Home / ವಾರ್ತೆಗಳು / ಬಾಬರಿ ಮಸೀದಿ ತೀರ್ಪಿನಲ್ಲಿ ನನಗೆ ಸಹಮತ ಇಲ್ಲ: ಸ್ವಾಮಿ ಅಗ್ನಿವೇಶ್- ವೀಡಿಯೊ

ಬಾಬರಿ ಮಸೀದಿ ತೀರ್ಪಿನಲ್ಲಿ ನನಗೆ ಸಹಮತ ಇಲ್ಲ: ಸ್ವಾಮಿ ಅಗ್ನಿವೇಶ್- ವೀಡಿಯೊ

ಹೊಸದಿಲ್ಲಿ, ನ.26: ಬಾಬರಿ ಮಸೀದಿಯ ಕುರಿತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಹಲವರಿಂದ ಪ್ರಶ್ನೆ ಕೇಳಿ ಬಂದಿದೆ. ಜೊತೆಗೆ ಮುಸ್ಲಿಮ್ ವಿಭಾಗ ಈಗಾಗಲೇ ತಮ್ಮ ಅಸಂತೃಪ್ತಿಯನ್ನು ವ್ಯಕ್ತಪಡಿಸಿದೆ.

ಮುಸ್ಲಿಂ ಪರ್ಸನಲ್ ಲಾಬೋರ್ಡ್ ಮರು ಪರಿಶೀಲನೆ ಅರ್ಜಿ ದಾಖಲಿಸಲು ನಿರ್ಧರಿಸಿದೆ. ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಈ ತೀರ್ಪು ತನ್ನಲ್ಲಿ ಸಹಮತ ಸೃಷ್ಟಿಸಿಲ್ಲ ಎಂದಿದ್ದಾರೆ.

ನಮಗೆ ಬಾಬರಿ ಮಸೀದಿ ಅಯೋಧ್ಯೆ ವಿವಾದದ ತೀರ್ಪು ಸರಿಯಾಗಿದೆ ಎಂದನಿಸಿಲ್ಲ. ಸಂವಿಧಾನದ ಪ್ರಕಾರ ತೀರ್ಪು ಬಂದಿಲ್ಲ ವಿಶ್ವಾಸ ಆಧಾರಿತವಾಗಿ ನೀಡಲಾಗಿದೆ ಎಂದು ಸಂದರ್ಶನದಲ್ಲಿ ಅಗ್ನಿವೇಶ್ ಹೇಳಿದರು. ಸುಪ್ರೀಂಕೋರ್ಟು ಕಾನೂನು ಬಾಹಿರ ಕೆಲಸ ಮಾಡಿದವರಿಗೆ ಶಿಕ್ಷೆಯ ಬದಲು ಪಾರಿತೋಷಕ ನೀಡಿತು ಎಂದು ಅಭಿಪ್ರಾಯಿಸಿದರು.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …