Home / ವಾರ್ತೆಗಳು (page 18)

ವಾರ್ತೆಗಳು

ಲಂಗರ್ (ಉಚಿತ ಆಹಾರ) ವ್ಯವಸ್ಥೆಗೆ 330 ಕ್ವಿಂಟಾಲ್ ಗೋಧಿಯೊಂದಿಗೆ ಗೋಲ್ಡನ್ ಟೆಂಪಲ್‌ಗೆ ತಲುಪಿದ ಮುಸ್ಲಿಮರು

ಪಂಜಾಬ್,ಜು.11: 330 ಕ್ವಿಂಟಾಲ್ ಗೋಧಿಯೊಂದಿಗೆ ಸಿಖ್ಖರ ಆರಾಧನಾಲಯವಾದ ಅಮೃತಸರದ ಗೋಲ್ಡನ್ ಟೆಂಪಲ್‌‌ಗೆ ಮಲೆರ್ಕೋಟ್ಲಾದ ಮುಸ್ಲಿಮರು ತಲುಪಿದರು. ಸಿಖ್ ನಂಬಿಕೆಯ ಒಂದು ಭಾಗವೆಂದೇ ಪರಿಗಣಿಸಲ್ಪಟ್ಟ ಲಂಗರ್(ಉಚಿತ ಆಹಾರ) ವ್ಯವಸ್ಥೆ ಮಾಡುವಲ್ಲಿ ಗೋಲ್ಡನ್ ಟೆಂಪಲ್ ತೊಂದರೆ ಎದುರಿಸುತ್ತಿದೆ ಎಂಬುದನ್ನು ಅರಿತಾಗ ಸಹೋದರತ್ವ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಈ ದೃಶ್ಯವು ಕಂಡು ಬಂತು. ಗೋಲ್ಡನ್ ಟೆಂಪಲ್‌ನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಜನರು ಲಂಗರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. “ಸಂಪನ್ಮೂಲಗಳ ಕೊರತೆ ಇದೆ ಎಂದು ನಾವು …

Read More »

ಬಂಗ್ಲೆ ಗುಡ್ಡೆ ದುರಂತ ಪ್ರದೇಶ ಹಾಗೂ ಮೃತರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ತಂಡ ಭೇಟಿ

ಮಂಗಳೂರು (ಜುಲೈ 9 ): ಇತ್ತೀಚೆಗೆ ಬಂಗ್ಲೆಗುಡ್ಡೆಯಲ್ಲಿ ಭೂಕುಸಿತದಿಂದ ಎರಡು ಮನೆಗಳು ಧರಾಶಾಹಿಯಾಗಿ, 4 ಮನೆಗಳು ಸಂಪೂರ್ಣ ಹಾನಿಗೊಂಡು, ಇಬ್ಬರು ಮಕ್ಕಳು ಜೀವಂತ ಸಮಾಧಿಯಾದ ದುರಂತ ಸ್ಥಳಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ದ.ಕ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಮಕ್ಕಳನ್ನು ಕಳಕೊಂಡು ದುಃಖದ ಮಡುವಿನಲ್ಲಿ ನೋವನ್ನು ಅನುಭವಿಸುತ್ತಿರುವ ತಂದೆ ಶರೀಫರನ್ನು ಅವರ ಸಂಬಂಧಿಕರೋರ್ವರ ಮನೆಯಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿತು. ಅಲ್ಲಾಹನ ವಿಧಿಯನ್ನು ಯಾರಿಂದಲೂತಡೆಯಲುಸಾಧ್ಯವಿಲ್ಲ. ಯಾವುದೇ ಪರೀಕ್ಷಾ …

Read More »

ಮುಂಬೈಯಿಂದ ವಾಪಸಾಗಿ ಮನೆಗೆ ಹೋಗಲು ಸಾಧ್ಯವಾಗದೆ ಕಂಗಾಲಾಗಿದ್ದ ಪುರಂದರ ರೈ ಕುಟುಂಬಕ್ಕೆ ಆಶ್ರಯ ನೀಡಿದ ಜಾಬಿರ್

  ಮಂಗಳೂರು, ಜು.7: ಮನೆ ಯಜಮಾನನ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈಯಿಂದ ಮರಳಿದ ಕುಟುಂಬವೊಂದಕ್ಕೆ ಸ್ವತಃ ರಕ್ತಸಂಬಂಧಿಗಳು ಮನೆಪ್ರವೇಶಿಸಲು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಕುಪ್ಪೆಪದವಿನ ರಿಕ್ಷಾ ಚಾಲಕರೊಬ್ಬರು ಆ ಕುಟುಂಬಕ್ಕೆ ತನ್ನ ಮನೆಯಲ್ಲೇ ಆಶ್ರಯ ನೀಡಿದ ವಿದ್ಯಮಾನ ಬೆಳಕಿಗೆ ಬಂದಿದೆ. ಪುತ್ತೂರು ಸಮೀಪದ ಕಬಕದ ನಿವಾಸಿಯಾಗಿರುವ ಪುರಂದರ ರೈ ಎಂಬವರ ಕುಟುಂಬಕ್ಕೆ ರಿಕ್ಷಾ ಚಾಲಕನಾಗಿರುವ ಕುಪ್ಪೆಪದವಿನ ಜಾಬಿರ್ ಮಾನವೀಯ ನೆಲೆಯಿಂದ ತನ್ನ ಮನೆಯಲ್ಲೇ ಆಶ್ರಯ ನೀಡಿ ಗಮನ ಸೆಳೆದಿದ್ದಾರೆ. ಜಾಬಿರ್‌ರ ಮಾನವೀಯ …

Read More »

70ಕ್ಕೂ ಹೆಚ್ಚು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಿರ್ವಹಿಸಿದ ಮರ್ಸಿ ಏಂಜಲ್ಸ್ ತಂಡ: ಮಗುವಿನ ಅಂತ್ಯ ಸಂಸ್ಕಾರದ ವೇಳೆ ‘ರಾಮ ನಾಮ ಸತ್ಯ ಹೇ’ ಪಠಿಸಿದ ಶೇಖ್ ಇಮ್ರಾನ್: ಮಾನವೀಯ ಸೇವೆಯೇ ಮಿಗಿಲು

ಬೆಂಗಳೂರು: 16 ದಿನಗಳ ಮಗುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ ಮರ್ಸಿ ಎಂಜಲ್ಸ್ ತಂಡದ ಸದಸ್ಯ ಶೇಖ್ ಇಮ್ರಾನ್ ಉತ್ತರ ಭಾರತದ ಹೆತ್ತವರ ಮನವಿಯಂತೆಯೇ 20.ಕಿ.ಮೀ ದೂರದಲ್ಲಿರುವ ಶವಾಗಾರದವರೆಗೂ “ರಾಮ ನಾಮ ಸತ್ಯ ಹೇ” ಪಠಿಸಿದ ಮಾನವೀಯ ಸೇವೆಯು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಹಸಿವನ್ನು ನೀಗಿಸಲು ಆರಂಭಗೊಂಡ ಮರ್ಸಿ ಮಿಷನ್ ಎನ್‌ಜಿಓ ಆರಂಭಗೊಂಡಿತ್ತು. ಮೂಲ ಸಂಸ್ಥೆಯ ಅಂಗವಾದ ಮರ್ಸಿ ಎಂಜಲ್ಸ್ ಕೊವಿಡ್ ಮೃತರ ಅಂತಿಮ‌ ಕ್ರಿಯೆಗಳನ್ನು ನಡೆಸಲು ಅಸ್ತಿತ್ವಕ್ಕೆ ಬರುವ ಮೂಲಕ, …

Read More »

ಮಾನವೀಯತೆಯೇ ಮಿಗಿಲು: ಮುಸ್ಲಿಮ್ ಸ್ಮಶಾನ ಸಿಬ್ಬಂದಿಯಿಂದ 250 ಹಿಂದೂಗಳ ಅಂತ್ಯ ಸಂಸ್ಕಾರ

ಮುಂಬೈ,ಜು.6: ಮುಂಬೈನ ಮೆರೈನ್ ಲೈನ್ಸ್‌ನ ಸ್ಮಶಾನವೊಂದರ ಸಿಬ್ಬಂದಿ ಕಳೆದ ಮೂರು ತಿಂಗಳಲ್ಲಿ 250 ಹಿಂದೂಗಳ ಕೊನೆಯ ವಿಧಿಗಳನ್ನು ನೆರವೇರಿಸಿದ್ದಾರೆ. ಸಿಬ್ಬಂದಿ ಅಂತಿಮ ವಿಧಿಗಳನ್ನು ಉಚಿತವಾಗಿ ಮಾಡಿರುವುದು ದೇಶದ ಇತರ ಭಾಗಗಳಿಗೆ ಮಾದರಿಯಾಗಿದೆ ಎಂದು ಮಿರರ್‌ನೌವ್‌ ನ್ಯೂಸ್ ವರದಿ ಮಾಡಿದೆ. ಮುಂಬೈನಲ್ಲಿರುವ ಬಾಬಾ ಕಬ್ರಸ್ತಾನ್ ರೋಗಿಗಳಿಗೆ ಮತ್ತು ಅಂತ್ಯಕ್ರಿಯೆಗಳಿಗೆ ಅಗತ್ಯವಿರುವ ಜನರಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ದಹನ ಮಾಡಿದವರಲ್ಲಿ ಹಕ್ಕು ಪಡೆಯಲು ಇಚ್ಛಿಸದ ದೇಹಗಳೂ ಸೇರಿವೆ. ಟಾಸ್ಕ್ ಫೋರ್ಸ್ ಸದಸ್ಯರಾದ …

Read More »

ಕಂಪ್ಯೂಟರ್ ‍ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು A+ ಶ್ರೇಣಿಯೊಂದಿಗೆ ಉತ್ತೀರ್ಣನಾದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ; ಕೇರಳದ ವಿದ್ಯಾರ್ಥಿಯ ಸಾಧನೆಗೆ ವ್ಯಾಪಕ ಪ್ರಶಂಸೆ

ತಿರುವನಂತಪುರಂ: ಕಂಪ್ಯೂಟರ್ ಬಳಸಿ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದ ರಾಜ್ಯದ 15 ವರ್ಷದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ ಟಿ. ಕೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ A+ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ. ಎಸೆಸೆಲ್ಸಿ ಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ ಬರೆದ ಮೊದಲ ವಿದ್ಯಾರ್ಥಿಯಾಗಿದ್ದಾನೆ ಹಾರೂನ್. ಕಂಪ್ಯೂಟರ್ ಬಳಸಿದಲ್ಲಿ ಅಂಧ ವಿದ್ಯಾರ್ಥಿಗಳು ಇತರರನ್ನು ಅವಲಂಬಿಸಬೇಕಿಲ್ಲ ಎಂಬ ಆಧಾರದಲ್ಲಿ ಆತ ಸರಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದ. ಕೊನೆಗೆ ಸರಕಾರದ ಅನುಮತಿ ದೊರೆತು ಕಂಪ್ಯೂಟರ್ …

Read More »

ಜಮಾಅತೆ ಇಸ್ಲಾಮೀ ಹಿಂದ್‌ನಿಂದ, ಮತ್ತೆ ಬಡ ಕುಟುಂಬಕ್ಕೆ ಮನೆ ಹಸ್ತಾಂತರ!

ಮಂಗಳೂರು: ಹೌದು, ಕನಸ್ಸಲ್ಲೂ ಊಹಿಸಲು ಸಾಧ್ಯವಿಲ್ಲದ್ದಿದು. ಮನೆ ಬಿಡಿ, ಸ್ವಂತದ್ದೆಂದು ಕನಿಷ್ಠ ಒಂದು ಕೋಣೆಯನ್ನೂ ನಾನು ಊಹಿಸಿರಲಿಲ್ಲ. ಅಲ್‌ ಹಮ್ದುಲಿಲ್ಲಾಹ್‌, ಅಲ್ಲಾಹನು ನಮ್ಮನ್ನು ಈ ಅವಸ್ಥೆಗೆ ತಲುಪಿಸಿದ… ವಿಧವೆಯ ಮನಸ್ಸು ತುಂಬಿದ ಮಾತಿದು. ಹೌದು, ಕಳೆದ ಹಲವು ವರ್ಷಗಳಿಂದ ತನ್ನ ನಾಲ್ಕು ಅನಾಥ ಹೆಣ್ಣು ಮಕ್ಕಳೊಂದಿಗೆ, ಬಹಳ ಸಂಕಷ್ಟದ ಬದುಕು ಸವೆಸುತ್ತಿದ್ದ ವಿಧವೆಯೋರ್ವರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ವತಿಯಿಂದ, ಬಂಟ್ವಾಳ ತಾಲೂಕಿನ ಕುಕ್ಕಾಜೆ …

Read More »

ಕೇರಳ: ‘ಪೀಪಲ್ಸ್ ವಿಲೇಜ್’ ನಾಳೆ ಫಲಾನುಭವಿಗಳ ಕೈಗೆ

ಮಲಪ್ಪುರಂ,ಜು.2: 2018ರ ಪ್ರಳಯದ ನಂತರ ಪೀಪಲ್ಸ್ ಫೌಂಡೇಶನ್ ಘೋಷಿಸಿದ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ನಿಲಂಬೂರ್ ಪೀಪಲ್ಸ್ ವಿಲೇಜ್ ಶುಕ್ರವಾರ ಫಲಾನುಭವಿಗಳಿಗೆ ಸಮರ್ಪಿಸಲಾಗುವುದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌. ಹನ್ನೆರಡು ಮನೆಗಳು ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಹೊಂದಿರುವ ವಿಲೇಜ್ ಇದು. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ನಂಬೂರಿಪಾಟ್ಟಿಯಲ್ಲಿ ಕೊರೋನ ಮಾನದಂಡ ಪಾಲಿಸಿ ಕಾರ್ಯಕ್ರಮ ನಡೆಯಲಿದೆ. ನೆರೆಯಿಂದಾಗಿ ನಂಬೂರಿಪ್ಪಾಡ್ ಮತ್ತು ಪರಿಸರದಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿತ್ತು. ಇವರಿಗೆ ಪೀಪಲ್ಸ್ ವಿಲೇಜ್‍ನಲ್ಲಿ ಮನೆಯನ್ನು ಕೊಡಲಾಗುತ್ತಿದೆ. …

Read More »

ಬೀದರ್: HRS‌ ವತಿಯಿಂದ ಉಚಿತ ಆಹಾರ ವಿತರಣೆಯ 100 ದಿನಗಳು

ಬೀದರ್,ಜು.1: ನಗರದ ಬ್ರಿಮ್ಸ್ ಆಸ್ಪತ್ರೆ ಎದುರು ನಾಲ್ಕು ಚಕ್ರ ವಾಹನದಲ್ಲಿ ಹುಮನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಕೊರೋನಾದಿಂದ ತತ್ತರಿಸಿದ ಬಡ ಜನರು ಹಾಗೂ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳೊಂದಿಗೆ ಬಂದಂತಹ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಸೋಮವಾರಕ್ಕೆ ಈ ಸೇವೆಯು 100 ದಿನಗಳನ್ನು ಕಳೆದಿದ್ದು ನಿರಂತರವಾಗಿ ಸಂಸ್ಥೆಯಿಂದ ಉಚಿತ ಆಹಾರ, ಹಣ್ಣು ಹಂಪಲು, ಸ್ಯಾನಿಟೈಸರ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡಲಾಗುತ್ತಿದೆ. 100 ದಿನಗಳು ಕಳೆದ ನಂತರ ಜೂನ್ 29 …

Read More »

ವಿಧವೆಯ ಮೂರು ತಿಂಗಳ ಮನೆಬಾಡಿಗೆ ತೀರಿಸಿದ ಜಮಾಅತೆ ಇಸ್ಲಾಮೀ ಹಿಂದ್

ಮಂಗಳೂರು: ಜೂ.26. ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿ ವಾಸವಿರುವ 30 ರ ಹರೆಯದ ವಿಧವೆಯೋರ್ವರು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದು ಕೆಲಸ ಕಳಕೊಂಡು ಮನೆಯಲ್ಲೇ ಉಳಿದಿದ್ದರು.ಪರಿಣಾಮ ಮೂರು ತಿಂಗಳ ಮನೆ ಬಾಡಿಗೆ ಬಾಕಿ ಉಳಿದಿತ್ತು. ಮಹಿಳೆಯ ಅಸಹಾಯಕತೆಯ ಬಗ್ಗೆ ತಿಳಿದ ತೊಕ್ಕೊಟ್ಟಿನ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕವು ಮಹಿಳೆಯು ಉಳಿದಿರುವ ಬಾಡಿಗೆ ಮನೆ ಮಾಲಕಿಗೆ ಬಾಕಿ ಉಳಿದಿರುವ ಮೂರು ತಿಂಗಳ ಬಾಡಿಗೆ ಹಣವನ್ನು ಪಾವತಿಸಿದ್ದಲ್ಲದೆ, ವಿಧವೆಯ ಅಂಗಾಂಗ …

Read More »