Home / ವಾರ್ತೆಗಳು (page 10)

ವಾರ್ತೆಗಳು

ರೈಲು ದುರಂತ ಸಂತ್ರಸ್ತನನ್ನು ಕುಟುಂಬದ ಜತೆ ಸೇರಿಸಿದ ಮಸೀದಿ ಧ್ವನಿವರ್ಧಕ!

ಗುವಾಹತಿ: ಮಸೀದಿಯಲ್ಲಿ ನಮಾಝ್ ಸಂದರ್ಭದಲ್ಲಿ ಬಳಸುವ ಧ್ವನಿವರ್ಧಕ, ಪಶ್ಚಿಮ ಬಂಗಾಳ ರೈಲು ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂನ ತನ್ನ ಕುಟುಂಬದ ಜತೆ ಸೇರಿಸಲು ನೆರವಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಗಾಯಗೊಂಡವರಲ್ಲಿ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸೈಫಿಕುಲ್ ಅಲಿ ಕೂಡಾ ಒಬ್ಬರು. ಒಂಬತ್ತು ಜೀವಗಳನ್ನು ಬಲಿ ಪಡೆದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ …

Read More »

ಥಾಂಕ್ಯೂ ಎಸ್ ಐ ಓ

ಅಪ್ಪನನ್ನು ಕಳಕೊಳ್ಳುವುದೆಂದರೆ ಯಾವುದೇ ಮಕ್ಕಳ ಪಾಲಿಗೆ ಆಲದಮರ ಉರುಳಿದಂತೆ. ಅಪ್ಪನನ್ನು ಸಾಮಾನ್ಯವಾಗಿ ಮಕ್ಕಳು ನೋಡುವುದು ಸಂಜೆ ಅಥವಾ ಕತ್ತಲಾದ ಮೇಲೆ. ಅದರಲ್ಲೂ ಕೂಲಿ ಕಾರ್ಮಿಕ ಅಪ್ಪ ಸಂಜೆ ಮನೆ ಪ್ರವೇಶಿಸುವಾಗ ದಣಿವಿನ ಪರ್ವತವನ್ನೇ ಹೊತ್ತು ಕೊಂಡಿರುತ್ತಾನೆ. ಮಕ್ಕಳ ಜೊತೆ ಧಾರಾಳವಾಗಿ ಮಾತಾಡುವಷ್ಟು ಅನೇಕ ಬಾರಿ ಆತನ ದಣಿದ ದೇಹ ಬಿಡುವುದೂ ಇಲ್ಲ. ಬಿಟ್ಟರೂ, ಆತ ತನ್ನನ್ನು ಹೊರತುಪಡಿಸಿ ಇತರೆಲ್ಲ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದೇ ಹೆಚ್ಚು ಮತ್ತು ತನ್ನ ಕಷ್ಟಗಳನ್ನು …

Read More »

ಮದರಸ ಏನು ಕಲಿಸುತ್ತದೆ? ಕಲಿತವರು ಏನು ಮಾಡುತ್ತಾರೆ ಎಂಬುದಕ್ಕೆ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದ ಈ ಎರಡು ಮನೆಗಳೇ ಸಾಕ್ಷಿ!

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಜಲ ಪ್ರಳಯಕ್ಕೆ ಸುಮಾರು ಇನ್ನೂರರಷ್ಟು ಮನೆಗಳು ಬಿದ್ದು ಹೋಗಿ ನೂರಾರು ಕುಟುಂಬಗಳು ಬೀದಿಪಾಲಾಗಿ ನೂರಾರು ಮಕ್ಕಳು ಸಂಕಷ್ಟಮಯ ಸ್ಥಿತಿಗೆ ತಳ್ಳಲ್ಪಟ್ಟಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ಹೈಟೆಕ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಹಿರಾ ಮೋರಲ್ ಸ್ಕೂಲ್ ಎಂಬ ಮದರಸದ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯವರು ಇಂತಹ ದುರಂತಗಳ ಬಗ್ಗೆ ಯಾವುದೇ ಅರಿವಿಲ್ಲದ ಪ್ರಸ್ತುತ ಮದರಸದ ಕೆಲವು ಮಂದಿ ವಿದ್ಯಾರ್ಥಿಗಳನ್ನು ಕರಕೊಂಡು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ …

Read More »

ಮಾನವೀಯತೆ ಹೀಗೆ ಗೆಲ್ಲುತ್ತಲೇ ಇರಲಿ

ಅಬುಧಾಬಿಯ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ ಕೇರಳದ ತ್ರಿಶೂರಿನ ಬೈಕ್ಸ್ ಕೃಷ್ಣನ್ ಎಂಬಾತನ ಕಾರು ಸುಡಾನಿನ ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಬಾಲಕ ಮೃತಪಡುತ್ತಾನೆ. ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಏರಿ ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗುತ್ತದೆ. ಅಲ್ಲದೇ, ಬಾಲಕನ ಹೆತ್ತವರು ಅಪಘಾತವನ್ನು ಕಣ್ಣಾರೆ ಕಂಡಿದ್ದು ಕೋರ್ಟಿನಲ್ಲಿ ಸಾಕ್ಷ್ಯ ನುಡಿಯುತ್ತಾರೆ. ಈ ಅಪಘಾತ ನಡೆದದ್ದು 2012 ಸೆಪ್ಟೆಂಬರ್ 17ರಂದು. 2013ರಲ್ಲಿ ಅಬುದಾಬಿ ಕೋರ್ಟು ಕೃಷ್ಣನ್ ಗೆ ಗಲ್ಲು ಶಿಕ್ಷೆ ಘೋಷಿಸುತ್ತದೆ. ಆ ಬಳಿಕದಿಂದ …

Read More »

ರಾಜಸ್ಥಾನದ ಕುಗ್ರಾಮದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಸಜ್ಜಾದ ಮದ್ರಸ

ಜೈಪುರ,ಮೇ 22: ರಾಜಸ್ಥಾನದ ಸಿಕರ್ ಜಿಲ್ಲೆಯ ಕುಗ್ರಾಮ ಖೀರವಾದಲ್ಲಿಯ ಮದರಸವು ಕೋವಿಡ್ ರೋಗಿಗಳಿಗಾಗಿ ತನ್ನ ಬಾಗಿಲುಗಳನ್ನು ತೆರೆದಿದೆ. ಮೇ 2ರ ಸುಮಾರಿಗೆ ಇಲ್ಲಿ ಆರಂಭಗೊಂಡಿರುವ ಕೋವಿಡ್-19 ಕಾಳಜಿ ಕೇಂದ್ರದಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈವರೆಗೆ ಈ ಕೇಂದ್ರದಲ್ಲಿ ಸುಮಾರು 30 ಕೋವಿಡ್ ರೋಗಿಗಳು ದಾಖಲಾಗಿದ್ದು, 10-12 ರೋಗಿಗಳು ಚೇತರಿಸಿಕೊಂಡು ತಮ್ಮ ಮನೆಗಳಿಗೆ ಮರಳಿದ್ದಾರೆ. ಜಾಮಿಯಾ ಅರೆಬಿಯ ಬರ್ಕತುಲ್ ಇಸ್ಲಾಂ ಮದರಸದಲ್ಲಿಯ ಈ ಕೋವಿಡ್ ಕಾಳಜಿ ಕೇಂದ್ರವು …

Read More »

ಶಹಾದತ್ ಕಲಿಮ ಹೇಳಿಕೊಟ್ಟ ಡಾ.ರೇಖಾ ಕೃಷ್ಣನ್; ಶೇಮ ಯಿಸರಾಯೇಲ್ ಹೇಳಿಕೊಟ್ಟ ಫೆಲಸ್ತೀನಿನ ಇಬ್ರಾಹೀಂ ಮಾಹಿರ್: ಕೊರೋನ ಸಾವಿನ ಕೊನೆಯ ಕ್ಷಣಗಳು

ಪರಧರ್ಮ ದ್ವೇಷ ತಾರಕಕ್ಕೇರಿರುವ ಈ ಕಾಲದಲ್ಲ ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೋನ ಮಹಾರೋಗ ತೋರಿಸಿಕೊಟ್ಟಿದೆ. ಯಾರೂ ಪರಿಚಾರಕರಿಲ್ಲದೇ ಅಂತರ ಕಾಯ್ದುಕೊಳ್ಳುವ ಅಸಹಾಯಕ ಸನ್ನಿವೇಶಗಳಿವೆ. ರೋಗದಲ್ಲಿ ಸಾವು ಕೂಡ ವೇದನಾಜನಕ. ಎಲ್ಲ ಸಾವುಗಳು ನೋವು ತರುವುದೇ ಆದರೂ ಕೊರೋನ ಪೀಡಿತರ ಸಾವು ಅವರ ಕೊನೆಯ ಕ್ಷಣಗಳು ಎಂತಹ ನೋವಿನದ್ದೆಂದು ನಮಗೆ ಗೊತ್ತಿಲ್ಲ. ಸಂಬಂಧಿಕರು ಹತ್ತಿರವಿಲ್ಲದೆ ವೆಂಟಿಲೇಟರ್ ಕೋಣೆಯ ಶೀತ ವಾತಾವರಣದಲ್ಲಿ ಮಲಗಿ ಅವರು ಇಹಲೋಕ ತ್ಯಜಿಸುತ್ತಾರೆ. ಧಾರ್ಮಿಕ ಕೊನೆಯ ಕರ್ಮಗಳು …

Read More »

ಜಮ್ಮುಕಾಶ್ಮೀರದಲ್ಲಿನ ಕರ್ತವ್ಯದ ವೇಳೆ ರಮಝಾನ್‌ ಉಪವಾಸ ಕೈಗೊಂಡ ಅನುಭವ ಹಂಚಿಕೊಂಡ ಸೇನಾಧಿಕಾರಿ ಮೇ.ಜ. ಯಶ್‌ ಮೋರ್

“ಪ್ರಥಮ ಉಪವಾಸ ಕೈಗೊಂಡ ದಿನದ ಅನುಭೂತಿ ಮರೆಯಲು ಯಾವತ್ತೂ ಸಾಧ್ಯವಿಲ್ಲ” ಜಮ್ಮು ಕಾಶ್ಮೀರದಲ್ಲಿ ನೇಮಕವಾದ ಬಳಿಕ ತನ್ನ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಿತು? ಉಪವಾಸ ವೃತ ಕೈಗೊಂಡ ಕುರಿತಾದಂತೆ ತನ್ನ ಅನುಭವಗಳನ್ನು ಭಾರತೀಯ ಸೇನೆಯ ಮೇಜರ್‌ ಜನರಲ್‌ ಆಗಿದ್ದ ಡಾ. ಯಶ್‌ ಮೋರ್‌ ರವರು scroll.in ನಲ್ಲಿ ಹಂಚಿಕೊಂಡಿದ್ದಾರೆ. “ಭಾರತೀಯ ಸೇನೆಯು 2001ರಲ್ಲಿ ನನ್ನನ್ನು ಕಾಶ್ಮೀರದಲ್ಲಿ ನೇಮಕಾತಿ ಮಾಡಿದ್ದು ನನ್ನ ಜೀವನವನ್ನೇ ಬದಲಾಯಿಸಿತು. ಅದಕ್ಕೂ ಮೊದಲು ನನ್ನ 17 …

Read More »

ಅಫ್ಘಾನ್ ಆಟಗಾರರೊಂದಿಗೆ ರಮಝಾನ್ ಉಪವಾಸ ಆಚರಿಸಿದ ವಾರ್ನರ್, ಕೇನ್ ವಿಲಿಯಮ್ಸನ್

ಹೊಸದಿಲ್ಲಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರು ತಮ್ಮ ತಂಡದ ಸಹ  ಆಟಗಾರರಾದ ಅಫ್ಗಾನಿಸ್ತಾನದ ರಶೀದ್ ಖಾನ್, ಮುಹಮ್ಮದ್ ನಬಿ ಹಾಗೂ ಮುಜೀಬುರ್ರಹ್ಮಾನ್ ಜತೆಗೂಡಿ ತಮ್ಮ ಮೊದಲ ರಮಝಾನ್ ಉಪವಾಸ ಆಚರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ರಶೀದ್ ಖಾನ್, ವಾರ್ನರ್ ಹಾಗೂ ವಿಲಿಯಮ್ಸನ್ ಅವರು ತಮ್ಮೊಂದಿಗೆ ಹೇಗೆ ಉಪವಾಸ ಆಚರಿಸಿದ್ದಾರೆಂದು ವಿವರಿಸಿದ್ದಾರೆ. ಉಪವಾಸದ ಅನುಭವ ಹೇಗಿತ್ತು ಎಂದು ರಶೀದ್ ಖಾನ್ …

Read More »

“ಜೈಲಿನಲ್ಲಿ ನನಗೆ ಕುರ್‌ ಆನ್‌ ಕೊಡುತ್ತಿಲ್ಲ”: ಅಲೆಕ್ಸಿ ನವಾಲ್ನಿ ಆರೋಪ; ಜೈಲಿನ ವಿರುದ್ಧವೇ ಕಾನೂನು ಹೋರಾಟಕ್ಕೆ ಸಿದ್ಧರಾದ ರಷ್ಯಾ ವಿಪಕ್ಷ ನಾಯಕ

ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಸದ್ಯ ಜೈಲಿನಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದು, ಈ ನಡುವೆ ಜೈಲಿನ ವಿರುದ್ಧವೇ ಕಾನೂನು ಹೋರಾಟ ನಡೆಸುವುದಾಗಿ ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ತಿಳಿಸಿದ್ದಾರೆ. ಶಿಕ್ಷೆಯ ಸಂದರ್ಭದಲ್ಲಿ ಅವರು ಮುಸ್ಲಿಮರ ಪವಿತ್ರ ಗ್ರಂಥ ಕುರ್‌ ಆನ್‌ ಅನ್ನು ಅಭ್ಯಸಿಸಲು ಮುಂದಾಗಿದ್ದು, ಆದರೆ ಜೈಲಿನ ಅಧಿಕಾರಿಗಳು ಕುರ್‌ ಆನ್‌ ನೀಡದೇ ತಡೆಹಿಡಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರು ತಮ್ಮ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ… …

Read More »

ನೀರಿಗಾಗಿ ಹಪಹಪಿಸುತ್ತಿದ್ದ ಜನರಿಗೆ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಬೋರ್ ವೆಲ್ ನಿರ್ಮಾಣ

ಬಂಟ್ವಾಳ ತಾಲೂಕಿನ ಕೊಲ್ನಾಡ್‌ ಗ್ರಾಮದ ಸೆರ್ಕಳ ಎಂಬಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ, ಸಮಾಜ ಸೇವಾ ಘಟಕದ ವತಿಯಿಂದ ಕೊಳವೆ ಬಾವಿಯೊಂದನ್ನು[Bore well] ದಾನಿಗಳ ಸಹಾಯದಿಂದ ತೋಡಿಸಿ, ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್‌ ಉದ್ಘಾಟಿಸಿ ಸಂದರ್ಭೋಚಿತ ಹಿತನುಡಿಗಳನ್ನಾಡಿದರು. ಇದರ ಪ್ರಯೋಜನವನ್ನು ಪಡೆಯುವ ಪರಿಸರದವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಹಮ್ಮದ್ ಕಲ್ಲಡ್ಕ, ಶಂಶೀರ್‌ ಮೆಲ್ಕಾರ್‌, ಅಬುಸ್ವಾಲಿ ಬಂಟ್ವಾಳ,ಸಿದ್ದೀಕ್ ಜಕ್ರಿಬೆಟ್ಟು ಉಪಸ್ಥಿತರಿದ್ದರು.

Read More »