Home / ವಾರ್ತೆಗಳು / ಫೆಬ್ರವರಿ 21 ರಿಂದ ಕುವೈತ್ ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಕಡ್ಡಾಯ

ಫೆಬ್ರವರಿ 21 ರಿಂದ ಕುವೈತ್ ಎಲ್ಲಾ ಪ್ರಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಕಡ್ಡಾಯ

ಕುವೈತ್: COVID-19 ವೈರಸ್ ಹರಡುವುದನ್ನು ತಡೆಯಲು ಎರಡು ವಾರಗಳ ನಿಷೇಧದ ಬಳಿಕ ಇದೀಗ ಕ್ವಾರಂಟೈನ್ ನಿಯಮ ಜಾರಿಯಾಗಿದೆ. ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಳಿಯುವ ಮತ್ತು ಹೊರಡುವ ಎಲ್ಲಾ ವಿಮಾನ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗಾಗಿ ಹೋಟೆಲ್ಗಳನ್ನು ಕಾಯ್ದಿರಿಸಬೇಕು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದೆ. ಮಾತ್ರವಲ್ಲ ಇದರ ಖರ್ಚು ವೆಚ್ಚವನ್ನು ಅವರೇ ಭರಿಸಬೇಕು ಎಂದು ಹೇಳಲಾಗಿದೆ.

ಇದು ಕುವೈಟಿಸ್ ಮತ್ತು ವಿದೇಶಿ ಪ್ರಜೆಗಳಿಗೆ ಅನ್ವಯಿಸುತ್ತದೆ. 43 ಹೋಟೆಲ್‌ಗಳು ತಮ್ಮ ಸೇವೆಗಳನ್ನು ನೀಡಲು ಸೈನ್ ಅಪ್ ಮಾಡಿದ್ದು, ಸಾಮಾನ್ಯ ಹೋಟೆಲ್ ಅಥವಾ ಪಂಚತಾರಾ ಹೋಟೆಲ್‌ಗಳು ಒದಗಿಸುವ ಸೇವೆಗಳ ಮೇಲೆ ಅವುಗಳ ಬೆಲೆಗಳು ಅವಲಂಬಿತವಾಗಿರುತ್ತದೆ.

ಎಲ್ಲಾ ಪ್ರಯಾಣಿಕರು ಕುವೈತ್‌ಗೆ ಬರುವ ಮೊದಲು ಕುವೈತ್ ಮೊಸಾಫರ್ ಆ್ಯಪ್ ಮೂಲಕ ತಮ್ಮ ಹೋಟೆಲ್ ಅನ್ನು ಕಾಯ್ದಿರಿಸಬೇಕಾಗುತ್ತದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ವಕ್ತಾರ ಸಾದ್ ಅಲ್-ಒಟೈಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …