Home / ವಾರ್ತೆಗಳು (page 29)

ವಾರ್ತೆಗಳು

ಶಾಲೆಯಲ್ಲಿ ಗುಂಡಿನ ದಾಳಿ: 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಸೀದಿಯಲ್ಲಿ ಆಶ್ರಯ ನೀಡಿದ ವಿದ್ಯಾರ್ಥಿನಿ

ದುಆ ಅಹ್ಮದ್ ಸಮಯ ಪ್ರಜ್ಞೆಗೆ ಭಾರೀ ಪ್ರಶಂಸೆ ಮ್ಯಾಡಿನ್ಸನ್: ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿ ಮತ್ತು ಚೂರಿ ದಾಳಿಯ ವೇಳೆ ಮಸೀದಿಯೊಂದರಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿನ ಒಶ್ಕೋಶ್ ವೆಸ್ಟ್ ಹೈಸ್ಕೂಲ್ ನಲ್ಲಿ ಈ ದಾಳಿ ನಡೆದಿತ್ತು. 16 ವರ್ಷದ ವಿದ್ಯಾರ್ಥಿಯೊಬ್ಬ ಅಧಿಕಾರಿಯೊಬ್ಬರಿಗೆ ಚೂರಿಯಿಂದ ಇರಿದಿದ್ದ. ನಂತರ ಆತನಿಗೆ ಗುಂಡಿಕ್ಕಲಾಯಿತು. ಈ ಸಂದರ್ಭ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಆತಂಕದಿಂದ ಹೊರಗೋಡಿ ಬಂದಿದ್ದು, …

Read More »

ಹನುಮ, ಅಯ್ಯಪ್ಪ ಮಾಲಾಧಾರಿಗಳಿಗೆ ಉಪಹಾರ ವಿತರಣೆ: ಭಾವೈಕ್ಯ ಮೆರೆದ ಮುಸ್ಲಿಮರು

ಬಳ್ಳಾರಿ, ಡಿ. 8: ಹನುಮ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಮಾಲಾದಾರಿಗಳಿಗೆ ಉಪಹಾರ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ರಾಜಭಾಗ ಸವಾರ್ ದರ್ಗಾದಲ್ಲಿರುವ ಮುಸ್ಲಿಮರು ಭ್ರಾತೃತ್ವ ಸಾರಿದ್ದಾರೆ. ಬಳ್ಳಾರಿ, ಗದಗ ಮತ್ತು ದಾವಣೆಗೆರೆ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿರುವ ರಾಜಭಾಗ ಸವಾರ್ ದರ್ಗಾದಲ್ಲಿ ಕಳೆದ ರಾತ್ರಿ ಮುಸ್ಲಿಮ್ ಯುವಕರ ಪಡೆಯೊಂದು ಹನುಮ ಮಾಲಾದಾರಿಗಳು ಮತ್ತು ಅಯ್ಯಪ್ಪ ಮಾಲಾಧಾರಿಗಳಿಗೆ ಉಪಹಾರ ವಿತರಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಕೇವಲ ಮುಸ್ಲಿಮರಷ್ಟೇ …

Read More »

ಟರ್ಕಿಯ ಉರ್ತುಗಲ್ ಟಿವಿ ಸೀರಿಯಲ್ ನೋಡಿ ಇಸ್ಲಾಂ ಧರ್ಮ ಸ್ವೀಕರಿಸಿದ ಮೆಕ್ಸಿಕನ್ ದಂಪತಿ – ವಿಡಿಯೋ

ಅಂಕಾರ,ಡಿ.4: ಟರ್ಕಿಯ ಟಿವಿ ಸೀರಿಯಲ್ ಉರ್ತುಗಲ್ ನೋಡಿ ಮೆಕ್ಸಿಕದ ದಂಪತಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ರವಿವಾರ ಮೆಕ್ಸಿಕೊದ ಈ ಜೋಡಿ ಸೀರಿಯಲ್‍ನಲ್ಲಿ ಪಾತ್ರ ವಹಿಸಿದ ಶಹಲ್ ಅಲ್‍ರ ಮುಂದೆ ಇಸ್ಲಾಂ ಧರ್ಮವನ್ನು ತಮ್ಮದಾಗಿಸಿಕೊಂಡಿತು. ಶಹಲ್ ಅಲ್ ಜೋ ಅಬ್ದುರ್ರಹ್ಮಾನ್ ಪಾತ್ರ ವಹಿಸುತ್ತಿದ್ದಾರೆ. ಮುಸ್ಲಿಂ ಕೌನ್ಸಿಲ್ ಮೂಲಕ ಟ್ವೀಟ್ ಮಾಡಲಾದ ವೀಡಿಯೊದಲ್ಲಿ ಟರ್ಕಿಯ ಹಿಟ್ ಸೀರಿಯಲ್ ನಿಂದ ಪ್ರೇರಿತರಾಗಿ ಇಸ್ಲಾಮ್‍ನ ಗಹನ ಅಧ್ಯಯನ ನಡೆಸಿದೆವು. ನಂತರ ಇಸ್ಲಾಂ ಸ್ವೀಕರಿಸಿದೆವು ಎಂದು …

Read More »

ನನ್ನ ಯಶಸ್ಸಿನಲ್ಲಿ ಇಸ್ಲಾಮಿನ ಪಾತ್ರ ನಿರ್ಣಾಯಕ: ಅಕೋನ್

ಶಾರ್ಜಾ : ತಾನು ನಂಬಿರುವ ಇಸ್ಲಾಂ ಧರ್ಮವೇ ತನ್ನ ಯಶಸ್ಸಿನ ಮೂಲ ಎಂದು ಖ್ಯಾತ ಅಮೆರಿಕನ್-ಸೆನಗಲೀಸ್ ಗಾಯಕ, ರಾಪರ್ ಅಕೋನ್ (ಅಲಿಯೋನ್ ಥಿಯಮ್) ಹೇಳಿದ್ದಾರೆ. ಸೋಮವಾರ ಶಾರ್ಜಾ ಎಂಟ್ರಪ್ರನೇರಿಯಲ್ ಫೆಸ್ಟಿವಲ್ ಅಂಗವಾಗಿ ಶಾರ್ಜಾ ಎಕ್ಸ್‍ಪೋ ಸೆಂಟರ್‍ ನಲ್ಲಿ 2,000ಕ್ಕೂ ಅಧಿಕ ಮಂದಿಯೆದುರು ಭಾಷಣ ಮಾಡಿದ ಅಕೋನ್, ಕಾರು ಕಳ್ಳನಿಂದ ಪಾಪ್ ಸ್ಟಾರ್ ಹಾಗೂ ಸಾಮಾಜಿಕ ಉದ್ಯಮಿಯಾದ ತಮ್ಮ ಜೀವನದ ಪಯಣವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ತನ್ನ ಹಾಡುಗಳ ಮಿಲಿಯಗಟ್ಟಲೆ ಆಲ್ಬಂಗಳು ಮಾರಾಟವಾಗಿ, …

Read More »

HRS ಮಹಿಳಾ ವಿಭಾಗದಿಂದ “ತಿಬ್ಬುನ್ನಬವಿ” {ಪ್ರವಾದಿ ಮುಹಮ್ಮದ್(ಸ) ಆರೋಗ್ಯ ಮಾಹಿತಿ} ಕಾರ್ಯಾಗಾರ

ಮಂಗಳೂರು: ಪ್ರವಾದಿ ಮುಹಮ್ಮದ್(ಸ) ಮಾರ್ಗದರ್ಶನದಿಂದ ದೂರ ಸರಿದು ಬದುಕುತ್ತಿರುವುದೇ ಇಂದು ಮುಸ್ಲಿಮ್ ಸಮುದಾಯವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎಂದು ನೂರುನ್ನೀಸಾ (ಶಿಕ್ಷಕಿ ಜಾಮಿಯಾ ಮದ್ರಸ ಕುದ್ರೋಳಿ) ಹೇಳಿದರು. ಇವರು ಜಮಾಅತೆ ಇಸ್ಲಾಮೀ ಹಿಂದ್‍ನ ಅಂಗ ಸಂಸ್ಥೆಯಾದ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಮಹಿಳಾ ವಿಭಾಗವು ಮಂಗಳೂರಿನ ಬೋಳಾರ್ ಇಸ್ಲಾಮಿಕ್ ಸೆಂಟರ್‍ ನಲ್ಲಿ ಹಮ್ಮಿಕೊಂಡ ತಿಬ್ಬುನ್ನಬವಿ (ಪ್ರವಾದಿ ಮುಹಮ್ಮದ್(ಸ) ಆರೋಗ್ಯ ಮಾಹಿತಿ) ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 1,400 ವರ್ಷಗಳ …

Read More »

ಕುರ್‍ಆನ್ ಪ್ರವಚನಕಾರ ಮುಹಮ್ಮದ್ ಕುಂಞಯವರಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಸೇವಾರತ್ನ’ ಪ್ರಶಸ್ತಿ

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರು ಭಾಜನರಾಗಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ. 10000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ. ನಾಡಿನ ಖ್ಯಾತ ವಾಗ್ಮಿಯಾಗಿರುವ ಮುಹಮ್ಮದ್ ಕುಂಞಯವರು ನಾಡಿನ ವಿವಿಧ ಕಡೆಗಳಲ್ಲಿ ಕನ್ನಡ ಭಾಷೆಯಲ್ಲಿ ಸರಳವಾಗಿ ನೂರಾರು ಕುರ್‍ಆನ್ …

Read More »

ಯಹೂದಿ ಕುಟುಂಬವನ್ನು ರಕ್ಷಿಸಿದ ಮುಸ್ಲಿಂ ಮಹಿಳೆ – ವೀಡಿಯೊ

ಮುಸ್ಲಿಂ ಮಹಿಳೆ ಅಸ್ಮಾ ಶುವೇಕ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಹೂದಿ ಕುಟುಂಬದ ನೆರವಿಗೆ ಬಂದು ಹಲ್ಲೆಯಿಂದ ರಕ್ಷಿಸಿದ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜನಾಂಗೀಯ ವಿರೋಧಿಗಳಾದ ಕೆಲವರು ಯಹೂದಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯ ಪ್ರವೇಶಿಸಿದ ಅಸ್ಮಾ ಅವರನ್ನು ಅಕ್ರಮದಿಂದ ಹಿಂಜರಿಯುವಂತೆ ಮಾಡಿದರು. ರೈಲಿನಲ್ಲಿ ಒಬ್ಬ ವ್ಯಕ್ತಿ ಯಹೂದಿ ವಿರೋಧಿ ಬೈಬಲ್ ಓದುತ್ತಿದ್ದ ಮತ್ತು ಯಹೂದಿ ತಂದೆಯ ಮೇಲೆ ಉದ್ರಿಕ್ತಗೊಂಡಿದ್ದ. ಆಗ ಅಸ್ಮಾ ಅವನನ್ನು ಸಾಂತ್ವನಗೊಳಿಸಲು ಯತ್ನಿಸಿದರು. ಪರಿಸ್ಥಿತಿ ಉದ್ರಿಕ್ತಗೊಳ್ಳದೆ …

Read More »

ಬಿಹಾರದಲ್ಲಿ 22 ಮುಸ್ಲಿಮ್ ಜಡ್ಜ್

ಬಿಹಾರ, ಡಿ.2: ಬಿಹಾರದಲ್ಲಿ ಜಡ್ಜ್ ಪರೀಕ್ಷೆಯಲ್ಲಿ 22 ಮುಸ್ಲಿಮ್ ಅಭ್ಯರ್ಥಿಗಳು ಗೆದ್ದು ಜಡ್ಜ್ ಆಗಿದ್ದಾರೆ. ಇವರಲ್ಲಿ ಏಳು ಯುವತಿಯರೂ ಸೇರಿದ್ದಾರೆ. ಎಲ್ಲರಿಗಿಂತ ಉನ್ನತ ರಾಂಕ್ ನ್ನು ಮುಸ್ಲಿಂ ಕ್ಯಾಂಡಿಡೇಟ್‍ಗಳು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸನಮ್ ಹಯಾತ್‍ಗೆ 10ನೇ ರಾಂಕ್ ಇದೆ. ಉತ್ತರ ಪ್ರದೇಶದಲ್ಲಿ 38 ಮುಸ್ಲಿಮರು ಜಡ್ಜ್ ಆಗಿ ನ್ಯಾಯಾಂಗ ಸೇವೆಗೆ ದಾಖಲಾಗಿದ್ದು ಇವರಲ್ಲಿ ಹದಿನೆಂಟು ಯುವತಿಯರೂ ಇದ್ದಾರೆ. ಇತ್ತೀಚೆಗೆ ರಾಜಸ್ತಾನದಲ್ಲಿ ಆರು ಮುಸ್ಲಿಮರು ಜಡ್ಜ್ ಆಗಿದ್ದರು. ಇವರಲ್ಲಿ ಐವರು …

Read More »

ಬುರ್ಕಾ ವಿವಾದ: ಕ್ಷಮೆ ಯಾಚಿಸುವುದಿಲ್ಲ ಎಂದ ಬೊರಿಸ್ ಜಾನ್ಸನ್

ಲಂಡನ್, ನ.30: ಬುರ್ಕ ಕುರಿತು 2018ರಲ್ಲಿ ನೀಡಿದ ಹೇಳಿಕೆಗೆ ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ. ಬುರ್ಕ ಮತ್ತು ಮುಸ್ಲಿಮ್ ಮಹಿಳೆಯರನ್ನು ದಮನದ ಪ್ರತೀಕ ಎಂದು ಹೇಳಿದ್ದರು. ಇಂತಹ ಉಡುಪು ಧರಿಸುವ ಮುಸ್ಲಿಂ ಮಹಿಳೆ ಲೆಟರ್ ಬಾಕ್ಸ್ ನಂತೆ ಎಂದು ಬೊರಿಸ್ ಪ್ರತಿಕ್ರಿಯಿಸಿದ್ದರು. ತದನಂತ ಬ್ರಿಟನ್‌ನಲ್ಲಿ ಜನಾಂಗೀಯ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲಂಡನ್‌ನ ಎಲ್‌ಬಿಸಿ ರೇಡಿಯೊ ಸ್ಟೇಶನ್ ಸಂವಾದದಲ್ಲಿ ಬೊರಿಸ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗಲೂ …

Read More »

ಜಪಾನ್‍ನಲ್ಲಿ ಮೊಬೈಲ್ ಮಸೀದಿ, ಒಲಿಂಪಿಕ್‍ಗೆ ಬರುವ ಮುಸ್ಲಿಮರಿಗೆ ವ್ಯವಸ್ಥೆ – ವೀಡಿಯೊ

ಟೋಕಿಯೊ, ನ. 29: ಜಪಾನ್ ರಾಜಧಾನಿ ಟೋಕಿಯೊದಲ್ಲಿ ಮುಂದಿನ ವರ್ಷ ಒಲಿಪಿಂಕ್ ಗೇಮ್ಸ್ ನಡೆಯಲಿದ್ದು ಅಲ್ಲಿಗೆ ಬರುವ ಮುಸ್ಲಿಂ ಆಟಗಾರರಿಗೆ ನಮಾಝ್ ನಿರ್ವಹಿಸಲು ಅನುವಾಗುವಂತೆ ಮೊಬೈಲ್ ಮಸೀದಿ ನಿರ್ಮಿಸಲಾಗಿದೆ. ಸ್ಟೇಡಿಯಂ ಹೊರಗೆ ಮೊಬೈಲ್ ಮಸೀದಿ ಇರಿಸಲಾಗುವುದು. ಇದರಲ್ಲಿ ಐವತ್ತು ಮಂದಿ ನಮಾಝ್ ಮಾಡಬಹುದು. ಜೊತೆ ವಝೂ ನಿರ್ವಹಿಸಲು ವ್ಯವಸ್ಥೆ ಇದೆ. ಇದನ್ನು ಟೊಕಿಯೊ ಸ್ಪೋಟ್ಸ್ ಆಂಡ್ ಕಲ್ಚರ್ ಕಂಪೆನಿ ತಯಾರಿಸಿದೆ. ಕಂಪೆನಿ ಮಸೀದಿಯಾಗಿ ದೊಡ್ಡ ಟ್ರಕ್‍ಗಳನ್ನು ರೂಪಾಂತರಿಸಿದೆ. ಎಲ್ಲಿ ಇಟ್ಟರೂ …

Read More »