Home / ವಾರ್ತೆಗಳು / ಮಕ್ಕಳ ವೈದ್ಯೆಯಾಗಿ ಮಂಗಳೂರಿನ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ನೇಮಕವಾದ ಡಾ/ ಆಸಿಯಾ ಲಿಫಾಮ್

ಮಕ್ಕಳ ವೈದ್ಯೆಯಾಗಿ ಮಂಗಳೂರಿನ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ನೇಮಕವಾದ ಡಾ/ ಆಸಿಯಾ ಲಿಫಾಮ್

ಮಂಗಳೂರು, ಏಪ್ರಿಲ್ 4- ಇಲ್ಲಿನ ಯುವ ವೈದ್ಯೆ ಡಾ/ ಆಸಿಯಾ ಲಿಫಾಮ್ ಅವರು ನಗರದ ಪ್ರಮುಖ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ಮಕ್ಕಳ ವೈದ್ಯೆಯಾಗಿ ನೇಮಕಗೊಂಡಿದ್ದಾರೆ. ಮುಖ್ಯವಾಗಿ ವಿಶೇಷ ನಿಗಾ ಘಟಕದಲ್ಲಿ ಮೆಡಿಕಲ್ ಆಫೀಸರ್ ಆಗಿ ಅವರು ಕರ್ತವ್ಯ ನಿಭಾಯಿಸಲಿದ್ದಾರೆ.

ದೇರಳಕಟ್ಟೆಯ ಕೆ ಎಸ್ ಹೆಗಡೆ ನಿಟ್ಟೆ ಆಸ್ಪತ್ರೆಯಲ್ಲಿ 2018ರಲ್ಲಿ ಪದವಿ ಮುಗಿಸಿ, ಒಂದು ವರ್ಷದ ಇಂಟರ್ ಶಿಪ್ ನ ಬಳಿಕ ಅವರು ಲೇಡಿಗೋಷನ್ ಆಸ್ಪತ್ರೆಯನ್ನು ಸೇರಿಕೊಳ್ಳುತ್ತಿದ್ದಾರೆ. ಖ್ಯಾತ ಸಮಾಜ ಸೇವಕ, ಸಂಘಟಕ ಮತ್ತು ಕೆರಿಯರ್ ಗೈಡೆನ್ಸ್ ಅನ್ನು ನಿರ್ವಹಿಸುತ್ತಿರುವ ಉಮರ್ ಯು ಹೆಚ್ ಮತ್ತು ಮುಜಾಹಿದಾ ಬಾನು ಅವರ ಪುತ್ರಿಯಾಗಿರುವ ಡಾ/ ಆಸಿಯಾ ಲಿಫಾಮ್ ಅವರು 8 ರಿಂದ 10ನೇ ತರಗತಿಯವರೆಗೆ ತೊಕ್ಕೊಟ್ಟಿನ ಹಿರಾ ಶಾಲೆಯಲ್ಲಿ ಕಲಿತಿದ್ದು ಪಿಯುಸಿಯನ್ನು ಮಂಗಳೂರಿನ ಸೈಂಟ್ ಆನ್ಸ್ ನಲ್ಲಿ ಮುಗಿಸಿದ್ದರು.

 

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …