Home / ವಾರ್ತೆಗಳು / ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ವಲಸಿಗರಿಗೆ ನೆರವಾಗುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್: ಇಂಡಿಯಾ ಟುಡೇ ಟಿವಿ ಭೇಟಿ

ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ವಲಸಿಗರಿಗೆ ನೆರವಾಗುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್: ಇಂಡಿಯಾ ಟುಡೇ ಟಿವಿ ಭೇಟಿ

ಭೋಪಾಲ,ಮೇ.20: ಮಧ್ಯಪ್ರದೇಶದ ಹೊರವಲಯದಲ್ಲಿರುವ ವಿದಿಶಾ ಬೈಪಾಸ್ ರಸ್ತೆಯಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ಸ್ಥಾಪಿಸಿದೆ. ಭೋಪಾಲದಲ್ಲಿ ಹಾದುಹೋಗುವ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ. ಜಮಾಅತೆ ಇಸ್ಲಾಮಿ ಸ್ವಯಂ ಸೇವಕರು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ, ಮಕ್ಕಳಿಗೆ ಹಾಲು, ಪ್ರಯಾಸಕರವಾದ ಸುಧೀರ್ಘ ಪ್ರಯಾಣವಿದ್ದರೂ ಮನೆಗೆ ಹಿಂದಿರುಗಿ ಕಾಲ್ನಡಿಗೆಯಲ್ಲಿ ಹೊರಟವರಿಗೆ ಬೇಕಾಗುವ ಬೂಟುಗಳು ಮತ್ತು ಚಪ್ಪಲಿಗಳನ್ನು ಒದಗಿಸುವ, ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಔಷಧಿಯನ್ನು ಒದಗಿಸುವ ಕೆಲಸವನ್ನು ಜಮಾಅತೆ ಇಸ್ಲಾಮೀ ಹಿಂದ್ ಮಾಡುತ್ತಿದೆ.

ಇಂಡಿಯಾ ಟುಡೇ ಟಿವಿ ಸೋಮವಾರ ಮಧ್ಯರಾತ್ರಿಯ ನಂತರದ ಈ ಹೆಲ್ಪ್‌ಡೆಸ್ಕ್‌ಗೆ ಭೇಟಿ ನೀಡಿತು ಮತ್ತು ಜಮಾಅತೆ ಇಸ್ಲಾಮೀ ಸ್ವಯಂ ಸೇವಕರ ತಂಡವು, ವಲಸೆ ಕಾರ್ಮಿಕರನ್ನು ಹೊತ್ತು ಹಾದು ಹೋಗುವ ಪ್ರತಿ ಬಸ್‌ನತ್ತ ಸಹಾಯ ಹಸ್ತ ನೀಡಲು ಧಾವಿಸುವುದನ್ನು ಪ್ರತ್ಯಕ್ಷವಾಗಿ ಕಂಡಿತು‌.

“ಇದು ಯಾವುದೇ ರಾಜಕಾರಣಿ ಅಥವಾ ಯಾವುದೇ ರಾಜಕೀಯ ಪಕ್ಷದಿಂದ ಬಂದದ್ದಲ್ಲ, ಇದು ಸಹಾಯವೂ ಅಲ್ಲ, ನೀವು ನಮ್ಮವರು, ಆದ್ದರಿಂದ ದಯವಿಟ್ಟು ಇವುಗಳನ್ನು ಸ್ವೀಕರಿಸಿ” ಎಂದು ಸ್ವಯಂ ಸೇವಕರು ವಲಸೆ ಕಾರ್ಮಿಕರಿಗೆ ಆಹಾರ, ನೀರು, ಹಣ್ಣುಗಳು, ಬಿಸ್ಕತ್ತು ಮತ್ತು ಹಾಲನ್ನು ನೀಡುತ್ತಿದ್ದ ದೃಶ್ಯಗಳು ಕಂಡು ಬಂದವು.

“ಕೇವಲ ಆಹಾರ ಮತ್ತು ನೀರು ಮಾತ್ರವಲ್ಲ, ಅಗತ್ಯವಿರುವ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸಹ ಖರೀದಿಸಿದ್ದೇವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸಂಕಷ್ಟದಲ್ಲಿದ್ದಾರೆ. ಅವರಿಗೆ ಈಗ ಕೇವಲ ಮಾನವೀಯ ಸಹಾಯ ಬೇಕು” ಎಂದು ಸ್ವಯಂ ಸೇವಕರು ಇಂಡಿಯಾ ಟುಡೇ ಟಿವಿಗೆ ತಿಳಿಸಿದರು.

ಅನೇಕ ದಣಿದ ಕಾರ್ಮಿಕರು ಬಸ್ ಕಿಟಕಿಗಳಿಂದ ತಮಗೆ ನೀಡಲಾಗಿದ್ದನ್ನು ತೆಗೆದುಕೊಂಡರೆ, ಕೆಲವರು ಭಾವುಕತೆಯಿಂದ ಕಣ್ಣೀರು ಹರಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಸ್ಸುಗಳಿಂದ ಕೆಳಗಿಳಿದರು.

ನನ್ನ ಸ್ನೇಹಿತ ಮತ್ತು ನಾನು ಮೂರು ದಿನಗಳ ಹಿಂದೆ ಅಹಮದಾಬಾದ್‌ನಿಂದ ಕಾಲ್ನಡಿಗೆಯಲ್ಲಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ದಾರಿಯಲ್ಲಿ, ನಾವು ಒಳ್ಳೆಯ ಮತ್ತು ಕೆಟ್ಟ ಅನುಭವಗಳೂ ಆಗಿವೆ. ಕೆಲವು ಟ್ರಕ್ ಚಾಲಕರು ನಮ್ಮ ಮೇಲೆ ಕರುಣೆ ತೋರಿ ನಮಗೆ ಲಿಫ್ಟ್ ನೀಡಲು ಮುಂದಾದರು ಆದರೆ ಕೆಲವರು ನಮ್ಮಲ್ಲಿದ್ದ ಅಲ್ಪ ಹಣವನ್ನು ಸಹ ದೋಚಿಕೊಂಡಿದ್ದಾರೆ. ನಾವು ಭೋಪಾಲ್ ತಲುಪಿದೆವು ಮತ್ತು ಇಲ್ಲಿ ಈ ಜನರು ನಮಗೆ ಆಹಾರವನ್ನು ನೀಡಿದರು. ನಾವು ಪಶ್ಚಿಮ ಬಂಗಾಳದವರು. ಈ ಸ್ವಯಂ ಸೇವಕರ ತಂಡವು ನಮ್ಮನ್ನು ಬಿಹಾರಕ್ಕೆ ರೈಲಿನ ಮೂಲಕ ಕಳುಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ, ಅಲ್ಲಿಂದ ನಾವು ಮನೆಗೆ ಹೋಗುತ್ತೇವೆ ” ಎಂದು ವಲಸೆ ಕಾರ್ಮಿಕರೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದರು.

“ಜಮಾತೆ-ಇ-ಇಸ್ಲಾಮಿ ಹಿಂದ್ ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಐದು ಸಮುದಾಯ ಅಡಿಗೆ ಮನೆಗಳನ್ನು ನಡೆಸುತ್ತಿದೆ ಮತ್ತು ಪ್ರತಿದಿನ ಸುಮಾರು 10,000 ಆಹಾರ ಪ್ಯಾಕೆಟ್‌ಗಳನ್ನು ಬಡವರ ನಡುವೆ ವಿತರಿಸಲಾಗುತ್ತದೆ”ಎಂದು ಶಕೀಲ್ ಹೇಳಿದರು.

ಜಮಾಅತ್ ಜನರ ಸಹಾಯಕ್ಕಾಗಿ ಎಲ್ಲ ಪ್ರಯತ್ನಗಳೊಂದಿಗೆ ಸಜ್ಜಾಗಿ ನಿಂತಿದೆ. ಈ ಸತ್ಕರ್ಮ ಕೈಗೊಳ್ಳಲು ಎಲ್ಲ ಧರ್ಮೀಯ ಸದಸ್ಯರಿಂದ ದೇಣಿಗೆ ನೀಡಿದ್ದಾರೆಂದು ನಾವು ಹೆಮ್ಮೆಯಿಂದ ಹೇಳಬಲ್ಲೆವು. ಯಾರೂ ಉದ್ದೇಶಪೂರ್ವಕವಾಗಿ ಯಾವುದೇ ರೋಗವನ್ನು ಹರಡುವುದಿಲ್ಲ ಮತ್ತು ತಮ್ಮ ಊರನ್ನು ತಲುಪಬೇಕೆಂಬ ಬಯಕೆಯಿಂದ ಕಾಲ್ನಡಿಗೆ ಹೊರಟ, ವಿವಿಧ ವಾಹನಗಳ ಮೇಲೆ ಕುಳಿತು ನಿಂತು ಪ್ರಯಾಣ ಬೆಳೆಸುತ್ತಿರುವ ವಲಸೆ ಕಾರ್ಮಿಕರಲ್ಲಿ ಕೆಲವರಿಗೆ ತಮಗರಿವಿಲ್ಲದೇ ಸೋಂಕು ತಗುಲಿರುವ ಸಾಧ್ಯತ್ಯೆಗಳೂ ಇರಬಹುದು. ಆದರೆ ಅವರ ಸಂಕಷ್ಟದಲ್ಲಿ ನಾವೀಗ ಸಹಾಯವನ್ನು ನೀಡಿ ಆತ್ಮವಿಶ್ವಾಸವನ್ನು ತುಂಬುವುದು ಅನಿವಾರ್ಯವಾಗಿದೆ” ಎಂದು ಶಕೀಲ್ ಹೇಳಿದರು.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …