Home / ಲೇಖನಗಳು (page 39)

ಲೇಖನಗಳು

ದೇವನವಿಧಿಯಿದ್ದರೆ ಮತ್ತೊಮ್ಮೆ ಭೇಟಿಯಾಗೋಣ….

ಕಾಲಕ್ಕೆ ಎಷ್ಟೊಂದು ಅವಸರ,ಎಷ್ಟು ವೇಗ ನೋಡಿ. ನಿನ್ನೆ ತಾನೇ ನಾನು ಬಂದೆ ಎಂದೆನಿಸಿತು. ನನಗೆ ಮರಳಲು ಸಮಯವಾಗಿದೆ. ಹೌದು ನಾನು ರಮಝಾನ್… ನಿಮ್ಮ ಮನೆಯಿಂದ ವಿದಾಯ ಕೋರುತ್ತಿದ್ದೇನೆ. ಈ ವರ್ಷ ನಾನು ಬಂದದ್ದು ನಿಮ್ಮ ಮನೆಗೆ ತಾನೇ.ಮಸೀದಿಗೆ ಬಂದಾಗ ಮಸೀದಿ ಮುಚ್ಚಲಾಗಿತ್ತು.ಎಲ್ಲಾ ವರ್ಷಗಳಿಗಿಂತಲೂ ಈ ವರ್ಷ ನಿಮ್ಮೊಂದಿಗೆ ಆತ್ಮೀಯವಾಗಿ ಇದ್ದೆ..ನಿಮ್ಮ ಸುಖ ದುಃಖಗಳನ್ನು ಹಂಚಬೇಕು ಎಂಬುದು ಇರಾದೆ ಆಗಿತ್ತು.ಹಾಗೇ ಹಂಚಿದೆ.ನಾವು ನೆನಸಿದಂತೆ ಅಲ್ಲ ತಾನೇ ಬದುಕು?.ಎಲ್ಲಾ ದೇವನ ತೀರ್ಮಾನದಂತೆ ನಡೆಯುವುದು.ನಾನು …

Read More »

ಕೋವಿಡ್ ಕಾಲದ ಝಕಾತ್

ಸತ್ಯವಿಶ್ವಾಸಿಗಳ ಅತ್ಯಂತ ಸುಪ್ರಧಾನವಾದ ಆರ್ಥಿಕ ಹೊಣೆಗಾರಿಕೆಯೆಂದು ಪವಿತ್ರ ಕುರ್‍ಆನ್ ಝಕಾತನ್ನು ಎತ್ತಿ ತೋರಿಸುತ್ತದೆ. ಇಸ್ಲಾಮಿನ ಪಂಚ ಆಧಾರ ಸ್ತಂಭಗಳಲ್ಲಿ ಒಂದೆಂದು ಪ್ರವಾದಿ(ಸ)ರು ಕಲಿಸಿಕೊಟ್ಟಿದ್ದಾರೆ. ಪವಿತ್ರ ಕುರ್‍ಆನ್‍ನ ಹೆಚ್ಚಿನ ಕಡೆಗಳಲ್ಲಿ ನಮಾಝ್ ನೊಂದಿಗೆ ಝಕಾತನ್ನು ಸೇರಿಸಿ ಹೇಳಲಾಗಿದೆ. ನಮಾಝನ್ನು ಅದರ ಸಂಪೂರ್ಣ ಚೈತನ್ಯದೊಂದಿಗೆ ನೆರವೇರಿಸುವ ವ್ಯಕ್ತಿಯು ಝಕಾತನ್ನು ಸರಿಯಾಗಿ ಪಾವತಿಸುತ್ತಾನೆ ಎಂಬುದೇ ಅದರ ತಿರುಳು. ಆದರೆ ಇಂದು ಮುಸ್ಲಿಮ್ ಸಮುದಾಯದಲ್ಲಿ ನಮಾಝ್‍ನ ಕುರಿತು ಸೂಕ್ಷ್ಮತೆಯನ್ನು ಪಾಲಿಸುವವರ ಸಂಖ್ಯೆ ಅಧಿಕವಿದ್ದು  ಝಕಾತ್‍ನ ವಿಷಯದಲ್ಲಿ …

Read More »

`ಪ್ರಭುವೇ ಕೊರೊನಾಕ್ಕೊಂದು ಪುಲ್‍ಸ್ಟಾಪ್ ಕೊಡು’- ಆಮೀನ್

– ಅರಫಾ ಮಂಚಿ ನೂಹರ ಕಾಲದ ವಿನಾಶಕಾರಿ ಜಲ ಪ್ರಳಯಕ್ಕೆ ಅಲ್ಲಾಹನು ಪುಲ್‍ಸ್ಟಾಪ್ ಕೊಟ್ಟ. ಪವಿತ್ರ ಕುರ್‍ಆನ್ ಅದನ್ನು ಹೀಗೆ  ವಿವರಿಸಿದೆ- “ಓ ಭೂಮಿಯೇ, ನಿನ್ನ ನೀರನ್ನೆಲ್ಲ ಹೀರಿಕೊ, ಮತ್ತು ಆಕಾಶವೇ ತಡೆ!  ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ನೆಲದೊಳಗೆ ಇಂಗಿತು. ತೀರ್ಮಾನ ಆಗಿ ಹೋಯಿತು. ನೌಕೆಯು ಜೂದಿಯಲ್ಲಿ ತಂಗಿತು. ಅಕ್ರಮಿಗಳ ಜನಾಂಗ ದೂರ ತೊಲಗಿತೆಂದು ಹೇಳಲಾಯಿತು.”  (11:44) ಇಂತಹದೇ ಒಂದು ಕೊನೆ ಕೊರೊನಾ ಸೋಂಕಿನ ಕೊನೆಗೂ ಆಗಿಬಿಟ್ಟಿದ್ದರೆ… …

Read More »

ಕೊರೋನಾ ತೆರೆದಿಟ್ಟ ಮನಃಸ್ಥಿತಿ ಮತ್ತು ಈದ್

ಏ .ಕೆ.ಕುಕ್ಕಿಲ ಈದ್‍ನ ಪರೋಕ್ಷ ಅರ್ಥ ಖುಷಿ, ಸಂಭ್ರಮ, ಸಂತೋಷ. ಈದ್ ಎಂಬುದು ಯಾವುದಾದರೊಂದು ದೇಶಕ್ಕೆ, ರಾಜ್ಯಕ್ಕೆ ಅಥವಾ ಯಾವುದಾದರೊಂದು ಜಿಲ್ಲೆಗೆ ಸೀಮಿತವಾದ ಒಂದಲ್ಲ. ದಿನದ  ವ್ಯತ್ಯಾಸದೊಂದಿಗೆ ಜಾಗತಿಕವಾಗಿ ಆಚರಿಸುವ ಹಬ್ಬ. ಒಂದು ತಿಂಗಳ ಕಾಲದ ಉಪವಾಸದಿಂದ ಬಿಡುಗಡೆಗೊಂಡ ಸಂಭ್ರಮವನ್ನು ಹರ್ಷೋಲ್ಲಾಸದಿಂದ ಅನುಭವಿಸುವ ದಿನ. ವಿಶೇಷ ಏನೆಂದರೆ, ಈದ್‍ನ ದಿನ ಬಡವರಲ್ಲಿ ಬಡವರಾದ ಕುಟುಂಬ ಕೂಡ ಆನಂದ ಪಡಬೇಕು ಅನ್ನುವ ಗುರಿಯನ್ನು ಈದ್ ಹೊಂದಿದೆ. ಇವತ್ತಿನ ಬಂಡವಾಳಶಾಹಿ ಜಗತ್ತು ಪ್ರಸ್ತುತ …

Read More »

ಈಮಾನ್ (ಸತ್ಯವಿಶ್ವಾಸ)

ಅಮ್ರ್ ಬಿನ್ ಅಬಸ (ರ) ಹೇಳುತ್ತಾರೆ. “ನಾನು ಪ್ರವಾದಿ (ಸ) ರೊಂದಿಗೆ ಈಮಾನ್ ಎಂದರೇನು ಎಂದು ಪ್ರಶ್ನಿಸಿದೆ. ಪ್ರವಾದಿ (ಸ) ಹೇಳಿದರು. “ಸಬ್ರ್ ಮತ್ತು ಸಮಾಹತ್” ಈ ಪ್ರವಾದಿ ವಚನದಲ್ಲಿ ಈಮಾನ್ ಎಂದರೆ ಸಬ್ರ್ ಮತ್ತು ಸಮಾಹತ್ ಎಂದು ಹೇಳಲಾಗಿದೆ. ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ..ಇನ್ನಲ್ಲಾಹ ಮ ಅಸ್ಸಾಬಿರೀನ್” ಅಲ್ಲಾಹ್ ಸಹನಶೀಲರೊಂದಿಗಿದ್ದಾನೆ” ಮನುಷ್ಯ ಈ ಲೋಕದಲ್ಲಿ ಅಲ್ಲಾಹನ ಮಾರ್ಗದರ್ಶನ ಪ್ರಕಾರ ಜೀವಿಸುವಾಗ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು. ಇಂತಹ …

Read More »

ಕೊರೋನಾ ಹರಡಿದ್ದು ಮುಸ್ಲಿಮರು ಎಂದುದರಲ್ಲಿ ಆ ಮನೆಗೆಲಸದಾಕೆಯ ತಪ್ಪಿಲ್ಲ, ಅದು ಆಕೆಯ ಮಾತೂ ಅಲ್ಲ…

@ ಏ.ಕೆ. ಕುಕ್ಕಿಲ ಪ್ರಖರ ಜಾತ್ಯತೀತ ಮತ್ತು ಅತ್ಯಂತ ವಿಶ್ವಾಸಾರ್ಹವೆಂದು ಗುರುತಿಗೀಡಾಗಿರುವ ದ ಹಿಂದೂ ಪತ್ರಿಕೆಯು ಮಾರ್ಚ್ 26 ರಂದು ಪ್ರಕಟಿಸಿದ ಕಾರ್ಟೂನ್ ಒಂದು ಅದರ ಓದುಗ ವಲಯವನ್ನು ಮಾತ್ರವಲ್ಲ,  ಅದರ ವಿರೋಧಿಗಳನ್ನೂ ತಬ್ಬಿಬ್ಬುಗೊಳಿಸಿತ್ತು. ಕೊರೋನಾ ವೈರಸ್ ಜಗತ್ತನ್ನೇ ಒತ್ತೆಯಿಟ್ಟುಕೊಂಡಿದೆ ಎಂಬ ಸಂದೇಶವುಳ್ಳ ಆ ಕಾರ್ಟೂನ್‍ನಲ್ಲಿ ವೈರಸ್‍ಗೆ ಮುಸ್ಲಿಮರು ಧರಿಸುವ ಬಟ್ಟೆಯನ್ನು ತೊಡಿಸಲಾಗಿತ್ತು. ದ ಹಿಂದೂವಿನಂಥ ಪತ್ರಿಕೆಯಿಂದ ಇಂಥದ್ದೊಂದು ಕಾರ್ಟೂನನ್ನು ನಿರೀಕ್ಷಿಸದ ಓದುಗರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿದರು. ಪತ್ರಿಕೆಯ ಸಂಪಾದಕರನ್ನು …

Read More »

ಏಕದೇವ ವಿಶ್ವಾಸ

ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮೂಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧವು ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ. ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ. ಅವನೇ ಸಮಸ್ತ ವಿಶ್ವವನ್ನೂ ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಎಲ್ಲ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೇ …

Read More »

ದುಬೈಯಿಂದ ಬಂದಿಳಿದ ಪ್ರಯಾಣಿಕರೆಲ್ಲ ಮುಸ್ಲಿಮರೇ!- ಅಂಕಿ-ಅಂಶಗಳು ಹೇಳುವ ಕತೆಯೇ ಬೇರೆ

-ರಶೀದ್ ವಿಟ್ಲ ದುಬೈಯಿಂದ 179 ಪ್ರಯಾಣಿಕರನ್ನು ತುಂಬಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಮೇ12 ರಂದು ರಾತ್ರಿ ಮಂಗಳೂರಿಗೆ ತಲುಪಿದೆ. ಬಂದಿರುವ 21 ಪ್ರಯಾಣಿಕರ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ವರದಿ ಪ್ರಕಟವಾಗಿದ್ದು ಆತಂಕ ತಂದಿದೆ. ದುಬೈ ಎಂದಾಕ್ಷಣ ಅರಬ್ ರಾಷ್ಟ್ರ, ಮುಸ್ಲಿಂ ರಾಷ್ಟ್ರ ಎಂಬ ಕಲ್ಪನೆ ಸಾಮಾನ್ಯ. ಅಲ್ಲಿಂದ ಬಂದಂತಹ ಬಹುತೇಕ ಮಂದಿ ಮುಸ್ಲಿಮರು ಎಂಬ ಊಹೆ ಇಟ್ಟುಕೊಂಡು ಕೆಲವರು ಅಪಪ್ರಚಾರ ಮಾಡುವ ಸಾಧ್ಯತೆ ಇದೆ. …

Read More »

ಇಸ್ಲಾಮೀ ನಾಗರಿಕತೆಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು

ಡಾ. ರಾಗಿಬುಸ್ಸರ್ಜಾನಿ ಮುಸ್ಲಿಮ್ ಸಮಾಜದಲ್ಲಿ ಮುಸ್ಲಿಮರಲ್ಲದ ಅಲ್ಪಸಂಖ್ಯಾತರಿಗೆ ಇಸ್ಲಾಮೀ ಶರೀಅತ್‍ನಡಿಯಲ್ಲಿ ಸಿಕ್ಕಿದಷ್ಟು ಅವಕಾಶ, ಹಕ್ಕು ಸೌಲಭ್ಯಗಳು ಜಗತ್ತಿನಲ್ಲಿ ಬೇರೆ ಯಾವುದೇ ಕಾನೂನಡಿಯಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡವರಿಗೆ ಸಿಕ್ಕಿಲ್ಲ. ಮುಸ್ಲಿಂ ಸಮುದಾಯ ಮತ್ತು ಅವರ ನಡುವೆ ಬದುಕುತ್ತಿರುವ ಮುಸ್ಲಿಮರಲ್ಲದ ಅಲ್ಪಸಂಖ್ಯಾತರ ನಡುವೆ ಸಂಬಂಧಗಳು ಹೇಗಿರಬೇಕೆಂದು ದೇವನ ನಿರ್ದೇಶನ ಇರುವುದೇ ಇದಕ್ಕೆ ಕಾರಣವಾಗಿದೆ. ಅಲ್ಲಾಹನು ಹೇಳುತ್ತಾನೆ. ” ನೀವು ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿರುವ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರುವ …

Read More »

ಬದ್ರ್: ಸತ್ಯಮಿಥ್ಯದ ನಡುವಿನ ಸಂಘರ್ಷ

@ ಸಲೀಮ್ ಬೋಳಂಗಡಿ ಬದ್ರ್ ಇಸ್ಲಾಮೀ ಇತಿಹಾಸದ ಬಹಳ ಪ್ರಧಾನವಾದ ಘಟನೆಯಾಗಿದೆ. ಬದ್ರ್ ಯುದ್ಧವು ಸತ್ಯ ಮತ್ತು ಅಸತ್ಯದ ನಡುವಿನ ಸಂಘರ್ಷವಾಗಿತ್ತು. ಯುದ್ಧದ ವ್ಯಾಮೋಹದಿಂದ ಯಾರನ್ನೋ ಮಣಿಸಿ ಪ್ರಭುತ್ವ ಸ್ಥಾಪಿಸಲು ಮಾಡಿದ ಯುದ್ಧವಲ್ಲ. ಪ್ರವಾದಿ ಮುಹಮ್ಮದ್(ಸ)ರು ಈ ಲೋಕಕ್ಕೆ ಅನುಗ್ರಹೀತರಾಗಿ ಬಂದವರು. ಶಾಂತಿಯ ದೂತರಾಗಿ ಬಂದವರು. ಸಹನೆಯ ಸದುಪದೇಶದಿಂದ ಮಿಥ್ಯವನ್ನು ಹೋಗಲಾಡಿಸಲು ಆಗಮಿಸಿದವರು. ಬಹುದೇವತ್ವದ ಸಮಾಜವನ್ನು ಏಕದೇವಾರಾಧನೆಯ ವಾಹಕವಾಗಿ ಮಾಡಲು ದೇವನಿಂದಲೇ ನಿಯುಕ್ತರಾದ ಸಂದೇಶವಾಹಕ. ಅವರು ಸಮಾಜಕ್ಕೆ ಒಳಿತನ್ನು ಬಯಸುತ್ತ …

Read More »