Home / ವಾರ್ತೆಗಳು / 12 ವರ್ಷದ ಫೆಲೆಸ್ತೀನ್ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿದ ಇಸ್ರೇಲಿನ ಸೇನೆ

12 ವರ್ಷದ ಫೆಲೆಸ್ತೀನ್ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿದ ಇಸ್ರೇಲಿನ ಸೇನೆ

ಜೆರುಸಲೇಂ, ನ.25: ಇಸ್ರೇಲಿನ ಸೈನ್ಯ ಫೆಲಸ್ತೀನಿ ಬಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಸುತ್ತಾಡಿಸಿ ಕ್ರೌರ್ಯ ಮೆರೆದಿದೆ. ಇಸ್ರೇಲಿನ ಸೈನಿಕರಲ್ಲಿ ಮಕ್ಕಳ ಕುರಿತು ಕೂಡ ಕರುಣೆಯಿಲ್ಲ. ವೆಸ್ಟ್ ಬ್ಯಾಂಕ್‍ನ ಸಮೀಪದ ಅಬೂಜಲ್ಸ್‍ನಿಂದ 12 ವರ್ಷದ ಅಬ್ದುರ್ರಝಾಕ್ ಇದ್ರಿಸ್‍ನನ್ನು ಇಸ್ರೇಲ್ ಸೈನಿಕರು ವಶಕ್ಕೆ ಪಡೆದು ಅವನ ಕಣ್ಣಿಗೆ ಬಟ್ಟೆ ಕಟ್ಟಿದರು. ಹೆಬ್ರಾನ್ ನಗರಾದ್ಯಂತ ನಡೆಸಿದರು. ಅವನ ಸುತ್ತಮುತ್ತ ಆರು ಸೈನಿಕರಿದ್ದರು. ನಡೆದಾಡುತ್ತಿರುವ ದಾರಿಯಲ್ಲಿ ವಿರೋಧಿಸಿದ ಫೆಲಸ್ತೀನಿಗಳ ಮೇಲೆ ಸೈನಿಕರು ಗ್ರೆನೇಡ್‍ಗಳನ್ನು ಎಸೆಯುತ್ತಿರುವುದು ಕೂಡ ವೀಡಿಯೊದಲ್ಲಿದೆ.

ತನ್ನ ಮನೆಯಿಂದ ಒಂದು ಕಿಲೊಮೀಟರ್ ದೂರದ ಸೈನಿಕ ಪೋಸ್ಟ್ ಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಂದೆ ಅವನನ್ನು ಬಿಟ್ಟು ಬಿಡುವಂತೆ ಮನವಿ ಮಾಡಿದರೂ ಕೇಳದೆ ತಂದೆಗೆ ಹೊಡೆದಿದ್ದಾರೆ. ಅವನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಸೇನೆ ತಂದೆಗೆ ಹೇಳಿದ್ದಾರೆ. ಬಾಲಕನಲ್ಲಿ ಕಲ್ಲೆಸೆಯುವವರ ವಿವರ ಪಡೆಯುವುದು ಸೇನೆಯ ಉದ್ದೇಶ ಎನ್ನಲಾಗಿದೆ. ನಂತರ ಅವನನ್ನು ಸೈನಿಕರು ಬಿಡುಗೊಳಿಸಿದ್ದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …