Home / ಲೇಖನಗಳು / ಹಲಾಲ್ ಕೋಳಿಯ ಆರೋಗ್ಯಕರ ಪ್ರಯೋಜನಗಳು ; ಸ್ಕಾರ್ಲೆಟ್ ಬೇಕರ್ ರವರ ಲೇಖನದಿಂದ

ಹಲಾಲ್ ಕೋಳಿಯ ಆರೋಗ್ಯಕರ ಪ್ರಯೋಜನಗಳು ; ಸ್ಕಾರ್ಲೆಟ್ ಬೇಕರ್ ರವರ ಲೇಖನದಿಂದ

ಹಲಾಲ್ ಕೋಳಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಲಾಲ್ ಎಂಬ ಪದವು ಅರೇಬಿಕ್‌ನಿಂದ ಬಂದಿದೆ, ಇದರರ್ಥ ಅನುಮತಿ. ಇದು ಇಸ್ಲಾಂ ಧರ್ಮದಲ್ಲಿ ಬಳಕೆಯಾಗುವ ಪದ. ಇದರರ್ಥ ಮಾಂಸವು ಅತ್ಯಂತ ಶುದ್ಧವಾಗಿರಬೇಕು. ಹಲಾಲ್ ಚಿಕನ್ ಮತ್ತು ಹಲಾಲ್ ಇತರ ಉತ್ಪನ್ನಗಳು ನಿಮ್ಮ ದೇಹಕ್ಕೆ ಏಕೆ ಉತ್ತಮವೆಂದು ತಿಳಿದುಕೊಳ್ಳಿ. ಹಲಾಲ್ ಉದ್ಯಮವು ಪ್ರಪಂಚದಾದ್ಯಂತ ಹೇಗೆ ಜನಪ್ರಿಯವಾಗುತ್ತಿದೆ.

ಹಲಾಲ್ ಕೋಳಿಯ ಪ್ರಾಮುಖ್ಯತೆ
ಹಲಾಲ್ ಮಾಂಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇಸ್ಲಾಮಿಕ್ ಮಾನದಂಡಕ್ಕೆ ತಕ್ಕಂತೆ, ಮಾಂಸವು ಕುರಿಮರಿ, ಹಸು ಅಥವಾ ಕೋಳಿಯಾಗಿರಬೇಕು. ಹಂದಿ ಮಾಂಸ ಯಾವ ಕಾರಣಕ್ಕೂ ಹಲಾಲ್ ಅಲ್ಲ. ಅದಕ್ಕೆ ಅನುಮತಿ ಇಲ್ಲ. ಕೋರೆ ಗಲ್ಲುಗಳಿರುವ ಮೊಸಳೆ, ಕಪ್ಪೆಗಳು, ಬೆಕ್ಕುಗಳು, ನಾಯಿಗಳು, ಹಾವುಗಳು ಅಥವಾ ಕೋರೆ ಹಲ್ಲುಗಳಿರುವ ಯಾವುದೂ ಹಲಾಲ್ ನ ಬೇಡಿಕೆಯನ್ನು ಅವಶ್ಯಕತೆಗಳನ್ನು ಪೂರೈಸುವುದಿಲ್ಲ. ಆದ್ದರಿಂದ ಅವುಗಳು ತಿನ್ನುವಂತಿಲ್ಲ.

ಹಲಾಲ್ ಶುದ್ಧತೆಯ ಮಹತ್ವ
ಹಲಾಲ್ ಮಾಂಸದ ದೊಡ್ಡ ನಿಯಮವೆಂದರೆ ಅದು ಸ್ವಚ್ಛತೆಯಾಗಿದೆ. ಮಾಂಸವನ್ನು ವಧಿಸುವ ಕಟುಕರು ಮತ್ತು ರೈತರು ಈ ಪ್ರಮುಖ ಮಾನದಂಡವನ್ನು ಅನುಸರಿಸಲೇಬೇಕು. ಇಲ್ಲಿ ಪ್ರಾಣಿಗಳನ್ನು ಗೌರವದ ದೃಷ್ಟಿಯಲ್ಲಿ ಪರಿಗಣಿಸಲಾಗುತ್ತದೆ. ಇದರರ್ಥ ಅವುಗಳಿಗೆ ವಾಸಿಸಲು ಸ್ಥಳಗಳನ್ನು ನೀಡಲಾಗುತ್ತದೆ. ಅವುಗಳಿಂದ ಉತ್ತಮ ಗುಣಮಟ್ಟದ ಆಹಾರವನ್ನು ಗಳಿಸಲಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದರೆ ಪ್ರಾಣಿಗಳನ್ನು ಕೊಲ್ಲಲಾಗುವುದಿಲ್ಲ. ಮತ್ತು ಈ ವಧಿಸಲ್ಪಡುವ ಪ್ರಾಣಿಗಳಿಗೆ ಕೊಳಕು ಆಹಾರವನ್ನು ನೀಡಲಾಗುವುದಿಲ್ಲ. ಆಂಟಿಬಯೋಟಿಕ್ ಗಳನ್ನೂ ನೀಡಲಾಗುವುದಿಲ್ಲ. ಹಲಾಲ್ ಗೊಳಿಸುವ ಪ್ರಾಣಿಗಳ ಒತ್ತಡವೂ ಕಡಿಮೆ ಇರುವ ಕಾರಣ ಮೃದುವಾದ ಉತ್ತಮ ಮಾಂಸ ಸಿಗುತ್ತದೆ.

ಹಲಾಲ್ ಆಹಾರ ನಿಮಗೇಕೆ ಉತ್ತಮ
ನಾವು ಹಲಾಲ್ ಆಹಾರವನ್ನು ಸೇವಿಸಲು ಹಲವು ಕಾರಣಗಳಿವೆ. ಹಲಾಲ್ ಚಿಕನ್‌ನ ಆರೋಗ್ಯ ಪ್ರಯೋಜನಗಳು ದೇಹ ಮತ್ತು ಮನಸ್ಸಿಗೆ ಹಲವು ವಿಧಗಳಲ್ಲಿ ಒಳ್ಳೆಯದು. ಪ್ರಾಣಿಗಳನ್ನು ಹತ್ಯೆ ಮಾಡಿದಾಗ ದೇಹದಿಂದ ಎಲ್ಲಾ ರಕ್ತ ಹರಿಯುತ್ತದೆ. ಇದರರ್ಥ ಪ್ರಾಣಿಗಳೊಳಗೆ ಮತ್ತು ಮಾಂಸದಲ್ಲಿ ಬ್ಯಾಕ್ಟೀರಿಯಾ ಕಡಿಮೆ ಇರುತ್ತದೆ. ಕೆಟ್ಟ ಬ್ಯಾಕ್ಟೀರಿಯಾದ ಅಪಾಯ ಕಡಿಮೆ ಇರುವುದರಿಂದ ಮಾಂಸವನ್ನು ಹೆಚ್ಚು ಸಮಯ ಬಳಸಬಹುದು ಎಂದರ್ಥ. ರಕ್ತ ಹರಿದು ಹೋದ ಕಾರಣದಿಂದ ಮಾಂಸ ಉತ್ತಮ ರುಚಿ ನೀಡುತ್ತದೆ.

ನಿಮ್ಮ ದೇಹ ಮತ್ತು ಮನಸ್ಸಿನ ಪ್ರಯೋಜನಗಳು
ಆರೋಗ್ಯಕರ ತೂಕಕ್ಕೆ ಹಲಾಲ್ ಆಹಾರ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಗೂ ಒಳ್ಳೆಯದು. ಈ ರೀತಿಯ ಆರೋಗ್ಯಕರ ಆಹಾರಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಲಾಲ್ ಚಿಕನ್ ಚಯಾಪಚಯ ಕ್ರಿಯೆಯನ್ನು ಆ ಎಲ್ಲಾ ಆರೋಗ್ಯಕರ ಪೋಷಕಾಂಶಗಳಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇತರ ರೀತಿಯಲ್ಲಿ, ಆರೋಗ್ಯಕರ ಆಹಾರವು ನಿಮ್ಮ ಮೆದುಳಿಗೆ ಅದ್ಭುತವಾಗಿದೆ. ಹಲಾಲ್ ಚಿಕನ್ ಖಿನ್ನತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಹಲಾಲ್ ಉದ್ಯಮದ ಬೆಳವಣಿಗೆ
ಹಲಾಲ್ ಮಾಂಸದ ಜನಪ್ರಿಯತೆಯು ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಮುಸ್ಲಿಂ ನಂಬಿಕೆಯನ್ನು ಅಭ್ಯಾಸ ಮಾಡದ ಜನರು ಹಲಾಲ್ ಉತ್ಪನ್ನಗಳ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಿದೆ. ಖಂಡಿತವಾಗಿ, ಈ ಪ್ರದೇಶದಲ್ಲಿ ಮುಸ್ಲಿಂ ಬಹುಸಂಖ್ಯಾತರು ಇರುವ ಈ ಉತ್ಪನ್ನಗಳನ್ನು ಕೊಂಡು ಕೊಳ್ಳುವುದು ತುಂಬಾ ಸುಲಭ.

ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ಸ್ಥಳಗಳು ಹಲಾಲ್ ಮಾಂಸವನ್ನು ಹುಡುಕುವುದು ಕಷ್ಟಕರವಾಗಿಸುತ್ತದೆ. ಆದಾಗ್ಯೂ, ಭವಿಷ್ಯದಲ್ಲಿ ಅದು ಬದಲಾಗಬಹುದು ಎಂದು ತೋರುತ್ತಿದೆ. ಬ್ರೆಜಿಲ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಟಲಿ, ಭಾರತ ಮತ್ತು ಜರ್ಮನಿಯಂತಹ ಸ್ಥಳಗಳು ತಮ್ಮ ಹಲಾಲ್ ಉತ್ಪನ್ನಗಳನ್ನು ಹೆಚ್ಚಿಸುತ್ತಿವೆ. ಇತರ ದೇಶಗಳಾದ ಥೈಲ್ಯಾಂಡ್, ಚೀನಾ, ದಕ್ಷಿಣ ಕೊರಿಯಾ, ಫಿಲಿಪೈನ್ಸ್, ಬ್ರೂನಿ ಮತ್ತು ಜಪಾನ್ ಕೂಡ ಹಲಾಲ್ ಮಾಂಸವನ್ನು ಒದಗಿಸಲು ಹೆಜ್ಜೆ ಇಟ್ಟಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಈಗಾಗಲೇ ಹಲಾಲ್ ಮಾಂಸಕ್ಕೆ ಸರಿಯಾದ ಪ್ರವೇಶವನ್ನು ನೀಡಲು ಪ್ರಾರಂಭಿಸಿವೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …