Home / ವಾರ್ತೆಗಳು (page 28)

ವಾರ್ತೆಗಳು

ಇತರ ಧರ್ಮೀಯರನ್ನು ಸ್ವಾಗತಿಸಿದ 170 ವರ್ಷ ಹಳೆಯ ಮಸೀದಿ

ಬೆಂಗಳೂರು: ನಗರದ 170 ವರ್ಷ ಹಳೆಯ ಮಸೀದಿಯನ್ನು ಇತರ ಧರ್ಮೀಯರಿಗೆ ತೆರೆಯಲಾಗಿದೆ. ಬೆಂಗಳೂರಿನ ನಗರದ ಮೋದಿ ಮಸೀದಿಯಲ್ಲಿ ಇತ್ತೀಚಿಗೆ ಮುಸ್ಲಿಮೇತರರಿಗೂ ಪ್ರವೇಶ  ನೀಡಲಾಯಿತು. ‘ನನ್ನ ಮಸೀದಿ ಸಂದರ್ಶನ ದಿನ ಎಂಬ ಹೆಸರಿನಲ್ಲಿ ರಹ್ಮತ್ ಗ್ರೂಪ್ ಮುಸ್ಲಿಮೇತರರಿಗೆ ಮಸೀದಿ ಸಂದರ್ಶಿಸುವ ಅವಕಾಶವನ್ನು ಒದಗಿಸಿದೆ. ಸೌಹಾರ್ದ ಹಾಗೂ ಒಗ್ಗಟ್ಟನ್ನು ಕಾಪಾಡುವುದು ಎಂಬ ಸಂದೇಶವನ್ನು ಈ ಮೂಲಕ ಸಂಘಟಕರು ರವಾನಿಸುತ್ತಿದ್ದಾರೆ. ಮಹಿಳೆಯರ ಸಹಿತ 400 ಮಂದಿ ಮುಸ್ಲಿಮೇತರರು ಮಸೀದಿಯನ್ನು ಸಂದರ್ಶಿಸಿದರು. ಪ್ರಾರ್ಥನೆಯ ನಂತರ ನಡೆದ …

Read More »

ಅಬೂಧಾಬಿಯಲ್ಲಿ ಮಂದಿರ: ಪಂಚಾಂಗದ ಕೆಲಸ ಆರಂಭ

ಅಬುಧಾಬಿ, ಫೆ. 14: ಧಾರ್ಮಿಕ ಸೌಹಾರ್ದದ ಸಂದೇಶದೊಂದಿಗೆ ಯುಎಇಯ ಅಬೂ ಮುರೈಖ ಬಾಪ್ಸ್ ನಲ್ಲಿ ಹಿಂದೂ ಮಂದಿರದ ಪಂಚಾಂಗ ಕೆಲಸ ಆರಂಭವಾಯಿತು. ಅಬುಧಾಬಿ ಸರಕಾರ ಕೊಟ್ಟ ಸ್ಥಳದಲ್ಲಿ ಸ್ವಾಮಿ ನಾರಾಯಣ ಸಂಸ್ಥೆ ಬಾಪ್ಸ್ ಮಂದಿರ ಸಮಿತಿ ಅಧೀನದಲ್ಲಿ ಹಿಂದೂ ಮಂದಿರ ಕಟ್ಟಿಸಲಾಗುತ್ತಿದೆ. ಅಬೂಧಾಬಿ ಯುವರಾಜ, ಯುಎಇ ಸೇನೆಯ ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಮಂದಿರ ಕಟ್ಟಲು ಸ್ಥಳ ನೀಡಿದ್ದಾರೆ. ದುಬೈ ಹೈವೆ ಸಮೀಪ …

Read More »

ಅಸ್ಸಾಮಿನ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆ ಮುಚ್ಚಲು ಸರಕಾರದ ನಿರ್ಧಾರ

ಗುವಾಹಟಿ, ಫೆ. 13: ಸರಕಾರ ನಡೆಸುವ ಮದ್ರಸಾ ಮತ್ತು ಸಂಸ್ಕೃತ ಪಾಠ ಶಾಲೆಗಳನ್ನು ಬಿಜೆಪಿ ನೇತೃತ್ವದ ಅಸಾಮ್ ಸರಕಾರ ಮುಚ್ಚಲು ನಿರ್ಧರಿಸಿದ್ದು ಈ ಸಂಸ್ಥೆಗಳನ್ನು ಆರು ತಿಂಗಳಲ್ಲಿ ಶಾಲೆಗಳನ್ನಾಗಿ ಪರಿವರ್ತಿಸಲು ಸರಕಾರ ನಿರ್ಧರಿಸಿದೆ ಎಂದು ಅಸ್ಸಾಂ ಶಿಕ್ಷಣ ಸಚಿವ ಹಿಮಾ೦ತ್ ಬಿಶ್ವ ಶರ್ಮ ತಿಳಿಸಿದ್ದಾರೆ. ಧರ್ಮ, ವೇದ, ಅರಬಿಯಂತಹ ಭಾಷೆಯನ್ನು ಕಲಿಸುವುದು ಜಾತ್ಯತೀತ ಸರಕಾರದ ಕೆಲಸವಲ್ಲ ಎಂದು ಶಿಕ್ಷಣ ಸಚಿವರು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಸಂಘಟನೆಗಳು ಎನ್‍ಜಿಒಗಳು ನಡೆಸುವ …

Read More »

ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಭಟ್ಕಳದ ಮಸೀದಿ ದರ್ಶನ

ಭಟ್ಕಳ: ನಗರದ ಜಾಮೀಯಾ ಸ್ಟ್ರೀಟ್ ನಲ್ಲಿರುವ ಐತಿಹಾಸಿಕ ಮಸೀದಿ ಚಿನ್ನದ ಪಳ್ಳಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ ಚಿನ್ನದ ಪಳ್ಳಿಯಲ್ಲಿ ನಡೆದ ಮಸೀದಿ ದರ್ಶನ ಅಕ್ಷರಶಃ ಹಿಂದೂ ಮುಸ್ಲಿಮ್ ಹೃದಯಗಳನ್ನು ಬೆಸೆಯುವಂತಹ ಕೇಂದ್ರವಾಗಿ ಮಾರ್ಪಟ್ಟಿತ್ತು. ನೂರಾರು ಮಂದಿ ಹಿಂದೂ, ಮುಸ್ಲಿಮ್ ಕ್ರೈಸ್ತ ಬಾಂಧವರು ಮಸೀದಿ ದರ್ಶನದ ಮೂಲಕ ಒಂದು ಮಾದರಿ ಸಮಾಜ ಹೇಗಿರಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸಿದರು. ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣಗೈದ …

Read More »

ಟರ್ಕಿ: 650 ವರ್ಷ ಹಳೆಯ ಮರದಲ್ಲಿ ನಿರ್ಮಿಸಿದ ಮಸೀದಿ

ಟರ್ಕಿ: ಶತಮಾನಗಳ ಪರಂಪರೆಯನ್ನು ಎತ್ತಿ ಹಿಡಿದು ಜಗತ್ತಿಗೆ ಸಾರುವ ಟರ್ಕಿಯ ಸಾಂಸಾನ್‍ನಲ್ಲಿ 650 ವರ್ಷ ಹಳೆಯ ಮರದಲ್ಲಿ ನಿರ್ಮಾಣವಾದ ಒಂದು ಮಸೀದಿಯಿದೆ. ಟರ್ಕಿಯಲ್ಲಿ ಸಲ್‍ಜೂಕರು ಆಳುತ್ತಿದ್ದಾಗ ಈ ಮಸೀದಿ ನಿರ್ಮಾಣವಾಗಿತ್ತು. ಈಗ ಆರಾಧನೆಗೂ  ಪ್ರವಾಸಿ ತಾಣವಾಗಿಯೂ ಈ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ. ಕಾರಸಾಂಬ ಎಂಬ ಗ್ರಾಮದಲ್ಲಿ ಒಂದು ಕಾಂಕ್ರಿಟ್ ಮಸೀದಿ  ನಿರ್ಮಿಸಿದಾಗ ಜನರು ಅದನ್ನು ಬಿಟ್ಟು ಹೋದರು. ಮೂವತ್ತು ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು. ಈ ಮಸೀದಿಯ ವಿಶೇಷತೆಯೆಂದರೆ …

Read More »

ಬ್ಯಾರಿಕೇಡ್‌ ಸರಿಸಿ ಹಿಂದೂ ವ್ಯಕ್ತಿಯ ಶವ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟ ಶಾಹೀನ್ ಬಾಗ್ ಪ್ರತಿಭಟನಾಕಾರರು; ವೀಡಿಯೊ ವೈರಲ್

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ರಸ್ತೆ ತಡೆ ಮತ್ತು ಹತ್ತಿರದ ನಿವಾಸಿಗಳಿಗೆ ಅನಾನುಕೂಲತೆಯನ್ನುಂಟು ಮಾಡುತ್ತಿದೆ ಎಂಬ ಹಲವಾರು ರಾಜಕಾರಣಿಗಳ ಆರೋಪದ ಮಧ್ಯೆ, ಭಾನುವಾರ ವಿಡಿಯೋವೊಂದು ವೈರಲ್ ಆಗಿದ್ದು, ಪ್ರತಿಭಟನಾಕಾರರು ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯ ಮೆರವಣಿಗೆ ಹಾದು ಹೋಗಲಿಕ್ಕಾಗಿ ಬ್ಯಾರಿಕೇಡ್‌ಗಳನ್ನು ಸರಿಸಿ ಅನುವು ಮಾಡಿ ಕೊಟ್ಟಿದ್ದಾರೆ. “ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಮತ್ತು ಮೆರವಣಿಗೆಯನ್ನು ಹಾದು ಹೋಗಲು ಅನುಮತಿಸುವ ಮೂಲಕ, ನಾವು ಅಸಾಮಾನ್ಯವಾದದ್ದೇನನ್ನೂ ಮಾಡಿಲ್ಲ. ನಾವು ಬಸ್ಸುಗಳು …

Read More »

ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಸ್ವೀಕರಿಸಿದ ಮುಸ್ಲಿಮ್ ವಿರೋಧಿ ದಲಿತ ಹೋರಾಟಗಾರ

ಚೆನ್ನೈ – ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿರುವುದಾಗಿ ಯೂಟ್ಯೂಬರ್ ದಲಿತ ಆಕ್ಟಿವಿಸ್ಟ್ ರವಿಚಂದ್ರನ್ ಹೇಳಿದ್ದಾರೆ. ಇದೀಗ ಅವರ ಹೊಸ ಹೆಸರು ಮುಹಮ್ಮದ್ ರಾಯೀಸ್ ಎಂದು ಬದಲಾಯಿಸಿದ್ದು, ಈ ಜನವರಿಯಲ್ಲಿ ಅವರು ಮತಾಂತರ ಗೊಂಡಿದ್ದಾರೆ. ಸ್ವಾಭಿಮಾನ ಮತ್ತು ಸಮಾನತೆಯ ಹುಡುಕಾಟದಲ್ಲಿದ್ದ ನನಗೆ ಇಸ್ಲಾಮ್ ನಲ್ಲಿ ಅದು ಕಂಡಿದೆ ಎಂದು ಅವರು ಹೇಳಿದ್ದಾರೆ. ಅವರ ಈ ಹೆಜ್ಜೆಯ ಬಗ್ಗೆ ದಲಿತ ಸಮುದಾಯದ ಪ್ರತಿಕ್ರಿಯೆಯ ಹೇಗಿದೆ ಎಂದು ಕಾರವಾನ್ ಡೈಲಿಯೊಂದಿಗೆ …

Read More »

ಮಸೀದಿಯೊಳಗೆ ಸಮಾಧಿ ಇರುತ್ತೆ ಅಂದ್ಕೊಡಿದ್ದೆ ; ಮಸೀದಿಗೆ ಬಂದವರ ಮನದ ಮಾತು

ತುಮಕೂರು: ಕಲ್ಯಾಣಿ, ಲಕ್ಷ್ಮೀರಂಗಯ್ಯ, ರತ್ನ, ಅಶ್ವಿನಿ, ಡೈಸನ್‌ ಥಾಮಸ್‌ ಅವರು ಬಾರ್‌ಲೇನ್‌ ರಸ್ತೆಯ ಮಕ್ಕಾ ಮಸೀದಿಯತ್ತ ಭಾನುವಾರ ಬಂದಾಗ, ಅವರನ್ನು ಸ್ವಾಗತಿಸಿದ್ದು ‘ಮಸೀದಿ ಸಂದರ್ಶನ ಕಾರ್ಯಕ್ರಮ: ಪರಸ್ಪರರನ್ನು ಅರಿಯೋಣ, ಸೌಹಾರ್ದ ಸಮಾಜ ಕಟ್ಟೋಣ’ ಎಂಬ ಬರಹದ ಬ್ಯಾನರ್‌. ಇವರು ಕುತೂಹಲದಿಂದ ಮಸೀದಿಯ ಆವರಣದಲ್ಲಿ ಕಾಲಿಟ್ಟಾಗ, ಅಲ್ಲಿದ್ದವರು ಪ್ರೀತಿಯಿಂದ ಬರಮಾಡಿಕೊಂಡರು. ಮಸೀದಿಯ ರಚನೆ, ನಮಾಜಿನ ಕ್ರಮ, ಇಸ್ಲಾಂನ ತತ್ವಗಳ ಕುರಿತು ಆದಷ್ಟು ಮಾಹಿತಿ ನೀಡಿದರು. ಕೆಲವು ಆಸಕ್ತರು,’ದಿನಕ್ಕೆ ಎಷ್ಟು ಬಾರಿ, ಯಾಕೆ …

Read More »

ನ್ಯಾಯವನ್ನು ಪ್ರತಿಪಾದಿಸುವ ಅತ್ಯಂತ ಶ್ರೇಷ್ಠ ಗ್ರಂಥ ಕುರಾನ್ : ಹಾರ್ವರ್ಡ್ ಯೂನಿವರ್ಸಿಟಿ

ಯುಎಸ್: ಕಾನೂನಿನ ವಿಷಯದಲ್ಲಿ ಶಾಸನ ಮತ್ತು ಅನುಷ್ಠಾನ ಒಂದಕ್ಕೊಂದು ಅನುಭಾವ ಸಂಬಂಧ ಇದೆ. ಎರಡೂ ನ್ಯಾಯವನ್ನು ಆಧರಿಸಿಕೊಂಡಿದೆ. ಆದ್ದರಿಂದ ಕಾನೂನಿನಲ್ಲಿ ನ್ಯಾಯಕ್ಕೆ ವಿಶೇಷ ಸ್ಥಾನಮಾನವಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಹಾರ್ವರ್ಡ್ ಲಾ ಸ್ಕೂಲ್ ( ವಿಶ್ವದ ನಂ. 7), ಅದರ ಬೋಧನಾ ವಿಭಾಗದ ಗ್ರಂಥಾಲಯದ ಪ್ರವೇಶದ್ವಾರದಲ್ಲಿ ನ್ಯಾಯದ ಬಗ್ಗೆ ಉಲ್ಲೇಖ ಇದೆ. ಪ್ರವೇಶದ್ವಾರದಲ್ಲಿ ಕುರಾನಿನ ಅಧ್ಯಾಯ ಸೂರಾ ನಿಸಾ(ಮಹಿಳೆ) ದ ಸೂಕ್ತವನ್ನು ಉಲ್ಲೇಖಿಸಲಾಗಿದೆ. ಇದು ನ್ಯಾಯದ ಬಗ್ಗೆ …

Read More »

ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗವಿಮಠದ ಸ್ವಾಮೀಜಿಗಳು

ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಮ್ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು. ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ …

Read More »