Home / ಲೇಖನಗಳು / ಧಾರ್ಮಿಕ ಸೌಹಾರ್ದ ಮತ್ತು ಇಸ್ಲಾಂ ಧರ್ಮ ಭಾಗ – 8

ಧಾರ್ಮಿಕ ಸೌಹಾರ್ದ ಮತ್ತು ಇಸ್ಲಾಂ ಧರ್ಮ ಭಾಗ – 8

ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ ಸ ರವರು ಹೇಳಿದ್ದಾರೆ.

ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ.
ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ ಪೀಡಿತರಾಗಿರುವರೆಂದು ಪ್ರವಾದಿ (ಸ) ರವರು ಅವರಿಗೆ ಆಹಾರ ಧಾನ್ಯ ಗಳನ್ನು ಕಳುಹಿಸಿದರು. ಅವರು ಕಳುಹಿಸಿದ ಜನರು ಪ್ರವಾದಿ ಮುಹಮ್ಮದ್ (ಸ) ರವರನ್ನು ಸ್ವ ಊರಿನಿಂದ ಹೊರಕ್ಕಟ್ಟಿದವರು ಮತ್ತು ಹಿಜ್ರತ್ ಹೋಗಲು ನಿರ್ಬಂಧಿಸಿದವರಾಗಿದ್ದರು. ಆದರೂ ಅನ್ಯ ಧರ್ಮೀಯರು ಕಷ್ಟದಲ್ಲಿ ಇದ್ದ ಕಾಲದಲ್ಲಿ ಪ್ರವಾದಿ (ಸ) ಅವರನ್ನು ಕಂಡು ಪ್ರವಾದಿಗೆ ಸಹಿಸಲಾಗಲಿಲ್ಲ ಮತ್ತು ಸಹಾಯ ಹಸ್ತವನ್ನು ಚಾಚಿದರು.

ಯೂಸುಫ್ (ಅ) ಕಾಲದಲ್ಲಿ ಬರಗಾಲ ಬಂದಾಗ ಅವರು ಸುತ್ತ ಮುತ್ತಲಿನ ಎಲ್ಲರಿಗೂ ಶೇಖರಿಸಿಟ್ಟ ಆಹಾರ ಧಾನ್ಯಗಳನ್ನು ಮುಕ್ತವಾಗಿ ಕೊಟ್ಟರು.

ಪ್ರವಾದಿ (ಸ) ಹೇಳಿದರು, ನೆರಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ. ಇಲ್ಲೂ ಸ್ವ ಧರ್ಮ ಅನ್ಯ ಧರ್ಮ ಎಂಬ ಭಿನ್ನತೆ ಸಲ್ಲದು.

ಒಂದು ಕುಟುಂಬ, ಅದರ ಮಕ್ಕಳು ಹಸಿವು ದುಖದುಮ್ಮಾನಗಳಿಂದ ಕಳೆಯುವುದನ್ನು ನೋಡಿ ಸುಮ್ಮನಿರಲು ಸತ್ಯವಿಶ್ವಾಸಿಗೆ ಸಾಧ್ಯವೇ???

ಅಬೂಕುತುಬ್

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …