Home / ವಾರ್ತೆಗಳು (page 20)

ವಾರ್ತೆಗಳು

ಕೊರೋನ ಸೋಂಕಿತರಿಗೆ ಆತ್ಮೀಯತೆಯೇ ಮುಖ್ಯ ಚಿಕಿತ್ಸೆ: ಯುವ ವೈದ್ಯೆ ಡಾ. ಮರಿಯಮ್ ಶಬೀಹಾ

ಕೊರೋನ ಯೋಧರಿಗೆ ನಮ್ಮ ಸಲಾಂ…… ಮಂಗಳೂರು, ಜೂ. 9: ‘‘ವೈದ್ಯಕೀಯ ಲೋಕದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ರೋಗಗಳಲ್ಲಿ ಒಂದು ಕೋವಿಡ್ 19. ಈ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ ಅನಗತ್ಯ. ವೈದ್ಯರಾಗಿದ್ದುಕೊಂಡು ರೋಗಿಗಳ ಚಿಕಿತ್ಸೆಯೇ ನಮ್ಮ ಧರ್ಮ. ಅದರಲ್ಲೂ ಕೋವಿಡ್ ಸೋಂಕಿತರಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೀಯತೆ. ಧೈರ್ಯ ತುಂಬುವ ಮಾತುಗಳು’’ ಎನ್ನುತ್ತಾರೆ ಯುವ ವೈದ್ಯೆ ಡಾ. ಮರಿಯಮ್ ಶಬೀಹಾ. ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್‌ಲಾಕ್‌ನಲ್ಲಿ ಕೋವಿಡ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ …

Read More »

ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ: ನಮಾಝ್ ಮಾಡುತ್ತಿದ್ದ ಪ್ರತಿಭಟನಕಾರರನ್ನು ಇತರರು ರಕ್ಷಿಸಿದ್ದು ಹೀಗೆ…

ಸೌಹಾರ್ದ ಸಾರುವ ವಿಡಿಯೋ ವೈರಲ್ ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದಾದ್ಯಂತ ಭಾರೀ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನೆ ವೇಳೆ ನಮಾಝ್ ಮಾಡುತ್ತಿದ್ದ ಮುಸ್ಲಿಮರನ್ನು ಮುಸ್ಲಿಮೇತರರು ಪೊಲೀಸರಿಂದ ರಕ್ಷಿಸಲು ಮಾನವಸರಪಳಿ ರಚಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಜನರ ಗುಂಪೊಂದು ನಮಾಝ್ ಮಾಡುತ್ತಿರುವುದು ಮತ್ತು ಅವರನ್ನು ಸುತ್ತುವರಿದು ಜನರು ನಿಂತು ಪೊಲೀಸರಿಂದ ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. My entire heart ❤ …

Read More »

ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಮನೆಗೆ ಮರಳಲು ಸುಪ್ರೀಂ ಕೋರ್ಟ್ ಗೆ 25 ಲಕ್ಷ ರೂ. ಜಮೆ ಮಾಡಿದ ಸಗೀರ್ ಅಹ್ಮದ್, ವಕೀಲರ ಮಾನವೀಯ ಸೇವೆಗೆ ಭಾರೀ ಪ್ರಶಂಸೆ

ಮುಂಬೈ: ಮುಂಬೈಯಲ್ಲಿ ಸಂಕಷ್ಟದಲ್ಲಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ನೆರವಾಗಲು ವಕೀಲರೊಬ್ಬರು 25 ಲಕ್ಷ ರೂ.ಗಳನ್ನು ಪಾವತಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ವಲಸೆ ಕಾರ್ಮಿಕರು ಸುರಕ್ಷಿತವಾಗಿ ಹಿಂದಿರುಗಲು ಕೋರ್ಟ್ ಗೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಕಳೆದ ತಿಂಗಳು, ಮುಂಬೈ ಮೂಲದ ವಕೀಲರು ಸಗೀರ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು. ಮುಂಬೈಯಲ್ಲಿ ಸಿಲುಕಿರುವ ಉತ್ತರ ಪ್ರದೇಶದ ಬಸ್ತಿ ಮತ್ತು ಸಂತ ಕಬೀರ್ ನಗರದ ವಲಸೆ ಕಾರ್ಮಿಕರನ್ನು …

Read More »

ದ್ವೇಷ ಮತ್ತು ಕೊರೋನ ವಿರುದ್ಧ ಒಂದಾಗಿ ಹೋರಾಡುತ್ತಿರುವ ಉತ್ತರ ತೆಲಂಗಾಣದ ಹಿಂದೂ-ಮುಸ್ಲಿಮರು

ಇಡೀ ದೇಶಕ್ಕೆ ಮಾದರಿ ಈ ಯುವ ಜನರು ಕೊರೋನ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಎ.27ರಂದು ಉತ್ತರ ತೆಲಂಗಾಣದ ನಿರ್ಮಲ್ ನಿವಾಸಿ ಎಲ್ಲಮ್ಮ್ಮ (65) ಕೊನೆಯುಸಿರೆಳೆದಿದ್ದರು. ನಿರ್ಗತಿಕರಾಗಿದ್ದ ಎಲ್ಲಮ್ಮ ಮತ್ತು ಆಕೆಯ ಪತಿ ಕಿಶನ್ ರಸ್ತೆ ಬದಿಯ ರೆಪಡಿಯಲ್ಲಿ ವಾಸವಾಗಿದ್ದರು. ಎಲ್ಲಮ್ಮ ಕೋರೋನ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದ ನೆರೆಕರೆಯವರು ಆಕೆಯ ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದರು. ಈ ವೇಳೆ ವೃದ್ಧ ದಂಪತಿಯ ಪಡಿತರ ಅಗತ್ಯವನ್ನು ವಿಚಾರಿಸಲೆಂದು ಸಾಮಾಜಿಕ ಕಾರ್ಯಕರ್ತ ಶೇಖ್ …

Read More »

ಸಂಕಷ್ಟದಲ್ಲಿರುವ ನೂರಾರು ವಲಸೆ ಕಾರ್ಮಿಕರಿಗೆ ಫೋನ್ ಮೂಲಕ ಸಹಾಯ ಮಾಡುತ್ತಿರುವ ಆತಿಫುಲ್ ಹುಸೈನ್

ಈ ಯುವ ವಕೀಲನ ‘ಕಾಲ್ ಸೆಂಟರ್’ಗೆ ಭಾರೀ ಮೆಚ್ಚುಗೆ ಗುವಾಹಟಿ: ಅಸ್ಸಾಂ ರಾಜ್ಯದ 26 ವರ್ಷದ ಯುವಕ ಆತಿಫುಲ್ ಹುಸೈನ್ ಅವರನ್ನು ‘ಏಕ ವ್ಯಕ್ತಿ ಕಾಲ್ ಸೆಂಟರ್’ ಎಂದರೂ ತಪ್ಪಾಗದು. ಲಾಕ್ ಡೌನ್‍ನಿಂದ ಅತಂತ್ರರಾಗಿರುವ ನೂರಾರು ವಲಸಿಗ ಕಾರ್ಮಿಕರಿಗೆ ಅವರು ಕೇವಲ ಫೋನ್ ಮೂಲಕವೇ ಸಹಾಯ ಮಾಡಿದ್ದಾರೆ. ಅಸ್ಸಾಂನ ಬರ್ಪೇಟ ಜಿಲ್ಲೆಯವರಾದ ಆತಿಫುಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಲಾಕ್ ಡೌನ್ ಜಾರಿಯಾದ ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದ ಹಲವಾರು ಮಂದಿ ಹರ್ಯಾಣದಲ್ಲಿ …

Read More »

ಸ್ವಯಂ ಉದ್ಯೋಗಕ್ಕೆ 25 ಸಾವಿರ ಮೌಲ್ಯದ ಅಂಗಡಿ ಸಾಮಾಗ್ರಿಗಳನ್ನು ನೀಡಿದ ಜಮಾಅತೆ ಇಸ್ಲಾಮೀ ಮಂಗಳೂರು

ಮಂಗಳೂರು,ಮೇ.29: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ವತಿಯಿಂದ ಬಂಟ್ವಾಳದಲ್ಲಿ ಸಣ್ಣ ಉದ್ಯಮಕ್ಕೆ ಚಾಲನೆ ನೀಡಲು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಮೌಲ್ಯದ ಅಗತ್ಯ ಸಾಮಾಗ್ರಿಗಳನ್ನು ನೀಡುವ ಮೂಲಕ ಚಾಲನೆ ನೀಡಲಾಯ್ತು. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುತ್ತಾ ಬಂದಿರುವ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವಾ ಕಾರ್ಯಾಚರಣೆಗಳನ್ನು ಕೊರೋನಾ ಸಂದಿಗ್ಧತೆಯ ನಡುವೆಯೂ ಮುಂದುವರೆಸಿಕೊಂಡಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡ ದಾನಿಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ಸಿದ್ದೀಕ್ ಜಕ್ರಿಬೆಟ್ಟು, ಮುಖ್ತಾರ್ ಅಹ್ಮದ್ …

Read More »

ಅಂತಿಮವಾಗಿ ತಾಯಿಗೆ ನಮಸ್ಕರಿಸುತ್ತಿದ್ದಾನೆಂದು ಭಾವಿಸಿದ್ದೆವು ಆದರೆ, ಮಗ ಕಾಲ್ಗೆಜ್ಜೆಗಳನ್ನು ತೆಗದುಕೊಂಡು ದೂರ ನಿಂತನು: ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಿರತ ಕೊರೋನಾ ವಾರಿಯರ್ಸ್ ಬಿಚ್ಚಿಟ್ಟ ಕತೆಗಳು…

ಇಂದೋರ್: ಲುನಿಯಾಪುರ ಕಬರಿಸ್ತಾನವನ್ನು ಪ್ರವೇಶಿಸಿದಾಗ, ರಫಿಕ್ ಷಾ ಎಂಬುವವರು ಕುಳಿತಿರುವುದು ಕಂಡು ಬಂತು. ಕೋವಿಡ್‌ನಿಂದ ಮರಣ ಹೊಂದಿದ ಜನರು ಕುರಿತು ಹೇಳಬೇಕೆಂದು ಕೇಳಿದಾಗ… “ನೋಡಿ ಸರ್, ಇವತ್ತು ಹುಟ್ಟಿದವರು ನಾಳೆ ಸಾಯಲೇಬೇಕು. ಸಾವು ಯಾರಿಗೂ ಪ್ರೀಯವಲ್ಲ, ಆದರೆ ಸಾವಿನ ವಿಷಯದಲ್ಲು ಇಂದು ನಾನಾದರೆ ಅದು ನಾಳೆ ನಿಮ್ಮ ಸರದಿ. ನಾನು 30 ವರ್ಷಗಳಿಂದ ಈ ಸ್ಮಶಾನದಲ್ಲಿದ್ದೇನೆ, ಆದರೆ ಈ ಎರಡು ತಿಂಗಳಲ್ಲಿ ಶವವನ್ನು ಇಷ್ಟು ಬೇಗ ಬೇಗನೆ ಬರುವುದನ್ನು ನಾನು …

Read More »

1 ಮಿಲಿಯನ್ ರೋಟಿ ಯೋಜನೆ ; 10 ಸಾವಿರ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಅಜೀಜ್ ಅಹ್ಮದ್ ಶಾಹ್ನ – Video

ಯಾದಗೀರ್ : ಯಾದಗೀರ್ ನಗರ ಪುರಸಭೆಯ ಎಲ್ಲಾ 31 ವಾರ್ಡ್‌ಗಳಲ್ಲಿ ಎಲ್ಲಾ ಸಮುದಾಯದ 10,000 ನಿರ್ಗತಿಕ ಕುಟುಂಬಗಳಿಗೆ ಗುಣಮಟ್ಟದ 10 ಕೆಜಿ ಗೋಧಿ ಹಿಟ್ಟು (ಆಟಾ) ಆಹಾರ ಕಿಟ್ ವಿತರಿಸಲಾಗಿದೆ. ಸಿಎಂಸಿ ಯಾದಗೀರ್ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಅಜೀಜ್ ಅಹ್ಮದ್ ಶಹ್ನಾ ಅವರು ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯನ್ನು ನೋಡಿ ಈ ಯೋಜನೆ ರೂಪಿಸಿದ್ದಾರೆ. ಹಸಿವಿಗೆ ಧರ್ಮ ಇಲ್ಲ. ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಏಕೋದರ ಸಹೋದರರು ಎಂಬ …

Read More »

4 ಕೋಟಿ ರೂಪಾಯಿಗಿಂತಲೂ ಮಿಕ್ಕಿ ಪರಿಹಾರ ಕಾರ್ಯಗಳನ್ನು ನಿರ್ವಹಿಸಿದ ಹೆಚ್.ಆರ್.ಎಸ್.

ಬೆಂಗಳೂರು: ದೇಶಾದ್ಯಂತ ಜಾರಿ ಗೊಳಿಸಲಾಗಿರುವ ಲಾಕ್‍ಡೌನ್ ಪರಿಣಾಮದಿಂದಾಗಿ ರಾಜ್ಯದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಅಗತ್ಯವುಳ್ಳವರ ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ 29 ಏಪ್ರಿಲ್ ರವರೆಗೆ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ …

Read More »

ನಮಸ್ತೆ ಟ್ರಂಪ್ ನಿರ್ಲಕ್ಷಿಸಿ, ತಬ್ಲೀಗನ್ನು ಬೇಟೆಯಾಡುತ್ತಿರುವುದೇಕೆ- ಯಶ್ವಂತ್ ಸಿನ್ಹಾ

ಅಹ್ಮದಾಬಾದ್,ಮೇ.28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ ನಮಸ್ತೆ ಟ್ರಂಪ್ ಕಾರ್ಯಕ್ರಮ ಗುಜರಾತಿನಲ್ಲಿ ಕೊರೋನ ಹರಡಲು ಕಾರಣವಾಗಿದೆ ಎಂಬ ಕಾಂಗ್ರೆಸ್‌ನ ವಾದವನ್ನು ಮಾಜಿ ಬಿಜೆಪಿ ನಾಯಕ ಕೇಂದ್ರ ಸಚಿವರಾಗಿದ್ದ ಯಶ್ವಂತ್ ಸಿಂಗ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಹರಡಲು ತಬ್ಲೀಗ್ ಜಮಾಅತ್ ಎಂದು ಆರೋಪಿಸಿ ಪದೇ ಪದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ…ಯಾಕೆ ಅಹ್ಮದಾಬಾದಿನ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕೋವಿಡ್ ಹರಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ” …

Read More »