Home / ಲೇಖನಗಳು (page 3)

ಲೇಖನಗಳು

ಹಬ್ಬದ(ಈದ್) ಶಿಷ್ಟಾಚಾರಗಳು

✍️ಐ.ಎಲ್. ಈದ್‌ನ ದಿನಗಳಲ್ಲಿ ತಕ್ಬೀರ್ ಹೇಳಲು ನಿಗದಿತ ಸಮಯವಿದೆ. ಈದುಲ್ ಫಿತ್ರ್ ಗೆ ಚಂದ್ರದರ್ಶನವಾದ ಗಳಿಗೆಯಿಂದ ಇಮಾಮ್ ನಮಾಝ್‌ಗೆ ಬರುವವರೆಗೆ, ಈದುಲ್ ಅಝ್ಹಾಕ್ಕೆ ಸಂಬಂಧಿಸಿ ದುಲ್‌ಹಜ್ಜ್ ಒಂದರಿಂದ ದುಲ್‌ಹಜ್ಜ್ 13ರ ಸೂರ್ಯಾಸ್ತಮಾನವದವರೆಗೂ ತಕ್ಬೀರ್ ಹೇಳಬಹುದು. ಬಲಿ ಪೆರ್ನಾಲ್‌ಗೆ ಕಡ್ಡಾಯ ನಮಾಝ್‌ನ ಬಳಿಕ ಅರಫಾ ದಿನ ಫಜ್ರ‍್ ನಿಂದ ಅಯ್ಯಾಮುತ್ತಶ್ರೀಕ್‌ನ ಕೊನೆಯ ದಿನದ ಅಸರ್ ನಮಾಝ್‌ನ ವರೆಗೂ ಹೇಳಬಹುದು. ಸ್ನಾನ, ಸುಗಂಧ ದ್ರವ್ಯ ಮತ್ತು ವಸ್ತ್ರಧಾರಣೆ ಈದ್‌ನ ದಿನಗಳಲ್ಲಿ ಸ್ನಾನ ಮಾಡುವುದು, …

Read More »

ಬಲಿಮಾಂಸ ಇತರ ಧರ್ಮೀಯರಿಗೆ ನೀಡಬಹುದೇ?

ಈದುಲ್ ಅಝ್ಹಾಕ್ಕೆ ಸಂಬಂಧಿಸಿದ ಬಲಿ ಮಾಂಸವನ್ನು ಇತರ ಧರ್ಮೀಯರಿಗೆ ನೀಡುವ ಕುರಿತು ಇಸ್ಲಾಮಿನ ವಿಧಿಯೇನು? ಈದುಲ್ ಅಝ್ಹಾ ಸಂದರ್ಭದಲ್ಲಿ ಮಾಡುವ ಪ್ರಾಣಿ ಬಲಿಯ ಮಾಂಸವನ್ನು ಮುಸ್ಲಿಮೇತರರಿಗೆ ನೀಡುವುದಕ್ಕೆ ಅನುಮತಿ ಇದೆಯೆಂದು ಹೆಚ್ಚಿನ ವಿದ್ವಾಂಸರ ಅಭಿಪ್ರಾಯ. ಇದು ಪ್ರಬಲವೂ ಆಗಿದೆ. ಮುಸ್ಲಿಮೇತರರಿಗೆ ಬಲಿ ಮಾಂಸ ನೀಡಬಾರದು ಎಂಬ ಪವಿತ್ರ ಕುರ್‌ಆನ್ ಸೂಕ್ತ ಅಥವಾ ಪ್ರವಾದಿ ವಚನಗಳು ಇಲ್ಲ. ನಿಯಮಗಳು ಸ್ಪಷ್ಟವಾಗಿ ಮೌಲ್ಯೀಕರಿಸದ ಅಥವಾ ನಿಷೇಧಿಸದ ಎಲ್ಲವೂ ಮೂಲಭೂತವಾಗಿ ಅನುಮತಿಸಲ್ಪಟ್ಟಿದೆ. ಒಂದು ಕಾರ್ಯವನ್ನು …

Read More »

ಮುಸ್ಲಿಮೇತರರು ಈದ್ಗಾಹ್‌ಗೆ ಬರಬಹುದೇ?

ಮಸೀದಿಗಳನ್ನು ಮತ್ತು ಈದ್ಗಾಹ್ ಗಳಲ್ಲಿ ಹಬ್ಬದ ನಮಾಝ್ ವೀಕ್ಷಿಸಲು ಖುತ್ಬಾ (ಪ್ರವಚನ) ಆಲಿಸಲು ಮುಸ್ಲಿಮರಲ್ಲದವರು ಬರುವುದರ ಕುರಿತು ಇಸ್ಲಾಮಿನ ವಿಧಿಯೇನು? ಮಸೀದಿ ಮತ್ತು ಈದ್ಗಾಹ್‌ಗಳಲ್ಲಿ ಮುಸ್ಲಿಮೇತರರು ಪ್ರವೇಶಿಸುವುದು ಅನುಮತಿಸಲಾಗಿದೆ. ಇತರ ಧರ್ಮೀಯರು ಮಸೀದಿ ಮತ್ತು ಈದ್ಗಾಹ್‌ಗೆ ಬರುವುದನ್ನು ಮತ್ತು ನಮಾಝ್ ವಿಕ್ಷಿಸುವುದು, ಖುತ್ಬಾ ಆಲಿಸುವುದನ್ನು ತಡೆಯುವ ಆಧಾರ ಪ್ರಮಾಣಗಳು ಇಲ್ಲ. ಪವಿತ್ರ ಕುರ್‌ಆನ್ ಅದನ್ನು ನಿಷೇಧಿಸಿಲ್ಲ. ಮಕ್ಕಾದ ಮಸ್ಜಿದುಲ್ ಹರಾಮ್‌ಗೆ ಬಹುದೇವಾರಾಧಕರು ಪ್ರವೇಶಿಸಬಾರದೆಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸಿದೆ. ‘ಆದ್ದರಿಂದ ಈ …

Read More »

ಇಬ್ರಾಹೀಮ್(ಅ)ರ ಜೀವನ ಮತ್ತು ಹಜ್ಜ್ ಕರ್ಮಗಳ ಇತಿಹಾಸ

✍️ಖದೀಜ ನುಸ್ರತ್ ಜೀವಮಾನದಲ್ಲಿ ಮಕ್ಕಾ ನಗರಕ್ಕೆ ತೆರಳಿ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಬೇಕೆಂಬುದು ಪ್ರತಿಯೊಬ್ಬ ಮುಸ್ಲಿಮನ ಕನಸಾಗಿರುತ್ತದೆ. ಆರೋಗ್ಯ, ಸಂಪತ್ತು, ಯಾತ್ರಾ ಸೌಕರ್ಯವಿರುವ ಎಲ್ಲಾ ಸ್ತ್ರೀ-ಪುರುಷರಿಗೆ ಇದು ಕಡ್ಡಾಯವಾಗಿದೆ. ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದರೂ ಮುಸ್ಲಿಮರೆಲ್ಲರೂ ತಮ್ಮ ಆದಾಯದ ಉಳಿತಾಯದ ಹಣದಲ್ಲಿ ಚಿಕ್ಕ ಪಾಲನ್ನು ಈ ಪವಿತ್ರ ಯಾತ್ರೆಗಾಗಿ ಜೋಪಾನವಾಗಿಡುತ್ತಾರೆ. ಈ ಯಾತ್ರೆಯು ಅಲ್ಲಾಹನ ಕರೆಗೆ ಓಗೊಟ್ಟು ನಮ್ಮ ಮನೆಯಿಂದ ಆರಂಭವಾಗಿ ಅಲ್ಲಾಹನ ಅತಿಥಿಗಳಾಗಿ ಅವನ ಭವನದೆಡೆಗೆ ಮಾಡುವಂತಹ ಪವಿತ್ರ ಯಾತ್ರೆಯಾಗಿದೆ. …

Read More »

ಸಹನೆ, ತ್ಯಾಗ, ಬಲಿದಾನದ ಸಂಕೇತ

@ ನಝೀರ್ ಅಹ್ಮದ್ ಖಾಜಿ, ವಿಜಯಪುರ ವಿಶ್ವದ ಎಲ್ಲಾ ಧರ್ಮೀಯರಲ್ಲಿಯೂ ಹಬ್ಬಾಚಾರಣೆ ಇದೆ. ಮುಸಲ್ಮಾನರಲ್ಲಿ ಎರಡು ಹಬ್ಬಗಳಿವೆ. ಒಂದು ರಮಝಾನ್ ಮತ್ತೊಂದು ಬಕ್ರೀದ್ (ಈದುಲ್ ಅಝ್ಹಾ). ರಮಝಾನ್ ತಿಂಗಳು ಸಂಪೂರ್ಣವಾಗಿ ಉಪವಾಸ ಆಚರಿಸಿದ ಬಳಿಕ ಮುಸ್ಲಿಮರು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಇನ್ನೊಂದು ಬಕ್ರೀದ್ ಹಬ್ಬ. ಈ ಎರಡು ಹಬ್ಬಗಳಲ್ಲಿ ಮುಸ್ಲಿಮರು ಪ್ರವಾದಿಗಳ ಮಾದರಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಓರ್ವರು ಅಂತ್ಯ ಪ್ರವಾದಿ ಮುಹ್ಮಮದ್(ಸ) ಆದರೆ ಇನ್ನೊಬ್ಬರು ಪ್ರವಾದಿ ಹ. ಇಬ್ರಾಹೀಮ್(ಅ) …

Read More »

ಹಜ್ಜ್ ಎಂದರೆ ಅರಫಾ

ಸಈದ್ ಇಬ್ನುಲ್ ಮುಸಯ್ಯಿಬ್(ರ) ರಿಂದ ವರದಿ: ಆಯಿಶಾ(ರ) ಹೇಳಿದರು: ಅಲ್ಲಾಹನ ಪ್ರವಾದಿ ಹೇಳಿದ್ದಾರೆ- “ಅಲ್ಲಾಹನು ಅತೀ ಹೆಚ್ಚು ಜನರನ್ನು ನರಕದಿಂದ ಮುಕ್ತಿಗೊಳಿಸಲು ಅರಫಾ ದಿನದಂತೆ ಬೇರೆ ದಿನ ಇಲ್ಲ. ಅಂದು ಅಲ್ಲಾಹನು ಸಮೀಪಕ್ಕೆ ಬರುತ್ತಾನೆ. ನಂತರ ಅವರ ಕುರಿತು ಅಭಿಮಾನದಿಂದ ದೇವ ಚರರೊಂದಿಗೆ ಮಾತನಾಡುತ್ತಾನೆ. ಬಳಿಕ ಕೇಳುತ್ತಾನೆ: ಅವರು ಏನನ್ನು ಬಯಸಿ ದ್ದಾರೆ?” (ಮುಸ್ಲಿಮ್) ಇದು ಅರಫಾ ದಿನದ ಮಹತ್ವ ಮತ್ತು ಪ್ರಾಧಾನ್ಯತೆಯನ್ನು ವಿವರಿಸುವ ಪ್ರವಾದಿ ವಚನವಾಗಿದೆ. ಈ ಹದೀಸ್‌ನ …

Read More »

ಹಜ್ಜ್ ವಿಧಿ-ವಿಧಾನಗಳ ಸಮಗ್ರ ಮಾಹಿತಿ

✍️ ಡಾ| ಕೆ. ಇಲ್ಯಾಸ್ ಮೌಲವಿ ಜೀವನದಲ್ಲಿ ಹಜ್ಜ್ ಕರ್ಮವನ್ನು ನಿರ್ವಹಿಸುವ ಅವಕಾಶವು ಬಹಳ ಅಪರೂಪವಾಗಿ ಲಭಿಸುತ್ತದೆ. ಆದ್ದರಿಂದ ಹಜ್ಜ್ ಮತ್ತು ಉಮ್ರಾಕ್ಕೆ ಹೊರಡುವ ಮುನ್ನ ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಸರಿಯಾಗಿ ಅರಿತುಕೊಳ್ಳುವುದು, ಗ್ರಹಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾಡುವ ಕರ್ಮಗಳು ತಖ್ವಾ ಇಲ್ಲದ ಕರ್ಮಗಳಂತೆ ನಿಷ್ಫಲವಾಗಿದೆ. ಸಾಮಾನ್ಯವಾಗಿ ಜೀವನದಲ್ಲಿ ಒಂದು ಬಾರಿ ಲಭಿಸುವ ಈ ಅವಕಾಶವನ್ನು ನಿಷ್ಫಲಗೊಳಿಸುವುದು. ನಮ್ಮ ಕಠಿಣ ಪರಿಶ್ರಮ, ಸಂಪತ್ತು, ಪರಲೋಕದ ಪ್ರತಿಫಲ …

Read More »

ಯಾರು ಹಾಜಿ?

ಅಮೀನುಲ್ ಹಸನ್ (ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ) ಅನು: ಮುಖ್ತಾರ್ ಅಹ್ಮದ್, ಪಾಣೆಮಂಗಳೂರು ಜಗತ್ತಿನ ದಶದಿಕ್ಕುಗಳಿಂದ ಹಾಜಿಗಳು ಮಕ್ಕಾದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತಂಡೋಪತಂಡವಾಗಿ ಅಲ್ಲಿಗೆ ತಲುಪುತ್ತಾರೆ. ವಾಸ್ತವದಲ್ಲಿ ಇದು ಅಲ್ಲಾಹನು ಹ. ಇಬ್ರಾಹೀಮ್(ಅ)ರಿಗೆ ಕೊಟ್ಟ ಆಜ್ಞೆಯ ಕರೆಯಾಗಿದೆ. “ಮತ್ತು ಜನರಿಗೆ ಹಜ್ಜ್ ಯಾತ್ರೆಗಾಗಿ ಸಾರ್ವತ್ರಿಕ ಕರೆ ನೀಡಿರಿ. ಅವರು ದೂರ ದೂರದ ಪ್ರದೇಶಗಳಿಂದೆಲ್ಲ ಕಾಲ್ನಡಿಗೆಯಲ್ಲೂ ಒಂಟೆಗಳ ಮೇಲೆ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ.” (ಅಲ್ ಹಜ್ಜ್: …

Read More »

ಹೊಣೆಗಾರರೇ, ನೀವು ಪ್ರಶ್ನಾರ್ಹರಾಗಿದ್ದೀರಿ…

–ಫಾತಿಮಾ ಕೆ. (ನಾವು ಅವರೊಡನೆ ಹೀಗೆಂದೆವು): “ದಾವೂದ್, ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ಸತ್ಯದೊಂದಿಗೆ ಆಳ್ವಿಕೆ ನಡೆಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮನ್ನು ಅಲ್ಲಾಹನ ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಲೆಕ್ಕಾಚಾರ ನಡೆಯಲಿರುವ ದಿನವನ್ನು ಮರೆತು ಬಿಟ್ಟಿದ್ದಕ್ಕಾಗಿ ಖಂಡಿತವಾಗಿಯೂ ಕಠಿಣ ಯಾತನೆ ಇದೆ.” (ಸ್ವಾದ್: 26) ಪ್ರವಾದಿ ದಾವೂದ್(ಅ)ರನ್ನು ಸಂಭೋಧಿಸಿ ಅಲ್ಲಾಹನು ಈ ಸೂಕ್ತದಲ್ಲಿ ಈ ಮಾತನ್ನು ಹೇಳಿರುತ್ತಾನೆ. …

Read More »

ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

✍️ ಏ.ಕೆ. ಕುಕ್ಕಿಲ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿಗಳು ಏನನ್ನುತ್ತವೆ? ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ ಬರೆಯಲಾದ ಆ ಬರಹದ …

Read More »