Home / ವಾರ್ತೆಗಳು / ಇಸ್ಲಾಮ್ ಸ್ವೀಕರಿಸಿದ ಅಮೆರಿಕಾದ ರಾಪರ್, ಸಂಗೀತಗಾರ ಲಿಲ್ ಜೋನ್

ಇಸ್ಲಾಮ್ ಸ್ವೀಕರಿಸಿದ ಅಮೆರಿಕಾದ ರಾಪರ್, ಸಂಗೀತಗಾರ ಲಿಲ್ ಜೋನ್

ಅಮೆರಿಕಾದ ರಾಪರ್ ಮತ್ತು ಸಂಗೀತಗಾರ ಲಿಲ್ ಜೋನ್ ಇಸ್ಲಾಂ ಸ್ವೀಕರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಯೆಂಜಲಿಸ್ ನಲ್ಲಿರುವ ಕಿಂಗ್ ಪಹದ್ ಮಸೀದಿಯಲ್ಲಿ ಕಳೆದ ಶುಕ್ರವಾರ ಜುಮಾ ನಮಾಜ್ ನ ಬಳಿಕ ಇವರು ಇಸ್ಲಾಂ ಸ್ವೀಕರಿಸಿದ್ದಾರೆ. ಮಸೀದಿಯ ಇಮಾಮರು ಇವರಿಗೆ ಸತ್ಯ ವಚನ ಅಥವಾ ಕಲೀಮ ಶಹಾದ ಹೇಳಿಕೊಟ್ಟಿದ್ದಾರೆ.

ಲಿಲ್ ಜೋನ್ ಎಂದೇ ಜಾಗತಿಕವಾಗಿ ಪ್ರಸಿದ್ಧವಾಗಿರುವ ಜೋನಾತನ್ ಎಚ್ ಸ್ಮಿತ್ ಅವರು ಹಿಪ್ ಹೋಪ್ ಸಂಗೀತಕ್ಕೆ ವಿಶ್ವ ಪ್ರಸಿದ್ಧರು. ಗ್ರಾಮಿ ಪುರಸ್ಕಾರದ ಸಹಿತ ಹತ್ತು ಹಲವು ಸಂಗೀತ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.

1972 ರಲ್ಲಿ ಜಾರ್ಜಿಯಾದಲ್ಲಿ ಹುಟ್ಟಿದ ಇವರು 2000ನೇ ಇಸವಿಯಲ್ಲಿ ಪ್ರಸಿದ್ಧಿಗೆ ಬಂದರು. ವಿಶೇಷವಾಗಿ ಹಿಪ್ ಹೋಪ್ ಸಂಗೀತದ ಮೂಲಕ ಇವರು ಜಾಗತಿಕ ಜನರ ಗಮನ ಸೆಳೆದರು. ಹಿಪ್ ಹಾಪ್ ಸಂಗೀತದ ಜನಕರಲ್ಲಿ ಒಬ್ಬರು ಎಂದು ಕೂಡ ಇವರು ಗುರುತಿಸಿಕೊಂಡಿದ್ದಾರೆ.

ಬಿಲ್ ಬೋರ್ಡ್ ಮೆಗಾಸಿನ್ ನ ಹಾಟ್ ಹಂಡ್ರೆಡ್ ಪಟ್ಟಿಯಲ್ಲಿ ಜಾಗ ಪಡೆದ ಹಲವರಲ್ಲಿ ಇವರು ಒಬ್ಬರು. ಸಾಲ್ಟ್ ಶೇಯ್ ಕರ್, ಸಿಲೋನ್, ಗೆಟ್ ಲೋ, ಸ್ನಾಪ್ ಯೋ ಫಿಂಗರ್ಸ್, ಡ್ಯಾಮ್ ನ್, ಫ್ರೀಕ್ ಏ ಲೀಕ್ ಆಲ್ಬಮ್ಗಳು ಬಹಳ ಪ್ರಸಿದ್ಧವಾಗಿವೆ. ಸಂಗೀತದ ಹೊರತಾಗಿ ಅನೇಕಾರು ಟೆಲಿವಿಷನ್ ಶೋಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.

ಇವರ ತಂದೆ ಮಾಜಿ ಯೋಧರಾಗಿದ್ದು ತಾಯಿ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಮೂವರು ಸಹೋದರರು ಕೂಡ ಯೋಧರಾಗಿದ್ದಾರೆ.

ಈ ಬಾರಿಯ ರಮಝಾನ್ ತಿಂಗಳ ಆರಂಭದಲ್ಲಿ ಅಮೆರಿಕದ ಆಕ್ಟಿವಿಸ್ಟ್ ಮತ್ತು ಬರಹಗಾರರಾದ ಜೆಫ್ರಿಜಾನ್ ಕಿಂಗ್ ಅವರು ಇಸ್ಲಾಂ ಸ್ವೀಕರಿಸಿದ್ದರು.

SHARE THIS POST VIA

About editor

Check Also

ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ರಿಯಾದ್ : ಜುಲೈ 1ರಿಂದ 23ರ ತನಕ ದೆಹಲಿ ಮತ್ತು ಕೇರಳದಲ್ಲಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಅಕಾಡೆಮಿಯು …