Home / ವಾರ್ತೆಗಳು / ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ; ಹೀಗೊಂದು ಅಪರೂಪದ ಘಟನೆ ನಡೆದಿದೆ ಮಕ್ಕಾದಲ್ಲಿ..

ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ; ಹೀಗೊಂದು ಅಪರೂಪದ ಘಟನೆ ನಡೆದಿದೆ ಮಕ್ಕಾದಲ್ಲಿ..

ಮೇ 27ರ ಸೋಮವಾರ ಮಧ್ಯಾಹ್ನ ಸೂರ್ಯನು ಕಅಬಾದ ನೇರ ನೆತ್ತಿಯ ಮೇಲೆ ಕಾಣಿಸಿಕೊಂಡ ಅಪರೂಪದ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆ 18 ನಿಮಿಷದ ಸಮಯದಲ್ಲಿ ಮಸ್ಜಿದುಲ್ ಹರಾಮ್ ನಲ್ಲಿ ಮಧ್ಯಾಹ್ನದ ನಮಾಝ್ ನ ಆಜಾನ್ ವೇಳೆ ಈ ವಿಶೇಷ ಸನ್ನಿವೇಶ ಸೃಷ್ಟಿಯಾಗಿದೆ. ಈ ವರ್ಷ ಇದೇ ಮೊದಲ ಬಾರಿ ಇಂತದ್ದೊಂದು ಘಟನೆ ನಡೆದಿದೆ.. ಈ ಸಂದರ್ಭದಲ್ಲಿ ಕಾಬಾಕ್ಕೆ ನೆರಳೇ ಇರಲಿಲ್ಲ.

ಸೂರ್ಯ ಕಅಬಾದ ನಡುನೆತ್ತಿಯಲ್ಲಿ 90 ಡಿಗ್ರಿಯಲ್ಲಿದ್ದ ಎಂದು ವರದಿಗಳು ತಿಳಿಸಿವೆ. ಮಕ್ಕ ಮತ್ತು ಕಅಬಾದ ಎಲ್ಲಾ ವಸ್ತುಗಳ ನೆರಳು ಈ ಸಂದರ್ಭದಲ್ಲಿ ಮರೆಯಾಗಿತ್ತು. ಕಿಬ್ ಲಾದ ದಿಕ್ಕನ್ನು ಸ್ಪಷ್ಟವಾಗಿ ಕಂಡುಕೊಳ್ಳುವುದಕ್ಕೆ ಈ ಹಿಂದಿನವರು ಸಾಮಾನ್ಯವಾಗಿ ಬೆತ್ತವನ್ನು ಲಂಬವಾಗಿ ಇಡುತ್ತಿದ್ದರು. ಈ ಸಂದರ್ಭದಲ್ಲಿ ನೆರಳಿನ ವಿರುದ್ಧ ಭಾಗದಲ್ಲಿ ಕಅಬಾದ ಸ್ಪಷ್ಟ ಜಾಗ ಎಂದು ತಿಳಿದುಕೊಳ್ಳಲಾಗುತ್ತಿತ್ತು.

SHARE THIS POST VIA

About editor

Check Also

ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ರಿಯಾದ್ : ಜುಲೈ 1ರಿಂದ 23ರ ತನಕ ದೆಹಲಿ ಮತ್ತು ಕೇರಳದಲ್ಲಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಅಕಾಡೆಮಿಯು …