Home / ಲೇಖನಗಳು (page 41)

ಲೇಖನಗಳು

ಹೊರಗೆ ಬಿಳಿ, ಒಳಗೆ ಕತ್ತಲು

‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’ ಇದು ಪವಿತ್ರ ಕುರ್‍ಆನ್‍ನಲ್ಲಿ ನಮೂದಾಗಿರುವ ಒಂದು ಪ್ರಶ್ನೆ. ಹೀಗೆ ಪ್ರಶ್ನಿಸಿದವರು ಪ್ರವಾದಿ ಮೂಸಾ(ಅ). ಪ್ರಶ್ನೆಯನ್ನು ಎದುರಿಸಿದವನು ದೊರೆ ಫಿರ್‍ಔನ್. ಹೀಗೆ ಪ್ರಶ್ನಿಸಬೇಕೆಂದು ಆದೇಶ ಕೊಟ್ಟವನು ಅಲ್ಲಾಹ್. ಪವಿತ್ರ ಕುರ್‍ಆನಿನ ಅನ್ನಾಝಿಆತ್  ಅಧ್ಯಾಯದ 18ನೇ ವಚನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಿಜವಾಗಿ, ಪುರಾತನ ಕಾಲದ ಫಿರ್‍ಔನ್‍ಗೆ ಮಾತ್ರ ಅನ್ವಯಿಸಿ ನೋಡಬೇಕಾದ ಪ್ರಶ್ನೆಯಲ್ಲ ಇದು. ಈ ಪ್ರಶ್ನೆ ಸಾರ್ವಕಾಲಿಕ. ಪ್ರತಿ ವ್ಯಕ್ತಿಯೂ ತನ್ನ ಜೊತೆ ಇಂಥದ್ದೊಂದು ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು …

Read More »

ದೇವರು- ತಂದೆ- ತಾಯಿ

ನಿಮ್ಮ ಪ್ರಭು(ಹೀಗೆ) ವಿಧಿಸಿ ಬಿಟ್ಟಿದ್ದಾನೆ, ನೀವು ಅವನೊಬ್ಬ ನ ಹೊರತು ಇನ್ನಾರ ದಾಸ್ಯ ಆರಾಧನೆಯನ್ನು ಮಾಡಬಾರದು.  ಮಾತಾಪಿತರೊಡ ನೆ ಸೌಜನ್ಯದಿಂದ ವರ್ತಿಸಿರಿ. ಕುರ್ ಆನ್ 17-23 *************************************** ದೇವರು- ತಂದೆ- ತಾಯಿ ಈ ಮೂರು ವಿಷಯವನ್ನು ಒಂದೇ ವಾಕ್ಯದಲ್ಲಿ ಏಕೆ ಇರಿಸಲಾಗಿದೆ ಎಂಬುದರ ಬಗ್ಗೆ ನಾವೆಲ್ಲಾ ಚಿಂತಿಸಬೇಕಾಗಿದೆ. ಈ ಮೂರಕ್ಕೆ ಬದಲಿ ಇಲ್ಲ, ದೇವರು ಒಂದೇ ತಂದೆ ಒಂದೇ ತಾಯಿ ಒಂದೇ ತಂದೆ ಅಂದರೆ ನಮ್ಮ ಜನ್ಮಕ್ಕೆ ಕಾರಣರಾದವರು, ನಮ್ಮ …

Read More »

ಸಾಂಕ್ರಾಮಿಕ ರೋಗ ಮತ್ತು ಮುಹಮ್ಮದ್ ಪೈಗಂಬರರು – ಮಹೇಂದ್ರ ಕುಮಾರ್

ಮುಸಲ್ಮಾನರೇ ಹೇಳುವ ಹಾಗೆ, ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಮತ್ತು ಅನುಸರಿಸುವುದು ತಮಗೆ ಇಸ್ಲಾಮ್ ಅನ್ನು ಅನುಗ್ರಹ ರೀತಿಯಲ್ಲಿ ಪರಿಚಯಿಸಿದ ಮಹಮ್ಮದ್ ಪೈಗಂಬರರನ್ನು. ಮುಸಲ್ಮಾನರ ಪ್ರಕಾರ ಪ್ರವಾದಿರವರು ಬೋಧಿಸದೆ ಉಳಿದ ವಿಷಯಗಳೇ ಇಲ್ಲ. ದೈನಂದಿನ ಎಲ್ಲಾ ಚಟುವಟಿಕೆಗಳ ಮೇಲು ವೈಜ್ಞಾನಿಕ ತಳಹದಿಯ ಮೇಲೆ ಕೆಲವು ವಿಧಿವಿಧಾನಗಳನ್ನು ಹೇಳಿದ್ದಾರೆ ಎಂಬುದು ಅವರ ಅಚಲ ನಂಬಿಕೆ. ಹಾಗಾದರೆ ಸಾಂಕ್ರಾಮಿಕ ರೋಗಕ್ಕೆ ಸಂಭಂದಿಸಿದಂತೆ ಪ್ರವಾದಿರವರ ಸಂದೇಶ ಏನು ಎಂದು ಈ ಕಾಲಕ್ಕೆ ತುರ್ತಾಗಿ ಪರಾಮರ್ಶಿಸಲು …

Read More »

ನಾವು ಮಣಿಸಬೇಕಾಗಿರುವ ನಮ್ಮೊಳಗಿನ ವೈರಸ್ಸು

ಎ.ಕೆ. ಕುಕ್ಕಿಲ ಮನುಷ್ಯನಿಗೆ ಸಂಬಂಧಿಸಿ ಅತಿ ಹೆಚ್ಚು ಅಮಾನವೀಯವಾಗಿ ನಡೆದುಕೊಂಡಿರುವುದು ಯಾರು ಅನ್ನುವ ಬಹುಮುಖ್ಯವಾದ ಪ್ರಶ್ನೆಗೆ ಕೊರೋನಾ ಮತ್ತೊಮ್ಮೆ ಜೀವವನ್ನು ಕೊಟ್ಟಿದೆ. ಮನುಷ್ಯರ ಪ್ರಾಣಗಳಿಗೆ ಎರಡು ವಿಧದಲ್ಲಿ ಅಪಾಯಗಳು ಎದುರಾಗುತ್ತವೆ. ಒಂದು- ನಿಸರ್ಗದತ್ತವಾದುದು. ಎರಡು- ಮಾನವ ಜನ್ಯವಾದುದು. ಸಾಂಕ್ರಾಮಿಕ ರೋಗಗಳು, ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿಗಳು ಮಾನವ ನಿಯಂತ್ರಣವನ್ನು ಮೀರಿದ್ದಾಗಿದೆ. ಇವುಗಳಲ್ಲಿ ಮನುಷ್ಯನ ನೇರಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಮನುಷ್ಯ ನೇರವಾಗಿ ಸುನಾಮಿಯನ್ನು ಉತ್ಪಾದಿಸುವುದಿಲ್ಲ. ಭೂಕಂಪನವನ್ನು ಹುಟ್ಟುಹಾಕಿ  ಸಂಭ್ರಮಿಸುವುದಿಲ್ಲ. ಕೊರೋನಾವಾಗಲಿ, …

Read More »

ಶುಚಿತ್ವವೇ ಕೊರೋನಾಕ್ಕಿರುವ ಪ್ರತಿರೋಧ!

@ ಸಲೀಮ್ ಬೋಳಂಗಡಿ ಕೊರೋನಾ ಪಿಡುಗಿಗೆ ಬಲಿಯಾದವರ ಸಂಖ್ಯೆ ನಿರಂತರ ಏರುತ್ತಿದೆ. ವಿಶ್ವವೇ ಕೊರೋನಾ ಮಹಾಮಾರಿಗೆ ತಲ್ಲಣಗೊಂಡಿದೆ. ಸಾರಿಗೆ ವ್ಯವಸ್ಥೆ ಕೂಡಾ ಅಸ್ತವ್ಯಸ್ಥಗೊಂಡು ಸ್ಥಬ್ದವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸೇರುವುದರ ವಿರುದ್ಧ ನಿಯಂತ್ರಣ ಹೇರಲಾಗುತ್ತಿದೆ. ಪ್ರಾರ್ಥನಾ ಸ್ಥಳಗಳಲ್ಲಿಯೂ ನಿರ್ಬಂಧ ಹೇರಲಾಗಿದೆ. ಎಲ್ಲೆಡೆ ಜನರು ಬೇಕಾಬಿಟ್ಟಿಯಾಗಿ ಸೇರದಂತೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಒಂದು ರೀತಿಯ ನಿಗೂಢ ಭಯ ಕಾಣಿಸತೊಡಗಿದೆ. ಜನರು ದೇವನ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದಾರೆ. ಮನುಷ್ಯ ಮಾನವೀಯತೆಯನ್ನು ಮರೆತು ಬಿಟ್ಟಿರುವಾಗ …

Read More »

ನಿದ್ದೆಯಲ್ಲಿಯೂ ಮಾಸ್ಕ್ ಧರಿಸುವ ಸ್ಥಿತಿ – ಡಾ. ಪಿ.ಎನ್. ಸುರೇಶ್ ಕುಮಾರ್

ಡಾ. ಪಿ.ಎನ್. ಸುರೇಶ್ ಕುಮಾರ್ ವಿಶ್ವವೇ ಇಂದು ಒಂದು ವೈರಸ್‍ನ ಬೆನ್ನ ಹಿಂದಿದೆ. ಜಾಗತಿಕವಾಗಿ ಆತಂಕ ಹುಟ್ಟುಹಾಕಿ ನಿಲ್ಲದೆ ಮುಂದುವರಿಯುತ್ತಲೇ ಇರುವ ಕೊರೊನಾ ಯಾನೆ ಕೋವಿಡ್ 19 ಈಗ ನಮ್ಮ ಜೀವನ ಚರ್ಯೆಯನ್ನೇ  ಬದಲಾಯಿಸುವ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕ್ವಾರಂಟೀನ್, ಐಸೊಲೇಶನ್, ಸೋಶಿಯಲ್ ಡಿಸ್ಟ್ಯಾನ್ಸಿಂಗ್, ಮಾಸ್ಕ್, ಸಾನಿಸೈಟರ್ ಮುಂತಾದುವುಗಳ ಉಪಯೋಗ, ಹ್ಯಾಂಡ್ ವಾಷ್ ಜಾಗೃತಿ  ಇತ್ಯಾದಿ ಹಲವು ಉಪಾಯಗಳಿಂದ ವೈರಸ್ ವಿರುದ್ಧ ಪ್ರತಿರೋಧಕ್ಕೆ ಎಲ್ಲರೂ ಸಿದ್ಧವಾಗಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚು …

Read More »

ಸಾಂಕ್ರಾಮಿಕ ರೋಗ ಮತ್ತು ಇಸ್ಲಾಮಿ ದೃಷ್ಟಿಕೋನ

ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಿಯ ಬಳಿ ಹೋಗುವುದು ಮತ್ತು ರೋಗಿ ಇತರರ ಬಳಿ ಹೋಗುವುದನ್ನು ಪ್ರವಾದಿ ಮುಹಮ್ಮದ್ (ಸ) ತಡೆದಿದ್ದರು. ಅಂದರೆ ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದು ಕೊಳ್ಳಬೇಕು. ಎಲ್ಲಿಯವರೆಗೆಂದರೆ ಹುಲಿಯಿಂದ ದೂರ ಹೋಗುವಂತೆ ಭಯ ಪಟ್ಟು ದೂರ ಹೋಗಲು ಪ್ರವಾದಿ (ಸ) ಆದೇಶಿಸಿದ್ದು ನಮಗೆ ಹದೀಸಿನಲ್ಲಿ ಕಾಣ ಸಿಗುತ್ತದೆ. ಎಲ್ಲಿಯವರೆಗೆಂದರೆ ರೋಗ ಪೀಡಿತ ಪ್ರಾಣಿಯನ್ನು ಆರೋಗ್ಯವಂತ ಪ್ರಾಣಿಯ ಹತ್ತಿರ ಕೊಂಡು ಹೋಗಬಾರದು. ಯಾಕೆಂದರೆ ಅದರಿಂದ ವೈರಸ್ ಹರಡುವುದು …

Read More »

ಪ್ರವಾದಿ ಮುಹಮ್ಮದ್ (ಸ) ಕಲಿಸಿದ ಶುಚಿತ್ವ ಮತ್ತು ಆಧುನಿಕ ವೈರಸ್

ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ ವಿಷಯಗಳಿವು. ಈ ವಿಷಯಗಳು ಮನುಷ್ಯನ ಪ್ರಕೃತಿಯಲ್ಲಿ ಇರಬೇಕು ಎಂದು ಅವರು ತಾಕೀತು ಮಾಡಿದ್ದರು. ಎಲ್ಲಾ ಪೂರ್ವ ಪ್ರವಾದಿಗಳೂ ಇದನ್ನು ಜನರಿಗೆ ಬೋಧಿಸಿದ್ದರು. ಆದ್ದರಿಂದ ಎಲ್ಲಾ ಧರ್ಮದಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಈ ಬೋಧನೆಗಳು ಕೋರೋನಾ ಮಾತ್ರವಲ್ಲ, ಎಲ್ಲಾ ಬಗೆಯ ವೈರಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಈ ಜೀವನದ ಶಿಷ್ಟಾಚಾರವನ್ನು ಪಾಲಿಸುವುದೇ ಧರ್ಮ ಆಗಿದೆ. 1. ಕಸ್ಸುಶ್ಶಾರಿಕ್ ಅಂದರೆ ನೇತಾಡುತ್ತಿರುವ ಮೀಸೆಗಳನ್ನು …

Read More »

ಧಾರ್ಮಿಕ ಸೌಹಾರ್ದ ಮತ್ತು ಇಸ್ಲಾಂ ಧರ್ಮ ಭಾಗ – 8

ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ ಸ ರವರು ಹೇಳಿದ್ದಾರೆ. ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ. ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ …

Read More »

ಇಸ್ಲಾಮೋಫೋಬಿಯಾ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅನಸಿಬ್ನಿ ಮಾಲಿಕಿನ್ ರದಿಯಲ್ಲಾಹು ಅನ್‍ಹು ಕಾಲ; ಕಾಲ ರಸೂಲುಲ್ಲಾಹಿ(ಸ) ಯಅïತೀ ಅಲನ್ನಾಸಿ ಝಮಾನುನ್ ಅಸ್ಸಾಬಿರು ಫೀಹಿಮ್ ಅಲಾ ದೀನಿಹಿ ಕಲ್‍ಕಾಬಿದಿ ಅಲಲ್ ಜಮ್‍ರಿ.  (ರವಾಹು ತಿರ್ಮಿದಿ) ಪ್ರವಾದಿಯವರು(ಸ) ಹೇಳಿದರು: ಜನರಿಗೆ ಒಂದು ಕಾಲ ಬರಲಿದೆ. ತನ್ನ ಧರ್ಮದಲ್ಲಿ ಓರ್ವರು ಸ್ಥಿರವಾಗಿ ನಿಲ್ಲುವುದು ಬೆಂಕಿಯ ಕೆಂಡವನ್ನು ಕೈಯಲ್ಲಿ ಹಿಡಿಯುವುದಕ್ಕೆ ಸಮಾನವಾಗಿರುತ್ತದೆ. ಈ ಹದೀಸ್ ಇಸ್ಲಾಮ್ ಧರ್ಮವನ್ನು ಅನುಸರಿಸಿ, ಅದರ ಮೌಲ್ಯಗಳನ್ನು ರೂಢಿಸಿ ಬದುಕಬೇಕೆಂದು ಬಯಸುವವರಿಗೆ ಈ …

Read More »