Home / ವಾರ್ತೆಗಳು / ಕೊರೋನಾ ಸಂತ್ರಸ್ತರಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಡಾ. ಶಿರೀನ್ ರೌಹಾನಿ

ಕೊರೋನಾ ಸಂತ್ರಸ್ತರಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಡಾ. ಶಿರೀನ್ ರೌಹಾನಿ

ಟೆಹ್ರಾನ್: ಇರಾನ್ ದೇಶದ ಶೊಹದ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಹಾಗೂ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿದ್ದ ಡಾ. ಶಿರೀನ್ ರೌಹಾನಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ.

ಅನಾರೋಗ್ಯಕ್ಕೀಡಾದ ಬಳಿಕ ಅವರನ್ನು ಟೆಹ್ರಾನ್ ನ ಮಸೀಹ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ನಿಧನರಾದರು. ಡ್ರಿಪ್ಸ್ ಪಡೆಯುತ್ತಿರುವಾಗಲೂ ಕುಳಿತುಕೊಂಡು ರೋಗಿಗಳ ಆರೈಕೆ ಮಾಡಿದ್ದಾರೆನ್ನಲಾದ ಡಾ. ರೌಹಾನಿಯವರ ಒಂದು ಫೋಟೋ ಕೂಡಾ ವೈರಲ್ ಆಗಿದೆ.

ಇರಾನ್ ನಲ್ಲಿ ಕೊರೋನಾ ವೈರಸ್ ಮಿತಿಮೀರಿದಂದೆ ಅಲ್ಲಿನ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಕ್ತ ಸಾಧನಗಳಾದ ಮಾಸ್ಕ್, ಗ್ಲವ್ಸ್ ಮತ್ತಿತರ ವಸ್ತುಗಳ ಕೊರತೆಯಿದೆಯೆನ್ನಲಾಗಿದೆ. ಜತೆಗೆ ಆಸ್ಪತ್ರೆಗಳೂ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಕರ್ತವ್ಯದಲ್ಲಿರುವ ದಾದಿಯರು ಹೆಚ್ಚು ಹೆಚ್ಚು ರೋಗಿಗಳ ಆರೈಕೆ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …