Home / ವಾರ್ತೆಗಳು / ಅಬೂಧಾಬಿಯಲ್ಲಿ ಮಂದಿರ: ಪಂಚಾಂಗದ ಕೆಲಸ ಆರಂಭ

ಅಬೂಧಾಬಿಯಲ್ಲಿ ಮಂದಿರ: ಪಂಚಾಂಗದ ಕೆಲಸ ಆರಂಭ

ಅಬುಧಾಬಿ, ಫೆ. 14: ಧಾರ್ಮಿಕ ಸೌಹಾರ್ದದ ಸಂದೇಶದೊಂದಿಗೆ ಯುಎಇಯ ಅಬೂ ಮುರೈಖ ಬಾಪ್ಸ್ ನಲ್ಲಿ ಹಿಂದೂ ಮಂದಿರದ ಪಂಚಾಂಗ ಕೆಲಸ ಆರಂಭವಾಯಿತು. ಅಬುಧಾಬಿ ಸರಕಾರ ಕೊಟ್ಟ ಸ್ಥಳದಲ್ಲಿ ಸ್ವಾಮಿ ನಾರಾಯಣ ಸಂಸ್ಥೆ ಬಾಪ್ಸ್ ಮಂದಿರ ಸಮಿತಿ ಅಧೀನದಲ್ಲಿ ಹಿಂದೂ ಮಂದಿರ ಕಟ್ಟಿಸಲಾಗುತ್ತಿದೆ.

ಅಬೂಧಾಬಿ ಯುವರಾಜ, ಯುಎಇ ಸೇನೆಯ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಮಂದಿರ ಕಟ್ಟಲು ಸ್ಥಳ ನೀಡಿದ್ದಾರೆ.

ದುಬೈ ಹೈವೆ ಸಮೀಪ ಅಬೂ ಮುರೈಖದ ನಿರ್ದಿಷ್ಟ ಸ್ಥಳದಲ್ಲಿ ಪ್ರಮುಖ ಸ್ವಾಮಿ ಮಹಂತ್ ಮಹಾರಾಜರ ನೇತೃತ್ವದಲ್ಲಿ ಶಿಲಾನ್ಯಾಸ ಪೂಜೆ ನಡೆದಿದ್ದು, ಪಂಚಾಂಗ ಮೇಲೆದ್ದಿದೆ. ಕಾರ್ಯಕ್ರಮದಲ್ಲಿ ಭಾರತದ ಅಬುಧಾಬಿ ರಾಯಭಾರಿ ಪವನ್ ಕಪೂರ್ ಮುಖ್ಯ ಅತಿಥಿಯಾಗಿದ್ದರು. ಅಬುಧಾಬಿ ಕಾನ್ಸುಲ್ ಜನರಲ್ ವಿಫುಲ್, ಅಬುಧಾಬಿ ಸಾಮಾಜಿಕ ವಿಕಾಸ ಅಥಾರಿಟಿ ಸಿಇಒ ಡಾ. ಒಮರ್ ಅಲ್ ಮುತನ್ನ, ಸೀನಿಯರ್ ಬಾಪ್ಸ್ ಸಾಧೂಸ್ ಸ್ವಾಮಿ ಅರ್ಚಕ ಅಕ್ಷಮಿನಿ ದಾಸ್ ಮೊದಲಾದವರು ಕಾರ್ಯಕ್ರಮದಲ್ಲಿದ್ದರು.

ಕಲ್ಲಿನ ಪ್ರತಿಮೆಗಳನ್ನು ಮಂದಿರದಲ್ಲಿ ಸ್ಥಾಪಿಸಲಾಗುವುದು. ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಟುವಟಿಕೆಯ ಕಟ್ಟಡಗಳು ಮಂದಿರ ಭಾಗವಾಗಿ ನಿರ್ಮಾಣವಾಗಲಿದೆ. ಸಂದರ್ಶಕ ಕೇಂದ್ರ, ಪ್ರಾರ್ಥನಾಲಯಗಳು, ಕ್ರೀಡಾ ಕೇಂದ್ರಗಳು, ಉದ್ಯಾನ, ಜಲಾಶಯಗಳು, ಫುಡ್ ಕೋರ್ಟ್ , ಗ್ರಂಥಶಾಲೆ, ಗಿಫ್ಟ್ ಶಾಪ್‍ಗಳ ಸೌಕರ್ಯವೂ ಮಂದಿರದ ಸಮುಚ್ಚಯದಲ್ಲಿರಲಿವೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …