Home / ಲೇಖನಗಳು (page 22)

ಲೇಖನಗಳು

ನ್ಯಾಯ ಪಾಲನೆಯಲ್ಲಿ ಸಹಿಷ್ಣುತೆ

ನ್ಯಾಯವು ಇಸ್ಲಾಮಿನ ಉತ್ಕೃಷ್ಟ ಮೌಲ್ಯಗಳಲ್ಲಿ ಅತ್ಯಧಿಕ ಮಹತ್ವದ್ದಾಗಿದೆ. ಸತ್ಯವಿಶ್ವಾಸಿಯು ಸದಾ ಒಳಿತಿನ ಮಾದರಿ ಮತ್ತು ನ್ಯಾಯದ ಪಾಲಕನಾಗಿರಬೇಕು. “ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ.” (ಪವಿತ್ರ ಕುರ್ ಆನ್, 16:90) “ನ್ಯಾಯವನ್ನು ಪಾಲಿಸಿರಿ. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್, 49:9) ನ್ಯಾಯ ಸ್ಥಾಪನೆಯು ಪ್ರವಾದಿಯವರ ನೇಮಕದ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ”ನಾವು ನಮ್ಮ ಸಂದೇಶವಾಹಕರನ್ನು ಸುವ್ಯಕ್ತ ನಿದರ್ಶನಗಳು ಮತ್ತು ಸನ್ಮಾರ್ಗದರ್ಶನದೊಂದಿಗೆ ಕಳುಹಿಸಿದೆವು. …

Read More »

ಮುಸ್ಲಿಮ್ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳು

ಇಸ್ಲಾಮಿ ರಾಷ್ಟ್ರವು ಧಾರ್ಮಿಕ ಅಲ್ಪಸಂಖ್ಯಾತರ ಪ್ರಾಣ, ಸೊತ್ತು ಮತ್ತು ಮಾನಗಳಿಗೆ ಸಂಪೂರ್ಣ ಭದ್ರತೆ ಒದಗಿಸುತ್ತದೆ. ಅವರ ವಿಶ್ವಾಸ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳನ್ನು ಸಂರಕ್ಷಿಸುತ್ತದೆ. ಇತರ ಲೌಕಿಕ ಜೀವನ ರಂಗಗಳಲ್ಲಿ ಅವರನ್ನು ಮುಸ್ಲಿಮ್ ಪ್ರಜೆಗಳಂತೆಯೇ ಪರಿಗಣಿಸುತ್ತದೆ. ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳನ್ನು ಅರಬಿಯಲ್ಲಿ ‘ದಿಮ್ಮಿ’ಗಳೆಂದು ಕರೆಯಲಾಗುತ್ತದೆ. ಅರ್ಥಾತ್, “ರಾಷ್ಟ್ರದ ಸಂರಕ್ಷಣೆಯಲ್ಲಿರುವವರು.” ಧಾರ್ಮಿಕ ಅಲ್ಪಸಂಖ್ಯಾತರ ಸಂರಕ್ಷಣೆಯ ಕುರಿತು ಪ್ರವಾದಿಯವರು ಸ್ಪಷ್ಟ ಆದೇಶಗಳನ್ನು ನೀಡಿದ್ದಾರೆ. ಅವರು ಹೇಳಿರುವರು: “ಎಚ್ಚರ ವಹಿಸಿರಿ, …

Read More »

ಕುರ್‌ಆನ್ ದೇವಗ್ರಂಥವೇ?

ಕುರ್‌ಆನ್ ದೇವಗ್ರಂಥವೆಂದು ಮುಸ್ಲಿಮರು ಹೇಳುತ್ತಾರೆ. ಅದು ಮುಹಮ್ಮದರ ರಚನೆಯಲ್ಲವೆಂದೂ, ದೇವನಿಂದ ಬಂದದ್ದೆಂದೂ ನಂಬಲು ಇರುವ ಆಧಾರವಾದರೂ ಏನು? ಕುರ್ ಆನ್ ದೇವಗ್ರಂಥ ಎಂಬುದಕ್ಕೆ ಆ ಗ್ರಂಥವೇ ಸಾಕ್ಷಿಯಾಗಿದೆ. ಪ್ರವಾದಿ ಮುಹಮ್ಮದ್(ಸ)ರಿಗೆ ಇಳಿಸಲ್ಪಟ್ಟ ಕುರ್‌ಆನ್‌ನ ಸ್ಪಷ್ಟ ಚಿತ್ರಣ ಮಾನವ ಸಮೂಹದ ಮುಂದಿದೆ. ಪ್ರವಾದಿಯ ಜೀವನದ ಒಳ-ಹೊರಗು, ರಹಸ್ಯಗಳು ಬಹಿರಂಗವಾದ ಎಲ್ಲಾ ಕಾರ್ಯಗಳೂ ಒಂದಿನಿತೂ ಬಿಟ್ಟುಹೋಗದೆ ದಾಖಲಾಗಿದೆ. ಆಧುನಿಕ ಮಹಾತ್ಮರ ಚರಿತ್ರೆಯು ಕೂಡಾ ಇಷ್ಟು ನಿಖರವಾಗಿ ದಾಖಲಿಸಲ್ಪಟ್ಟಿಲ್ಲ ಎಂಬುದು ವಾಸ್ತವ. ಅಜ್ಞಾನ ಅಂಧಕಾರದಿಂದ …

Read More »

ಮುಸ್ಲಿಮನೆಂದೂ ವಂಚಿಸಲಾರ!!!

ನ್ಯಾಯಾಲಯ ತುಂಬಿ ತುಳುಕುತ್ತಿತ್ತು , ಜನರು ಕುತೂಹಲದಿಂದ ಕಲಾಪವನ್ನು ವೀಕ್ಷಿಸುತ್ತಿದ್ದರು. ಇಬ್ಬರು ಯುವಕರು ಅವರ ತಂದೆಯ ಹತ್ಯೆಯ ಆರೋಪದಲ್ಲಿ ಓರ್ವನನ್ನು ಹಿಡಿದು ತಂದಿದ್ದರು. ಖಲೀಫ ಹ.ಉಮರ್ (ರ) ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತಿದ್ದರು. ಖಲೀಫ: ( ಇಬ್ಬರು ಯುವಕರಲ್ಲಿ ) ಏನು ನಿಮ್ಮ ದೂರು, ಯಾಕೆ ನೀವು ಈ ವ್ಯಕ್ತಿಯನ್ನು ಇಲ್ಲಿಗೆ ಕರೆ ತಂದಿದ್ದೀರಿ. ಯುವಕರು : ಈ ವ್ಯಕ್ತಿ ನಮ್ಮ ತಂದೆಯನ್ನು ಅಮಾನುಷಕವಾಗಿ ಕೊಂದಿದ್ದಾರೆ. ಖಲೀಫ: (ಆರೋಪಿಯನ್ನು ನೋಡುತ್ತಾ) ಇವರ …

Read More »

ವಿದಾಯ ಭಾಷಣವು ತೆರೆಯಿತು ಹೃದಯದ ಕದವ.

ಯೋಗೇಶ್ ಮಾಸ್ಟರ್ ನಿನ್ನೆ ಸುರಿಯುವ ಮಳೆಯಲ್ಲಿ ಆತ ಕತ್ತಲಲ್ಲಿ ನಮ್ಮ ಮನೆಯ ರಸ್ತೆಯಲ್ಲಿ ನಿಂತಿದ್ದ. ನಮ್ಮ ಕಟ್ಟಡದ ಆಶ್ರಯಕ್ಕೆ ಬಂದು ತನ್ನನ್ನು ಮಳೆಯ ದಾಳಿಯಿಂದ ಕಾಪಾಡಿಕೊಳ್ಳಲು ಕರೆದೆ. ಆತ ಬಂದ. ಇಬ್ಬರೂ ಒಬ್ಬರನ್ನೊಬ್ಬರು ಗುರುತು ಹಿಡಿದೆವು. ಸುಮಾರು ಹದಿನೈದು ವರ್ಷಗಳ ಹಿಂದೆ ನನ್ನ ಜೊತೆ ಜಗಳ ಮಾಡಿಕೊಂಡು ಹೋಗಿದ್ದ ವ್ಯಕ್ತಿ. ಚಾಮರಾಜಪೇಟೆಯ ನಿವಾಸಿ. ತೀರಾ ಆತ್ಮೀಯನಲ್ಲದಿದ್ದರೂ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಗೆಳೆಯನೇ. ಮುಸಲ್ಮಾನರ ಕಡು ದ್ವೇಷಿ. “ನೀವು ಹಿಂದೂ ಧರ್ಮದ ನ್ಯೂನತೆಗಳನ್ನು …

Read More »

ರಮಝಾನ್‌ ಅಂದರೇನೆಂದು ತಿಳಿಯ ಬಯಸುತ್ತೀರಾ?

