Home / ಲೇಖನಗಳು (page 40)

ಲೇಖನಗಳು

ಮದ್ಯಪಾನ ನಿಷೇಧಕ್ಕೆ ಟಿಪ್ಪು, ನಾಲ್ವಡಿ ಮಾದರಿಯಾಗಲಿ

– ಪ್ರದೀಪ್ ಎನ್. ವಿ, ಮೈಸೂರು ನಮ್ಮ ಹಳ್ಳಿಗಳಲ್ಲಿ ಹೆಂಡ ಕುಡಿದು ಬದುಕನ್ನೇ ನಾಶಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹೆಂಡ ನಿಲ್ಲಿಸಿದ ಅಷ್ಟೂ ದಿನ ಅನ್ನಕ್ಕಾಗಿ ಚಿಂತಿಸಿದ್ದಕ್ಕಿಂತಲೂ ತನ್ನ ಗಂಡ, ಮಗ ಕುಡಿಯದೇ ಮನೆಯಲ್ಲಿ ಮನೆಯವರೊಟ್ಟಿಗೆ ನೆಮ್ಮದಿಯಿಂದ ಕಾಲಕಳೆದದ್ದೇ ಹೆಚ್ಚು ನೆಮ್ಮದಿ ಎನ್ನುತ್ತಿದ್ದಾರೆ ಹಳ್ಳಿಯ ಹೆಂಗಸರು. ಈ ಹಿನ್ನೆಲೆಯಲ್ಲಿ ಕೊರೋನಕ್ಕೆ ಕೈಮುಗಿದು ಮನಸ್ಸಿನಲ್ಲೇ ಧನ್ಯವಾದ ಹೇಳಿದವರಷ್ಟೋ.! ಅಂದರೆ ಹೆಂಡ ಇಲ್ಲದಿದ್ದಾಗ ಎಷ್ಟರಮಟ್ಟಿಗೆ ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ, ಮಮತೆಯನ್ನುಂಟು ಮಾಡಿದೆ …

Read More »

ಜೊತೆಯಲ್ಲಿ ಕರ್ಮಗಳು ಮಾತ್ರ ಇರುತ್ತವೆ

@ ಹಾಪಿಝ್ ಬಶೀರ್ ಅನು: ಅಬೂ ಸಲ್ವಾನ್ ಅನಸ್ ಬಿನ್ ಮಾಲಿಕ್(ರ)ರವರಿಂದ ವರದಿಯಾಗಿದೆ. ಪ್ರವಾದಿ(ಸ)ರು ಹೇಳಿರುವುದನ್ನು ನಾನು ಕೇಳಿದ್ದೇನೆ- ಓರ್ವ ವ್ಯಕ್ತಿ ಮರಣ ಹೊಂದಿದಾಗ ಮೂರು ವಿಚಾರಗಳು ಅವನ ಜೊತೆ ಇರುತ್ತವೆ.  ಅದರಲ್ಲಿ ಎರಡು ಹಿಂದಕ್ಕೆ ಬರುತ್ತವೆ. ಒಂದು ಮಾತ್ರ ಅವನಲ್ಲಿ ಬಾಕಿ ಉಳಿಯುತ್ತದೆ. ಕುಟುಂಬ, ಸಂಪತ್ತು ಮತ್ತು ಅವನು ಮಾಡಿದ ಕರ್ಮಗಳು ಅವನನ್ನು ಹಿಂಬಾಲಿಸುತ್ತಿರುತ್ತವೆ. ಕುಟುಂಬ ಮತ್ತು  ಸಂಪತ್ತು ಆತನಿಂದ ಹಿಂದಿರುಗಿ ಬರುತ್ತವೆ. ಅವನ ಕರ್ಮಗಳು ಅವನೊಂದಿಗೆ ಇರುತ್ತವೆ.  …

Read More »

`ಶ್ರೇಷ್ಠವಾದ ಅತಿಥಿ’ ರಮಝಾನ್

ಅನ್ ಅಬೀ ಹುರೈರತ(ರ), ಖಾಲ: ಕಾಲ ರಸೂಲುಲ್ಲಾಹಿ(ಸ): ಕುಲ್ಲು ಅಮಲಿಬ್ನಿ ಆದಮ ಯುಲ್ವಾಅಫುಲ್ ಹಸನತ ಅಮ್‍ಸಾಲಿಹಾ ಇಲಾ ಸಬ್ ಹಮಿಅತಿಲ್ವಿಅïಫಿನ್ ಖಾಲಲ್ಲಾಹ ಅಝ್ಝವಜಲ್ಲ: ಇಲ್ಲ ಸ್ಸೌಮ ಫಇನ್ನಹೂ ಲೀ ವಅನ ಅಜ್‍ಝಿ ಬಿಹಿ  ಯದಲೂ ಶಹ್‍ವತಹು ವತ್ತಾಮಹು ಮಿನ್ ಅಜಲಿ. (ಸಹೀಹ್ ಮುಸ್ಲಿಮ್ 1151) ಅಬೂಹುರೈರಾ(ರ)ರಿಂದ ವರದಿಯಾಗಿದೆ: ಪ್ರವಾದಿ(ಸ) ಹೇಳಿದರು, “ಮನುಷ್ಯನ ಎಲ್ಲಾ ಕರ್ಮಗಳಿಗೂ ಏಳ್ನೂರು ಪಟ್ಟು ಅಧಿಕ ಪ್ರತಿಫಲ ಸಿಗಬಹುದು. ಅಲ್ಲಾಹನು ಹೇಳುತ್ತಾನೆ: ಆದರೆ ಉಪವಾಸವನ್ನು ಹೊರತು. ಅದು …

Read More »

ಮಕ್ಕಳಿಗೆ ಹೇಗೆ ಉಪವಾಸದಲ್ಲಿ ಪ್ರೀತಿ ಹುಟ್ಟಿಸಬಹುದು?

ಖದೀಜ ನುಸ್ರತ್, ಅಬುಧಾಬಿ ಮಕ್ಕಳನ್ನು ಬೆಳೆಸುವಾಗ ಪೋಷಕರ ಅತಿ ದೊಡ್ಡ ಜವಾಬ್ದಾರಿ ಅವರಲ್ಲಿ ಧರ್ಮನಿಷ್ಠೆಯನ್ನುಂಟು ಮಾಡುವುದು, ಆರಾಧನೆಗಳಲ್ಲಿ ಹುರುಪು ಉತ್ಸಾಹವನ್ನುಂಟು ಮಾಡುವುದು ಮತ್ತು ಅವರ ಪರಲೋಕ ವಿಜಯಕ್ಕಾಗಿ ನಿರಂತರ ಶ್ರಮಿಸುವುದು. ಅತಿ ಸಣ್ಣ ವಯಸ್ಸಿನಲ್ಲಿಯೇ ಎಲ್ಲಾ ಆರಾಧನೆಗಳಿಗೆ ಸಿಗುವ ಪ್ರತಿಫಲವನ್ನು ವಿವರಿಸುತ್ತಾ ಸ್ವ ಇಚ್ಛೆಯಿಂದ ಸತ್ಕರ್ಮಗಳನ್ನು ಮಾಡುವಂತಹ ಸ್ಫೂರ್ತಿಯನ್ನುಂಟು ಮಾಡಬೇಕು. ಮಕ್ಕಳ ವಿದ್ಯಾಭ್ಯಾಸ, ಆಟಪಾಠ, ಊಟೋಪಚಾರ ದಂತೆಯೇ ಅವರ ಆರಾಧನೆಯ ಬಗ್ಗೆಯೂ ಕಾಳಜಿ ವಹಿಸಬೇಕಾದುದು ಹೆತ್ತವರ ಜವಾಬ್ದಾರಿಯಾಗಿರುತ್ತದೆ. ಮಕ್ಕಳು ಪ್ರೌಢಾವಸ್ಥೆಗೆ …

Read More »

ಮಹಿಳೆಗೆ ಉಪವಾಸದಿಂದ ಎಲ್ಲಿಯವರೆಗೆ ರಿಯಾಯಿತಿ?

@ ಇಲ್ಯಾಸ್ ಮೌಲವಿ ರೋಗಿಗಳಿಗೆ ಉಪವಾಸ ಆಚರಿಸದಿರುವ ಅನುಮತಿಯಿದೆಯಲ್ಲವೇ? ಇದು ಯಾವ ರೀತಿಯ ರೋಗಗಳಿಗೆ ಅನ್ವಯವಾಗುತ್ತದೆ? ಅತ್ಯಂತ ಮಾರಕ ರೋಗವಿರುವವರಿಗೆ ಈ ರಿಯಾಯಿತಿ ಇದೆ. ಉಪವಾಸ ಆಚರಿಸಿದರೆ ಸಮಸ್ಯೆಯುಂಟಾಗಬಹುದಾದ ರೋಗಗಳನ್ನು ಇಲ್ಲಿ ಉದ್ದೇಶಿಸಲಾಗಿದೆ. 1. ಉಪವಾಸ ಆಚರಿಸಿದರೆ ರೋಗ ಉಲ್ಬಣವಾಗುವುದು. 2. ರೋಗ ಶಮನ ನಿಧಾನವಾಗುವುದು. 3. ಇವೆರಡು ಆಗದಿದ್ದರೂ ಉಪವಾಸದಿಂದ ದೇಹಕ್ಕೆ ಹೆಚ್ಚು ಕಷ್ಟವಾಗುವುದು. 4. ಉಪವಾಸದಿಂದ ರೋಗ ಉಂಟಾಗುವುದು. (ಉದಾ: ಆರೋಗ್ಯಕ್ಕೆ ಸಂಬಂಧಿಸಿದ ಕಾರಣದಿಂದ ಹೊಟ್ಟೆಯು ಖಾಲಿಯಾಗಿರಬಾರದು …

Read More »

ನಮಗರಿವಿಲ್ಲದೇ ಹೋಗಬಾರದ ಅತಿಥಿ

ಮರ್ಯಮ್ ಶಹೀರಾ ಇಬ್ಬರು ವ್ಯಕ್ತಿಗಳು ಪ್ರವಾದಿ(ಸ)ರ ಬಳಿಗೆ ಬಂದರು. ಪ್ರವಾದಿ(ಸ)ರೊಂದಿಗೆ ಮಾತುಕತೆ ನಡೆಸಿದ ನಂತರ ಇವರಿಬ್ಬರೂ ಇಸ್ಲಾಮ್ ಸ್ವೀಕರಿಸಿದರು. ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಅನಂತರದ ದಿನಗಳಲ್ಲಿ ಅವರಿಬ್ಬರು ಇಸ್ಲಾಮಿನ ಮಾರ್ಗದಲ್ಲಿ  ಕರ್ಮೋತ್ಸುಕರಾಗಿದ್ದರು. ಹೀಗಿರುವಾಗ ಆ ಪೈಕಿ ಒಬ್ಬನು ಯುದ್ಧ ರಂಗದಲ್ಲಿ ಹುತಾತ್ಮನಾಗುತ್ತಾನೆ. ಇನ್ನೊಬ್ಬ ಒಂದು ವರ್ಷದ ಬಳಿಕ ಸಾಮಾನ್ಯ ರೀತಿಯಲ್ಲಿ ಮರಣ ಹೊಂದುತ್ತಾನೆ. ಒಂದು ದಿನ ತಲ್ಹಾ ಬಿನ್ ಉಬೈದುಲ್ಲಾ(ರ) ಎಂಬ ಓರ್ವ ಸಹಾಬಿ ಕನಸು ಕಾಣುತ್ತಾರೆ. ಆ ಕನಸಿನಲ್ಲಿ …

Read More »

ಉಪವಾಸ- ಆತ್ಮದ ಶಕ್ತಿ

@ ಅಶೀರುದ್ದೀನ್ ಆಲಿಯಾ, ಮಂಜನಾಡಿ “ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮ ನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”  (ಅಲ್‍ಬಕರ: 183) ಉಪವಾಸ ಒಂದು ಆತ್ಮಶುದ್ಧೀಕರಣದ ಮಾರ್ಗ. ಮನುಷ್ಯ ಧಾರ್ಮಿಕನಾಗಿ, ಆಧ್ಯಾತ್ಮಿಕನಾಗಿ, ದೇವನಿಗೆ ಎಷ್ಟು ನಿಷ್ಠಾವಂತನಾಗಿದ್ದಾನೆ ಎಂಬುದನ್ನು ಇದು ತಿಳಿಸುತ್ತದೆ. ಉಪವಾಸ ಎಂದರೆ ಊಟ ಮಾಡದೇ ಇರುವುದು, ಉಪವಾಸಾಚರಣೆ, ನಿರಶನ,  ಲಂಘನ, ನಿರಾಹಾರ ಇತ್ಯಾದಿ ಕನ್ನಡ ನಿಘಂಟಿನಲ್ಲಿವೆ. ಇಂಗ್ಲಿಷ್‍ನಲ್ಲಿ ಫಾಸ್ಟ್ …

Read More »

ನಾಲಗೆಯ ಉಪವಾಸ

@ ಟಿ. ಮುಹಮ್ಮದ್ ವೇಳಂ ರುಚಿ ಹಾಗೂ ರತಿಯ ಬಳಿಕ ಅತ್ಯಂತ ಹೆಚ್ಚು ಉಪವಾಸವಿರುವುದು ನಾಲಗೆಗಾಗಿದೆ. ನಂತರ ಎಲ್ಲಾ ಕಾರ್ಯಗಳಿಗೆ ಅನ್ವಯವಾಗುತ್ತದೆ. ಮಾತನ್ನು ನಿಯಂತ್ರಿಸುವುದು ಆತ್ಮಸಂಸ್ಕರಣೆಯ ಮುಖ್ಯ ಭಾಗವಾಗಿದೆ. ಆತ್ಮಸಂಸ್ಕರಣೆಯು ತೀವ್ರ ರೂಪವಾದ ಸನ್ಯಾಸದಲ್ಲಿ ಇವೆಲ್ಲವೂ ಮಿತಿ ಮೇರೆಗಳನ್ನು ದಾಟಿರುವುದು ಕಂಡು ಬರುತ್ತದೆ. ಕ್ರೈಸ್ತ ಸನ್ಯಾಸತ್ವವನ್ನು ಸ್ವೀಕರಿಸಿ, ಉಪೇಕ್ಷಿಸಿದ ಪ್ರಸಿದ್ಧ ಬ್ರಿಟಿಷ್ ಬರಹಗಾರ್ತಿ ಕಾಸು ಆರ್ಮ್‍ಸ್ಟ್ರಾಂಗ್‍ರು ತಮ್ಮ ಗೋವನಿ ಎಂಬ ಆತ್ಮ ಕಥೆಯಲ್ಲಿ ಚರ್ಚ್ ಸನ್ಯಾಸಿಗಳಲ್ಲಿ  ಯಾವ ರೀತಿಯ ನಿಶ್ಶಬ್ದತೆಯನ್ನು …

Read More »

ಉಪವಾಸ ವ್ರತದ ಆಂತರ್ಯ

ಮೌ| ಮುಹಮ್ಮದ್ ಫಾರೂಕ್ ಖಾನ್ ಮಾನವನ ಸ್ವಾಭಾವಿಕ ಪ್ರತಿಭೆ ಮತ್ತು ಸಾಮಥ್ರ್ಯಗಳು ಬೆಳೆದು ಬರಲು ಮತ್ತು ಪೋಷಿಸಲ್ಪಡಲು ಶಿಕ್ಷಣ-ತರಬೇತಿಯ ಅಗತ್ಯ ಬಹಳವಿರುತ್ತದೆ. ಅದರ ಹೊರತು ಸಾಮಾನ್ಯವಾಗಿ ಮನಸ್ಸುಗಳ ಮೇಲೆ ಭೌತಿಕತೆ ಮತ್ತು ಲಾಭ ಬಡುಕತನವು ಪ್ರಭಾವ  ಬೀರುತ್ತವೆ. ಅದು ವಸ್ತುಗಳನ್ನು ಅವುಗಳ ಸ್ವಾಭಾವಿಕ ಪರಿಶುದ್ಧತೆಯೊಂದಿಗೆ ನೋಡುವುದರಿಂದ ತಡೆಯುತ್ತದೆ. ಅದು ಜೀವನದ ಪ್ರಮುಖ ಮೌಲ್ಯ ಮತ್ತು ವಾಸ್ತವಿಕತೆಗಳನ್ನು ಅರಿಯುವುದರಿಂದಲೂ ತಡೆಯುತ್ತದೆ. ಉಪವಾಸ ವ್ರತವು ಒಂದು ಪವಿತ್ರವಾದ ಆರಾಧನೆಯಾಗಿರುವಂತೆಯೇ ನಮ್ಮ ಆಧ್ಯಾತ್ಮಿಕ ಮತ್ತು …

Read More »

ನಮ್ಮ ಸ್ವಭಾವ ಕುರ್‍ಆನ್ ಆಗಲಿ

ಡಾ| ಯೂಸುಫುಲ್ ಕರ್ಝಾವಿ ಕುರ್‍ಆನನ್ನು ಹೆಚ್ಚು ಗೌರವಿಸುವವನೂ, ಅವಗಣಿಸುವವನೂ, ಸಂಭ್ರಮಿಸುವವನೂ ಮರೆತು ಬಿಡುವವನೂ ಒಂದೇ ರೀತಿಯಲ್ಲಿ ನಿರ್ಲಕ್ಷ್ಯರಾಗಿರುವ ವಿಷಯವೇನೆಂದರೆ ಜೀವನದಲ್ಲಿ ಕುರ್‍ಆನನ್ನು ಅನುಸರಿಸುವ ವಿಚಾರ. ಸಾವಿರಾರು ಅಥವಾ ಲಕ್ಷಾಂತರ ಮಂದಿ ಕುರ್‍ಆನನ್ನು ಕಂಠಪಾಠ ಮಾಡುತ್ತಾರೆ. ಮಿಲಿಯನ್ ಸಂಖ್ಯೆಯ ಮಂದಿ ಕುರ್‍ಆನನ್ನು ರಾತ್ರಿ, ಹಗಲೆನ್ನದೆ ಪಾರಾಯಣ ಮಾಡುತ್ತಾರೆ ಅಥವಾ ಆಲಿಸುತ್ತಾರೆ. ಇನ್ನೂ ಲಕ್ಷಾಂತರ ಮಂದಿ ಗೋಡೆಗಳಲ್ಲೂ,  ಭಿತ್ತಿಗಳಲ್ಲೂ, ಕ್ಯಾನ್‍ವಾಸ್‍ಗಳಲ್ಲೂ ಕುರ್‍ಆನನ್ನು ಸುಂದರವಾಗಿ ಚಿತ್ರಿಸುತ್ತಾರೆ. ಇನ್ನು ಕೆಲವರು ತಮ್ಮ ಕಿಸೆಗಳಲ್ಲೂ, ವಾಹನಗಳಲ್ಲೂ ಕುರ್‍ಆನ್‍ನ …

Read More »