Home / ವಾರ್ತೆಗಳು (page 21)

ವಾರ್ತೆಗಳು

ಬ್ರಿಟನಿನ ಮೊದಲ ಹಿಜಾಬ್‌ಧಾರಿ ನ್ಯಾಯಾಧೀಶರಾಗಿ ರಾಫಿಯಾ ಅರ್ಷದ್ ಆಯ್ಕೆ

ಪಾಶ್ಚಿಮಾತ್ಯ ಜಗತ್ತಿನಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶೆಯಾಗಿ ಬ್ರಿಟನ್‌ನ ಮಹಿಳೆಯೊಬ್ಬರು ಯುವ ಮುಸ್ಲಿಮರಿಗೆ ಸ್ಫೂರ್ತಿಯಾಗಬೇಕೆಂದು ಆಶಿಸಿದ್ದಾರೆ. ಉತ್ತರ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿ ಬೆಳೆದ 40 ವರ್ಷದ ರಾಫಿಯಾ ಅರ್ಷದ್, ತನ್ನ 11 ನೇ ವಯಸ್ಸಿನಿಂದಲೇ ಕಾನೂನಿನಲ್ಲಿ ಕೆಲಸ ಮಾಡಲು ಬಯಸಿದ್ದರು. ರಾಫಿಯಾ ಅರ್ಷದ್, ನ್ಯಾಯವಾದಿ, ಕಳೆದ ವಾರ ಮಿಡ್ಲ್ಯಾಂಡ್ಸ್ ಸರ್ಕ್ಯೂಟ್ನಲ್ಲಿ ಉಪ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ತನಗೆ ಲಭಿಸಿದ ಈ ಪುರಸ್ಕಾರವು ವಿಶ್ವಮಟ್ಟದಲ್ಲಿ ಅತ್ಯಂತ ಗೌರವಾನ್ವಿತವಾಗಿದ್ದು, ಕಾನೂನು ವ್ಯವಸ್ಥೆಯಲ್ಲಿನ ವೈವಿಧ್ಯತೆಗೆ ಉತ್ತಮ …

Read More »

ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ನಿಯೋಗದಿಂದ ನಿಶಾಂತ್ ಮನೆಯವರಿಗೆ ಸಾಂತ್ವನ ಹಾಗೂ ಗೂಡಿನ ಬಳಿಯ ನೇತ್ರಾವತಿ ವೀರರಿಗೆ ಸನ್ಮಾನ

ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ, ಕಲ್ಲಡ್ಕದ ನಿಶಾಂತ್‌ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀರಿಗೆ ಹಾರಿ ಹರಸಾಹಸಪಟ್ಟ ಗೂಡಿನ ಬಳಿಯ ತೌಸೀಫ್‌, ಸಮೀರ್‌, ಮುಹಮ್ಮದ್, ಝಾಹಿದ್‌, ಅಕ್ಕರಂಗಡಿಯ ಆರಿಫ್‌ ಮತ್ತು ಮುಖ್ತಾರ್‌ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ ದ.ಕ. ಜಿಲ್ಲಾ ಸಮಿತಿ ಪ್ರತಿಯೊಬ್ಬರನ್ನೂ ಅಭಿನಂದಿಸಿತು. ಬಳಿಕ ಎಲ್ಲ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್‌ ಮತ್ತು ಜಮಾಅತೆ ಇಸ್ಲಾಮೀ …

Read More »

ಸಂಗ್ರಹಿಸಿದ 36 ಲಕ್ಷ ರೂ. ‘ಝಕಾತ್’ ಈದುಲ್ ಫಿತ್ರ್ ದಿನ ‘ದಾನ’ವಾಗಿ ಊರಿನ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಘಟಕ ಕೊಡುಗೆ ನೀಡಿದ ಮುಸ್ಲಿಮರು

ಮುಂಬೈ: ಮಹಾರಾಷ್ಟ್ರದ ಇಚಲ್ಕರಂಜಿ ಪಟ್ಟಣದಲ್ಲಿ ಮುಸ್ಲಿಮರು ಈದುಲ್ ಫಿತ್ರನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಜ್ಯದಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡವನ್ನು ಗಮನಿಸಿ ಇಲ್ಲಿನ ಮುಸ್ಲಿಮರು ಈದ್ ಸಂದರ್ಭ ನೀಡಲಾಗುವ ಝಕಾತ್ (ಕಡ್ಡಾಯ ದಾನ)  ಹಾಗೂ ಸದಖಾ ರೂಪದಲ್ಲಿ 36 ಲಕ್ಷ ರೂ. ಹಣವನ್ನು  ಇಂದಿರಾ ಗಾಂಧಿ ಸ್ಮಾರಕ ಸಿವಿಲ್ ಆಸ್ಪತ್ರೆಯಲ್ಲಿ  ತೀವ್ರ ನಿಗಾ ಘಟಕ ಸ್ಥಾಪಿಸಲು ಕೊಡುಗೆಯಾಗಿ …

Read More »

ದಮಾಮ್ ನಿಂದ ಮಂಗಳೂರಿಗೆ ಮೊದಲ ಬಾಡಿಗೆ ವಿಮಾನದ ಖರ್ಚು ಭರಿಸಲು ಸಿದ್ಧ : ಸೌದಿ ಅನಿವಾಸಿ ಕನ್ನಡಿಗ ಉದ್ಯಮಿಗಳಾದ ಸಾಕೋ ಕಂಪೆನಿಯ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರ ಆಫರ್

ದಮಾಮ್, ಮೇ 26: ಕೊರೋನ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶುರುವಾಗಿದ್ದರೂ ಸೌದಿಯಲ್ಲಿ ಸಿಲುಕಿರುವ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಕರೆತರಲು ವಿಮಾನ ಕೂಡ ನಿಗದಿಯಾಗಿಲ್ಲದೇ ಇರುವ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇದೀಗ ಸರಕಾರದ ಮನವೊಲಿಸಲು ಹಾಗು ಹೇಗಾದರೂ ಅಲ್ಲಿಂದ ತಾಯ್ನಾಡಿಗೆ ಮರಳಲು ಕಾದು ಬಳಲಿದವರಿಗೆ ಆಸರೆಯಾಗಿ ಅನಿವಾಸಿ ಕನ್ನಡಿಗ ಉದ್ಯಮಿಗಳಿಬ್ಬರು ವಿಶಾಲ ಮನಸ್ಸಿನ್ನಿಂದ ದೊಡ್ಡ ಕೊಡುಗೆಯನ್ನು …

Read More »

ತಂದೆಯ ಚಿತಾಗ್ನಿ ನಡೆಸಲು ನಿರಾಕರಿಸಿದ ಮಗ; ಅಂತಿಮ ಸಂಸ್ಕಾರ ನೆರವೇರಿಸಿದ ಸ್ಥಳೀಯ ಮುಸ್ಲಿಂ ಯುವಕರು

ಅಕೋಲಾ,ಮೇ.26:ಶನಿವಾರ ಹೃದಯಾಘಾತದಿಂದ ನಿಧನರಾದ 78 ವರ್ಷದ ಹಿಂದೂ ವ್ಯಕ್ತಿಯ ಕುಟುಂಬವು ಅವರ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ ನಂತರ, ಸ್ಥಳೀಯ ಸಂಘಟನೆಯ ಕೆಲವು ಮುಸ್ಲಿಂ ಯುವಕರು ಭಾನುವಾರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ ಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಅವರ ಪತ್ನಿ ಕೋವಿಡ್ -19 ನಿಂದಾಗಿ ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ. “ನಾಗ್ಪುರದಲ್ಲಿ ವಾಸಿಸುವ ಮೃತರ ಮಗನು ಶವವನ್ನು ಸ್ವೀಕರಿಸಲು …

Read More »

ಗ್ರಾಮದ ಮುಸ್ಲಿಮ್ ಕುಟುಂಬಗಳಿಗೆ ಈದ್ ಕಿಟ್ ನೀಡಿದ ಹಿಂದೂ ಬಾಂಧವರು- ಸೌಹಾರ್ದತೆ, ಸಹೋದರತ್ವದ ಹೃದಯಸ್ಪರ್ಶಿ ಕಥೆ

ನವದೆಹಲಿ, ಮೇ.25: ಒಂದೆಡೆ ಭಾರತದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷಾಪರಾಧಗಳು ಕೊರೋನಾ ವೈರಸ್ ಲಾಕ್‌ಡೌನ್‌ನಲ್ಲಿ ಹೆಚ್ಚಾಗಿದ್ದರೆ ಮತ್ತೊಂದೆಡೆ ಸೌಹಾರ್ದತೆ ಮತ್ತು ಸಹೋದರತ್ವದ ಹೃದಯಸ್ಪರ್ಶಿ ಕಥೆಗಳಿವೆ. ಅಂತಹ ಒಂದು ಕಥೆ ಮಹಾರಾಷ್ಟ್ರದ ಲಾತೂರ್ ಪ್ರದೇಶದಿಂದ ಹೊರಹೊಮ್ಮಿತು, ಅಲ್ಲಿ ಹಿಂದೂ ಪುರುಷರ ಗುಂಪು ಮುಸ್ಲಿಂ ವಿಧವೆಯರು ಮತ್ತು ಕುಟುಂಬಗಳಿಗೆ ಈದ್ ಕಿಟ್ ವಿತರಿಸಿದರು. ಅವರು ತಮ್ಮೂರಿನ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯಗಳನ್ನು ಕೋರಲು ಒಂದು ಮಾರ್ಗೋಪಾಯ ಕಂಡುಕೊಂಡಿರುವುದಾಗಿ ಸಾರುವ ಒಂದು ಟ್ವೀಟ್ ಇದೀಗ ವೈರಲ್ …

Read More »

ರಮಝಾನ್: ಮುಸ್ಲಿಮರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲು ಬಾಗಿಲು ತೆರೆದ ಜರ್ಮನ್ ಚರ್ಚ್

ಜರ್ಮನಿಯು ಮೇ 4 ರಂದು ಧಾರ್ಮಿಕ ಸೇವೆಗಳನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು ಆದರೆ ಆರಾಧಕರು 1.5 ಮೀ (5 ಅಡಿ) ದೂರವನ್ನು ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ವಿಧಿಸಿತು. ಇದರ ಪರಿಣಾಮವಾಗಿ ನಗರದ ನ್ಯೂಕಾಲ್ನ್ ಜಿಲ್ಲೆಯ ದಾರ್ ಅಸ್ಸಲಾಮ್ ಮಸೀದಿಯು ತನ್ನ ಸಾಮಾನ್ಯ ನಮಾಝಿಗರ ಸಂಖ್ಯೆಯ ಒಂದಂಶವನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ, ಕ್ರೂಜ್‌ಬರ್ಗ್‌ನಲ್ಲಿರುವ ಮಾರ್ಥ್ ಲುಥೆರನ್ ಚರ್ಚ್ ರಮಝಾನ್‌ ತಿಂಗಳ ಕೊನೆಯ ಶುಕ್ರವಾರದ ಪ್ರಾರ್ಥನೆಗಳನ್ನು ನಡೆಸಲು ಚರ್ಚ್ ನ ಬಾಗಿಲು …

Read More »

ಕ್ವಾರಂಟೈನ್‌ ಕೇಂದ್ರದಲ್ಲಿ ರಮಝಾನ್ ಉಪವಾಸ ಆಚರಿಸುತ್ತಿರುವ 500 ಮುಸ್ಲಿಮರಿಗೆ ವೈಷ್ಣೋ ದೇವಿ ದೇಗುಲದಿಂದ ಸಹ್ರಿ-ಇಫ್ತಾರ್ ವ್ಯವಸ್ಥೆ- ಇದು ಸೌಹಾರ್ದತೆಯನ್ನು ಸಾರಿದ ಕತೆ

ಕೋಮು ಸೌಹಾರ್ದತೆಯನ್ನು ಸಾರುತ್ತಿರುವ ಶ್ರೀ ಮಾತಾ ವೈಷ್ಣೋ ದೇವಿ ದೇಗುಲವು ಪವಿತ್ರ ರಮಝಾನ್ ತಿಂಗಳಲ್ಲಿ ಕತ್ರಾದ ತನ್ನ ಆಶಿರ್ವಾದ್ ಭವನದಲ್ಲಿ ಕ್ವಾರಂಟೈನ್‌ನಲ್ಲಿರುವ ಸುಮಾರು 500 ಮುಸ್ಲಿಮರಿಗೆ ಸಹ್ರಿ ಮತ್ತು ಇಫ್ತಾರ್ ವ್ಯವಸ್ಥೆಯನ್ನು ಒದಗಿಸುತ್ತಿದೆ. ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ಮಾರ್ಚ್ ತಿಂಗಳಲ್ಲಿ ಈ ದೇವಾಲಯವು ಕತ್ರಾದ ಆಶಿರ್ವಾದ್ ಭವನವನ್ನು ಕ್ವಾರೆಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಿತ್ತು. ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್, “ರಮಝಾನ್ ತಿಂಗಳಲ್ಲಿ, ಶ್ರೀ ಮಾತಾ ವೈಷ್ಣೋ …

Read More »

ಮುಂಬೈಯ 1.75 ಲಕ್ಷ ಜನರಿಗೆ ಶೆಫ್ ವಿಕಾಸ್ ಖನ್ನಾರಿಂದ ‘ಈದ್ ಔತಣ’

ನ್ಯೂಯಾರ್ಕ್ : ಮಿಷೆಲಿನ್-ಸ್ಟಾರ್ ಶೆಫ್ ವಿಕಾಸ್ ಖನ್ನಾ ಅವರು ಮುಂಬೈಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಈದ್ ಔತಣ ನೀಡಲು ಸಜ್ಜಾಗಿದ್ದು, ಕೋವಿಡ್-19ನಿಂದ ಕಂಗೆಟ್ಟಿರುವ ಮುಂಬೈಯ ಸುಮಾರು 1.75 ಲಕ್ಷ ಜನರಿಗೆ ಔತಣ ನೀಡುವ ಇಂಗಿತ ಹೊಂದಿದ್ದಾರೆ. ವಿಕಾಸ್ ಖನ್ನಾ ಅವರು ಈಗಾಗಲೇ ದೇಶದ 79 ನಗರಗಳ ಸಾವಿರಾರು ಬಡವರಿಗೆ  ಆಹಾರ ಸಾಮಗ್ರಿ ವಿತರಿಸಿದ್ದಾರೆ. ಈದ್ ಔತಣಕ್ಕಾಗಿ ಆಹಾರವನ್ನು ಹಾಜಿ ಅಲಿ ದರ್ಗಾದಲ್ಲಿ ಸಂಗ್ರಹಿಸಿ ಅಲ್ಲಿಂದ ಟ್ರಕ್‍ಗಳಲ್ಲಿ ಸಾಗಿಸಿ ಮುಹಮ್ಮದ್ ಅಲಿ …

Read More »

‘‘ಅವರಿಗೆ ಉಪವಾಸವಿದ್ದರೂ ನಮಗೆ ಅತ್ಯುತ್ತಮ ಆಹಾರ ಪೂರೈಸಿದರು’’ ಭಟ್ಕಳದ ‘ತಂಝೀಮ್’ನ ಕ್ವಾರಂಟೈನ್ ಕೇಂದ್ರದಲ್ಲಿದ್ದ ಜಗದೀಶ್ ನಾಯ್ಕ್ ಸಹಿತ ನಾಲ್ವರ ಮೆಚ್ಚುಗೆಯ ಮಾತುಗಳು

ಮಂಗಳೂರು, ಮೇ 21: ‘‘ರಮಝಾನ್ ಉಪವಾಸದ ಸಂದರ್ಭವಾಗಿರುವುದರಿಂದ ನಮಗೆ ಆ ಕ್ವಾರಂಟೈನ್ ಕೇಂದ್ರದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸಿಗುವ ಬಗ್ಗೆ, ನಮ್ಮ ಆರೈಕೆ ವ್ಯವಸ್ಥೆ ಹೇಗಿರಬಹುದು ಎಂಬ ಆತಂಕವಿತ್ತು. ಹಾಗಾಗಿ ಆ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಒಂಥರಾ ಹಿಂಜರಿಕೆಯೂ ಇತ್ತು. ಆದರೆ ಅಲ್ಲಿಗೆ ಹೋದ ದಿನವೇ ನಮ್ಮೆಲ್ಲ ಆತಂಕ ದೂರವಾಯಿತು. ನಮ್ಮ ನಿರೀಕ್ಷೆಗೂ ಮೀರಿ ಅವರು ನಮ್ಮನ್ನು ಚೆನ್ನಾಗಿ ಆರೈಕೆ ಮಾಡಿದರು. ಅಲ್ಲಿ 14 ದಿನಗಳು ಹೇಗೆ ಕಳೆಯಿತು ಅಂತ …

Read More »