Home / ವಾರ್ತೆಗಳು (page 24)

ವಾರ್ತೆಗಳು

193 ಮಂದಿ ಕೊರೋನಾ ಶಂಕಿತರಿಗೆ ಕ್ವಾರಂಟೈನ್ ತಾಣವಾಗಿ ಬದಲಾದ ಬೀದರ್ ನ ಶಾಹೀನ್ ಶಾಲೆ: ಊಟದ ಜೊತೆ ಎಲ್ಲ ಸೌಲಭ್ಯಗಳೂ ಉಚಿತ

ಬೀದರ್, ಏಪ್ರಿಲ್ 15- ಇಲ್ಲಿನ ಶಾಹೀನ್ ಶಾಲೆಯು ರಾಜ್ಯದಲ್ಲಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಕೊರೋನಾ ಶಂಕಿತ 193 ಮಂದಿಗೆ ಕ್ವಾರಂಟೈನ್ ಗಾಗಿ ತನ್ನ ಶಾಲೆಯನ್ನೇ ಶಾಹೀನ್ ಆಡಳಿತ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ. ಅಲ್ಲದೆ, ಈ 193 ಮಂದಿಗೆ ಊಟ, ಮಾಸ್ಕ್, ಗ್ಲೌಸು, ಸಾಬೂನು, ನೀರು ಸಹಿತ ಎಲ್ಲವನ್ನೂ ಶಾಹೀನ್ ರೆಸಿಡೆನ್ಶಿಯಲ್ ಪಿಯು ಕಾಲೇಜಿನಲ್ಲಿ ಒದಗಿಸಲಾಗಿದೆ. ಈ 193 ಮಂದಿಯಲ್ಲಿ ಹಿಂದೂಗಳು, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮದವರೂ ಇದ್ದಾರೆ. ಮಹಿಳೆಯರೂ ಪುರುಷರೂ ಇದ್ದಾರೆ. …

Read More »

ಯಾರೂ ಒಪ್ಪದ ಕೆಲಸಕ್ಕೆ ಸೇರಿದ ಸಾಹಸಿ; ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಆ್ಯಂಬುಲೆನ್ಸ್ ಯೋಧ ಅಮೀರ್ ಜಾನ್

ಬೆಂಗಳೂರು: ಕೊರೋನ ಸೋಂಕಿನ ಭಯದಿಂದ ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನೇ ಕೆಲವೆಡೆ ಬಾಡಿಗೆ ಮನೆಗಳಿಂದ ಹೊರಹಾಕುತ್ತಿರುವ ವರದಿಗಳು ಬಂದಿದ್ದವು. ಇಲ್ಲೊಂದು ಕೊರೋನ ಯೋಧನ ಕತೆಯಿದೆ. ಈತ ವೈದ್ಯನೂ ಅಲ್ಲ, ‘ವೈದ್ಯಕೀಯ ಸಿಬ್ಬಂದಿಯೂ’ ಅಲ್ಲ. ಆದರೆ ಕೊರೋನ ವಿರುದ್ಧದ ಹೋರಾಟದಲ್ಲಿ ಈತನದ್ದು ನಿರ್ಣಾಯಕ ಪಾತ್ರ ಎಂದು ಹೇಳಿದರೂ ತಪ್ಪಲ್ಲ. ಏಕೆಂದರೆ ಕೊರೋನ ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸುವ ಆಂಬುಲೆನ್ಸ್ ನ ಚಾಲಕ ಈತ. ಈ ಧೈರ್ಯಶಾಲಿಯ ಹೆಸರು ಅಮೀರ್ ಜಾನ್ . …

Read More »