ಉಪವಾಸ ಅಂದರೆ ತನ್ನ ಸಂಬಂಧವನ್ನು ತನ್ನ ಕುಟುಂಬ, ತನ್ನ ಸಮುದಾಯ ಮತ್ತು ದೇವರೊಂದಿಗೆ ಸುದೃಡಗೊಳಿಸುವುದು ಮತ್ತು ಬಳಪಡಿಸುವುದು. ಪ್ರತಿಬಿಂಬಿಸುವ ತಿಂಗಳು ರಮಝಾನ್‌ ತಿಂಗಳು ಮುಸ್ಲಿಮರಿಗೆ ಬಹಳ ಪವಿತ್ರವಾದ ತಿಂಗಳು. ಈ ತಿಂಗಳಿನಲ್ಲಿ ದೇವದೂತರಾದ ಜಿಬ್ರೀಲ್ ಪ್ರವಾದಿ ಮುಹಮ್ಮದ್ (ಸ ) ರನ್ನು ಭೇಟಿಯಾಗಿ ಅಂತಿಮ ಗ್ರಂಥವಾದ ಪವಿತ್ರ ಕುರ್‌ಆನ್ ಅವತೀರ್ಣಗೊಳಿಸಲು ಆರಂಭಿಸಿದ ತಿಂಗಳು. ಸತ್ಯವಿಶ್ವಾಸಿಗಳು ಪ್ರಾರ್ಥನೆ, ದಾನ, ಮತ್ತು ದೇವರೊಂದಿಗೆ ತಮ್ಮ ಸಂಬಂಧವನ್ನು ಬಲ ಪಡಿಸುವ ಮೂಲಕ ಇದನ್ನು ತೋರ್ಪಡಿಸುತ್ತಾರೆ. …

Read More »

ರಮಝಾನ್‌ ‘ಮಹಾನ್ ಮತ್ತು ಸಮೃದ್ಧ ತಿಂಗಳು’

ಖರ‍್ರಮ್ ಮುರಾದ್ ರಮಝಾನಿನ ಸಮೃದ್ಧ (ಬರಕತ್) ತಿಂಗಳು ನಮ್ಮನ್ನು ಆವರಿಸಿದೆ. ಅದರ ಅನುಗ್ರಹಗಳು ನಮ್ಮ ಜೀವನವನ್ನು ಫಲವತ್ತಾಗಿಸಲು ವರ್ಷಿಸಲಿವೆ. ಸ್ವತಃ ಪ್ರವಾದಿವರ್ಯರಿಂದಲೇ(ಸ) ‘ಮಹಾನ್ ತಿಂಗಳು ಮತ್ತು ಸಮೃದ್ಧ ತಿಂಗಳು’ ಎಂದು ವರ್ಣಿಸಲ್ಪಟ್ಟ ಈ ತಿಂಗಳ ಶ್ರೇಷ್ಠತೆ ಹಾಗೂ ಸಮೃದ್ಧಿಗೆ ಎಲ್ಲೆಯಿದ್ದೀತೇ? ಏಕೆಂದರೆ ಈ ತಿಂಗಳ ಶ್ರೇಷ್ಠತೆಯ ಉನ್ನತಿಯು ನಮ್ಮ ಕಲ್ಪನೆಗೂ ಮೀರಿದುದಾಗಿದೆ. ಅಂತಹ ಶ್ರೇಷ್ಠತೆ ಏಕೆ? ಈ ತಿಂಗಳಲ್ಲಿ ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ರಾತ್ರಿಯೊಂದಿದೆ. ಆ ರಾತ್ರಿಯಲ್ಲಿ ಒಳಿತು ಮತ್ತು …

Read More »

ಶಾಂತಿಗಾಗಿ ಸಂಘರ್ಷ : ಪವಿತ್ರ ಕುರ್ ಆನ್ ಧೋರಣೆ (ಪವಿತ್ರ ಕುರ್ ಆನ್ ನ ಯುದ್ಧ ಸಂಬಂಧಿ ವಚನಗಳ ಹಿನ್ನೆಲೆಯಲ್ಲಿ)

