Home / ವಾರ್ತೆಗಳು (page 23)

ವಾರ್ತೆಗಳು

ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ ಹೊರ ರಾಜ್ಯದ ಅಸಹಾಯಕ ನೂರಾರು ವಲಸೆ ಕಾರ್ಮಿಕರಿಗೆ, ಮಧ್ಯಾಹ್ನದ ಊಟದ ವ್ಯವಸ್ಥೆ

ಉಳ್ಳಾಲ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ, ಉಳ್ಳಾಲ ಅಬ್ಬಕ್ಕ ರಾಣಿ ಸರ್ಕಲ್‌ ಪಕ್ಕದ ಹಝ್ರತ್‌ ಮೈದಾನದಲ್ಲಿ ಒಟ್ಟುಗೂಡಿರುವ ಹೊರ ರಾಜ್ಯದ ಅಸಹಾಯಕ ನೂರಾರು ವಲಸೆ ಕಾರ್ಮಿಕರಿಗೆ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಹುಸೈನ್ ಬಶೀರ್‌, ಅಬ್ದುಲ್ ಕರೀಮ್ ಬೆಂಗರೆ, ಸ್ಥಳೀಯ ಸಮಾಜ ಸೇವಾ ಘಟಕಾಧ್ಯಕ್ಷ ಶರೀಫ್ ಉಳ್ಳಾಲ್‌, ಅಬ್ದುಸ್ಸಲಾಮ್ ಸಿ.ಎಚ್‌, ಶಂಶೀರ್ ಪಿಲಾರ್‌, ಅಬ್ದುರ್ರವೂಫ್‌, ಶಂಶುದ್ದೀನ್‌, ಹಾಗೂ …

Read More »

ಹಿಂದೂ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದ ಮುಸ್ಲಿಂ ಯುವಕರು: ತುಮಕೂರಿನಲ್ಲೊಂದು ಮಾನವೀಯ ಸ್ಪಂದನೆ ; ಕುಟುಂಬಸ್ಥರೇ ದೂರ ನಿಂತಾಗ ಇಡೀ ರಾತ್ರಿ ಈ ಯುವಕರು ನಮ್ಮ ಜೊತೆ ನಿಂತರು ಎಂದ ಮಗ

ತುಮಕೂರು ಮೇ ಕೋವಿಡ್-19 ಸೋಂಕು ತಗುಲುತ್ತದೆ ಎಂಬ ಭಯದಿಂದ ಜನರು ಯಾರನ್ನೂ ಮುಟ್ಟಲು ಸಿದ್ಧರಿಲ್ಲದ ಸಮಯದಲ್ಲಿ, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಕೊರೋನಾ ಯೋಧರು’ ಎಂದು ಗುರುತಿಸಲ್ಪಟ್ಟ 10 ಮುಸ್ಲಿಂ ಯುವಕರು ಅಗತ್ಯ ಸಹಾಯ ಮತ್ತು ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ. ಮಂಗಳವಾರ ಕೆಎಚ್‌ಬಿಯ ಕಾಲೋನಿ ಬಡ ಹಿಂದೂ ಕುಟುಂಬ 60 ವರ್ಷದ ವೃದ್ಧರೋರ್ವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ದೈಹಿಕವಾಗಿ ವಿಶೇಷ ಚೇತನರಾಗಿದ್ದ ನಾರಾಯಣ ರಾವ್ (60) ದರ್ಜಿ …

Read More »

ಹಸಿವಿಗೆ ಧರ್ಮವಿಲ್ಲ: ಸಾವಿರಾರು ವಲಸೆ ಕಾರ್ಮಿಕರ ಹಸಿವಿಗೆ ಪ್ರತಿಸ್ಪಂದಿಸುವ ಸಿಖ್ಖ-ಮುಸ್ಲಿಮ್ ಸಂಸ್ಥೆಗಳು

ನಾಸಿಕ್,ಮೇ,13: ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಮುಂಬೈನಿಂದ ಯುಪಿ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳಿಗೆ ತೆರಳುತ್ತಿರುವ ಕಾರ್ಮಿಕರ ದಂಡುಗಳು ರಸ್ತೆಯನ್ನು ತುಂಬಿಕೊಂಡಿವೆ. ಸುಡುವ ಬಿಸಿಲಿನ ಮಧ್ಯೆ ಹಸಿವು ತಣಿಸುವ ಈ ಲಂಗರುಗಳು ಕಾರ್ಮಿಕರಿಗೆ ಮರುಭೂಮಿಯ ಓಯಾಸಿಸ್ ಆಗಿ ಮಾರ್ಪಟ್ಟಿವೆ. ಕಸಾರಾ(ಮುಂಬೈ) ಮತ್ತು ನಾಸಿಕ್ ನಡುವೆ ಸ್ಥಳದಿಂದ ಸ್ಥಳಕ್ಕೆ ವಲಸೆ ಕಾರ್ಮಿಕರಿಗಾಗಿ ಲಂಗರ್ ಊಟವನ್ನು ನೀಡುತ್ತಿದ್ದಾರೆ. 80 ಕಿ.ಮೀ ದೂರದ ಅಂತರದಲ್ಲಿರುವ ಈ ಎರಡು ದೊಡ್ಡ ಲಂಗರ್‌ ಊಟಗಳನ್ನು ಸಿಖ್ ಸಮುದಾಯ …

Read More »

ಕೊರೋನ ವಿರುದ್ಧದ ಹೋರಾಟ; ಸಿಂಗಾಪುರದಿಂದ ವೈದ್ಯಕೀಯ ಸಲಕರಣೆ ಹೊತ್ತು ತಂದ ವಿಮಾನದ ಪೈಲಟ್ ಮಂಗಳೂರಿನ ಸರ್ಫರಾಝ್

ಬಿಕ್ಕಟ್ಟಿನ ಸಮಯದಲ್ಲಿ ದೇಶಕ್ಕಾಗಿ ಪುತ್ರ ಸಲ್ಲಿಸಿದ ಸೇವೆಯಿಂದ ಹೆಮ್ಮೆ: ತಂದೆ ಇಬ್ರಾಹೀಂ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಸಾವಿರಾರು ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಕೈಜೋಡಿಸಿದ್ದು, ಈ ಸಾಲಿಗೆ ಇದೀಗ ದೇಶಾದ್ಯಂತವಿರುವ ಪೈಲಟ್ ಗಳೂ ಸೇರಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ವಾಪಸಾತಿಗಾಗಿ ವಿಮಾನಗಳ ಪೈಲಟ್ ಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇದೇ ರೀತಿ ಕೋವಿಡ್ 19 ವಿರುದ್ಧ ಭಾರತದ ಹೋರಾಟಕ್ಕೆ ಕೈ ಜೋಡಿಸಲು ಸಿಂಗಾಪುರದಿಂದ ವೈದ್ಯಕೀಯ …

Read More »

ಅಮೆರಿಕ ಅಧ್ಯಕ್ಷನಾಗಿ ಚುನಾಯಿತನಾದರೆ ಫೆಲಸ್ತೀನ್ ಸಹಾಯ ಧನವನ್ನು ಮರುಚಾಲನೆ ಮಾಡುವೆ: ಜೋ ಬಿಡನ್

ವಾಷಿಂಗ್ಟನ್,ಮೇ.8: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣದಲ್ಲಿರುವ ಡೆಮಾಕ್ರಾಟಿಕ್ ಪಾರ್ಟಿಯ ಅಮೆರಿಕ ಅಧ್ಯಕ್ಷ ಸ್ಥಾನದ ಸ್ಪರ್ಧಿ ಜೊ ಬಿಡನ್ ತಾನು ಅಧ್ಯಕ್ಷನಾಗಿ ಆಯ್ಕೆ ಆದರೆ ತಾನು ಟ್ರಂಪ್ ತಡೆಹಿಡಿದ ಫೆಲಸ್ತೀನ್ ಸಹಾಯ ಧನವನ್ನು ಆದೇಶ ತಡೆದು ನಿಲ್ಲಿಸಿ ಪುನಃ ಫೆಲಸ್ತೀನಿಯರಿಗೆ ನೆರವನ್ನು ಮುಂದುವರಿಸಲಿದ್ದೇನೆ ಎಂದು ಜೊ ಬಿಡನ್ ಹೇಳಿದರು. ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರಾಚ್ಯ, ಫೆಲಸ್ತೀನ್‍ಗಳಿಗೆ ಅಮೆರಿಕ ಕೊಡುತ್ತಿದ್ದ ಸಹಾಯ ನಿಧಿಯನ್ನು ರದ್ದು ಪಡಿಸಿದ್ದರು. ಈ ಕುರಿತು …

Read More »

ಮಕ್ಕಾ ಮದೀನಾದಲ್ಲಿ ಅತ್ಯಾಧುನಿಕ ವೈರಸ್ ನಾಶಕ ಗೇಟುಗಳ ಸ್ಥಾಪನೆ

ಮಕ್ಕಾ,ಮೇ.8: ಕೊರೋನಾವನ್ನು ಎದುರಿಸಲು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಸೌದಿ ಅರೇಬಿಯಾ ಸರಕಾರ ಮುಂದೆ ಸಾಗುತ್ತಿದೆ. ಇದರ ಭಾಗವಾಗಿ ಮಕ್ಕಾ ಮತ್ತು ಮದೀನಾಗಳಲ್ಲಿ ಅಣುನಾಶಕ(ವೈರಸ್ ನಾಶಕ) ಗೇಟನ್ನು ಸ್ಥಾಪಿಸಲಾಗಿದೆ. ಮಕ್ಕಾ ಮತ್ತು ಮದೀನದ ಪವಿತ್ರ ಮದಿಯನ್ನು ಪ್ರವೇಶಿಸುವ ಮೊದಲು ತಪಾಸಣೆಗಾಗಿ ಈ ಗೇಟನ್ನು ಸ್ಥಾಪಿಸಲಾಗಿದೆ. ಈ ಗೇಟಿನ ಮೂಲಕ ಹೋಗುವ ವೇಳೆ ಥರ್ಮಲ್ ಕ್ಯಾಮರಾದ ಮೂಲಕ ದೇಹದ ಉಷ್ಣತೆಯನ್ನು ಮಾಪನ ಮಾಡಲಾಗುವುದು. ಇದಕ್ಕೆ ಅನ್‌ಸೆಪ್ಟಿಕ್ ಸ್ಪ್ರೇ ಸಿಂಪಡಿಸಲಾಗುವುದು. ಜ್ವರವೋ ಕೊರೋನಾದ ಲಕ್ಷಣಗಳು ಇದ್ದರೆ …

Read More »

ಕೊರೋನಾ ಅಂತ್ಯಕ್ಕಾಗಿ ಮೇ. 14ರಂದು ಎಲ್ಲ ಧರ್ಮೀಯರು ರಮಝಾನ್ ಉಪವಾಸ ಆಚರಿಸಿ- ಪೋಪ್ ಫ್ರಾನ್ಸಿಸ್ ಕರೆ

ಸಾಂಕ್ರಾಮಿಕ ರೋಗವನ್ನು ಜಗತ್ತಿನಿಂದ ಹೋಗಲಾಡಿಸುವಂತೆ ದೇವರನ್ನು ಪ್ರಾರ್ಥಿಸಲು ಮತ್ತು ಸೋಂಕಿನಿಂದ ಬಳಲಿರುವ ಎಲ್ಲ ವ್ಯಕ್ತಿಗಳಿಗೆ ಗುಣಮುಖವಾಗುವ ಲಸಿಕೆ ಲಭ್ಯವಾಗುವಂತೆ ಮೇ 14 ರಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಹಾಗೂ ರಮಝಾನ್ ಉಪವಾಸ ವ್ರತ ಆಚರಿಸುವಂತೆ ಪೋಪ್ ಫ್ರಾನ್ಸಿಸ್ ಎಲ್ಲಾ ಧರ್ಮದ ಅನುಯಾಯಿಗಳಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ, “ಎಲ್ಲಾ ಧರ್ಮಗಳ ವಿಶ್ವಾಸಿಗಳು ಮೇ 14 ರಂದು ಪ್ರಾರ್ಥನೆ ಮತ್ತು ಉಪವಾಸ ವ್ರತವನ್ನು ಆಚರಿಸುವ ಮೂಲಕ ಆಧ್ಯಾತ್ಮಿಕವಾಗಿ ಒಂದಾಗಬೇಕು, ಕರೋನಾ ವೈರಸ್ ಸಾಂಕ್ರಾಮಿಕ …

Read More »

ಕೊರೋನಾ ವಾರಿಯರ್ಸ್ ಎಂಬ ತಂಡ ಕಟ್ಟಿ ಸೇವಾ ನಿರತರಾಗಿರುವ ಇಮ್ರಾನಾ ಸೈಫಿ: ದೇವಸ್ಥಾನದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿರುವ ಚಿತ್ರ ವೈರಲ್

ನವದೆಹಲಿ ಮೇ 8- 32 ವರ್ಷದ ಇಮ್ರಾನಾ ಸೈಫಿ ಇವತ್ತು ದೆಹಲಿಯಲ್ಲಿ ಸುದ್ದಿಯ ಕೇಂದ್ರವಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಧಾವಿಸಿದ್ದ ಏಳನೇ ತರಗತಿವರೆಗೆ ಮಾತ್ರ ಕಲಿತಿರುವ ಈ ಮಹಿಳೆ ಇದೀಗ ಕೊರೋನಾದ ವಿರುದ್ಧ ಹೋರಾಡುವುದಕ್ಕಾಗಿ ಕೊರೋನಾ ವಾರಿಯರ್ಸ್ ಎಂಬ ಮೂವರು ಮಹಿಳೆಯರ ತಂಡವೊಂದನ್ನು ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಜಫ್ರಾಬಾದ್ ,ಮುಸ್ತಫಾ ಬಾದ್, ಚಾಂದ್ ಬಾಗ್, ನೆಹರು ವಿಹಾರ, ಶಿವು ವಿಹಾರ್, ಬಾಬು ನಗರ್ …

Read More »

ಹಿಂಜರಿದ ಸಂಬಂಧಿಕರು: ವೃದ್ಧನ ಅಂತ್ಯಸಂಸ್ಕಾರ ನಡೆಸಿ ಸೌಹಾರ್ದ ಮೆರೆದ ಯುವಕರು

ಬೆಂಗಳೂರು, ಎ.19: ಬೆಂಗಳೂರಿನ ಆರ್.ಟಿ.ನಗರ ಸಮೀಪವಿರುವ ಚಾಮುಂಡಿ ನಗರದಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟ ವೃದ್ಧರೊಬ್ಬರ ಅಂತಿಮ ಸಂಸ್ಕಾರಕ್ಕೆ ಯುವಕರು ಹೆಗಲು ಕೊಡುವ ಮೂಲಕ ಸೌಹಾರ್ದದ ಸಂದೇಶವನ್ನು ಸಾರಿದ್ದಾರೆ. ಮೂಲತಃ ಕೋಲ್ಕತ್ತಾ ಮೂಲದವರಾದ ವೃದ್ಧನ ಕುಟುಂಬಸ್ಥರು ಚಾಮುಂಡಿ ನಗರದಲ್ಲಿ ನೆಲೆಸಿದ್ದರು. ಆದರೆ, ಲಾಕ್‍ಡೌನ್ ಹಾಗೂ ಕೋವಿಡ್-19 ಭಯದಿಂದಾಗಿ ಮೃತರ ಸಂಬಂಧಿಕರೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿರಲಿಲ್ಲ. ಕೆಲವರಂತು ಮೃತದೇಹವನ್ನು ಮುಟ್ಟಲು ಹೆದರುತ್ತಿದ್ದರು ಎನ್ನಲಾಗಿದ್ದು, ಇಂತಹ ಸಂದರ್ಭದಲ್ಲಿ ಆ ಕುಟುಂಬಕ್ಕೆ …

Read More »

ಲಾಕ್ ಡೌನ್: 10 ಕೋಟಿ ರೂಪಾಯಿಯ ಪರಿಹಾರ ಕಾರ್ಯಗಳನ್ನು ಕೈಗೊಂಡ ಜಮಾಅತೆ ಇಸ್ಲಾಮಿ ಹಿಂದ್

ನವದೆಹಲಿ, ಎಪ್ರಿಲ್ 18- ಲಾಕ್ ಡೌನ್ ಕಾರಣದಿಂದ ಸಂಕಟಕ್ಕೆ ಒಳಗಾದ ಜನರಿಗಾಗಿ 10 ಕೋಟಿ ರೂಪಾಯಿಯ ಪರಿಹಾರ ಕಾರ್ಯಗಳನ್ನು ನಡೆಸಿರುವುದಾಗಿ ಜಮಾಅತೆ ಇಸ್ಲಾಮಿ ಹಿಂದ್ ತಿಳಿಸಿದೆ. ಜಾತಿ, ಮತ, ಭೇದವನ್ನು ಪರಿಗಣಿಸದೆ ಸಂತ್ರಸ್ತರಾದ 10 ಲಕ್ಷ ಮಂದಿಗೆ ಆಹಾರ ವಸ್ತುಗಳು, ಸಿದ್ಧ ಆಹಾರಗಳು ಮತ್ತು ಹಲವರಿಗೆ ನಗದು ರೂಪಾಯಿಗಳನ್ನು ಕೂಡ ಹಂಚಲಾಗಿದೆ ಎಂದು ಜಮಾಅತ್ ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾನಿಗಳ ನೆರವು ಮತ್ತು ತನ್ನ ಕಾರ್ಯಕರ್ತರ ಸಕ್ರಿಯ ಪಾತ್ರದ …

Read More »