ರಾಜೇಂದ್ರರಿಗೆ ಮಕ್ಕಳಿರಲಿಲ್ಲ, ಸಹೋದರರೂ ತಲುಪಲಿಲ್ಲ: ಮುಸ್ಲಿಮರೇ ಶವಸಂಸ್ಕಾರ ನಿರ್ವಹಿಸಿದರು

ಜೈಪುರ, ಎ. 14: ಕೊರೊನಾ ಕಾಲದಲ್ಲಿ ಹಲವಾರು ಮಾನವೀಯ ಕಾರ್ಯಗಳ ಸಾಲಿಗೆ ಇದನ್ನೂ ಸೇರಿಸಬಹುದು. ನಿಕಟ ಸಂಬಂಧಿಕರಿಗೆ ಬಂದು ಮುಟ್ಟಲು ಆಗದ್ದರಿಂದ ರಾಜಸ್ತಾನದ ಜೈಪುರದಲ್ಲಿ ಕ್ಯಾನ್ಸರ್ ಪೀಡಿತರಾಗಿ ಮೃತಪಟ್ಟ ಹಿಂದೂ ಕುಟುಂಬವೊಂದರ ವ್ಯಕ್ತಿಯ ಅಂತ್ಯವಿಧಿಯನ್ನು ಹಿಂದು ಧರ್ಮ ಪ್ರಕಾರ ನೆರೆಯ ಮುಸ್ಲಿಮರ ನಿರ್ವಹಿಸಿದ್ದಾರೆ ಎಂದು ಇಂಡಿಯ ಟುಡೆ ವರದಿ ಮಾಡಿದೆ. ಭಜ್ರಂಗ್ ನಗರ ಭಟ್ಟಬಸ್ತಿಯ ರಾಜೇಂದ್ರ ಸೋಮವಾರ ಮೃತಪಟ್ಟಿದ್ದರು. ಅವರಿಗೆ ಕ್ಯಾನ್ಸರ್ ಇತ್ತು. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ …

Read More »

ಹಸಿವಿನಿಂದ ಕಂಗೆಟ್ಟ ಮದ್ರಸಾ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್ ಗುರುದ್ವಾರ

ಅಮೃತಸರ, ಎ 2: ಕರುಣೆಯ ದ್ವಾರವನ್ನು ಸಿಖ್ ಗುರುದ್ವಾರ ತೆರೆದಿದೆ. ಮದ್ರಸಾ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿಗೆ ಮಾಲೆರ್‍ಕೋಟ್ಲ ಗುರುದ್ವಾರವು ಆಹಾರ ನೀಡಿದೆ. ಲಾಕ್ ಡೌನ್ ನಿಂದ ತಜ್‍ವೀದುಲ್ ಕುರ್‍ ಆನ್ ಮದ್ರಸಾ ಅಧಿಕಾರಿಗಳು ತಮ್ಮ ವಿದ್ಯಾರ್ಥಿಗಳಿಗೆ ಆಹಾರ ನೀಡಲಾಗದ ಸ್ಥಿತಿ ಎದುರಿಸುತ್ತಿದ್ದರು. ತದನಂತರ 40 ಮಕ್ಕಳಿಗೆ ಸಿಖ್ ಸಮುದಾಯ ಆಹಾರ ತಲುಪಿಸಿದೆ ಎಂದು ಗುರುದ್ವಾದ ಮುಖ್ಯಸ್ಥ ನರೀಂದರ್‍ಪಾಲ್ ಸಿಂಗ್ ತಿಳಿಸಿದ್ದಾರೆ. ಮಹಿಳೆಯರ ಸಹಿತ ದಿನಂಪ್ರತಿ ಸಾವಿರ ಮಂದಿಗೆ ಆಹಾರ …

Read More »

“ಸರ್ವ ಧರ್ಮೀಯರ ಸಹಾಯಕ್ಕೆ ನಾವು ಸಿದ್ಧ, ಹಿಂದೂಗಳು ಮುಕ್ತವಾಗಿ ವ್ಯಾಪಾರ ಮಾಡಿ”

ಕಲ್ಲಾಪುವಿನಲ್ಲಿ ಹೀಗೊಂದು ಸೌಹಾರ್ದದ ಬ್ಯಾನರ್ ಮಂಗಳೂರು : ಕೊರೋನ ವೈರಸ್ ಭೀತಿಯ ನಡುವೆ ಕೋಮು ದ್ವೇಷವೂ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್ ಬುಕ್ ಗಳಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ದ್ವೇಷ ಹರಡಲಾಗುತ್ತಿದೆ. ಈ ನಡುವೆ ಕರಾವಳಿಯ ಕೆಲವೆಡೆ ‘ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ” ಎಂಬ ಬ್ಯಾನರ್ ಕಾಣಿಸಿಕೊಂಡು ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಕಲ್ಲಾಪುವಿನಲ್ಲಿ ಹಾಕಲಾದ ಭಿತ್ತಿಪತ್ರವೊಂದು ಎಲ್ಲರ ಗಮನ ಸೆಳೆಯುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಕಲ್ಲಾಪುವಿನಲ್ಲಿ ಹಾಕಲಾದ …

Read More »

ಕೊರೊನವನ್ನು ಧರ್ಮಕ್ಕೆ ಸೇರಿಸಬೇಡಿ: ಭಾರತಕ್ಕೆ ಸೂಚಿಸಿದ ವಿಶ್ವ ಆರೋಗ್ಯ ಸಂಘಟನೆ

ಹೊಸದಿಲ್ಲಿ, ಎ. 8: ಭಾರತದಲ್ಲಿ ಕೊರೊನಾವನ್ನು ತಬ್ಲೀಗಿ ಜಮಾಅತ್‍ಗೆ ಸೇರಿಸಿ ಸರಕಾರವೇ ವಿವರ ನೀಡುತ್ತಿರುವುದನ್ನು ವಿಶ್ವ ಆರೋಗ್ಯ ಸಂಘಟನೆ ವಿರೋಧಿಸಿದೆ. ದೇಶಗಳು ಯಾವುದಾದರೂ ಧರ್ಮ ವಿಭಾಗಕ್ಕೆ ಸೇರಿಸಿ ಕೊರೊನಾವನ್ನು ಬಿಂಬಿಸಬಾರದೆಂದು ಅದು ಹೇಳಿದೆ. ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿಶ್ವಾರೋಗ್ಯ ಸಂಘಟನೆಯ ನಿರ್ದೇಶಕ ಮೈಕ್ ರಯಾನ್ ಹೇಳಿದರು. ಕೊರೊನಾ ಯಾರದೋ ಅಪರಾಧದಿಂದ ಬಂದಿಲ್ಲ. ಪ್ರತಿಯೊಂದು ಘಟನೆಯಲ್ಲಿಯೂ ಅದು ಬಾಧಿಸುವ ವ್ಯಕ್ತಿ ಬಲಿಪಶುವಾಗುತ್ತಾನೆ. ಆದರಿಂದ ಕೊರೊನಾ ಪೀಡಿತರ ವಂಶ, ಧರ್ಮ, …

Read More »

ಸೌದಿ: ಸಣ್ಣ ಉದ್ಯಮ ಸಂಸ್ಥೆಗಳಿಗೆ 3 ವರ್ಷ ತೆರಿಗೆ ವಿನಾಯಿತಿ

ರಿಯಾದ್, ಮಾ. 7: ಸೌದಿ ಅರೇಬಿಯ ಸಣ್ಣ ಸಂಸ್ಥೆಗಳಿಗೆ ಕಾರ್ಮಿಕ ಲೆವಿಯಲ್ಲಿ ವಿನಾಯಿತಿ ಪ್ರಕಟಿಸಿದೆ. ಒಂಬತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸೌದಿಯ ಪ್ರಜೆ ಕೆಲಸಗಾರನಾಗಿರುವ ಸಂಸ್ಥೆಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವೆಂದು ಸೌದಿ ಸಚಿವ ಸಂಪುಟ ತೀರ್ಮಾನಿಸಿದೆ. ಜನರಲ್ ಆರ್ಗನೈಝೇಶನ್ ಫಾರ್ ಸೋಶಿಯಲ್ ಇನ್ಶುರೆನ್ಸ್ (ಗೋಸಿ) ನಲ್ಲಿ ನೋಂದಾಯಿತ ಸ್ವದೇಶಿ ಮಾಲಕತ್ವದ ಒಂಬತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಣ್ಣ ವಾಣಿಜ್ಯಿಕ ಸಂಸ್ಥೆಗಳಿಗೆ ಮೂರು ವರ್ಷ ಲೆವಿ ಅರ್ಥಾತ್ ತೆರಿಗೆ ವಿನಾಯಿತಿ ನೀಡಲಾಗುವುದು. ಸಂಸ್ಥೆಯಲ್ಲಿರುವ …

Read More »

ಭ್ರಷ್ಟಾಚಾರ: ಸೌದಿ ಅರೇಬಿಯದಲ್ಲಿ ನೂರಾರು ಸರಕಾರಿ ನೌಕರರ ಬಂಧನ

ರಿಯಾದ್: ಲಂಚ ಪಡೆದ ಆರೋಪ ಮತ್ತು ಸರಕಾರಿ ಕಚೇರಿಗಳನ್ನು ದುರುಪಯೋಗಿಸಿದ ಆರೋಪದಲ್ಲಿ ನೂರಾರು ಸರಕಾರಿ ಉದ್ಯೋಗಿಗಳನ್ನು ಸೌದಿ ಅರೇಬಿಯ ಬಂಧಿಸಿದೆ. ಸೈನಿಕ, ಸುರಕ್ಷಾ ಅಧಿಕಾರಿಗಳು ಕೂಡ ಬಂಧಿತರಲ್ಲಿ ಒಳಗೊಂಡಿದ್ದಾರೆ. ಈ ವಿವರವನ್ನು ರವಿವಾರ ಸೌದಿ ಅರೇಬಿಯ ಭ್ರಷ್ಟಾಚಾರ ವಿರೋಧಿ ಆಯೋಗ ತಿಳಿಸಿದೆ. ಕಸ್ಟಡಿಯಲ್ಲಿರುವ ನೌಕರರ ವಿರುದ್ಧ ವಿವಿಧ ಪ್ರಕರಣ ಗಳನ್ನು ದಾಖಲಿಸಿಕೊಳ್ಳಲಾಗಿದ್ದು 2017ರಲ್ಲಿಯೂ ಸೌದಿ ಅರೇಬಿಯದಲ್ಲಿ ಇದಕ್ಕೆ ಸಮಾನವಾದ ಬಂಧನ ಸತ್ರ ನಡೆದಿತ್ತು. ಅಂದು ಶ್ರೀಮಂತ  ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಸೌದಿ …

Read More »

500 ವಲಸೆ ಕಾರ್ಮಿಕರಿಗೆ ಊಟ ಒದಗಿಸುತ್ತಿರುವ ವಿವೇಕ್ ನಗರ ಪೊಲೀಸ್ ಠಾಣೆ: ನೀವು ನಮ್ಮ ಅಥಿತಿಗಳು ಎಂದ ಇನ್ಸ್ ಪೆಕ್ಟರ್ ರಫೀಕ್

ಬೆಂಗಳೂರು, ಏಪ್ರಿಲ್ 5- ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರ ಅತಿರೇಕದ ವರ್ತನೆಯನ್ನು ಬಿಂಬಿಸುವ ವಿಡಿಯೋಗಳು ಮತ್ತು ಚಿತ್ರಗಳು ದೇಶಾದ್ಯಂತ ವರದಿಯಾಗುತ್ತಿರುವ ನಡುವೆಯೇ ಪೊಲೀಸ್ ಮಾನವೀಯತೆಯ ಚೂರು-ಪಾರು ಸುದ್ಧಿಗಳು ಕೂಡ ವರದಿಯಾಗುತ್ತಿವೆ. ಆದರೆ ಅತಿರೇಕದ ವರ್ತನೆಗಳಿಗೆ ಹೋಲಿಸಿದರೆ ಈ ಸುದ್ದಿಗಳು ವ್ಯಾಪಕವಾಗಿ ಹರಿದಾಡದೆ ಇರುವುದರಿಂದ ಪೊಲೀಸರನ್ನೆಲ್ಲ ಕೆಟ್ಟವರೆಂದು ನಂಬುವಂತಹ ಸನ್ನಿವೇಶ ಎದುರಾಗಿದೆ. ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಸಿಬಂದಿಗಳು ಈ ಹಿನ್ನೆಲೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಸರಕಾರ ಲಾಕ್ …

Read More »

ಲಾಠಿಯೇ ಎಲ್ಲವೂ ಅಲ್ಲ; ಮಾನವೀಯ ಸ್ಪಂದನೆಯ ಮೂಲಕ ಜನಮನ ಗೆದ್ದ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್: ಜನರ ಮೆಚ್ಚುಗೆ

ಚಿಕ್ಕಮಗಳೂರು, ಏಪ್ರಿಲ್ 5- ಲಾಠಿ ಏಟು, ಬೈಗುಳ, ಥಳಿತ ಇತ್ಯಾದಿಗಳೇ ಪೊಲೀಸ್ ಇಲಾಖೆಯಲ್ಲ ಎಂಬುದು ಅಲ್ಲಲ್ಲಿಂದ ವ್ಯಕ್ತವಾಗುತ್ತಿದೆ. ನಾಗರಿಕರ ಪಾಲಿಗೆ ಇದು ಬಹುದೊಡ್ಡ ಭರವಸೆ. ಚಿಕ್ಕಮಗಳೂರಿನ ನಗರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಾನವೀಯ ಕಾರ್ಯಗಳು ನಾಗರಿಕರಿಂದ ಪ್ರಶಂಸೆಗೆ ಪಾತ್ರವಾಗಿವೆ. ಲಾಕ್ ಡೌನ್ ನ ಬಳಿಕ ಲಾಠಿಯೇ ಸುದ್ದಿಯಲ್ಲಿರುವಾಗ ಚಿಕ್ಕ ಮಗಳೂರು ನಗರ ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರು ಮಾನವೀಯ ಸ್ಪಂದನೆಯ ಮೂಲಕ ಜನಮನ …

Read More »