Home / ವಾರ್ತೆಗಳು / ಟರ್ಕಿ: 650 ವರ್ಷ ಹಳೆಯ ಮರದಲ್ಲಿ ನಿರ್ಮಿಸಿದ ಮಸೀದಿ

ಟರ್ಕಿ: 650 ವರ್ಷ ಹಳೆಯ ಮರದಲ್ಲಿ ನಿರ್ಮಿಸಿದ ಮಸೀದಿ

ಟರ್ಕಿ: ಶತಮಾನಗಳ ಪರಂಪರೆಯನ್ನು ಎತ್ತಿ ಹಿಡಿದು ಜಗತ್ತಿಗೆ ಸಾರುವ ಟರ್ಕಿಯ ಸಾಂಸಾನ್‍ನಲ್ಲಿ 650 ವರ್ಷ ಹಳೆಯ ಮರದಲ್ಲಿ ನಿರ್ಮಾಣವಾದ ಒಂದು ಮಸೀದಿಯಿದೆ. ಟರ್ಕಿಯಲ್ಲಿ ಸಲ್‍ಜೂಕರು ಆಳುತ್ತಿದ್ದಾಗ ಈ ಮಸೀದಿ ನಿರ್ಮಾಣವಾಗಿತ್ತು. ಈಗ ಆರಾಧನೆಗೂ  ಪ್ರವಾಸಿ ತಾಣವಾಗಿಯೂ ಈ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ.

ಕಾರಸಾಂಬ ಎಂಬ ಗ್ರಾಮದಲ್ಲಿ ಒಂದು ಕಾಂಕ್ರಿಟ್ ಮಸೀದಿ  ನಿರ್ಮಿಸಿದಾಗ ಜನರು ಅದನ್ನು ಬಿಟ್ಟು ಹೋದರು. ಮೂವತ್ತು ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು.
ಈ ಮಸೀದಿಯ ವಿಶೇಷತೆಯೆಂದರೆ ಒಂದು ಮೊಳೆಯನ್ನು ಕೂಡ ಬಳಸಲಾಗಿಲ್ಲ. ಕರ್ಸಾಂಬ ಮುನ್ಸಿಪಾಲಿಟಿ ಮತ್ತು ಟರ್ಕಿ ಪೌಂಡೇಶನ್  ನಿರ್ದೇಶನಾಲಯ ಜಂಟಿಯಾಗಿ ಈ ಮಸೀದಿಯನ್ನು ಮರು ನಿರ್ಮಾಣ ಮಾಡಿದೆ. ಈಗ ಪ್ರವಾಸಿಗರು ಬರುತ್ತಿದ್ದಾರೆ. ನಮಾಝನ್ನೂ  ಮಾಡಬಹುದಾಗಿದೆ.

ಮರದ ವಾಸ್ತು ಶಿಲ್ಪದ ಮಹತ್ತರ ಉದಾಹರಣೆಯಿದು. ಈ ಮಸೀದಿಗೆ ಟರ್ಕಿಯ ಇಸ್ಲಾಮಿಕ್ ವಾಸ್ತು ಕಲೆಯನ್ನು ಉಪಯೋಗಿಸಲಾಗಿದೆ ಎಂದು ಕಾರ್ಸಾಂಬ ಮೇಯರ್ ಸಹುಐನ್ ದಂದರ್ ಹೇಳಿದರು. ಮಸೀದಿಯೊಳಗಿನ ಕೆತ್ತನೆ ಕೆಲಸವೂ ಮರದಿಂದಲೇ ಆಗಿದೆ. ಇದು  ಟೂರಿಸ್ಟ್ ಗಳನ್ನು ಆಕರ್ಷಿಸಲಿಕ್ಕಾಗಿದೆ ಮತ್ತು ನೋಡಲು ಕೂಡ ಉತ್ತಮವಾಗಿ ಕಾಣುತ್ತಿದೆ ಎಂದು ಮೇಯರ್ ಹೇಳಿದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …