Home / ವಾರ್ತೆಗಳು / 193 ಮಂದಿ ಕೊರೋನಾ ಶಂಕಿತರಿಗೆ ಕ್ವಾರಂಟೈನ್ ತಾಣವಾಗಿ ಬದಲಾದ ಬೀದರ್ ನ ಶಾಹೀನ್ ಶಾಲೆ: ಊಟದ ಜೊತೆ ಎಲ್ಲ ಸೌಲಭ್ಯಗಳೂ ಉಚಿತ

193 ಮಂದಿ ಕೊರೋನಾ ಶಂಕಿತರಿಗೆ ಕ್ವಾರಂಟೈನ್ ತಾಣವಾಗಿ ಬದಲಾದ ಬೀದರ್ ನ ಶಾಹೀನ್ ಶಾಲೆ: ಊಟದ ಜೊತೆ ಎಲ್ಲ ಸೌಲಭ್ಯಗಳೂ ಉಚಿತ

ಬೀದರ್, ಏಪ್ರಿಲ್ 15- ಇಲ್ಲಿನ ಶಾಹೀನ್ ಶಾಲೆಯು ರಾಜ್ಯದಲ್ಲಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ.

ಕೊರೋನಾ ಶಂಕಿತ 193 ಮಂದಿಗೆ ಕ್ವಾರಂಟೈನ್ ಗಾಗಿ ತನ್ನ ಶಾಲೆಯನ್ನೇ ಶಾಹೀನ್ ಆಡಳಿತ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ. ಅಲ್ಲದೆ, ಈ 193 ಮಂದಿಗೆ ಊಟ, ಮಾಸ್ಕ್, ಗ್ಲೌಸು, ಸಾಬೂನು, ನೀರು ಸಹಿತ ಎಲ್ಲವನ್ನೂ ಶಾಹೀನ್ ರೆಸಿಡೆನ್ಶಿಯಲ್ ಪಿಯು ಕಾಲೇಜಿನಲ್ಲಿ ಒದಗಿಸಲಾಗಿದೆ. ಈ 193 ಮಂದಿಯಲ್ಲಿ ಹಿಂದೂಗಳು, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮದವರೂ ಇದ್ದಾರೆ. ಮಹಿಳೆಯರೂ ಪುರುಷರೂ ಇದ್ದಾರೆ.

ಈ ಮೊದಲು ಕೊರೋನಾ ಶಂಕಿತರನ್ನು ಸರಕಾರಿ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಇರಿಸಲಾಗಿತ್ತು. ಆದರೆ ಈ ಹಾಸ್ಟೆಲು ಜನವಸತಿ ಪ್ರದೇಶದಲ್ಲಿ ಇರುವುದರಿಂದ ಕೊರೋನಾ ಶಂಕಿತರನ್ನು ಇಲ್ಲಿ ಇರಿಸುವುದಕ್ಕೆ ಸುತ್ತಮುತ್ತಲಿನ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅಲ್ಲದೆ ಬೀದರ್ ನ ಆಸುಪಾಸಿನಲ್ಲಿರುವ ಯಾವ ಶಾಲೆಗಳು ಕೂಡ ಕ್ವಾರಂಟೈನ್ ಗಾಗಿ ಶಾಲೆಗಳನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ. ಇಂತಹ ಸಂದರ್ಭದಲ್ಲಿ ಶಾಹೀನ್ ಶಾಲೆಯು ತನ್ನೆಲ್ಲಾ ಸೌಲಭ್ಯಗಳ ಜೊತೆ ಕೊರೋನಾ ಶಂಕಿತರಿಗೆ ಆಶ್ರಯ ಒದಗಿಸುವುದಾಗಿ ಜಿಲ್ಲಾಡಳಿತಕ್ಕೆ ಭರವಸೆ ಕೊಟ್ಟಿದ್ದಲ್ಲದೆ ಹವಾನಿಯಂತ್ರಿತ ಕೋಣೆಗಳನ್ನು ಕೂಡ ಬಿಟ್ಟುಕೊಡುವುದಕ್ಕೆ ಸಿದ್ಧವಾಯಿತು.

ಈ ಮೊದಲು ಬೀದರ್ ಜಿಲ್ಲಾಡಳಿತಕ್ಕೆ 8 ವಾಹನಗಳನ್ನು ಈ ಶಾಲೆಯ ಬಿಟ್ಟುಕೊಟ್ಟಿತ್ತು. ಕೊರೋನಾದ ಜಾಗೃತಿಗಾಗಿ ಮತ್ತು ಕೊರೋನಾ ರೋಗಿಗಳನ್ನು ಸ್ಥಳಾಂತರಿಸುವುದಕ್ಕೆ ಮತ್ತು ಅವರ ಸಂಬಂಧಿಕರನ್ನು ಪರೀಕ್ಷೆಗಾಗಿ ಕರೆತರುವುದು ಇತ್ಯಾದಿಗಳಿಗಾಗಿ ಈ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಇದೇ ಶಾಲೆಯ ಪ್ರಾಥಮಿಕ ತರಗತಿಯ ಮಕ್ಕಳು ಆಡಿದ ನಾಟಕವನ್ನು ನೆಪವಾಗಿಸಿಕೊಂಡು ತಿಂಗಳ ಹಿಂದೆ ಜಿಲ್ಲಾಡಳಿತ ವಿಪರೀತ ಕ್ರಮವನ್ನು ಕೈಗೊಂಡಿತ್ತು. ವಿದ್ಯಾರ್ಥಿಯ ತಾಯಿ ಮತ್ತು ಶಿಕ್ಷಕಿಯ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಜೈಲಿಗೆ ಅಟ್ಟಲಾಗಿತ್ತು. ಶಾಲೆಯ ಮೇಲೂ ಕೇಸು ದಾಖಲಿಸಲಾಗಿತ್ತು.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …