Home / ವಾರ್ತೆಗಳು / 70ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಿರ್ವಹಿಸಿದ ಮರ್ಸಿ ಏಂಜಲ್ಸ್ ತಂಡ: ಮಗುವಿನ ಅಂತ್ಯ ಸಂಸ್ಕಾರದ ವೇಳೆ ‘ರಾಮ ನಾಮ ಸತ್ಯ ಹೇ’ ಪಠಿಸಿದ ಶೇಖ್ ಇಮ್ರಾನ್: ಮಾನವೀಯ ಸೇವೆಯೇ ಮಿಗಿಲು

70ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಿರ್ವಹಿಸಿದ ಮರ್ಸಿ ಏಂಜಲ್ಸ್ ತಂಡ: ಮಗುವಿನ ಅಂತ್ಯ ಸಂಸ್ಕಾರದ ವೇಳೆ ‘ರಾಮ ನಾಮ ಸತ್ಯ ಹೇ’ ಪಠಿಸಿದ ಶೇಖ್ ಇಮ್ರಾನ್: ಮಾನವೀಯ ಸೇವೆಯೇ ಮಿಗಿಲು

ಬೆಂಗಳೂರು: 16 ದಿನಗಳ ಮಗುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ ಮರ್ಸಿ ಎಂಜಲ್ಸ್ ತಂಡದ ಸದಸ್ಯ ಶೇಖ್ ಇಮ್ರಾನ್ ಉತ್ತರ ಭಾರತದ ಹೆತ್ತವರ ಮನವಿಯಂತೆಯೇ 20.ಕಿ.ಮೀ ದೂರದಲ್ಲಿರುವ ಶವಾಗಾರದವರೆಗೂ “ರಾಮ ನಾಮ ಸತ್ಯ ಹೇ” ಪಠಿಸಿದ ಮಾನವೀಯ ಸೇವೆಯು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

ಬೆಂಗಳೂರಿನಲ್ಲಿ ಹಸಿವನ್ನು ನೀಗಿಸಲು ಆರಂಭಗೊಂಡ ಮರ್ಸಿ ಮಿಷನ್ ಎನ್‌ಜಿಓ ಆರಂಭಗೊಂಡಿತ್ತು. ಮೂಲ ಸಂಸ್ಥೆಯ ಅಂಗವಾದ ಮರ್ಸಿ ಎಂಜಲ್ಸ್ ಕೊವಿಡ್ ಮೃತರ ಅಂತಿಮ‌ ಕ್ರಿಯೆಗಳನ್ನು ನಡೆಸಲು ಅಸ್ತಿತ್ವಕ್ಕೆ ಬರುವ ಮೂಲಕ, ಜೂನ ತಿಂಗಳಾಂತ್ಯದ ವರೆಗೆ ನಗರದಲ್ಲಿ ಕೋವಿಡ್ -19 ಕಾರಣದಿಂದಾಗಿ ಸಾವನ್ನಪ್ಪಿದ 70ಕ್ಕೂ ಹೆಚ್ಚು ಜನರ ಅಂತಿಮ ವಿಧಿಗಳನ್ನು ನೆರವೇರಿಸಿದೆ. ಇದಲ್ಲದೆ, COVIDನಿಂದಲ್ಲದೇ ಮೃತಪಟ್ಟ ಹಲವಾರು ಮೃತದೇಹಗಳನ್ನು ನಗರದ ಸ್ಮಶಾನಗಳು ಮತ್ತು ಶವಾಗಾರಗಳಿಗೆ ಸಾಗಿಸಿದೆ.

ನಗರದ ಕಂಟೋನ್ಮೆಂಟ್ ಪ್ರದೇಶದ ಹಜರತ್ ಬಿಸ್ಮಿಲ್ಲಾ ಷಾ (ಎಚ್‌ಬಿಎಸ್) ಆಸ್ಪತ್ರೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮರ್ಸಿ ಏಂಜಲ್ಸ್ ನಗರದ ಪುರಸಭೆಯ ವಿಭಾಗವಾದ ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನಗರದ ಆಸ್ಪತ್ರೆಗಳಲ್ಲಿ ಕೋವಿಡ್-19 ಸಂಬಂಧಿತ ತೊಂದರೆಯಿಂದಾಗಿ ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ನಿರ್ವಹಿಸುತ್ತಿದೆ.

ಸೋಂಕಿನ ಭೀತಿಯಿಂದಾಗಿ ಕೋವಿಡ್ ಪೀಡಿತ ರೋಗಿಗಳಿಂದ ಹತ್ತಿರದ ಸಂಬಂಧಿಗಳನ್ನು ಸಹ ದೂರವಿರಿಸುತ್ತಿದ್ದರೂ ಸಹ, ಸಮಾಜ ಸೇವಕ ಮೆಹ್ದಿ ಕಲೀಮ್‌ರವರ ನೇತೃತ್ವದ ಆರು ಸದಸ್ಯರ ತಂಡವು ಕಳೆದ ಮೂರು ತಿಂಗಳಿನಿಂದ ಕೋವಿಡ್‌19ಗೆ ಬಲಿಯಾದವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಕಾರ್ಯವನ್ನು ಮಾಡುತ್ತಿದೆ.

ಎಚ್‌ಬಿಎಸ್ ನಿರ್ದೇಶಕ ಡಾ. ತಾಹಾ ಮತೀನ್ ಅವರ ಮೇಲ್ವಿಚಾರಣೆಯಲ್ಲಿ, ಮರ್ಸಿ ಏಂಜಲ್ಸ್ ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮೃತರ ಆಸ್ಪತ್ರೆಯ ಡಿಸ್ಚಾರ್ಜ್ ಪ್ರಕ್ರಿಯೆಗಳು ತ್ವರಿತವಾಗಿ ನಡೆಯುವಂತೆ ನೋಡಿಕೊಳ್ಳತ್ತಿದೆ. ಆರು ಸದಸ್ಯರ ತಂಡವು ಆಂಬ್ಯುಲೆನ್ಸ್ 108 ಸೇವೆಯಿಂದ ಕರೆ ಬಂದ ಕೂಡಲೇ ಪಿಪಿಇ ಧರಿಸುವ ಮೂಲಕ ಸಜ್ಜಾಗುತ್ತದೆ. ಮೃತರ ದೇಹಗಳನ್ನು ಮೂರು ರಕ್ಷಣಾತ್ಮಕ ಪದರಗಳಲ್ಲಿ ಸುತ್ತಿದ ನಂತರ ಮೃತರ ಧಾರ್ಮಿಕ ಆಚಾರಗಳ ಪ್ರಕಾರವೇ ಸ್ಮಶಾನ ಅಥವಾ ಚಿತಾಗಾರಕ್ಕೆ ಸಾಗಿಸಲಾಗುತ್ತದೆ.

ಕಲೀಮ್‌‌ರವರಿಗೆ ಡಾ.ಶಾರಿಕ್ ರಫೀಕ್, ಅಯೂಬ್ ಜಾಫರ್ ಖಾನ್ (ಇಬ್ಬರೂ 43 ವಯಸ್ಸು), ಬಿ.ಎಸ್.ವೀರೇಶ್(45), ಶೇಖ್ ಇಮ್ರಾನ್(35), ಶಬ್ಬೀರ್(30), ಷಾ ಇಮ್ದಾದ್ ಅಲಿ ಅಲಿಯಾಸ್ ಛೋಟು(27) ಸಹಾಯ ಮಾಡುತ್ತಾರಲ್ಲದೇ, ಬಿಬಿಎಂಪಿಯಿಂದ ಅನುಮೋದಿಸಲ್ಪಟ್ಟ ಚಿತಾಗಾರದಲ್ಲಿ ಮೃತದೇಹಗಳನ್ನ ದಹಿಸುವ ರಾಂಪ್‌ನ ಟ್ರಾಲಿಯನ್ನೂ ಸಿದ್ಧಪಡಿಸುತ್ತಾರೆ.

ಸತ್ತವರನ್ನು ಸ್ಪರ್ಶಿಸಲು ಅಥವಾ ನೋಡಲು ಯಾವುದೇ ಸಂಬಂಧಿಕರಿಗೆ ಅವಕಾಶವಿಲ್ಲದ ಕಾರಣ ಪರಿಸ್ಥಿತಿಯು ಕಠೋರವೆನ್ನಿಸುತ್ತದೆ, ಹತ್ತಿರದ ಮತ್ತು ಆತ್ಮೀಯರು ಸಂಪೂರ್ಣ ಕಾರ್ಯಾಚರಣೆಯನ್ನು ದೂರದಿಂದಲೇ ದುಃಖ ಮತ್ತು ಭಯದಿಂದ ನೋಡಿ ಕಣ್ಣೀರಿಳಿಸುವ ದೃಶ್ಯಗಳು ಭಯಾನಕ ಯಾತನೆಯನ್ನು ಹೇಳುತ್ತವೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಸೋಂಕಿನ ಭಯದಿಂದಾಗಿ ರಕ್ತಸಂಬಂಧಿಗಳ ಅನುಪಸ್ಥಿತಿಯಲ್ಲಿಯೂ ತಂಡವು ಕಾರ್ಯ ಪ್ರವೃತ್ತವಾಗಬೇಕಾಗುತ್ತದೆ.

ಮುಸ್ಲಿಂ ರೋಗಿಗಳ ಶವಗಳಿಗೆ ಸಂಬಂಧಿಸಿದಂತೆ, ಕಾರ್ಯ ವಿಧಾನದ ಔಪಚಾರಿಕತೆಗಳು ಸ್ವಲ್ಪ ವಿಭಿನ್ನವಾಗಿವೆ. ಮೃತದೇಹಕ್ಕೆ ಸಾಂಪ್ರದಾಯಿಕ ಸ್ನಾನವನ್ನು ಮಾಡಲು ಸಾಧ್ಯವಿಲ್ಲದ ಕಾರಣ, ದೇಹವನ್ನು ರಕ್ಷಣಾತ್ಮಕ ಕವರ್‌ಗಳಲ್ಲಿ ಸುತ್ತುವ ಮೊದಲು ತಯಮ್ಮುಮ್ ( ಮುಖ ಮತ್ತು ಕೈಗಳಿಗೆ ಮಣ್ಣಿನ ಧೂಳಿನಿಂದ ಸವರು ಕ್ರಿಯೆ) ಮಾಡಿಸಲಾಗುತ್ತದೆ. ಸಮಾಧಿಗಳನ್ನು ಹತ್ತು ಅಡಿ ಆಳದವರೆಗೆ ಅಗೆದು ದೇಹವನ್ನು ಸಮಾಧಿಯೊಳಗೆ ಇಳಿಸಿ ಉದ್ದನೆಯ ಹಾಳೆಯ ಮೂಲೆಗಳನ್ನು ನಾಲ್ಕು ವ್ಯಕ್ತಿಗಳು ಹಿಡಿದಿಟ್ಟುಕೊಳ್ಳುತ್ತಾರೆ. ಹಾಳೆಗಳನ್ನು ಸಹ ದೇಹದ ಮೇಲೆ ಇರಿಸಲಾಗುತ್ತದೆ. ಅಂತ್ಯಕ್ರಿಯೆಯ ಪ್ರಾರ್ಥನೆಗೆ ಮೃತದೇಹವನ್ನು ಇಮಾಮ್‌ಗಿಂತ ಮೊದಲು ದೂರದಲ್ಲಿ ಇಡಲಾಗುತ್ತದೆ.

ಮರ್ಸಿ ಏಂಜಲ್ಸ್ ತಂಡವು ರೋಗದ ಭಯ ಮತ್ತು ದುಃಖದಿಂದ ಬಳಲುತ್ತಿರುವ ಕುಟುಂಬಗಳ ಮೃತರ ದಫನ ಕ್ರಿಯೆ ಹಾಗೂ ಚಿತಾ ಕರ್ಮಗಳನ್ನು ನೆರವೇರಿಸುವ ಮೂಲಕ ವ್ಯಾಪಕ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ಗೆದ್ದಿದೆ.

ಹಲವಾರು ಕುಟುಂಬಗಳು ಸೇವಾ ಶುಲ್ಕವನ್ನು ನೀಡಲು ಮುಂದಾಗುತ್ತವೆ, ಆದರೆ ಅವರು ಯಾವುದೇ ಶುಲ್ಕಗಳನ್ನು ಸ್ವೀಕರಿಸುವುದನ್ನು ನಿರಾಕರಿಸುತ್ತಿರುವುದಾಗಿ ಕಲೀಮ್ ಹೇಳುತ್ತಾರೆ. ಪಿಪಿಇಗಳು ಮತ್ತು ಸ್ಯಾನಿಟೈಸರ್‌ಗಳನ್ನು ನಾಗರಿಕ ಅಧಿಕಾರಿಗಳು ಮತ್ತು ಒದಗಿಸುತ್ತಾರೆ. ಆಂಬುಲೆನ್ಸ್ ಸೇವೆಯನ್ನು 108 ಅಥವಾ ಎಚ್‌ಬಿಎಸ್‌ನವರೇ ಒದಗಿಸುತ್ತಾರೆ. ಪ್ರತಿಯೊಂದು ಅಂತ್ಯ ಸಂಸ್ಕಾರದ ನಂತರವೂ 16 ಗಂಟೆಗಳ ಕಾಲ ನೈರ್ಮಲ್ಯೀಕರಣ(ಸ್ಯಾನಿಟೈಸೇಷನ್) ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳುತ್ತಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …