Home / ಲೇಖನಗಳು / ಮುಹರ್ರಮ್ ನಮ್ಮಿಂದ ಏನು ಬಯಸುತ್ತದೆ?

ಮುಹರ್ರಮ್ ನಮ್ಮಿಂದ ಏನು ಬಯಸುತ್ತದೆ?

ನಾವೆಲ್ಲರೂ ಅಲ್ಲಾಹನು ಗೌರವಿಸಿದ ಪವಿತ್ರ ತಿಂಗಳಾದ ಷಹ್ರುಲ್ಲಾಹ್ ಯಾನೀ ಅಲ್ಲಾಹನ ತಿಂಗಳು ಎಂಬ ಗೌರವಕ್ಕೆ ಪಾತ್ರವಾದ ಹೊಸ ವರುಷದ ಮೊದಲನೇ ತಿಂಗಳಲ್ಲಿ ಇದ್ದೇವೆ.

ಈ ತಿಂಗಳ ಒಂಬತ್ತು ಮತ್ತು ಹತ್ತನೇ ದಿನಗಳಲ್ಲಿನ ಉಪವಾಸ ಐಚ್ಚಿಕವೆಂಬ ವಿಚಾರ ನಿಮಗೆಲ್ಲರಿಗೂ ತಿಳಿದಿದೆ . ಹಾಗೂ ಇದಕ್ಕಿರುವ ಪ್ರತಿಫಲ ಕೂಡಾ ಕಳೆದ ಒಂದು ವರುಷದ ಪಾಪಗಳು ಮನ್ನಿಸಲ್ಪಡಲಾಗುವುದು ಹಾಗೂ ರಮಝಾನಿನ ನಂತರದ ಶ್ರೇಷ್ಠ ಉಪವಾಸಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇವಲ ಉಪವಾಸ ಆಚರಿಸುವುದರಿಂದ ಮಾತ್ರ ಇಂತಹ ಪುಣ್ಯ ಲಭಿಸಲು ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಇಸ್ಲಾಂ ಧರ್ಮ ಕೇವಲ ಪೂಜಾ ಕಾರ್ಯಗಳ ಹೆಸರಲ್ಲ. ಕೇವಲ ಆಚರಣಿ ಸಂಭ್ರಮಗಳ ಹೆಸರೂ ಅಲ್ಲ. ಬದಲಾಗಿ ಇಸ್ಲಾಂ ಅನ್ನುವುದು ಕ್ರಾಂತಿಯಾಗಿದೆ.

ಆದ್ದರಿಂದ ಪುಣ್ಯಗಳ ಲೆಕ್ಕ ಹಾಕಿ ಆರಾಧನೆಗಳಲ್ಲಿ ಮಾತ್ರ ತಲ್ಲೀನರಾಗುವುದಕ್ಕೆ ಯಾವುದೇ ಅರ್ಥವಿಲ್ಲ. ಹಾಗಿರುತ್ತಿದ್ದರೆ ಪ್ರವಾದಿ (ಸ) ಮಸ್ಜಿದುಲ್ ಹರಮ್ ನಲ್ಲಿ ಕುಳಿತು ದಿಕ್ರ್ ತಸ್ಬೀಹ್ ಗಳಲ್ಲಿ ನಿರತರಾಗಿ ಅನಾಯಾಸ ಸ್ವರ್ಗಕ್ಕೆ ಹೋಗಬಹುದಿತ್ತು. ಮಕ್ಕಾ ಬಿಟ್ಟು ಹೋಗುವ ಅವಶ್ಯಕತೆ ಬರುತ್ತಿರಲಿಲ್ಲ.

ಇಲ್ಲಿ ತಿಳಿದಿರಬೇಕಾದ ವಿಚಾರವೇನೆಂದರೆ ಈ ಉಪವಾಸದ ಹಿನ್ನೆಲೆಯೇನು? ಮತ್ತು ಈ ಚರಿತ್ರೆ ನಮಗೆ ನೀಡುವ ಪಾಠ ಏನು? ಇದರಲ್ಲಿ ಸಮಕಾಲಕ್ಕೆ ಯಾವ ಸಂಬಂಧ ಇದೆ ಅನ್ನುವಂಥದ್ದು .

ನೋಡಿ ಕುರ್ ಆನಿನಲ್ಲಿ ಅನೇಕ ಪ್ರಾಣಿಗಳ ಹೆಸರು ಪ್ರಸ್ತಾಪ ವಾಗಿದೆ. ಆನೆ ಇರಬಹುದು, ಒಂಟೆ, ಸಿಂಹ, ಹೀಗೆ. ಇನ್ನೂ ಕತ್ತೆ, ನಾಯಿ, ಮಂಗ ಹಾಗೂ ಹಂದಿಯ ಪ್ರಸ್ತಾಪವೂ ಬಂದಿದೆ. ಇವು ನಾಲ್ಕು ಪ್ರಾಣಿಗಳು ಇಸ್ರಾಯೀಲ್ ಚರಿತ್ರೆಗೆ ಸಂಬಂಧಿಸಿದ, ಉದಾಹರಣೆಗಳಿಗಾಗಿ ಉಪಯೋಗಿಸಿದಂತಹ ಪ್ರಾಣಿಗಳು. ಅದೇನಂದರೆ ಮೂಸಾ(ಅ) ರ ಜನತೆಗೆ ಅನೇಕ ಅನುಗ್ರಹಗಳನ್ನು ನೀಡಲಾಗುತ್ತದೆ. ಆದರೆ ಆ ಜನತೆ ನೀಚವಾದ ಗುಲಾಮತನವನ್ನು ಬಯಸಿ ಮೂಸಾ( ಅ) ರಿಗೆ ನಿನ್ನ ದೇವರಿಂದ ನಮಗೆ ಈರುಳ್ಳಿಯನ್ನು ಕೇಳು ಹರಿವೆ ಸೌತೆ ಕಾಯಿಯನ್ನು ಕೇಳು. ಏಕೆಂದರೆ ಫಿರ್ಔನಿನ ಗುಲಾಮರಾಗಿದ್ದಾಗ ತಿಂದಂತೆ ವಸ್ತುಗಳು, ಅಂದ್ರೆ ಅವರು ಗುಲಾಮತನವನ್ನು ಬಯಸಿದರು. ಪೌಷ್ಟಿಕವಾದಂತಹ ಮನ್ನಾ ಸಲ್ವಾದಿಂದ ಅವರು ಸಂತೃಪ್ತರಾಗುವುದಿಲ್ಲ. ಮಾತ್ರವಲ್ಲ, ಪವಿತ್ರವಾದ ತೌರಾತ್ ಗ್ರಂಥ ಸಾರಾಂಶವನ್ನು ಅರಿಯಲು ಪ್ರಯತ್ನಿಸದಾಗ ಕುರ್ ಆನ್ ಆ ಜನತೆಯನ್ನು ಭಾರ ಹೊರುವ ಕತ್ತೆಗೆ ಹೋಲಿಸಿದೆ. ಆ ಕತ್ತೆಗೆ ತಾನು ಹೊರುವ ಗ್ರಂಥದ ಬೆಲೆ ತಿಳಿದಿಲ್ಲದಂತೆ ಮುಸ್ಲಿಂ ಸಮುದಾಯ ಆಗಬಾರದು. ನಾವು ಆಚರಿಸುವ ಈ ಉಪವಾಸದ ಮರ್ಮವೇನೆಂದು ತಿಳಿಯದೆ ಕತ್ತೆಯಂತಹ ಉಪವಾಸಿಗರು ನಾವಾಗಬಾರದು.

ಅದೇ ರೀತಿ ನಾಯಿಗೆ ಹೋಲಿಸಲಾಯಿತು. ಅದೇನಂದರೆ ನಾಯಿಗೆ ಎಸೆದ ಕಲ್ಲನ್ನು ಸಹ ಅದು ನನಗೆ ಎಸೆದ ಆಹಾರವೆಂಬ ಆಸೆಯಿಂದ ಮೂಸಿ ನೋಡುವಂತಹ ನಾಯಿಯ ತರ ಶೋಷಣೆಗೆ ಒಳಗಾಗುತ್ತಿದ್ದರೂ ನಮ್ಮ ಜೇಬು ತುಂಬುತ್ತಿದೆ ಎಂದು ಆಶಿಸುವ ನಾಯಿ ತರ ಅಥವಾ ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಕೈಯಲ್ಲಿರುವ ಗ್ರಂಥದ ಮಹಾನತೆ ತಿಳಿಯದಂತಹ ಮಂಗನಂತೆ ನಾವಾಗಬಾರದು .

ಆದ್ದರಿಂದ ಈ ಮುಹರ್ರಮ್ ಕೊಡುವ ಸಂದೇಶವೇನು ಎಂದು ಪ್ರತಿಯೊಬ್ಬ ಉಪವಾಸಿಗನೂ ಅರಿಯಲು ಪ್ರಯತ್ನಿಸಿ ಅದರ ತಿರುಳನ್ನು ಅರಿತು ಈ ಪ್ರಸಕ್ತ ಕಾಲದಲ್ಲಿ ನನ್ನ ಹೊಣಿಗಾರಿಕೆ ಏನು ಎಂದು ಎಚ್ಚೆತ್ತುಕೊಳ್ಳಬೇಕು .ಆಗ ಮಾತ್ರ ಈ ಉಪವಾಸ ಅರ್ಥ ಪೂರ್ಣ ಮತ್ತು ಪುಣ್ಯದಾಯಕ ವಾಗಲು ಸಾದ್ಯ.
ಅಲ್ಲಾಹನು ಅನುಗ್ರಹಿಸಲಿ.

✍️ರೈಹಾನ್.ವಿ.ಕೆ.
ಸಚೇರಿಪೇಟೆ.

SHARE THIS POST VIA

About editor

Check Also

ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ

✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ …