Home / ವಾರ್ತೆಗಳು / ನಿರಾಶ್ರಿತರ ಅಸಹಾಯಕತೆಯನ್ನು ಶೋಷಣೆಗೆ ಗುರಿಪಡಿಸಬಾರದು – ಪೋಪ್ ಫ್ರಾನ್ಸಿಸ್

ನಿರಾಶ್ರಿತರ ಅಸಹಾಯಕತೆಯನ್ನು ಶೋಷಣೆಗೆ ಗುರಿಪಡಿಸಬಾರದು – ಪೋಪ್ ಫ್ರಾನ್ಸಿಸ್

ಥಾಯ್ಲೆಂಡ್, ನ.26: ಥಾಯ್ಲೆಂಡ್ ಪ್ರವಾಸದಲ್ಲಿರುವ ಕ್ರೈಸ್ತ ಸಮುದಾಯದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್‍ರು ನಿರಾಶ್ರಿತರ ಅಸಹಾಯಕತೆಯನ್ನು ಶೋಷಣೆಗೆ ಒಳಪಡಿಸಬಾರದೆಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಮೊದಲೇ ಕಷ್ಟ ಕೀಟಗಳನ್ನು ಸಹಿಸಿದ ಈ ಜನ ವಿಭಾಗಕ್ಕೆ ಆಸರೆ ನೀಡಬೇಕು. ಜತೆಗೆ ಮಹಿಳೆಯರನ್ನು ಮಕ್ಕಳನ್ನು ಶೋಷಣೆ, ಕಿರುಕುಳಗಳಿಂದ ರಕ್ಷಿಸಿ ಎಂದಿದ್ದಾರೆ. ಈಗ ಥಾಯ್ಲೆಂಡ್ ಭೇಟಿಯಲ್ಲಿರುವ ಪೋಪ್ ಮಾನವ ಸಾಗಾಟ, ಲೈಂಗಿಕ ವ್ಯಾಪಾರದ ಕೇಂದ್ರವಾಗಿ ಥಾಯ್ಲೆಂಡನ್ನು ವಿಶ್ವಸಂಸ್ಥೆ ಪರಿಗಣಿಸಿರುವುದನ್ನು ಸೂಚಿಸಿ ಪತ್ರಕರ್ತರು ಕೇಳಿದ ಪ್ರಶ್ನೆ ಉತ್ತರಿಸುತ್ತಿದ್ದರು.

ಥಾಯ್ಲೆಂಡ್ ನಿರಾಶ್ರಿತರನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ವರದಿಗಳಿದ್ದು ಇದನ್ನು ಉದ್ಧರಿಸಿ ಪೋಪ್ ಪ್ರತಿಕ್ರಿಯಿಸಿದ್ದಾರೆ. ನಿರಾಶ್ರಿತರ ಕಷ್ಟ ಕಡೆಗಣಿಸಲ್ಪಡಬಾರದು. ಥಾಯ್ಲೆಂಡ್ ಸ್ವೀಕರಿಸಿದ ನಿರಾಶ್ರಿತರು ದೊಡ್ಡ ಕಷ್ಟ ಅನುಭವಿಸುತ್ತಿದ್ದಾರೆ. ಗೌರವದಿಂದ ಬದುಕುವ ಅವರ ಹಕ್ಕಿಗೆ ನಿರಂತರ ಸವಾಲಿದೆ ಎಂದು ಪೋಪ್ ಹೇಳಿದರು. ಥಾಯ್ಲೆಂಡಿನ ಬುದ್ಧ ವಿಹಾರವನ್ನು ಪೋಪ್ ಸಂದರ್ಶಿಸಿದರು. ಬಳಿಕ ಥಾಯ್ಲೆಂಡಿನಿಂದ ಜಪಾನಿಗೆ ತೆರಳಲಿದ್ದಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …