಹಾದ್ ನಡೆಸುತ್ತಿಲ್ಲವೆಂಬ ಭಾವನೆ ಸರಿಯಲ್ಲ ಏಕೆಂದರೆ ಪ್ರತಿಯೊಬ್ಬ ಮುಸಲ್ಮಾನನ ಮೇಲೂ ಜಿಹಾದ್ ಕಡ್ಡಾಯವಾಗಿದೆ. ಆದರಿಂದ ದೂರಸರಿಯಲು ಯಾರಿಗೂ ಅನುಮತಿಯಿಲ್ಲ. ನರಕದಿಂದ ಮುಕ್ತಿಗೆ ಮತ್ತು ಸ್ವರ್ಗ ಪ್ರವೇಶಕ್ಕೆ ಅದು ಅನಿವಾರ್ಯವಾಗಿದೆ. ಪವಿತ್ರ ಕುರ್ ಆನ್ ಹೇಳುತ್ತದೆ: ‘ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾವು ನಿಮಗೆ ತೋರಿಸಿ …

Read More »

ಯುದ್ಧ ಪ್ರಿಯರ ನಡುವೆ ಬದುಕಿದ ಯುದ್ಧ ವಿರೋಧಿ ಪ್ರವಾದಿ

ಭಿನ್ನಾಭಿಪ್ರಾಯಗಳು ಮನುಷ್ಯನ ಸಹಜ ಪ್ರಕೃತಿ. ಮಾತು ಕಲಿಯುವಾಗಲೇ ಮನುಷ್ಯನ ಈ ಗುಣ ಪ್ರಕಟವಾಗುತ್ತದೆ. ನಾನು ಇಷ್ಟಪಟ್ಟದ್ದನ್ನು ನನ್ನ ಮಕ್ಕಳು ಇಷ್ಟಪಡಬೇಕೆಂದಿಲ್ಲ. ಹಾಗೆಯೇ ಮನುಷ್ಯನ ಸಾಮಾಜಿಕ ರಂಗ,ರಾಜಕೀಯ ರಂಗದಲ್ಲಿಯೂ ಈ ಭಿನ್ನತೆ ಕಂಡು ಬರುತ್ತದೆ. ಅಭಿಪ್ರಾಯಗಳನ್ನು ಗೌರವಿಸಬೇಕು. ಭಿನ್ನಾಭಿಪ್ರಾಯಗಳು ಜಗಳಕ್ಕೆ ಕಾರಣವಾಗಬಾರದು. ಕುಟುಂಬದ ಸಮಸ್ಯೆಯೇ ಇರಲಿ, ದೇಶದ ಸಮಸ್ಯೆಯೇ ಇರಲಿ, ಒಂದೇ ಸಮೂಹವೇ ಆಗಿರಲಿ, ಎರಡು ಭಿನ್ನ ಸಮೂಹವೇ ಆಗಿರಲಿ ಪರಸ್ಪರ ಸಮಾಲೋಚಿಸಿ ಒಂದು ನಿರ್ಧಾರಕ್ಕೆ ಬಂದರೆ ಆ ನಿರ್ಧಾರದಲ್ಲಿ ದೇವನ …

Read More »