Home / ಲೇಖನಗಳು / ನಿದ್ದೆಯಲ್ಲಿಯೂ ಮಾಸ್ಕ್ ಧರಿಸುವ ಸ್ಥಿತಿ – ಡಾ. ಪಿ.ಎನ್. ಸುರೇಶ್ ಕುಮಾರ್

ನಿದ್ದೆಯಲ್ಲಿಯೂ ಮಾಸ್ಕ್ ಧರಿಸುವ ಸ್ಥಿತಿ – ಡಾ. ಪಿ.ಎನ್. ಸುರೇಶ್ ಕುಮಾರ್

  • ಡಾ. ಪಿ.ಎನ್. ಸುರೇಶ್ ಕುಮಾರ್

ವಿಶ್ವವೇ ಇಂದು ಒಂದು ವೈರಸ್‍ನ ಬೆನ್ನ ಹಿಂದಿದೆ. ಜಾಗತಿಕವಾಗಿ ಆತಂಕ ಹುಟ್ಟುಹಾಕಿ ನಿಲ್ಲದೆ ಮುಂದುವರಿಯುತ್ತಲೇ ಇರುವ ಕೊರೊನಾ ಯಾನೆ ಕೋವಿಡ್ 19 ಈಗ ನಮ್ಮ ಜೀವನ ಚರ್ಯೆಯನ್ನೇ  ಬದಲಾಯಿಸುವ ರೀತಿಯಲ್ಲಿ ಬೆಳವಣಿಗೆಯಾಗುತ್ತಿದೆ. ಕ್ವಾರಂಟೀನ್, ಐಸೊಲೇಶನ್, ಸೋಶಿಯಲ್ ಡಿಸ್ಟ್ಯಾನ್ಸಿಂಗ್, ಮಾಸ್ಕ್, ಸಾನಿಸೈಟರ್ ಮುಂತಾದುವುಗಳ ಉಪಯೋಗ, ಹ್ಯಾಂಡ್ ವಾಷ್ ಜಾಗೃತಿ  ಇತ್ಯಾದಿ ಹಲವು ಉಪಾಯಗಳಿಂದ ವೈರಸ್ ವಿರುದ್ಧ ಪ್ರತಿರೋಧಕ್ಕೆ ಎಲ್ಲರೂ ಸಿದ್ಧವಾಗಿ ನಿಂತಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚು ಚರ್ಚೆಗೊಳಗಾಗದಿರುವುದು ಆತಂಕದ ಸ್ಥಿತಿಯಲ್ಲಿ ಇರುವ ಸಮಾಜದ ವ್ಯಕ್ತಿಯ ಮಾನಸಿಕ ಪರಿಸ್ಥಿತಿಯಾಗಿದೆ. ತನಗೆ, ತನ್ನ ಸಂಬಂಧಿಕರಿಗೆ ರೋಗ ಬರುವುದೋ ಎಂಬ ಭಯ ಅದು. ರೋಗ ಹರಡಿ ಸಮಾಜವನ್ನು ಪತನದಂಚಿಗೆ ದೂಡುವ ಭಯಾಶಂಕೆ, ಇದರ ಪರಿಣಾಮ ಏನು ಆಗುತ್ತದೆ ಎಂಬ ಆತಂಕ ಮೊದಲಾದ ಮಾನಸಿಕ ಪ್ರತಿಕ್ರಿಯೆಗಳ ಹೊರತಾಗಿ ಅದಕ್ಕೆ ಚಿಕಿತ್ಸೆ ಪಡೆಯುವವರಲ್ಲಿ ರೋಗ ಹೆಚ್ಚಳವಾಗುವ ಸಾಧ್ಯತೆ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಇದಕ್ಕೆ ಒಂದು ಉದಾಹರಣೆಯನ್ನು ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ನಡೆದ ಘಟನೆ. ಅಲ್ಲಿ ಕೊರೊನಾ ಚಿಕಿತ್ಸೆಗಾಗಿ ದಾಖಲಾದ ರೋಗಿ ಏಳನೆ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟರು.  ಕೇರಳದ ಕೊಲ್ಲಂ ಎಂಬಲ್ಲಿ ಪೊಲೀಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿಗೆ ರೋಗದ ಕುರಿತ ಹೆದರಿಕೆಯೇ ಕಾರಣವಾಗಿದೆ ಎನ್ನಬಹುದಾದರೂ ಈಗಿನ ಸಮಾಜದಲ್ಲಿ ಮಾನಸಿಕ ಆರೋಗ್ಯ  ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಸಂಕ್ಷಿಪ್ತದಲ್ಲಿ ಶಾರೀರಿಕ ರೋಗಕ್ಕೆ ಆದ್ಯತೆ ನೀಡಿ ನಡೆಸುವ ಆರೋಗ್ಯ ಚಟುವಟಿಕೆಗಳ ಜೊತೆ ವ್ಯಕ್ತಿಗಳು ಎದುರಿಸುವ ಮಾನಸಿಕ ಸಮಸ್ಯೆಗಳೂ  ಹೆಚ್ಚು ಪರಿಗಣನೆಗೊಳಗಾಗಬೇಕು.

ಮಾನಸಿಕ ಪ್ರತಿಫಲನಗಳು
ಸಣ್ಣ ಪ್ರಮಾಣದಲ್ಲಿ ಮಾನಸಿಕ ಆರೋಗ್ಯ ಕಡಿಮೆ ಇರುವ ಹಲವು ಮಂದಿ ಈಗ ಸಮಾಜದಲ್ಲಿದ್ದಾರೆ. ಒಂದು ಚಿಕಿತ್ಸೆ ಅಗತ್ಯ ಎಂಬ ಪರಿಸ್ಥಿತಿಯಿದ್ದರೂ ಇಂತಹ ವ್ಯಕ್ತಿಗಳಲ್ಲಿ ರೋಗಭೀತಿ, ಆತಂಕ, ಶಂಕೆ  ಹೆಚ್ಚಲು ಮತ್ತು ಅದು ಚಿಕಿತ್ಸೆ ಪಡೆಯಬೇಕಾದ ಸ್ಥಿತಿಗೆ ಇಂದಿನ ಪರಿಸ್ಥಿತಿ ತಲುಪಿಸಬಹುದಾಗಿದೆ. ಉದಾಹರಣೆಗೆ ತನಗೆ ರೋಗ ಬಂದೀತೆ ಎಂದು ಯಾವಾಗಲೂ ಅತಂಕಗೊಳ್ಳುವವರೂ ಇದ್ದಾರೆ.  ಕೆಲವರು. ಇಲ್ಲದ ರೋಗಗಳನ್ನು ತಮಗೆ ಇದೆ ಎಂಬ ನಂಬಿಕೆಯಲ್ಲಿ ಆತಂಕ ಪಡುವವರೂ ಇವರಾಗಿದ್ದಾರೆ.

ಇವರನ್ನು ವೈದ್ಯಕೀಯ ವಿಜ್ಞಾನ ಹೆಪೊಕಾಂಡ್ರಿನ್ಸಿಸ್ ಎಂಬ ಮಾನಸಿಕ ಸಮಸ್ಯೆಯ ಪಟ್ಟಿಗೆ ಸೇರಿಸುತ್ತದೆ. ಯಾವುದೋ ಅಪೂರ್ವ ರೋಗ ತನಗಿದೆ ಎಂದು ನಿರಂತರ ನಂಬಿದ ಅದಕ್ಕೆ ಸಂಬಧಿಸಿದ  ಲಕ್ಷಣಗಳು ದೇಹದಲ್ಲಿ ಸ್ವಯಂ ಹುಡುಕಿ ಅದನ್ನು ದೊಡ್ಡದು ಮಾಡಿ ತನಗೆ ರೋಗವಿದೆ ಎಂದು ತಿಳಿದುಕೊಳ್ಳುವ ವಿಭಾಗಕ್ಕೆ ಸೇರಿದ ಇಂತಹವರು. ತಲೆನೋವು ಬಂದರೆ ಮೆದುಳಿನ ಟ್ಯೂಮರ್  ಆಗಿರಬಹುದೋ ಎಂದು, ಎದೆ ನೋವು ಆದರೆ ಹೃದಯಾಘಾತ ಆಗುವುದೋ ಎಂದು ಶಂಕಿಸುವರು ಇವರು. ಜೀವನದುದ್ದಕ್ಕೂ ಸಾಮಾನ್ಯವಾಗಿ ಬರುವ ಕೆಮ್ಮು, ಶೀತ, ಉಸಿರು ಕಟ್ಟುವುದನ್ನೆಲ್ಲ  ಕೊರೊನೊ ಲಕ್ಷಣವಾಗಿ ತಪ್ಪಾಗಿ ತಿಳಿದು ಈ ವಿಭಾಗಕ್ಕೆ ಸೇರಿದವರು ಆಸ್ಪತ್ರೆಗೆ ಓಡುವುದು ಸಮಾಜದಲ್ಲಿ ಹೆದರಿಕೆ ಸೃಷ್ಟಿಸುವ ಸಾಧ್ಯತೆ ಹೆಚ್ಚು.

ಇಂಟರ್‍ನೆಟ್ ಸಾಮಾಜಿಕ ಮಾಧ್ಯಮಗಳು ದೈನಂದಿನ ಜೀವನದ ಭಾಗವಾಗಿ ಕೆಲಸ ಮಾಡುತ್ತಿರುವ ಈ ಕಾಲದಲ್ಲಿ ಗೂಗಲ್ ನೋಡಿ ಲಕ್ಷಣಗಳನ್ನು ತಿಳಿದುಕೊಳ್ಳುವ ಮತ್ತು ಅದರಂತೆ ರೋಗ  ನಿರ್ಣಯಿಸುವವರು ಹೆಚ್ಚಿದ್ದಾರೆ. ಈ ಮಾನಸಿಕ ಸ್ಥಿತಿಯನ್ನು ಸೈಬರ್ ಕಾಂಡ್ರಿಯ ಎಂದು ಕರೆಯಲಾಗುತ್ತದೆ. ಈಗಿನ  ಪರಿಸ್ಥಿತಿಯಲ್ಲಿ ಇಂತಹ ಮಾನಸಿಕ ಸಮಸ್ಯೆ ಸಮಾಜದಲ್ಲಿ ಹೆಚ್ಚುವುದರಲ್ಲಿ  ಸಂದೇಹವಿಲ್ಲ. ಊರಲ್ಲಿ ವಸ್‍ವಾಸ್ ಎಂದು ತಿಳಿಯಲ್ಪಡುವ ಒಬ್‍ಸಸೀವ್ ಕಂಪಲ್ಸೀಸ್ ಡಿಸೋರ್‍ಡರ್ ಅಥವಾ ಒಸಿಸಿ ಎಂಬ ಮಾನಸಿಕ ಸಮಸ್ಯೆ ಇರುವವರಲ್ಲಿ ಈ ಪರಿಸ್ಥಿತಿಯಿಂದ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ.
ವಿಶೇಷತಃ ಶರೀರದ ಶುಚಿತ್ವದ ಕುರಿತು ಕೈಗಳನ್ನು ಶುಚಿಗೊಳಿಸುವ ಕುರಿತು ಎಲ್ಲ ಪತ್ರಿಕೆ, ಟಿವಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಸೂಚನೆ ಬರುತ್ತಿರುವ ಸ್ಥಿತಿಯಲ್ಲಿ ಯಾವುದಾದರೊಂದು ಚಿಂತೆ  ಮನಸ್ಸಿಗೆ ನುಸುಳಿದರೆ ಅದು ನಿಯಂತ್ರಿಸಲಾಗದ ವಿಕಲ ವರ್ತನೆಯಾಗಿ ಬದಲಾಗುವ ಅವಸ್ಥೆಯಿದು. ಈ ಜನರಿಗೆ ರೋಗ ಭೀತಿಯಿಂದ ದೇಹ ಎಷ್ಟು ಶುಚಿಗೊಳಿಸಿದರೂ ಸಾಲದ ಅವಸ್ಥೆಯಗುತ್ತದೆ.  ಅಥವಾ, ಶುಚಿಗೊಳಿಸಿದರೆ ಶುದ್ಧವಾಯಿತಾ ಎಂಬ ಸಂದೇಹವು ಇವರಲ್ಲಿ ನಿರಂತರ ಕಾಡಿ ಅಸ್ವಸ್ಥಗೊಳಿಸುತ್ತದೆ. ಅಗತ್ಯವಿಲ್ಲದಾಗ ನಿದ್ರೆಯಲ್ಲಿಯೂ ಮಾಸ್ಕ್ ಧರಿಸಲು ಇವರು ಶ್ರಮಿಸಬಹುದು.

ಪರಿಹಾರ ಏನು?
ಈ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಬಹಳಷ್ಟು ಮಾನಸಿಕ ಸಮಸ್ಯೆಗಳಿದ್ದರೂ ಎರಡು ವಿಷಯಗಳನ್ನು ಮೇಲೆ ವಿವರಿಸಲಾಗಿದೆ. ಈ ವಿಷಯವನ್ನು ಮನವರಿಕೆ ಮಾಡಿಕೊಂಡು ವ್ಯಕ್ತಿಗಳು ಮತ್ತು ಆರೋಗ್ಯ  ಕಾರ್ಯಕರ್ತರು ಇಂತಹ ಸಮಸ್ಯೆ ಇರುವವರನ್ನು ಎಷ್ಟು ಬೇಗ ಸಾಧ್ಯವೋ ಅಷ್ಟುಬೇಗ ಮಾನಸಿಕ ತಜ್ಞರ ಸಹಾಯವನ್ನು ಕೇಳುವಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕಾಗಿದೆ. ಮಾತ್ರವಲ್ಲ ವೈರಸ್  ಪ್ರತಿರೋಧಕ್ಕೆ ಅವುಗಳಿಗೆ ಸಂಬಂಧಿಸಿದ ತೀರ್ಮಾನಗಳಲ್ಲಿ ಮಾನಸಿಕಾರೋಗ್ಯ ತಜ್ಞರ ಅಭಿಪ್ರಾಯಗಳನ್ನು ಕೂಡ ಪರಿಗಣಿಸಬೇಕಾಗಿದೆ.

ಈಗ ಖಿನ್ನತೆ, ಚಿತ್ತ ಭ್ರಮಣೆ, ಆತಂಕ, ಮಾನಸಿಕ ಒತ್ತಡ ಇರುವ ರೋಗಕ್ಕೆ ಚಿಕಿತ್ಸೆ ಪಡೆಯುವವರು ಹೆಚ್ಚು ಗಮನಹರಿಸಿ ಮದ್ದನ್ನು ಸಮಯಕ್ಕೆ ಸರಿಯಾಗಿ ಕುಡಿಯಬೇಕಾಗಿದೆ. ಅಗತ್ಯವೆಂದು ಕಂಡು ಬಂದರೆ ಒಟ್ಟು ತಡವಾಗದೆ ಒಬ್ಬ ತಜ್ಞರ ಸಹಾಯ ಪಡೆದು ಮನಸಿಕ ಆರೋಗ್ಯವನ್ನು ಯಥಾಸ್ಥಿತಿಗೆ ತರಬೇಕಾಗಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತರು ಗಮನಿಸಬೇಕಾದದ್ದು ನಿರೀಕ್ಷಣೆ ಮತ್ತು ಚಿಕಿತ್ಸೆಯಲ್ಲಿರುವ ರೋಗಿಗಳಲ್ಲಿ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುವವರಾದರೆ ಮದ್ದುಗಳು ವ್ಯತ್ಯಯವಾಗದಂತೆ ಹೆಚ್ಚು ಗಮನಹರಿಸಬೇಕಾಗಿದೆ.

ಗಮನಿಸಬೇಕಾದ ವಿಷಯಗಳು
ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಸರಿಯಾದ ವಿವರಗಳನ್ನು ನೀಡಬೇಕು. ಆತಂಕ ಮೂಡದ ವಿವರಣೆಗಳನ್ನು ಮಾತ್ರ ನೀಡಬೇಕಾಗಿದೆ. ಜೊತೆಗೆ ಸುಳ್ಳು ಸುದ್ದಿಗಳು,  ಅವೈಜ್ಞಾನಿಯ ಅಭಿಪ್ರಾಯಗಳು, ಚಿಕಿತ್ಸಾ ಮಾರ್ಗಗಳನ್ನು ಪ್ರಚಾರ ಮಾಡಬಾರದು. ಇದನ್ನು ಕಡ್ಡಾಯವಾಗಿ ತಡೆಯಬೇಕಾಗಿದೆ. ಮಾನಸಿಕವಾಗಿ ದುರ್ಬಲರಾಗಿರುವವರನ್ನು ಅಪಹಾಸ್ಯ ಮಾಡದೇ,  ದೂಷಿಸದೇ ಅಗತ್ಯ ಬೆಂಬಲವನ್ನು ನೀಡಬೇಕಾಗಿದೆ. ಅವರೊಂದಿಗೆ ಅನುಕಂಪದೊಂದಿಗೆ ವರ್ತಿಸಿ ಅಗತ್ಯ ಘಟ್ಟದಲ್ಲಿ ಮಾನಸಿಕಾ ರೋಗ್ಯ ತಜ್ಞರ ಸಹಾಯವನ್ನು ಲಭ್ಯಗೊಳಿಸಬೇಕಾಗಿದೆ. ಜೊತೆಗೆ  ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಅರಿತು ಅಂತಹ ವಿಷಯಗಳನ್ನು ಜಾಗೃತಿ ವಿಚಾರದಲ್ಲಿ ಸೇರಿಸಿಕೊಳ್ಳಬೇಕಾಗಿದೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …