Home / ವಾರ್ತೆಗಳು / ಮಸೀದಿಗಳ ಧ್ವನಿ ವರ್ಧಕ ನಿಯಂತ್ರಿಸುವುದು ಉತ್ತಮ: ಸಮಸ್ತ ಅಧ್ಯಕ್ಷ

ಮಸೀದಿಗಳ ಧ್ವನಿ ವರ್ಧಕ ನಿಯಂತ್ರಿಸುವುದು ಉತ್ತಮ: ಸಮಸ್ತ ಅಧ್ಯಕ್ಷ

ಕೋಝಿಕ್ಕೋಡ್, ನ.21: ಮಸೀದಿಗಳ ಧ್ವನಿ ವರ್ಧಕವನ್ನು ಮಸೀದಿಯೊಳಗೆ ನಿಯಂತ್ರಿಸಿಡುವುದು ಉತ್ತಮ ಎಂದು ಸಮಸ್ತ ಅಧ್ಯಕ್ಷ ಮುಹಮ್ಮದ್ ಜೀಫ್ರಿ ತಂಙಳ್ ಹೇಳಿದರು. ಅದನ್ನು ಅದಾನ್ ಮತ್ತು ಕಡ್ಡಾಯವಾಗಿ ಕೇಳಿಸಬೇಕಾಗಿರುವುದಕ್ಕೆ ಮಾತ್ರ ಉಪಯೋಗಿಸುವುದು ಉತ್ತಮ, ಇತರರಿಗೆ ಕಷ್ಟ ಇದ್ದರೆ ಧ್ವನಿ ಕಡಿಮೆ ಮಾಡಿ ಮಸೀದಿಯೊಳಗೆ ಮಾತ್ರ ಮಿತಗೊಳಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದನ್ನು ಅದಾನಿಗೆ ಮಾತ್ರ ಅಲ್ಲ ಬೇರೆ ವಿಷಯಕ್ಕೂ ಬಳಸಲಾಗುತ್ತಿದೆ. ಆದರೆ ಅದು ಮುಖ್ಯವಾಗಿರುವುದು ಅದಾನ್‍ಗೆ ಮಾತ್ರ . ಹಿಂದೆಲ್ಲ ಮೈಕ್‍ನ ದನಿಯನ್ನು ಕಿರುಕುಳ ಎಂದು ಜನರು ಭಾವಿಸಿರಲಿಲ್ಲ. ಅಂದಿನದು ಇಂದಿಗಿಂತ ಉತ್ತಮ ಕಾಲಘಟ್ಟವಾಗಿತ್ತು. ಆದರೆ ಇಂದು ಸುನ್ನಿಗಳಾದ ಜನರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇತರರಿಗೆ ಕಿರುಕುಳ ನೀಡಬಾರದು ಇಸ್ಲಾಮಿನ ನಿಯಮ. ಆದ್ದರಿಂದ ಇತರರಿಗೆ ತೊಂದರೆಯಾಗುವಂತ ಒಂದು ಮಾತು ವರ್ತನೆ ನಮ್ಮಿಂದಾಗಬಾರದು. ಇತರರಿಗೆ ತೊಂದರೆ ಇದ್ದರೆ ಅದಾನ್ ಹೊರತು ನಿರ್ಬಂದವಾಗಿ ಕೇಳಿಸಬಾರದಂತಹ ವಿಷಯಗಳ ಧ್ವನಿ ಕಡಿಮೆ ಮಾಡಿ ಮಸೀದಿಯೊಳಗೆ ಮಾತ್ರ ಕೇಳುವಂತೆ ನಿಯಂತ್ರಿಸುವುದು ಉತ್ತಮ. ಎಲ್ಲ ಮೊಹಲ್ಲಾಗಳಲ್ಲಿ ಇದನ್ನು ನಿಯಂತ್ರಿಸಿದರೆ ಸಮಸ್ಯೆ ಇರಲಾರದು ಎಂದು ಜಿಫ್ರಿ ತಂಙಳ್ ಹೇಳಿದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …