Home / ಲೇಖನಗಳು / ಇಸ್ಲಾಮ್ ಮತ್ತು ಆರೋಗ್ಯ

ಇಸ್ಲಾಮ್ ಮತ್ತು ಆರೋಗ್ಯ

@ ಮೂಸಾ ಮನಿಯಾರ್, ಬಾಗಲಕೋಟೆ

`ಇಸ್ಲಾಮ್’ ಎಂಬ ಶಬ್ದವು ಮೂಲತಃ `ಸ-ಲಾ-ಮಾ’ ಹಾಗೂ ಮುಸ್ಲಿಮ್ ಶಬ್ದವು `ಯಾರು ಸಂಪೂರ್ಣವಾಗಿ ಇಸ್ಲಾಮ್ ಸಂದೇಶವನ್ನು ಅನುಸರಿಸುತ್ತಾನೋ ಅವನು ಎಂದಾಗಿದೆ. ಸ-ಲಾ-ಮ್  (ಶಾಂತಿ) ಮೂಲ ಶಬ್ದವಾದ “ಸ-ಲಾ-ಮ್”- ಶಾಂತಿ, ರಕ್ಷಣೆ, ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗು ಎಂದಾಗುತ್ತದೆ. ರಕ್ಷಣೆಯು ಇಹ-ಪರಗಳಲ್ಲಿ ಅಲ್ಲಾಹನಿಗೆ ಶರಣಾಗುವುದರಿಂದ ಆತ  ಪಡೆಯುತ್ತಾನೆ. ಯಾರಾದರೂ ಒಬ್ಬ ವ್ಯಕ್ತಿ ಅಲ್ಲಾಹನಿಗೆ ಶರಣಾದಾಗ ಅವನಿಗೆ ಶಾಂತಿ- ಸಮಾಧಾನ, ರಕ್ಷಣೆ ಅನುಭವವಾಗುತ್ತದೆ. ಅವನಿಗೆ ಸೃಷ್ಟಿಕರ್ತನ ಸಂಪೂರ್ಣ ಸೃಷ್ಟಿ ಹಾಗೂ ಆತನು ಸೃಷ್ಟಿಸಲಿಚ್ಛಿಸಿರುವ ಎಲ್ಲವುಗಳ ಮೇಲೆ ಆತನ ಸಂಪೂರ್ಣ ನಿಯಂತ್ರಣ ಇದೆ.  ಇಂತಹ ಶರಣಾಗತಿಯಿಂದ ಆತನಿಗೆ ನಿಜವಾದ ಶಾಂತಿ ಲಭಿಸುತ್ತದೆ. ಯಾರಿಗೂ ಲಭಿಸಿದ ಎಂದಿಗೂ ಮುಗಿಯದ ಪರಮ ಶಾಂತಿ ಆತನಿಗೆ ಲಭಿಸುತ್ತದೆ.

ಪ್ರಾರಂಭದಿಂದಲೂ, ಅಲ್ಲಾಹನು ತನ್ನ ಪ್ರವಾದಿಗಳ ಮುಖಾಂತರ ಅವತೀರ್ಣಗೊಳಿಸಿದ ಅಲ್ಲಾಹನ ದಾಸ್ಯರಾಧನೆ ಮಾತ್ರ ಮಾಡಿರಿ, ಅವನ ದಾಸ್ಯರಾಧನೆಯಲ್ಲಿ ಇತರರನ್ನು ಭಾಗೀದಾರರನ್ನಾಗಿ ಮಾಡಬೇಡಿರಿ. ಆಯಾ ಸಮಯ, ಕಾಲ ಹಾಗೂ ಜನಾಂಗಕ್ಕೆ ಅನುಗುಣವಾದ ಎಂಬ ಸಂದೇಶವನ್ನು ಅಲ್ಲಾಹನು ಕಳುಹಿಸುತ್ತಿರುವಾಗಲೂ ಎಲ್ಲ ಸಂದೇಶಗಳ ಸಾರ ಏಕದೇವಾರಾಧನೆ ಆಗಿದೆ. ಅಂದಿನ  ಪ್ರವಾದಿಗಳು ಆಯಾ ಕಾಲದ ಜನಾಂಗಕ್ಕೆ ಸೀಮಿತವಾದರೆ, ಪ್ರವಾದಿ ಮುಹಮ್ಮದ್(ಸ) ಸಂಪೂರ್ಣ ಮಾನವ ಕುಲಕ್ಕೆ ಪ್ರವಾದಿಯಾಗಿ ಕಳುಹಿಸಲ್ಪಟ್ಟಿದ್ದಾರೆ ಎಂದು ಕುರ್‍ಆನ್ ಸಾರುತ್ತದೆ.

ಇಸ್ಲಾಮ್ ಸಂಪೂರ್ಣ ಮಾನವಕುಲದ ಒಳಿತಿಗಾಗಿ ಬಂದಂತಹ ಧರ್ಮ, ಇಹ-ಪರಗಳ ವಿಜಯ ಮತ್ತು ಮೋಕ್ಷ ಇದರಲ್ಲಿ ಅಡಗಿದೆ. ಇದು ಕೇವಲ ಅರಬರಿಗಾಗಿ ಬಂದಂತಹ ಧರ್ಮವಾಗಿರದೆ ಇಡೀ  ಮಾನವಕುಲಕ್ಕೆ ಆ ಸೃಷ್ಟಿಕರ್ತನ ಪರಮ ಅನುಗ್ರಹವಾಗಿದೆ. ಇದೇ ಕಾರಣಕ್ಕಾಗಿ ಇಂದು ಜಗತ್ತಿನ ಪ್ರತಿಯೊಂದು ಭಾಗದಲ್ಲಿ ಮುಸ್ಲಿಮರು ಕಾಣುತ್ತಾರೆ. `ಇಸ್ಲಾಮ್’ ಒಂದು ಜೀವನ ವಿಧಾನ, ಸಂಪೂರ್ಣ  ಜೀವನ ಪದ್ಧತಿಯಾಗಿದೆ.

ಸೃಷ್ಟಿಕರ್ತನು ಸೃಷ್ಟಿಯನ್ನು ಸೃಷ್ಟಿಸಿ ಹಾಗೆಯೇ ಬಿಡಲಿಲ್ಲ. ಬದಲಾಗಿ ಆತನ ಪಾಶ, ಆತನ ಮಾರ್ಗದರ್ಶನ ನೀಡುತ್ತಾ ಬಂದಿದ್ದಾನೆ. ಅಜ್ಞಾನ ಮತ್ತು ಅಂಧಕಾರದಲ್ಲಿರುವ ಮನುಷ್ಯರು ಇದನ್ನು ಗಟ್ಟಿಯಾಗಿ  ಹಿಡಿದುಕೊಂಡರೆ ಖಂಡಿತವಾಗಿ ವಿಜಯ ಹಾಗೂ ಪರಮ ಶಾಂತಿ ಪ್ರಾಪ್ತವಾಗುತ್ತದೆ. ಒಬ್ಬ ಮುಸ್ಲಿಮನು ತನ್ನ ಜೀವನ ತುಂಬೆಲ್ಲ ಅಲ್ಲಾಹನ ಆದೇಶಗಳನ್ನು ಪಾಲಿಸುತ್ತಾ, ಅನುಸರಿಸುತ್ತಾ ಕುರ್‍ಆನ್ ಮತ್ತು  ಪ್ರವಾದಿ(ಸ) ಚರ್ಯೆಯ ಕಟ್ಟಾ ಅನುಯಾಯಿಯಾಗಿರುತ್ತಾನೆ.

ಪವಿತ್ರ ಕುರ್‍ಆನ್ ಅಲ್ಲಾಹನ ಸನ್ಮಾರ್ಗದರ್ಶನವಾಗಿದ್ದು ಆತನ ಪ್ರವಾದಿ(ಸ) ಜೀವನ, ನುಡಿಗಳು ಮನುಷ್ಯನ ಮಾರ್ಗದರ್ಶನದ ಮೂಲಾಧಾರವಾಗಿದೆ.

ಇಸ್ಲಾಮ್ ಪರಿಪೂರ್ಣ ಜೀವನ ವ್ಯವಸ್ಥೆಯಾಗಿದ್ದು ಅದು ಉತ್ತಮ ಆರೋಗ್ಯಕ್ಕಾಗಿ ಮಾರ್ಗದರ್ಶನ ಮಾಡುವುದರ ಜೊತೆಗೆ ಅನಾರೋಗ್ಯದಲ್ಲಿದ್ದಾಗ ಯಾವ ವಿಧಾನ ಅನುಸರಿಸಬೇಕು ಎಂದು  ತಿಳಿಸುತ್ತದೆ. ಇದು ಯುಕ್ತಿಯ ಧರ್ಮವಾಗಿದ್ದು ಪವಿತ್ರ ಕುರ್‍ಆನ್ ಯುಕ್ತಿಯಿಂದ ತುಂಬಿಕೊಂಡಿದ್ದು ಅಲ್ಲಾಹನ ಅಪಾರ ಅನುಗ್ರಹವಾಗಿದೆ.
ಆತನ ಸೀಮಾತೀತವಾದ ದಯೆ, ಮಾರ್ಗದರ್ಶನವು ಮನುಷ್ಯ ಜೀವನದ ಎಲ್ಲ ರಂಗಗಳಲ್ಲಿ, ಆಧ್ಯಾತ್ಮಿಕ, ಭಾವನಾತ್ಮಕ ಮತ್ತು ಭೌತಿಕ ಕ್ಷೇತ್ರಗಳಲ್ಲಿ ಪರಿಪೂರ್ಣವಾಗಿ ನೀಡಿರುತ್ತದೆ.

“ಮತ್ತು ನಾನು (ಅಲ್ಲಾಹ್) ಮನುಷ್ಯರನ್ನು ಹಾಗೂ ಜಿನ್‍ಗಳನ್ನು ಸೃಷ್ಟಿಸಿರುವುದು ಕೇವಲ ನನ್ನ ದಾಸ್ಯರಾಧನೆಗೆ ಮಾತ್ರ.” (ಪವಿತ್ರ ಕುರ್‍ಆನ್)

ಇಸ್ಲಾಮಿನ ತಿಳುವಳಿಕೆಯು ಜೀವನದ ಪ್ರತಿಯೊಂದು ಭಾಗದಲ್ಲಿ ಆವರಿಸಿದೆ. “ನಿದ್ರೆ, ಪ್ರಾರ್ಥನೆ, ಕಾಯಕದಲ್ಲಿ ತೊಡಗುವುದು ಕೂಡ ಪ್ರಾರ್ಥನೆ ಎಂದು ಸಾರುತ್ತದೆ.”

ಯಾರು ಪ್ರಾಮಾಣಿಕವಾಗಿ ತನ್ನನ್ನು ಅಲ್ಲಾಹನಿಗೆ ಸಮರ್ಪಿಸುತ್ತಾನೋ ಮತ್ತು ಆತನ ಅಪಾರ ಅನುಗ್ರಹಗಳ ಬಗ್ಗೆ ಧನ್ಯತಾಭಾವ ಹೊಂದಿರುತ್ತಾನೋ, ಖಂಡಿತವಾಗಿ ಆತನ ಬದುಕು ಬದಲಾವಣೆಯಾಗುತ್ತದೆ. ಪ್ರವಾದಿ(ಸ) ವಿವರಿಸುತ್ತಾರೆ- ಯಾವುದೇ ಪರಿಸ್ಥಿತಿಯಲ್ಲಿ ನಾವು ಅಲ್ಲಾಹನಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ಅದು ಉತ್ತಮವಾಗಿರಲಿ ಅಥವಾ ಕೆಟ್ಟದ್ದಾಗಿರಲಿ. ಒಬ್ಬ ಸತ್ಯವಿಶ್ವಾಸಿಯು ಎಲ್ಲ ಪರಿಸ್ಥಿತಿಗಳಲ್ಲಿ ದೇವನ ಯುಕ್ತಿ ಅಡಗಿದೆ ಎಂದು ಭಾವಿಸುತ್ತಾನೆ.

“ಸತ್ಯವಿಶ್ವಾಸಿಯ ವ್ಯವಹಾರ ಬಹಳ ಸ್ವಾರಸ್ಯಕರವಾಗಿದೆ. ಎಲ್ಲವೂಗಳಲ್ಲಿ ಆತನಿಗೆ ಲಾಭವೇ ಕಾದಿದೆ. ಅಲ್ಲಾಹನು ಆತನಿಗೆ ಸುಖವನ್ನು ಕೊಟ್ಟಾಗ ಅವನು ಕೃತಜ್ಞನಾಗಿರುತ್ತಾನೆ. ಅದು ಅವನಿಗೆ  ಒಳ್ಳೆಯದಾಗಿದೆ. ಆತನಿಗೆ ದುಃಖ ಕಠಿಣತೆ ಆವರಿಸಿದಾಗ ಅದನ್ನು ಆತ ಸಹನೆ ವಹಿಸುತ್ತಾನೆ, ಅದು ಅವನಿಗೆ ಒಳ್ಳೆಯದಾಗಿದೆ.” (ಮುಸ್ಲಿಮ್)

ಇಹಲೋಕದ ಜೀವನ ಶಾಶ್ವತವಲ್ಲ. ಪ್ರತಿಯೊಬ್ಬ ಮನುಷ್ಯ ವಿವಿಧ ಹಂತಗಳಲ್ಲಿ ವಿವಿಧ ರೀತಿಯಲ್ಲಿ ಪರೀಕ್ಷೆಗೊಳಪಡುತ್ತಾನೆ. ಕಷ್ಟ ಸುಖಗಳು ಒಂದು ಪುಸ್ತಕದ ಪುಟಗಳಂತೆ ಬಂದಾದ ಮೇಲೆ ಆತನ  ಜೀವನದಲ್ಲಿ ಬರುತ್ತದೆ. ಜೀವನ ಸುಖಕರ, ಆರೋಗ್ಯಕರ ಘಳಿಗೆಗಳು ಗತಿಸಿ, ಕಷ್ಟ, ರೋಗಬಾಧೆ ಅವನನ್ನು ಆವರಿಸುತ್ತಿದೆ. ಪ್ರತಿಯೊಂದು ಕಷ್ಟದ ಘಳಿಗೆಯಲ್ಲೂ ಸತ್ಯವಿಶ್ವಾಸಿಯು ತನ್ನ ಪಾಪಗಳು ದೂರವಾಗುವುದನ್ನು ಕಾಣುತ್ತಾನೆ.

“ಒಬ್ಬ ಮುಸ್ಲಿಮನಿಗೆ ಯಾವಾಗಲಾದರೂ ರೋಗ, ಕಷ್ಟ, ಇನ್ನಿತರ ವಿಷಯಗಳಿಂದ ಬಾಧಿತನಾದರೆ ಗಿಡದ ಎಲೆಗಳು ಉದುರುವ ಹಾಗೆ ಅಲ್ಲಾಹನು ಆತನ ಪಾಪಗಳನ್ನು ದೂರ ಮಾಡುತ್ತಾನೆ.”  (ಮುಸ್ಲಿಮ್, ಬುಖಾರಿ)

ಅದಕ್ಕಾಗಿ ನಾವು ಕೃತಜ್ಞರಾಗಲು `ಇಸ್ಲಾಮ್’ ತಿಳಿಸುತ್ತದೆ. ಮತ್ತು ಕಷ್ಟಗಳ ಸುರಿಮಳೆಗರೆದಾಗ ತಾಳ್ಮೆ ಕಳೆದುಕೊಳ್ಳದೇ ಎದುರಿಸಬೇಕು ಎಂದು ಮಾರ್ಗದರ್ಶನ ಮಾಡುತ್ತದೆ. ತಾಳ್ಮೆ ವಹಿಸದೇ ಕೇವಲ ದೂರುವುದೇ ನಮ್ಮ ಕಾಯಕವಾದರೆ ಕಷ್ಟ, ನೋವುಗಳ ಹೊರತು ನಮಗೆ ಏನೂ ಸಿಗುವುದಿಲ್ಲ. ನಮ್ಮ ದೇಹ ಮತ್ತು ಮನಸ್ಸುಗಳು ದೇವನ ವಿಶ್ವಸ್ಥ ನಿಧಿಗಳಾಗಿದೆ. ಇದಕ್ಕಾಗಿ ನಾವು ನಾಳೆ ಉತ್ತರಿಸಬೇಕಾಗಿದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …