Home / ವಾರ್ತೆಗಳು / ರಾಜೇಂದ್ರರಿಗೆ ಮಕ್ಕಳಿರಲಿಲ್ಲ, ಸಹೋದರರೂ ತಲುಪಲಿಲ್ಲ: ಮುಸ್ಲಿಮರೇ ಶವಸಂಸ್ಕಾರ ನಿರ್ವಹಿಸಿದರು

ರಾಜೇಂದ್ರರಿಗೆ ಮಕ್ಕಳಿರಲಿಲ್ಲ, ಸಹೋದರರೂ ತಲುಪಲಿಲ್ಲ: ಮುಸ್ಲಿಮರೇ ಶವಸಂಸ್ಕಾರ ನಿರ್ವಹಿಸಿದರು

ಜೈಪುರ, ಎ. 14: ಕೊರೊನಾ ಕಾಲದಲ್ಲಿ ಹಲವಾರು ಮಾನವೀಯ ಕಾರ್ಯಗಳ ಸಾಲಿಗೆ ಇದನ್ನೂ ಸೇರಿಸಬಹುದು. ನಿಕಟ ಸಂಬಂಧಿಕರಿಗೆ ಬಂದು ಮುಟ್ಟಲು ಆಗದ್ದರಿಂದ ರಾಜಸ್ತಾನದ ಜೈಪುರದಲ್ಲಿ ಕ್ಯಾನ್ಸರ್ ಪೀಡಿತರಾಗಿ ಮೃತಪಟ್ಟ ಹಿಂದೂ ಕುಟುಂಬವೊಂದರ ವ್ಯಕ್ತಿಯ ಅಂತ್ಯವಿಧಿಯನ್ನು ಹಿಂದು ಧರ್ಮ ಪ್ರಕಾರ ನೆರೆಯ ಮುಸ್ಲಿಮರ ನಿರ್ವಹಿಸಿದ್ದಾರೆ ಎಂದು ಇಂಡಿಯ ಟುಡೆ ವರದಿ ಮಾಡಿದೆ.

ಭಜ್ರಂಗ್ ನಗರ ಭಟ್ಟಬಸ್ತಿಯ ರಾಜೇಂದ್ರ ಸೋಮವಾರ ಮೃತಪಟ್ಟಿದ್ದರು. ಅವರಿಗೆ ಕ್ಯಾನ್ಸರ್ ಇತ್ತು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಗಂಡು ಮಕ್ಕಳೂ ಇರಲಿಲ್ಲ. ಲಾಕ್ ಡೌನ್ ಇದ್ದುದರಿಂದ ಒಡಹುಟ್ಟಿದ ಸಹೋದರರಿಗೂ ಬಂದುಮುಟ್ಟಲು ಆಗಿಲ್ಲ. ನಂತರ ನೆರೆಯ ಮುಸ್ಲಿಮರು ಮರಣಾನಂತರದ ವಿಧಿವಿಧಾನಗಳಿಗೆ ನೇತೃತ್ವ ನೀಡಿದ್ದಾರೆ. ಮೃತದೇಹವನ್ನು ಹಿಂದೂ ಕ್ರಮ ಪ್ರಕಾರ ಶ್ಮಶಾನಕ್ಕೆ ಕೊಂಡುಹೋಗಿ ಶವಸಂಸ್ಕಾರ ನಡೆಸಿದ್ದಾರೆ.

ಈ ಹಿಂದೆ ಮುಂಬೈ ಬಾಂದ್ರದಲ್ಲಿ ಮತ್ತು ಉತ್ತರಪ್ರದೇಶದ ಮೀರತ್‍ನಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …