Home / ಲೇಖನಗಳು / ಜುಮುಃ ಮಿಂಬರ್‍ ಗಳು: ವಿದ್ವಾಂಸರನ್ನು ನೇರ ಅರಿಯುವ ಅವಕಾಶ

ಜುಮುಃ ಮಿಂಬರ್‍ ಗಳು: ವಿದ್ವಾಂಸರನ್ನು ನೇರ ಅರಿಯುವ ಅವಕಾಶ

ಈ ಸೌಭಾಗ್ಯ ಮುಸ್ಲಿಮ್ ಸಮುದಾಯಕ್ಕಲ್ಲದೆ ಬೇರಾರಿಗೆ ಸಿಗುವುದಿಲ್ಲ. ಜುಮುಃ ಕುತುಬ ವರ್ಷದಲ್ಲಿ ಹಲವು ವಿದ್ವಾಂಸರನ್ನು ಅರಿಯಲು, ವಿಚಾರಧಾರೆ ತಿಳಿಯಲು, ಧರ್ಮ ಕಲಿಯಲು ಸಿಗುವ ಅವಕಾಶವಾಗಿದೆ. ವರ್ಷದಲ್ಲಿ ಐವತ್ತಕ್ಕೂ ಹೆಚ್ಚು ಸಲ ಮುಸ್ಲಿಮರಾದ ಪ್ರತಿಯೊಬ್ಬ ವ್ಯಕ್ತಿಗೆ ವಿದ್ವಾಂಸರ ಸಾನಿಧ್ಯ ಮತ್ತು ಸಾಮೀಪ್ಯವನ್ನು ಅನುಭವಿಸಬಹುದಾಗಿದೆ. ಮುಸ್ಲಿಂ ಸಮುದಾಯದ ಒಳಿತು, ಸಂಸ್ಕರಣೆ, ಯಶಸ್ಸಿಗೆ ಇದು ಬಹು ದೊಡ್ಡ ಮಾರ್ಗದರ್ಶಿ.

ಈಗಿನ ಇಸ್ಲಾಮಿನ ಅವಸ್ಥೆ ಏನನ್ನು ಹೇಳುತ್ತಿದೆ. ಹೆಚ್ಚು ಅಧ್ಯಯನ ಚಿಂತನೆ ಅಗತ್ಯವಿರುವಲ್ಲಿ ಏನಾಗುತ್ತಿದೆ. ಮೌರಿತಾನಿಯದಿಂದ ಇಂಡೊನೇಷ್ಯದವರೆಗೆ ಹೆಚ್ಚು ಇಸ್ಲಾಮಿ ದೇಶಗಳ ಕುತುಬ ಫೋಲು ಮಾಡುವ ವಿಷಯವಾಗುತ್ತಿದೆ. ಅಲ್ಲೆಲ್ಲ ಉದ್ದೇಶಿತವೋ ಅಲ್ಲವೋ ಪ್ರಯೋಜನವಾಗುವ ಸರಿಯಾದ ರೀತಿಯಲ್ಲಿ ಕುತುಬಾಗಳಾಗುತ್ತಿಲ್ಲ. ಎರಡು ನಿಬಂಧನೆಗಳು ಕುತುಬಕ್ಕಿವೆ. ಒಂದು ಒಳ್ಳೆಯ ಉದ್ದೇಶ ಅಥವಾ ಇಖ್ಲಾಸ್. ಎರಡು, ಶರೀಅತ್‍ನೊಂದಿಗೆ ಹೊಂದಿಕೊಂಡು ನಿರ್ವಹಿಸುವುದು. ಇವರೆಡರಲ್ಲಿ ಒಂದಕ್ಕೂ ಭಂಗವಾದರೆ ಕುತುಬಾ ಅಪರಿಪೂರ್ಣವಾಗುತ್ತದೆ. ಅಲ್ಲಾಹನ ಬಳಿ ಅಸ್ವೀಕಾರಾರ್ಹವೂ ಆಗಿಬಿಡಬಹುದು.

ಜುಮುಃ ಕುತುಬ ಹೆಚ್ಚು ಮಂದಿಗೆ ಪ್ರಯೋಜನ ಇರುವಂತಹದಾಗುವುದಿಲ್ಲ ಎಂಬುದು ವಾಸ್ತವವವೇ. ಟಿವಿ, ಪತ್ರಿಕೆಯಲ್ಲಿ ದೊಡ್ಡ ಜಾಹೀರಾತು ಕೊಡದೆ, ಪ್ರೋತ್ಸಾಹ ಧನವಾಗಿ ಹಣವನ್ನು ನೀಡದೆ ಜನರು ವಾರದಲ್ಲೊಮ್ಮೆ ಜುಮುಃಕ್ಕೆ ಸೇರುತ್ತಾರೆ ಮಸೀದಿಗಳಲ್ಲಿ ಇಂತಹ ಸಂದರ್ಭದಲ್ಲಿ ಸಮುದಾಯದ ಸಂಸ್ಕರಣೆಗೆ ಆದ್ಯತೆ ಕೊಡಬೇಕಾಗಿದೆ. ಒಳ್ಳೆಯ ನಿರೀಕ್ಷೆಯಿಂದ ಜನರು ಮಸೀದಿಯಿಂದ ಹೊರಗೆ ಕಾಲಿಡುವಂತಾಗಬೇಕು. ಅಂತಹ ಉಪದೇಶಗಳು ಕುತುಬಾಗಳಿಂದ ಜನರಿಗೆ ತಲುಪಬೇಕು. ಇದು ಕುತುಬ ನಿರ್ವಹಿಸುವವರ ಹೊಣೆಗಾರಿಕೆಯಾಗಿದೆ. ಕುತುಬಾಕ್ಕೆ ಬಂದಂತೆ ತಿರುಗಿ ಹೋಗುವುದಾದರೆ ಮಿಂಬರ್ ಸಂಸ್ಕರಣೆಯ ಕೇಂದ್ರ ಬಿಂದು ಆಗುವುದು ಸಾಧ್ಯವಿಲ್ಲ. ಹೀಗಾಗುವುದಿದ್ದರೆ ಲಾಬವಿಲ್ಲ.ನಷ್ಟವೇ.

ದೊಡ್ಡ ಬೋಧಕ, ಕತೀಬ್ ಶೇಖ್ ಅಲಿ ತಂತಾವಿ ಹೀಗೆ ಹೇಳುತ್ತಾರೆ. ಒಮ್ಮೆ ಒಂದು ವಿಭಾಗದ ವಿದ್ವಾಂಸರು ಅವರ ನಾಯಕನನ್ನು ಭೇಟಿ ಮಾಡಿದರು. ನೈತಿಕತೆ ನಶಿಸುವುದರ ಕುರಿತು, ಪ್ರಮಾದ ವ್ಯಾಪಿಸುವುದರ ಕುರಿತು ದೂರಿದರು. ಆಗ ನಾಯಕ ಅವರಲ್ಲಿ ಹೇಳಿದರು. ನಿಮ್ಮ ವಿಷಯದಲ್ಲಿ ನನಗೆ ಅಚ್ಚರಿಯಿದೆ. ಎಲ್ಲ ಸಮಸ್ಯೆ ಪರಿಹರಿಸುವ ಶಕ್ತಿಯಿದ್ದೂ ನೀವು ನನ್ನ ಬಳಿ ಬಂದಿರುವಿರಿ. ವಿದ್ವಾಂಸರು ತಪ್ಪುಗಳು ವ್ಯಾಪಿಸದಂತೆ ಕುತುಬಾದ ಮೂಲಕ ಎಚ್ಚರಿಸಬೇಕೆಂದು ಆ ನೇತಾರ ತನ್ನ ವಿಭಾಗದ ವಿದ್ವಾಂಸರಿಗೆ ಸಲಹೆ ನೀಡಿದರು ಎಂದರ್ಥ. ಅಂದರೆ ಮಿಂಬರ್‍ ಗಳು ನಮ್ಮಲ್ಲಿ ಅದರ ದೌತ್ಯ ನಿರ್ವಹಣೆಗೆ ಬಳಕೆಯಾಗಬೇಕು.

ಕತೀಬ್ ಹೆಚ್ಚು ಅಧ್ಯಯನಶೀಲರಾಗಬೇಕು. ಸಮಕಾಲಿಕ ವಿಷಯಗಳಲ್ಲಿ ಸಲಹೆ ಸೂಚನೆ ಉಪದೇಶ ನೀಡಬೇಕು. ಒಟ್ಟಿನಲ್ಲಿ ಅವರಿಗೂ ತರಬೇತಿ ಬೇಕು. ಕುತುಬ ನಿರ್ವಹಿಸಲು ಸಮರ್ಥರಾಗಿಸಬೇಕು. ಆಧುನಿಕ ಮುಸ್ಲಿಮ್ ಸಮಾಜ ಎದುರಿಸುತ್ತಿರುವ ಪ್ರಧಾನ ಸಮಸ್ಯೆ ಕಾಲದೊಂದಿಗೆ ಸಂವಾದಿಸುವ ಕತೀಬ್‍ಗಳ ಕೊರೆತೆಯಿದೆ. ಇಸ್ಲಾಮೀ ಜಗತ್ತಿನಲ್ಲಿ ನಡೆಯುವ ಇತ್ತೀಚೆಗಿನ ಬೆಳವಣಿಗೆಗಳು ನೋವಿನದ್ದು. ಒಳ್ಳೆಯ ಉಪದೇಶದೊಂದಿಗೆ ಕತೀಬ್ ಜನರನ್ನು ಅಕರ್ಷಿಸಿದರೆ ಅವರ ಒಳ್ಳೆಯ ವಿಚಾರಗಳು ಜನರ ಮನಮುಟ್ಟಿ ಸಮಾಜದಲ್ಲಿ ಬದಲಾವಣೆಗೆ, ಸಂಸ್ಕರಣೆಗೆ ನಾಂದಿಯಾಗುತ್ತದೆ. ಸಮುದಾಯ ಶುದ್ಧೀಕರಣವೂ ನಡೆಯುತ್ತದೆ. ಈಮಾನ್‍ನಲ್ಲಿ ಹೆಚ್ಚಳವಾಗುತ್ತದೆ. ಬದುಕಿಗೆ ಶಿಸ್ತು ಬರುತ್ತದೆ. ಶಾಂತ ಮನಸ್ಸು ಅವರಲ್ಲುಂಟಾದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಬಹುದು.

ಹೀಗಾಗಿ ಕುತುಬಗಳು ಸಮಸ್ಯೆಯ ಪರಿಹಾರ ಮಾತ್ರವಲ್ಲ, ಸಮಾಜದ ಶಾಂತಿಗಾಗಿಯೂ ಇರಬೇಕು. ಮಿಂಬರ್‍ ಗಳೇ ಬಹಳಷ್ಟು ಸಲ ಬದಲಾವಣೆಗೆ ಕಾರಣವಾಗಿದ್ದು ಇದೆ. ಜನರ ಬದಲಾವಣೆಗೆ ಉಪದೇಶಕ್ಕಿಂತ ದೊಡ್ಡ ಅಸ್ತ್ರ ಬೇರಿಲ್ಲ. ನೈತಿಕತೆ, ಧಾರ್ಮಿಕತೆ, ಸಚ್ಚಾರಿತ್ರ್ಯ, ಶುದ್ಧ ವ್ಯವಹಾರಗಳಿಗೆ ಅಲ್ಲಿಂದ ಸಿಗುವ ಪ್ರೇರಣೆ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …