Home / ವಾರ್ತೆಗಳು / ಗಿನ್ನೆಸ್‌ ವಿಶ್ವದಾಖಲೆ ಸೃಷ್ಟಿಸಿದ ಕತರ್‌ ನ ಇಸ್ಲಾಮಿಕ್ ಕಲಾ ಮ್ಯೂಸಿಯಂ

ಗಿನ್ನೆಸ್‌ ವಿಶ್ವದಾಖಲೆ ಸೃಷ್ಟಿಸಿದ ಕತರ್‌ ನ ಇಸ್ಲಾಮಿಕ್ ಕಲಾ ಮ್ಯೂಸಿಯಂ

2 ತಾಸುಗಳಲ್ಲಿ 50 ಭಾಷೆಗಳಲ್ಲಿ ‘ಲಿಟಲ್ ಪ್ರಿನ್ಸ್’ ಕಥೆ ವಾಚನ

ದೋಹಾ: ಓದುವಿಕೆಯ ರಿಲೇ ಸ್ಪರ್ಧೆಯಲ್ಲಿ ಅತ್ಯಧಿಕ ಭಾಷೆಗಳನ್ನು ಬಳಸುವ ಮೂಲಕ ಕತರ್ ನ ಇಸ್ಲಾಮಿಕ್ ಕಲಾ ಮ್ಯೂಸಿಯಂ (ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್) ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ.

2022ರಲ್ಲಿ ಕತರ್‌ ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ ಕತರ್‌ ನಲ್ಲಿ ಮಾತನಾಡಲಾಗುವ ಹಲವಾರು ಭಾಷೆಗಳನ್ನು ಬಳಸಿಕೊಂಡು ಈ ವಾಚನ ಸ್ಪರ್ಧೆಯನ್ನು ಆಚರಿಸಲಾಗಿತ್ತು. 500ಕ್ಕೂ ಅಧಿಕ ಭಾಷೆಗಳಲ್ಲಿ ಅನುವಾದಗೊಂಡಿರುವ ಆ್ಯಂಟೊಯಿನ್ ಡೆ ಸೈಂಟ್ – ಎಕ್ಸುಪೆರಿ ಅವರ ಜನಪ್ರಿಯ ಪುಸ್ತಕ ಕೃತಿ ʼದಿ ಲಿಟಲ್ ಪ್ರಿನ್ಸ್ʼನ ವಾಚನವನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು

ಈ ಕಾರ್ಯಕ್ರಮದಲ್ಲಿ 150 ಮಂದಿ ಪಾಲ್ಗೊಂಡಿದ್ದರು. ಅವರು 2 ತಾಸುಗಳಲ್ಲಿ 50 ಭಾಷೆಗಳಲ್ಲಿ ‘‘ ದಿ ಲಿಟಲ್ ಪ್ರಿನ್ಸ್” ಕಥೆಯನ್ನು ಓದಿದರು. ಪ್ರತಿಯೊಂದು ಭಾಷೆಯನ್ನೂ ಓರ್ವ ಓದುಗ, ತಜ್ಞ ಹಾಗೂ ಪರ್ಯಾಯ ಪ್ರತಿಸ್ಪರ್ಧಿ ಸೇರಿದಂತೆ ಮೂವರು ಪ್ರತಿನಿಧಿಸಿದ್ದರು.

2022ರ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಕೂಟಕ್ಕೆ ಕತರ್ ಸನ್ನದ್ಧವಾಗುತ್ತಿರುವಂತೆಯೇ ಅಲ್ಲಿನ ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್ ಈ ಸಾಧನೆಯನ್ನು ಮಾಡಿದೆ.

ಆಧುನಿಕ ಕತರ್‌ ನ ಪುನರುತ್ಥಾನ ಚಳವಳಿಯಲ್ಲಿ ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್ ಪ್ರಮುಖ ಮೈಲುಗಲ್ಲಾಗಿದೆ. ಈ ಕಲಾಭವನವನ್ನು 2022ರ ಅಕ್ಟೋಬರ್ ನಲ್ಲಿ ನವೀಕರಣದ ಬಳಿಕ ಪುನಾರಂಭಿಸಲಾಗಿತ್ತು.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …