Home / ವಾರ್ತೆಗಳು / ‘ಮಸ್ಜಿದುಲ್ ಕಿಬ್ ಲತೈನ್’ ನವೀಕರಣ ಕಾರ್ಯ ಪೂರ್ಣ; ಈ ಮಸೀದಿಯ ಹಿನ್ನೆಲೆಯೇನು??

‘ಮಸ್ಜಿದುಲ್ ಕಿಬ್ ಲತೈನ್’ ನವೀಕರಣ ಕಾರ್ಯ ಪೂರ್ಣ; ಈ ಮಸೀದಿಯ ಹಿನ್ನೆಲೆಯೇನು??

ಮದೀನಾದ ಐತಿಹಾಸಿಕ ಮಸ್ಜಿದುಲ್ ಕಿಬ್ ಲತೈನ್ ನ ಜೀರ್ಣೋದ್ಧಾರ ಕಾರ್ಯ ಪೂರ್ತಿಗೊಂಡಿದೆ. ಈ ಮಸೀದಿ ತನ್ನ ಐತಿಹಾಸಿಕ ಹಿನ್ನೆಲೆಯಿಂದ ಭಾರಿ ಮಹತ್ವವನ್ನು ಪಡೆದಿದೆ.

ಕಿಬ್ ಲ ಅಥವಾ ನಮಾಜ್ ನ ದಿಕ್ಕನ್ನು ಮಸ್ಜಿದುಲ್ ಅಕ್ಸದಿಂದ ಮಕ್ಕಾದ ಕಡೆಗೆ ತಿರುಗಿಸುವ ಆದೇಶವು ಪ್ರವಾದಿಯವರಿಗೆ ಬಂದಿರುವುದು ಇದೇ ಮಸೀದಿಯಲ್ಲಾಗಿದ್ದು, ಇಲ್ಲಿ ಎರಡು ಕಿಬ್ ಲಗಳಿವೆ.

1987ರಲ್ಲಿ ದೊರೆ ಫಹದ್ ಮೊದಲ ಬಾರಿ ಇದರ ಜೀರ್ಣೋದ್ದಾರ ಕಾರ್ಯ ಮಾಡಿದ್ದರು ಮತ್ತು ಆ ಸಂದರ್ಭದಲ್ಲಿ ಕೆಲವು ಮಾರ್ಪಾಡುಗಳನ್ನು ಕೂಡ ಮಾಡಿದ್ದರು.

ಸಾಮಾನ್ಯವಾಗಿ ಯಾವುದೇ ಮಸೀದಿಯಲ್ಲಿ ಎರಡು ಕಿಬ್ ಲ ಇರುವುದಿಲ್ಲ. ಆದರೆ ಪ್ರವಾದಿಯವರು ಜೆರುಸಲೇಮ್ ನ ಮಸ್ಜಿದುಲ್ ಅಕ್ಸದ ಕಡೆಗೆ ನಮಾಜ್ ಮಾಡುತ್ತಿದ್ದಾಗ ಅಲ್ಲಾಹನಿಂದ ಅವರಿಗೆ ಕಿಬ್ ಲ ಬದಲಾಯಿಸುವ ಆದೇಶ ಬಂತು ಎಂದು ಇಸ್ಲಾಮಿ ಇತಿಹಾಸ ಹೇಳುತ್ತದೆ.

ಆದ್ದರಿಂದ ಅವರು ಮಸ್ಜಿದುಲ್ ಅಕ್ಸದ ಕಡೆಯಿಂದ ಮಕ್ಕಾದ ಮಸ್ಜಿದುಲ್ ಹರಾಮ್ ನ ಕಡೆಗೆ ತಮ್ಮ ಮುಖವನ್ನು ನಮಾಜಿನ ನಡುವೆ ತಿರುಗಿಸುತ್ತಾರೆ. ಆ ಕಾರಣಕ್ಕಾಗಿ ಈ ಮಸೀದಿಗೆ ಮಸ್ಜಿದುಲ್ ಕಿಬ್ ಲತೈನ್ ಎಂಬ ಹೆಸರಿದೆ. ಅಂದರೆ ಎರಡು ಕಿಬ್ ಲ ಇರುವ ಮಸೀದಿ ಎಂದು ಅರ್ಥ. ಇದೀಗ ಇದರ ಐತಿಹಾಸಿಕ ಮಹತ್ವವನ್ನು ಹಾಗೆಯೇ ಉಳಿಸುತ್ತಲೇ ಅದರ ಜೀರ್ಣೋದ್ಧಾರ ಕಾರ್ಯ ಮುಗಿದಿದೆ ಎಂದು ವರದಿಯಾಗಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …