Home / ಲೇಖನಗಳು (page 20)

ಲೇಖನಗಳು

ಗುಲಾಮಗಿರಿಯನ್ನು ನಿಷೇಧಿಸದಿರಲು ಕಾರಣವೇನು?

ಇಸ್ಲಾಮ್ ಗುಲಾಮತನವನ್ನು ನಿಷೇಧಿಸಿಲ್ಲವೆಂದು ನಾನು ಭಾವಿಸಿದ್ದೇನೆ. ಹಾಗಿದ್ದರೆ ಸಮಾನತೆ ಹಾಗೂ ನ್ಯಾಯದ ಕುರಿತು ಮಾತನಾಡಲು ಇಸ್ಲಾಮಿಗೆ ಯಾವ ಅಧಿಕಾರವಿದೆ? ಮನುಷ್ಯರೆಲ್ಲಾ ಒಂದೇ ದೇವನ ಸೃಷ್ಟಿಗಳೆಂದು, ಒಂದೇ ತಂದೆ ತಾಯಿಯ ಮಕ್ಕಳೆಂದು ಇಸ್ಲಾಮ್ ಕಲಿಸುತ್ತದೆ. ಆದ್ದರಿಂದ ಅವರ ನಡುವೆ ಭೇದಭಾವ ಸಲ್ಲದೆಂದು ಅದು ಆಜ್ಞಾಪಿಸುತ್ತದೆ, ‘ಮನುಷ್ಯರೇ, ನಿಮ್ಮನ್ನು ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಲಾಗಿದೆ. ನಿಮ್ಮನ್ನು ಕುಲಗೋತ್ರಗಳಾಗಿಯೂ, ಸಮುದಾಯಗಳಾಗಿಯೂ ವಿಂಗಡಿಸಿರುವುದು ನೀವು ಪರಸ್ಪರ ಪರಿಚಯ ಪಡುವ ಸಲುವಾಗಿ ಮಾತ್ರ.’ (ಪವಿತ್ರ ಕುರ್‌ಆನ್ …

Read More »

ಕುರ್‌ಆ‍ನ್ ವಚನಗಳಲ್ಲಿ ವಿರೋಧಾಭಾಸವೇ?

ಎಲ್ಲಾ ಕಾರ್ಯಗಳು ದೇವವಿಧಿಗೆ ಅನುಗುಣವಾಗಿ ನಡೆಯುತ್ತದೆಂದು ಹೇಳುವ ಕುರ್‌ಆ‍ನ್ ವಚನಗಳು ಮತ್ತು ಮನುಷ್ಯನ ಕರ್ಮಗಳಿಗೆ ಅನುಗುಣವಾದ ಫಲ ಉಂಟಾಗುವುದೆಂದು ಸ್ಪಷ್ಟಪಡಿಸುವ ಹಲವಾರು ವಚನಗಳನ್ನು ಇಲ್ಲಿ ಉಲ್ಲೇಖಿಸಲಾಯಿತು. ವಿಧಿವಿಶ್ವಾಸದ ಕುರಿತು ಕುರ್‌ಆ‍ನ್ ವಚನದಲ್ಲಿರುವ ವಿರೋಧಾಭಾಸವನ್ನು ಇದು ಸ್ಪಷ್ಟಪಡಿಸುತ್ತದೆಯಲ್ಲವೇ? ವಿಧಿವಿಶ್ವಾಸಕ್ಕೆ ಸಂಬಂಧಿಸಿದ ಕುರ್‌ಆ‍ನ್ ವಚನಗಳಲ್ಲಿ ಸ್ವಲ್ಪವೂ ವಿರೋಧಾಭಾಸವಿಲ್ಲ. ಮಾತ್ರವಲ್ಲ ಅವುಗಳು ಪರಸ್ಪರ ವ್ಯಾಖ್ಯಾನಿಸಲು ವಿವರಿಸಲು ಪೂರಕವಾಗಿದೆ. ಒಂದು ಉದಾಹರಣೆಯ ಮೂಲಕ ಇದು ಸ್ಪಷ್ಟಪಡಿಸಬಹುದು. ಸುಂದರವಾಗಿ ನಿರ್ಮಿಸಿದ ಉನ್ನತ ದರ್ಜೆಯ, ಶಿಸ್ತುಬದ್ಧವಾಗಿ ನಡೆಸಲ್ಪಡುತ್ತಿರುವ ಒಂದು …

Read More »

ವಿಧಿ ವಿಶ್ವಾಸ-ಭೌತಿಕವಾದಿಗಳು ಮತ್ತು ಇಸ್ಲಾಮ್

ದೇವನು ಸರ್ವಶಕ್ತ ಹಾಗೂ ಸರ್ವಜ್ಞನಾಗಿದ್ದಾನಲ್ಲವೇ? ಹೀಗಿರುವಾಗ ಲೋಕದ ಮನುಷ್ಯರು ಯಾವ ರೀತಿಯವರೆಂದೂ, ಹೇಗೆ ಬದುಕುವರೆಂದೂ ಸೃಷ್ಟಿಕರ್ತನಿಗೆ ಮೊದಲೇ ತಿಳಿದಿದೆ. ದಿವ್ಯಜ್ಞಾನದಲ್ಲಿ ತಪ್ಪು ಸಂಭವಿಸುವುದು ಅಸಾಧ್ಯವಾದುದರಿಂದ ದೇವನ ತೀರ್ಮಾನದಲ್ಲಿ ಸ್ವಲ್ಪವೂ ಬದಲಾವಣೆ ಸಾಧ್ಯವಿಲ್ಲವೆಂದು ಇದರ ಅರ್ಥವಲ್ಲವೇ? ದೇವವಿಧಿಗನುಗುಣವಾಗಿ ಮನುಷ್ಯ ಸಾಗಬೇಕಾದುದರಿಂದ ಮನುಷ್ಯನಿಗೆ ಸ್ವಾತಂತ್ರ್ಯ ಎಲ್ಲಿದೆ? ದೇವವಿಧಿಗೆ ನಿರ್ಬಂಧಿತನಾಗಿ ಆತ ಮಾಡುವ ಕರ್ಮಗಳ ಹೆಸರಿನಲ್ಲಿ ಶಿಕ್ಷೆ ನೀಡುವುದು ಎಷ್ಟು ಸರಿ? ಆಸ್ತಿಕರು ಹಾಗು ನಾಸ್ತಿಕರು ನಿರಂತರವಾಗಿ ಈ ವಿಷಯದಲ್ಲಿ ಸಂಶಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. …

Read More »

ದೇವನು ಕಅಬಾದಲ್ಲಿದ್ದಾನೆಯೇ?

ಮುಸ್ಲಿಮ್‌ರು, ನಮಾಝ್ ನಿರ್ವಹಿಸುವಾಗ ಕಅಬಾದ ಕಡೆಗೆ ಮುಖ ಮಾಡಲು ಕಾರಣವೇನು? ದೇವನು ಕಅಬಾದಲ್ಲಿರುವನೇ? ಅಥವಾ ಕಅಬಾವು ದೇವನ ಪ್ರತೀಕವೇ? ಪ್ರತಿಷ್ಠಾಪನೆಯೇ ? ಇಸ್ಲಾಮಿ ದೃಷ್ಟಿಕೋನದಂತೆ ದೇವನು ಯಾವುದೋ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ದೇವನಿಗೆ ಪ್ರತಿಮೆಗಳೂ ಪ್ರತಿಷ್ಠಾಪನೆಯೋ ಇಲ್ಲ. ”ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವು. ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹನು ಬಹುವಿಶಾಲನೂ ಅಭಿಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 2:115) ‘ಭೂಮಿ-ಆಕಾಶಗಳ ಪ್ರತಿಯೊಂದು ವಸ್ತುವಿನ ಜ್ಞಾನವು ಅಲ್ಲಾಹನಿಗೆ …

Read More »

ಪ್ರವಾದಿ ಮುಹಮ್ಮದ್‌ರನ್ನು(ಸ) ನೀವೆಷ್ಟು ತಿಳಿದುಕೊಂಡಿದ್ದೀರಿ?

ಏ.ಕೆ. ಕುಕ್ಕಿಲ ಎರಡು ಘಟನೆಗಳು ಇತ್ತೀಚೆಗೆ ರಾಜ್ಯದ ಗಂಗೊಳ್ಳಿಯಲ್ಲಿ ನಡೆದ ಸಭೆಯಲ್ಲಿ ಪ್ರವಾದಿ(ಸ)ರನ್ನು ನಿಂದಿಸಲಾಯಿತು. ಬಹುತೇಕ ಇದೇ ಸಮಯದಲ್ಲಿ ಕಾರು ಅಪಘಾತದಲ್ಲಿ ಓರ್ವ ಕಾರ್ಟೂನಿಸ್ಟ್ ರ ಸಾವು ಸಂಭವಿಸಿತು. ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಸಂಭ್ರಮದಿಂದ ಹಂಚಿಕೊಂಡರು. ಈ ಕಾರ್ಟೂನಿಸ್ಟ್ ರ ಹೆಸರು ಲರ್ಸ್ ವಿಲ್ಕ್ ಇವರು ಸ್ವೀಡನ್ನಿನವರು. ಪ್ರವಾದಿ ಮುಹಮ್ಮದ್‌ರನ್ನು(ಸ) ಇರಿಯುವ ಮತ್ತು ಅಪಮಾನಿಸುವ ರೀತಿಯಲ್ಲಿ ಇವರು ಕಾರ್ಟೂನ್ ಬಿಡಿಸಿದ್ದರು. ಅಂದಹಾಗೆ, ಇವೆರಡೂ ನಮ್ಮ ನಡುವೆ ನಡೆಯುತ್ತಿರುವ …

Read More »

ಮುಹರ್ರಮ್ ಏನು ಏನಲ್ಲ?

ಸಬೀಹಾ ಫಾತಿಮಾ  ಚಾಂದ್ರಮಾನ ಕ್ಯಾಲೆಂಡರ್ ಅಥವಾ ಹಿಜರಿ ಕ್ಯಾಲೆಂಡರಿನ ಪ್ರಥಮ ತಿಂಗಳ ಹೆಸರೇ ಮುಹರ್ರಮ್. ಬಹುಧರ್ಮೀಯ, ಬಹು ಸಂಸ್ಕೃತಿಯ ಭವ್ಯ ಭಾರತದಲ್ಲಿ ಬಾಳಿ ಬದುಕುತ್ತಿರುವವರಲ್ಲಿ ಮುಹರ್ರಮ್ ಎಂಬುದು ಮುಸ್ಲಿಮರ ಒಂದು ಹಬ್ಬ ಎಂಬ ನಂಬಿಕೆ ಪ್ರಚಲಿತವಾಗಿದೆ. ಆದರೆ ಇಸ್ಲಾಮಿನಲ್ಲಿ ಕೇವಲ ಎರಡೇ ಹಬ್ಬಗಳು. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳು ರಮಝಾನ್ ನ ಉಪವಾಸ ಮುಗಿಸಿ 10ನೇ ತಿಂಗಳ ಆರಂಭ ಶವ್ವಾಲ್ ತಿಂಗಳ ಒಂದರಂದು ಆಚರಿಸುವ ಈದುಲ್ ಫಿತ್ರ್ ಮತ್ತು ಅದರ …

Read More »

ಮುಹರ್ರಮ್ ಏನು ವಿಶೇಷ?

@ ಏ.ಕೆ. ಕುಕ್ಕಿಲ ಮುಹರ್ರಮ್ ಎಂಬುದು ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ತಿಂಗಳು. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಲನೆಯನ್ನು ಆಧರಿಸಿ ರಚಿಸಲಾಗಿದ್ದರೆ ನಾವು ಸಾಮಾನ್ಯವಾಗಿ ಉಪಯೋಗಿಸುವ ಜನವರಿ-ಫೆಬ್ರವರಿ ಎಂಬ ಕ್ಯಾಲೆಂಡರ್ ಸೂರ್ಯನ ಚಲನೆಯನ್ನು ಆಧರಿಸಿ ರಚಿಸಿದ್ದಾಗಿದೆ. ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿ ಕೊನೆಗೆ ಮದೀನಾಕ್ಕೆ ವಲಸೆ ಹೋಗುತ್ತಾರೆ. ಈ ವಲಸೆಯಿಂದ ಇಸ್ಲಾಮಿಕ್ ಕ್ಯಾಲೆಂಡರ್ ನ ದಿನಾಂಕ ಆರಂಭವಾಗುತ್ತದೆ. ಅದಕ್ಕೆ ಹಿಜರಿ ಶಕೆ ಎಂದು …

Read More »

ಪವಿತ್ರ ಕುರ್‌ಆನ್: ಸಂದೇಹದ ಸುತ್ತ…

@ ಏ.ಕೆ. ಕುಕ್ಕಿಲ 1. ಝೈದ್ ಬಿನ್ ಸಾಬಿತ್ 2. ಅಬ್ದುಲ್ಲಾ ಬಿನ್ ಝುಬೈರ್ 3. ಸಈದ್ ಬಿನ್ ಆಸ್ 4. ಅಬ್ದುರ‍್ರಹ್ಮಾನ್ ಬಿನ್ ಹಾರಿಸ್ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೆ. ಈ ಮೇಲಿನ ಹೆಸರುಗಳು ನನ್ನ ಅಧ್ಯಯನ ಪಟ್ಟಿಯಲ್ಲೂ ಇತ್ತು. ಇದಕ್ಕೆ ಒಂದು ಕಾರಣವೂ ಇದೆ- ಹಿರಿಯ ಸಾಹಿತಿಯೊಬ್ಬರು ಪವಿತ್ರ ಕುರ್‌ಆನಿನ ಕ್ರೋಢೀಕರಣದ ಕುರಿತಂತೆ ಕೆಲವು ಪ್ರಶ್ನೆಗಳನ್ನು ಈ ಹಿಂದೆ ಎತ್ತಿದ್ದರು- ‘ಕುರ್‌ಆನನ್ನು ಕ್ರೋಢೀಕರಿಸಿದ್ದು ಮೂರನೇ ಖಲೀಫ ಉಸ್ಮಾನ್ ಬಿನ್ …

Read More »

ಆಧುನಿಕ ಮಾನವನಿಗೆ 6ನೇ ಶತಮಾನದ ಧರ್ಮವೇ?

ಪ್ರವಾದಿಗಳು ಧರ್ಮದ ಸ್ಥಾಪಕರಲ್ಲ: ಯೇಸು ದೇವಪುತ್ರನೆಂದು ಕ್ರೈಸ್ತರು, ಮುಹಮ್ಮದ್ ಅಂತಿಮ ಪ್ರವಾದಿಯೆಂದು ನೀವೂ ವಾದಿಸುತ್ತೀರಿ? ಇದು ತಮ್ಮ ಧರ್ಮ ಸಂಸ್ಥಾಪಕರನ್ನು ಮಹಾನ್ ವ್ಯಕ್ತಿಗಳಾಗಿಸುವ ಒಂದು ಅವಕಾಶವಾದವಲ್ಲವೇ? ಇಸ್ಲಾಮ್ ಮತ್ತು ಮುಸ್ಲಿಮ್‌ ರ ಕುರಿತು ಇರುವ ಗಂಭೀರವಾದ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ. ಮುಹಮ್ಮದ್(ಸ) ನಮ್ಮೆಲ್ಲರ ಪ್ರವಾದಿಯಾಗಿದ್ದಾರೆ. ಅವರು ಯಾವುದೇ ಧರ್ಮಿಯರ, ಸಮುದಾಯಕ್ಕೆ ಸೀಮಿತವಾದ ಪ್ರವಾದಿಯಲ್ಲ, ಸಕಲ ಲೋಕದ ಮಾನವ ಕುಲಕ್ಕಾಗಿ ನಿಯೋಜಿತರಾದ ಪ್ರವಾದಿಯಗಿದ್ದಾರೆ. ಅವರ ಕುರಿತು ಪವಿತ್ರ ಕುರ್ ಆನ್ …

Read More »

ಜಿಝಿಯಾ ?

ಜಿಝಿಯಾ (ರಕ್ಷಣಾ ತೆರಿಗೆ) ಎಂಬುದು ಜಗತ್ತಿನಲ್ಲಿ ಅತ್ಯಧಿಕ ತಪ್ಪು ತಿಳಿಯಲ್ಪಟ್ಟ ಇಸ್ಲಾಮಿ ಪಾರಿಭಾಷಿಕ ಪದವಾಗಿದೆ. ಅದನ್ನು ಇಸ್ಲಾಮಿ ರಾಷ್ಟ್ರಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರೊಂದಿಗಿರುವ ಪಕ್ಷಪಾತ ಮತ್ತು ಅವರನ್ನು ದ್ವಿತೀಯ ದರ್ಜೆಯ ಪೌರರೆಂದು ಪರಿಗಣಿಸುವ ಮನೋಭಾವದ ಸಂಕೇತವೆಂದೂ ಆಕ್ಷೇಪಿಸಲಾಗುತ್ತಿದೆ. ಮುಸ್ಲಿಮೇತರ ಪ್ರಜೆಗಳಿಗೆ ವಿಧಿಸಲಾಗುವ ಈ ತೆರಿಗೆಯ ಹಿನ್ನೆಲೆಯನ್ನು ಸರಿಯಾಗಿ ಗ್ರಹಿಸದಿರುವುದೇ ಈ ತಪ್ಪು ತಿಳುವಳಿಕೆ ಮತ್ತು ಟೀಕೆಗಳಿಗೆ ಕಾರಣವಾಗಿದೆ. ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪೌರರಿಗೆ ಈ ಕಂದಾಯವನ್ನು ವಿಧಿಸುವುದಕ್ಕೆ ಎರಡು ಪ್ರಮುಖ …

Read More »