 – ಅಬ್ದುಸ್ಸಲಾಮ್ ಪುತ್ತಿಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸ್ಕ್ರೀನ್ ಶಾಟ್ ವ್ಯಾಪಕವಾಗಿ ಹರಿದಾಡುತ್ತಿದೆ.  ಅನೇಕರು ಗೌರವಿಸುವ ಗ್ರಂಥಗಳ ಬಗ್ಗೆ ಅನೇಕರಿಗೆ ಆಕ್ಷೇಪಗಳಿರುತ್ತವೆ. ಗ್ರಂಥ ಯಾವುದೇ ಇರಲಿ. ಗಂಭೀರವಾಗಿ ಅಧ್ಯಯನ ಮಾಡಿ ಪ್ರಾಮಾಣಿಕವಾಗಿ ಆಕ್ಷೇಪಗಳನ್ನು ದಾಖಲಿಸುವುದು ಮತ್ತು ಆ ಕುರಿತು ಚರ್ಚೆ, ಸಂವಾದಗಳನ್ನು ದಾಖಲಿಸುವುದು ಸ್ವಾಗತಾರ್ಹ. ಏಕೆಂದರೆ ಇಂತಹ ಚಟುವಟಿಕೆಗಳು ಗೌರವಾನ್ವಿತ ಗ್ರಂಥಗಳನ್ನು ನಿಗೂಢತೆಯ ಲೋಕದಿಂದ ಹೊರಗೆಳೆದು ತರುತ್ತವೆ. ಆ ವರೆಗೆ ಅವುಗಳನ್ನು ಓದಿಲ್ಲದವರು ಓದುವುದಕ್ಕೆ ಮತ್ತು ಅರಿತಿಲ್ಲದವರು ಅರಿಯುವುದಕ್ಕೆ …

Read More »

‘ಹಲಾಲ್’ ಕೆಲವು ಮಾಹಿತಿಗಳು.

1. ಹಲಾಲ್ ಎಂದರೆ ಶುದ್ಧ, ಉಪಯೋಗಿಸಲು ಯೋಗ್ಯವಾದದ್ದು ಎಂದು ಅರ್ಥ. 2. ಹಲಾಲ್ ಎಂದರೆ ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವ ಒಂದು ಕ್ರಮ ಎಂಬ ನಂಬಿಕೆಯಿದೆ. ಅದು ಪೂರ್ತಿ ನಿಜ ಅಲ್ಲ.  ಹಲಾಲ್ ಮಾಂಸ ಎಂದರೆ ತಿನ್ನಲು ಯೋಗ್ಯವಾದ ಮಾಂಸ ಎಂದು ಅರ್ಥ. ಕೋಳಿ ಅಂಗಡಿಯ ಮಾಲಕರು ಇದನ್ನು ಹಲಾಲ್ ಕಟ್ ಎಂದು ಸೀಮಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ಅಷ್ಟೇ. ಮೀನನ್ನು ಯಾರೂ ಹಲಾಲ್ ಕಟ್ ಮಾಡಿ ತಿನ್ನುವುದಿಲ್ಲ. 3. ಹಲಾಲ್ ಮಾಂಸ ಎಂದರೆ, …

Read More »

ಹಲಾಲ್- ಹರಾಮ್

ಅವರು ಪ್ರತಿದಿನ ಪ್ರಭಾತ ನಮಾಝ್ ಮಾಡಿದ ಕೂಡಲೇ ಮಸೀದಿಯಿಂದ ಗಡಿಬಿಡಿಯಲ್ಲಿ ಓಡಿ ಹೋಗುತ್ತಿದ್ದರು.ಇದನ್ನು ಗಮನಿಸುತ್ತಿದ್ದ ಪ್ರವಾದಿ(ಸ)ಯವರು ಒಂದು ದಿನ ಕೇಳಿದ್ರು. ನೀವು ನಮಾಝ್ ಆದ ಕೂಡಲೇ ಇಷ್ಟು ಅರ್ಜಂಟ್ ನಲ್ಲಿ ಯಾಕೆ ಹೋಗುವುದು. ಅದಕ್ಕವರು ಪ್ರವಾದಿವರ್ಯರೇ ಈಗ ಪ್ರಕೃತಿ ಫಲ ಕೊಡುವ ಸಮಯ. ನನ್ನ ಮನೆ ಪಕ್ಕದ ಮನೆಯವರ ಹಣ್ಣಿನ ಮರದಿಂದ ಹಣ್ಣು ನನ್ನ ಮನೆಯ ಅಂಗಳಕ್ಕೆ ಬಿದ್ದಿರುತ್ತವೆ. ಅದನ್ನು ನನ್ನ ಮಕ್ಕಳು‌ ತಿನ್ನುತ್ತಾರೋ ಎಂಬ ಹೆದರಿಕೆಯಿದೆ. ಅದು ಹಲಾಲ್ …

Read More »