Home / ವಾರ್ತೆಗಳು / ವಿಧವೆಯ ಮೂರು ತಿಂಗಳ ಮನೆಬಾಡಿಗೆ ತೀರಿಸಿದ ಜಮಾಅತೆ ಇಸ್ಲಾಮೀ ಹಿಂದ್

ವಿಧವೆಯ ಮೂರು ತಿಂಗಳ ಮನೆಬಾಡಿಗೆ ತೀರಿಸಿದ ಜಮಾಅತೆ ಇಸ್ಲಾಮೀ ಹಿಂದ್

ಮಂಗಳೂರು: ಜೂ.26. ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿ ವಾಸವಿರುವ 30 ರ ಹರೆಯದ ವಿಧವೆಯೋರ್ವರು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದು ಕೆಲಸ ಕಳಕೊಂಡು ಮನೆಯಲ್ಲೇ ಉಳಿದಿದ್ದರು.ಪರಿಣಾಮ ಮೂರು ತಿಂಗಳ ಮನೆ ಬಾಡಿಗೆ ಬಾಕಿ ಉಳಿದಿತ್ತು.

ಮಹಿಳೆಯ ಅಸಹಾಯಕತೆಯ ಬಗ್ಗೆ ತಿಳಿದ ತೊಕ್ಕೊಟ್ಟಿನ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕವು ಮಹಿಳೆಯು ಉಳಿದಿರುವ ಬಾಡಿಗೆ ಮನೆ ಮಾಲಕಿಗೆ ಬಾಕಿ ಉಳಿದಿರುವ ಮೂರು ತಿಂಗಳ ಬಾಡಿಗೆ ಹಣವನ್ನು ಪಾವತಿಸಿದ್ದಲ್ಲದೆ, ವಿಧವೆಯ ಅಂಗಾಂಗ ವೈಫಲ್ಯದ ಚಿಕಿತ್ಸೆಯ ಸಂಪೂರ್ಣ ಜವಬ್ದಾರಿಯನ್ನು ಹೊತ್ತು ಮಾನವೀಯತೆ ಮೆರೆದಿದೆ.

ಜಮಾಅತೆ ಇಸ್ಲಾಮೀ ಹಿಂದ್ ನ ಈ ಮಾನವೀ ಕಾರ್ಯವನ್ನು ಸ್ಥಳೀಯರು ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರಮೇಶ್ ಕೊಲ್ಯ ಅವರು ಪ್ರಶಂಸಿದ್ದಾರೆ.ಒಂಟಿಯಾಗಿರುವ ಮಹಿಳೆಗೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಸಮಾಜದ ಸಹೃದಯಿ ದಾನಿ,ಸಂಘಟನೆಗಳು ಸಹಕಾರ ನೀಡುವಂತೆ ಕೋರಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕದ ಅಧ್ಯಕ್ಷರಾದ ಶರೀಫ್ ಅಹ್ಮದ್, ಸದಸ್ಯರಾದ ಅಬ್ದುಲ್ ರವೂಪ್,ಎಫ್.ಐ.ಟಿ.ಯು ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಜತೆಗಿದ್ದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …