Home / editor (page 57)

editor

ಸುಮಧುರ ದಾಂಪತ್ಯ: ಹೆಣ್ಣಿನ ಪಾತ್ರ ಏನು?

ಇರ್ಷಾದ್, ಬೈರಿಕಟ್ಟೆ ದಾಂಪತ್ಯದ ಬುನಾದಿ ಗಂಡು ಹೆಣ್ಣಿನ ಕೂಡುವಿಕೆಯಿಂದ; ಸುಖ ದಾಂಪತ್ಯ ಜೀವನವನ್ನು ಬಯಸದವರಾರು? ಮಾತಿನಲ್ಲಿ-  ಲೇಖನದಲ್ಲಿ ದಾಂಪತ್ಯ ಬದುಕಿನ ಬಗೆಗೆ ಮಧುರವಾದ ಅಕ್ಷರಗಳನ್ನು ಪೋಣಿಸುವುದು ಬಲು ಸುಲಭ. ಆದರೆ ನಿಜ ಜೀವನದ ಪ್ರಯೋಗಾಲಯದಲ್ಲಿ ನಡೆಸುವ ಪ್ರಯೋಗಗಳು ಸೂಕ್ಷ್ಮವಾಗಿರಬೇಕು, ಕೆಲವೊಮ್ಮೆ ಸಂಭವಿಸುವ ಕ್ಷುಲ್ಲಕ ತಪ್ಪುಗಳೂ ಮಧುರತೆಯ ಹಾದಿಯಲ್ಲಿ ಮುಳ್ಳಾಗಿ ಕಾಡಬಹುದು. ಪವಿತ್ರ ಕುರ್‌ಆನ್ ದಂಪತಿಗಳನ್ನು ನೀವು ಪರಸ್ಪರ ಉಡುಪಿನಂತಿರಬೇಕು ಎಂದಿದೆ.  (ಸೂರಾ ಬಕರಾ: 187) ಇನ್ನೊಂದು ಕಡೆ “ಹಾಗೆಯೇ ಅವನು …

Read More »

‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸಿ: ಗುಜರಾತ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅಲ್ಪಸಂಖ್ಯಾತ ಸಮನ್ವಯ ಸಮಿತಿ

ನವದೆಹಲಿ: ‘ಜಿಹಾದ್’ ಪದದ ದುರುಪಯೋಗವನ್ನು ನಿಲ್ಲಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಸಮನ್ವಯ ಸಮಿತಿ ಸೋಮವಾರ ಗುಜರಾತ್ ರಾಜ್ಯಪಾಲ ಆಚಾರ್ಯ ದೇವರಾತ್ ಅವರಿಗೆ ಮನವಿ ಸಲ್ಲಿಸಿದೆ. ಮುಸ್ಲಿಂ ಸಮುದಾಯವನ್ನು ಕೆಣಕಲು ಮತ್ತು ವಿವಿಧ ಸಮುದಾಯಗಳಲ್ಲಿ ದ್ವೇಷವನ್ನು ಹರಡಲು ‘ಜಿಹಾದ್’ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರು ಮತ್ತು ರಾಜಕೀಯ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎನ್ಜಿಒ ಆಗ್ರಹಿಸಿದೆ. ಎನ್‌ಜಿಒದ ಕನ್ವೀನರ್ ಮುಜಾಹಿದ್ ನಫೀಸ್, ಮುಸ್ಲಿಂ ಮಿರರ್ ಜೊತೆ ಮಾತನಾಡುತ್ತಾ , ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ …

Read More »

ಈ ಕಾರಣಕ್ಕೆ ಅಯೋಧ್ಯೆಯ ರಾಮ್ ಮಂದಿರಕ್ಕೆ 1 ಲಕ್ಷ ದೇಣಿಗೆ ನೀಡಿದ ಮುಸ್ಲಿಂ ಉದ್ಯಮಿ

ಚೆನ್ನೈ : ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ನಗರದ ಮುಸ್ಲಿಂ ಉದ್ಯಮಿಯೊಬ್ಬರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹ 1 ಲಕ್ಷ ದೇಣಿಗೆ ನೀಡಿದ್ದಾರೆ, ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ತಮಿಳುನಾಡಿನ ಭಕ್ತರು ದಾನ ಮಾಡುತ್ತಿದ್ದಾರೆ. ದೇವಾಲಯ ನಿರ್ಮಾಣಕ್ಕಾಗಿ ಕೇಂದ್ರವು ಸ್ಥಾಪಿಸಿದ ಶ್ರೀ ರಾಮ್ ಜನಂಭೂಮಿ ತೀರ್ಥ ಕ್ಷೇತ್ರ (ಎಸ್‌ಆರ್‌ಜೆಟಿಕೆ) ಯೊಂದಿಗೆ ₹ 10, 100 ಮತ್ತು ₹ 1,000 ದೇಣಿಗೆ ಕೂಪನ್‌ಗಳೊಂದಿಗೆ ಹೊರಬರುತ್ತಿದ್ದು, ಹೆಚ್ಚಿನ ಸಂಖ್ಯೆಯ ಜನರು ದೇಣಿಗೆ ನೀಡಲು …

Read More »

ಬಾಂಗ್ಲಾದೇಶದ ಕೆಲಸದಾಕೆಯನ್ನು ಥಳಿಸಿ ಕೊಂದ ಸೌದಿ ಮಹಿಳೆಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ರಿಯಾದ್: ಬಾಂಗ್ಲಾದೇಶದ ಕೆಲಸದಾಕೆಯನ್ನು ಥಳಿಸಿದ ಸೌದಿ ಮಹಿಳೆಯೊಬ್ಬರಿಗೆ ಭಾನುವಾರ ಮರಣದಂಡನೆ ವಿಧಿಸಲಾಗಿದೆ. ಆಯೆಷಾ ಅಲ್-ಜಿಜಾನಿ ಎಂದು ಗುರುತಿಸಲ್ಪಟ್ಟ ಆರೋಪಿಯು ತನ್ನ 40 ವರ್ಷದ ಬಾಂಗ್ಲಾದೇಶದ ಸೇವಕಿ ಅಬಿರಾನ್ ಬೇಗಂನನ್ನು 2019 ರ ಮಾರ್ಚ್‌ನಲ್ಲಿ ನಿರ್ದಯವಾಗಿ ಥಳಿಸಿ ಕೊಂದದ್ದಕ್ಕಾಗಿ ಸೌದಿ ನ್ಯಾಯಾಲಯವು ಆಕೆಗೆ ಮರಣದಂಡನೆ ವಿಧಿಸಲಾಗಿದೆ. ಬಾಂಗ್ಲಾದೇಶದ ವಲಸಿಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೇಗಂರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ನೆರವು ನೀಡದ ಕಾರಣಕ್ಕೆ ಮತ್ತು ಆಕೆಯನ್ನು ಕಾನೂನು ಬಾಹಿರವಾಗಿ ಮನೆಯ …

Read More »

ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿ ಉಡುಗೊರೆ ನೀಡಿದ ಭಾರತ ಸರಕಾರ ; ಉದ್ದೇಶವೇನು ಗೊತ್ತೇ

ನವದೆಹಲಿ: ಮಧ್ಯಪ್ರಾಚ್ಯ ದೇಶದಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತವು ಸಿರಿಯಾಕ್ಕೆ 2000 ಮೆಟ್ರಿಕ್ ಟನ್ ಅಕ್ಕಿಯನ್ನು ಉಡುಗೊರೆಯಾಗಿ ನೀಡಿದೆ. 1000 ಮೆಟ್ರಿಕ್ ಟನ್ ಅಕ್ಕಿಯನ್ನು ಮೊದಲ ಬಾರಿಗೆ ಸಿರಿಯಾದ ಭಾರತ ರಾಯಭಾರಿ ಹಿಫ್ಜುರ್ ರಹಮಾನ್ ಅವರು ಸ್ಥಳೀಯ ಆಡಳಿತ ಸಚಿವರು ಮತ್ತು ಸುಪ್ರೀಂ ರಿಲೀಫ್ ಕಮಿಟಿ ಮುಖ್ಯಸ್ಥ ಹುಸೇನ್ ಮಖ್ಲೌಫ್ ಅವರಿಗೆ ಗುರುವಾರ ಹಸ್ತಾಂತರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಉಳಿದ 1000 ಮೆಟ್ರಿಕ್ ಟನ್ …

Read More »

ಶಾಂತಿಯ ಮಾರ್ಗ

ಶಾಂತಿಯ ಮಾರ್ಗ ದೇವನ ಅಸ್ತಿತ್ವ ಮತ್ತು ಏಕತೆಯ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನೊದಗಿಸಿ ದೇವನ ಮಾರ್ಗದರ್ಶನದಂತೆ ನಡೆದರೆ ಮಾತ್ರ ಲೋಕದಲ್ಲಿ ಶಾಂತಿ, ನೆಮ್ಮದಿ ಲಭಿಸಬಹುದೆಂಬುದನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸುವಂತಹ ಪುಸ್ತಕ. ಲೇಖಕರು : ಮೌ ಸಯ್ಯದ್ ಅಬುಲ್ ಆಲಾ ಮೌದೂದಿ ಪುಟಗಳು: 32,  ಬೆಲೆ: ರೂ. 19.00 ಈ ಪುಸ್ತಕ ಓದಲಿಚ್ಚಿಸುವಿರಾ? ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ: 9060341799 ನಮ್ಮ ಅಂಚೆ ವಿಳಾಸ: ಇಸ್ಮಿಕ, ಪಿ.ಬಿ.ನಂ.229, ಮಂಗಳೂರು 575001

Read More »

ತಪ್ಪು ಕಲ್ಪನೆಗಳು

ತಪ್ಪು ಕಲ್ಪನೆಗಳು ಇಸ್ಲಾಮಿನ ಬಗ್ಗೆ ಇಂದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಕೆಲವು ಪ್ರಮುಖ ತಪ್ಪು ಕಲ್ಪನೆಗಳನ್ನು ನೀಗಿಸುವುದೇ ಈ ಗ್ರಂಥದ ಉದ್ದೇಶ. ಇಸ್ಲಾಮಿನ ಅಧ್ಯಯನಕ್ಕೆ ತಡೆಯಾಗಿರುವ ಈ ತಪ್ಪು ಕಲ್ಪನೆಗಳ ನಿವಾರಣೆಯಿಂದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ಉಂಟಾಗಬಹುದು. ಇಂದಿನ ವೈಷಮ್ಯಪೂರ್ಣ, ಕೋಮುಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಈ ಪುಸ್ತಕ ಸಹಕಾರಿ. ಮುಸ್ಲಿಮೇತರ ಬಂಧುಗಳಿಗಾಗಿಯೇ ರಚಿಸಲಾಗಿರುವ ಈ ಗ್ರಂಥವು ಇಸ್ಲಾಮೀ ಸಂದೇಶ ಪ್ರಚಾರದ ಹೊಣೆ ಹೊತ್ತ ಮುಸ್ಲಿಮ್ ಬಂಧುಗಳಿಗೂ ಅಷ್ಟೇ ಉಪಯುಕ್ತವೆನಿಸುವುದರಲ್ಲಿ …

Read More »

ದೇವಾಸ್ತಿತ್ವವನ್ನು ನಿರಾಕರಿಸಲಾದೀತೇ?

ದೇವಾಸ್ತಿತ್ವವನ್ನು ನಿರಾಕರಿಸಲಾದಿತೇ? ದೇವವಿಶ್ವಾಸವು ಮಾನವನ ನೈಸರ್ಗಿಕ ಬೇಡಿಕೆ ಎಂಬುದು ವ್ಯಕ್ತ. ಅಂತೆಯೇ ಆ ಕುರಿತು ಜನರು ವೈವಿಧ್ಯಮಯ ದೃಷ್ಟಿ ಕೋನವನ್ನು ಹೊಂದಿರುವರೆಂಬುದೂ ಅಷ್ಟೇ ಸ್ಪಷ್ಟ. ಈ ಕಿರುಹೊತ್ತಗೆಯಲ್ಲಿ ಪ್ರಸ್ತುತ ವಾಸ್ತವಿಕತೆಯನ್ನೂ ಈ ಬಗ್ಗೆ ಪ್ರತಿಯೊಬ್ಬರ ನಿಲುವನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಆದುದರಿಂದ ಇದು ಒಂದು ಸಂಶೋಧನಾತ್ಮಕ ಕೃತಿ. ಲೇಖಕರು : ಪ್ರೊ| ಕಮಾಲ್ ಪಾಶಾ. ಎಂ.ಎ ಪುಟಗಳು : 24    ಬೆಲೆ:ರೂ.11.00   ಈ ಪುಸ್ತಕ ಓದಲಿಚ್ಚಿಸುವಿರಾ? ವಾಟ್ಸಾಪ್ ಮೂಲಕ ನಮ್ಮನ್ನು …

Read More »

ಮೀನು ತಿನ್ನುವುದರಲ್ಲಿ ಯಾಕೋ ಮುಂದೆ!! ಮೀನಿನ ಅಧ್ಯಯನದಲ್ಲಿ ಯಾಕೆ ಹಿಂದೆ!!

ರಫೀಕ್ ಮಾಸ್ಟರ್ ನಾವು ಮೀನು ಪ್ರಿಯರು. ಬಗೆ ಬಗೆಯ ಮೀನುಗಳನ್ನು ತಿನ್ನುವುದೆಂದರೆ ನಮಗೆ ಬಹಳ ಇಷ್ಟ. ಮೀನು ವ್ಯಾಪಾರದಲ್ಲೂ ನಮ್ಮದು ಎತ್ತಿದ ಕೈ. ದೊಡ್ಡ ದೊಡ್ಡ ಮೀನಿನ ಫ್ಯಾಕ್ಟರಿಗಳು ನಮ್ಮವರಿಗಿದೆ. ಮೀನನ್ನು ರಫ್ತು ಮಾಡುವ ಹೆಸರಾಂತ ಯಶಸ್ವಿ ಉದ್ಯಮಿಗಳು ನಮ್ಮವರಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ಆದರೆ ಮೀನಿನ ಬಗ್ಗೆ ಎಷ್ಟು ಅಧ್ಯಯನ, ಸಂಶೋಧನೆ ನಾವು ಮಾಡುತ್ತೇವೆ ಎಂದು ತಿಳಿಯಬೇಕಾದರೆ ನಮ್ಮ ಪಕ್ಕದಲ್ಲೇ ಇರುವ ಮೀನುಗಾರಿಕಾ ಕಾಲೇಜಿಗೆ ಭೇಟಿ ಕೊಡಬೇಕು. ಇಡೀ ಕರ್ನಾಟಕಕ್ಕೆ …

Read More »

“ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ

ಮಂಗಳೂರು: “ಸದೃಢ ಕುಟುಂಬ, ಸುಭದ್ರ ಸಮಾಜ” ಎಂಬ ಧ್ಯೇಯ ವಾಕ್ಯದಡಿ ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ದೇಶದಾದ್ಯಂತ ಫೆಬ್ರವರಿ19 ರಿಂದ 28/2021 ರ ವರೆಗೆ ಅಭಿಯಾನ ನಡೆಯಲಿದೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಫೆಬ್ರವರಿ 28 ರಂದು 30 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. “ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದಲ್ಲಿ ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಈ …

Read More »