Home / ವಾರ್ತೆಗಳು / ‘ಮಾನವ ಸಮಸ್ಯೆಗಳ ಸುಳಿಯಲ್ಲಿ’ ಕೃತಿ ಪರಿಚಯ

‘ಮಾನವ ಸಮಸ್ಯೆಗಳ ಸುಳಿಯಲ್ಲಿ’ ಕೃತಿ ಪರಿಚಯ

ಮಾನವ ಅಸ್ತಿತ್ವಕ್ಕೆ ಬಂದು ಸುಮಾರು 5 ಲಕ್ಷ ವರ್ಷಗಳಾದುವು ಎಂದು ಹೇಳಲಾಗುತ್ತದೆ. ಜಗತ್ತನ್ನು ಜಯಿಸುವ ಮಾನವನ ಶ್ರಮ ಅವಿರತವಾಗಿಯೇ ಇದೆ. ಆತ ಶಿಕ್ಷಣ, ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ಅಪೂರ್ವ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಆಧುನಿಕ ಆವಿಷ್ಕಾರಗಳ ಉತ್ತುಂಗಕ್ಕೂ ತಲುಪಿದ್ದಾನೆ. ಆದರೆ ಇದ್ಯಾವುದೂ ಮನುಷ್ಯನ ಸಂತೃಪ್ತ ಬದುಕಿಗೆ ಮತ್ತು ಆತನ ನೆಮ್ಮದಿಯ ನಾಳೆಗಳಿಗೆ ಪರಿಹಾರವೆಂದು ಗುರುತಿಸಲ್ಪಟ್ಟಿಲ್ಲ. ಜಗತ್ತು ಇಂದು ಏನೆಲ್ಲಾ ಪ್ರಗತಿ ಸಾಧಿಸಿದೆಯೋ, ಮನುಷ್ಯ ಕೂಡ ಅಷ್ಟೇ ಅದರ ಸುಳಿಯಲ್ಲಿ ಬಂದಿಯಾಗಿದ್ದಾನೆ. ಅದನ್ನು ಬಿಡಿಸಲು ಹೋದಂತೆ ಅವನ ಸಮಸ್ಯೆಗಳು ಇನ್ನಷ್ಟು ಜಟಿಲವಾಗುವುದನ್ನು ನಾವು ಕಾಣುತ್ತಿದ್ದೇವೆ. ಇಂದು ಜಗತ್ತನ್ನು ಆಳುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯ ಗ್ರಾಹಕ ಸಂಸ್ಕೃತಿಯ ಪೀಡೆಯು ಮಾನವ ಬದುಕನ್ನು ಮೂರಾಬಟ್ಟೆಯಾಗಿಸಿದೆ.
ಶಾಂತಿ ಪ್ರಕಾಶನ ದ ‘ಮಾನವ ಸಮಸ್ಯೆಗಳ ಸುಳಿಯಲ್ಲಿ’ ಎಂಬ ಕೃತಿಯು ಮಾನವ ಬದುಕಿನ ನೈಜತೆಯನ್ನು ಮತ್ತು ಆತ ಎಲ್ಲಿ ಎಡವಿದ್ದಾನೆ ಎಂಬುದರ ಕಡೆ ಬೆಳಕು ಚೆಲ್ಲುವ ಆವೃತಿಯಾಗಿದೆ. ಈ ಕೃತಿಯನ್ನು ಉಪಭೂಖಂಡದ ಖ್ಯಾತ ವಿದ್ವಾಂಸರೊಲ್ಲಬ್ಬರಾದ ಮೌ| ಸಯ್ಯದ್ ಜಲಾಲುದ್ದೀನ್ ಉಮರಿಯವರು 1961ರಲ್ಲಿ ರಚಿಸಿದ್ದು ; ಇದು ಇಂದಿಗೂ ಪ್ರಸ್ತುತವಾಗಿದೆ. ಮಾತ್ರವಲ್ಲ, ಇದು ಭಾರತದ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿದೆ. ಎಂ. ಸಾದುಲ್ಲಾ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಪುಟಗಳು : 84 . ಮುಖಬೆಲೆ: 40
•┈┈┈•✿ ಶಾಂತಿ ಪ್ರಕಾಶನ ✿•┈┈┈•
9448696490 | 9449333496
SHARE THIS POST VIA

About editor

Check Also

ಅಂತಾರಾಷ್ಟ್ರೀಯ ಕುರ್ ಆನ್ ಸ್ಪರ್ಧೆ ಮುಕ್ತಾಯ; ವಿಜೇತರಾದ ಸೌದಿ, ಬಾಂಗ್ಲಾ, ಫ್ರೆಂಚ್ ಪ್ರಜೆಗಳು

ಮಕ್ಕಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆ ಕೊನೆಗೊಂಡಿದ್ದು ಸೌದಿ ಬಾಂಗ್ಲಾದೇಶಿ ಮತ್ತು ಫ್ರಾನ್ಸ್ ನ ಸ್ಪರ್ಧಿಗಳು ವಿಜೇತರಾಗಿದ್ದಾರೆ. …