Home / ವಾರ್ತೆಗಳು / ಮುಸ್ಲಿಮ್ ಸಂಸ್ಕ್ರತ ಪ್ರೊಫೆಸರನ್ನು ಬೆಂಬಲಿಸಿದ ಮಾಯಾವತಿ

ಮುಸ್ಲಿಮ್ ಸಂಸ್ಕ್ರತ ಪ್ರೊಫೆಸರನ್ನು ಬೆಂಬಲಿಸಿದ ಮಾಯಾವತಿ

ಲಕ್ನೊ, ನ.22: ಉತ್ತರ ಪ್ರದೇಶದ ಬನಾರಸ್ ವಿಶ್ವವಿದ್ಯಾನಿಲಯದ ಸಂಸ್ಕ್ರತ ಪ್ರೊಫೆಸರ್ ಫಿರೋಝ್ ಖಾನ್ ರ ನೇಮಕವನ್ನು ಬಿಎಸ್ಪಿ ಸುಪ್ರಿಮೊ ಮಾಯಾವತಿ ಬೆಂಬಲಿಸಿದ್ದಾರೆ.

ಸರಕಾರದ ದ್ವಂದ್ವವೇ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಉಚಿತವಲ್ಲ. ಬನಾರಸ್ ಹಿಂದೂ ಯುನಿವರ್ಸಿಟಿಯ ಪಿಎಚ್‍ಡಿ ಸ್ಕಾಲರ್ ಫಿರೋಝ್ ಖಾನ್‍ರ ಕುರಿತ ವಿವಾದ ಸುಮ್ಮನೆ ಸೃಷ್ಟಿಸಲಾಗಿದೆ. ಕೆಲವರು ಶಿಕ್ಷಣವನ್ನು ಧರ್ಮ ಜಾತಿಯ ಅತಿ ರಾಜಕೀಯಕ್ಕೆ ಪೋಣಿಸಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೂ ಯುನಿವರ್ಸಿಟಿಯು ಮುಸ್ಲಿಮ್ ಸಂಸ್ಕ್ರತ ವಿದ್ವಾಂಸರನ್ನು ಶಿಕ್ಷಕರ ರೂಪದಲ್ಲಿ ನೇಮಿಸಿದೆ. ಪ್ರತಿಭೆಗೆ ಸೂಕ್ತ ಸ್ಥಾನ ನೀಡಲಾಗಿದೆ. ಮನಃ ಶಕ್ತಿಯನ್ನು ಕುಸಿಯುವಂತೆ ಮಾಡುವುದಕ್ಕೆ ಯಾರಿಗೂ ಅವಕಾಶ ನೀಡಬಾರದು. ಸರಕಾರ ಈ ಕುರಿತು ತ್ವರಿತ ಮತ್ತು ಉಚಿತ ತೀರ್ಮಾನಕ್ಕೆ ಬಂದರೆ ಉತ್ತಮ ಎಂದು ಟ್ವೀಟ್‍ನಲ್ಲಿತಿಳಿಸಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಕಾಲರ್ ಫಿರೋಝ್ ಖಾನ್‍ರನ್ನು ಸಹಾಯಕ ಪ್ರೊಫೆಸರ್ ಆಗಿ ನೇಮಿಸಿತ್ತು. ಕೆಲವು ವಿದ್ಯಾರ್ಥಿಗಳು ಈ ನೇಮಕಾತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …